For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್ ಬಾಟಲಿಗಳು ಮಗುವಿಗೆ ಅಪಾಯಕಾರಿಯೇ?

|

ತುಂಬಾ ವರ್ಷಗಳ ಹಿಂದೆ ಮಕ್ಕಳಿಗೆ ಹಾಲು ಕುಡಿಸಲು ಗಾಜಿನ ಬಾಟಲಿಗಳನ್ನು ಬಳಸಲಾಗುತ್ತಿತ್ತು. ಆದರೆ ಇಂದು ಮಕ್ಕಳಿಗೆ ಹಾಲು ಕುಡಿಸಲು ಹಲವಾರು ಪ್ಲಾಸ್ಟಿಕ್ ಬಾಟಲ್‌ಗಳು ಬಂದಿವೆ. ತಾಯಂದಿರು ತಮ್ಮ ಮಕ್ಕಳಿಗೆ ಹಾಲು ನೀಡಲು ಯಾವ ಬಾಟಲಿಗಳನ್ನು ಬಳಸಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಾರೆ. ಕೊನೆಯದಾಗಿ ಇವರಿಗೆ ಒಂದು ಪ್ರಶ್ನೆ ಉಳಿದುಕೊಳ್ಳುತ್ತದೆ. ಅದು ಗಾಜಿನ ಬಾಟಲಿಯನ್ನು ಬಳಸಬೇಕೆ?

ಅಥವಾ ಪ್ಲಾಸ್ಟಿಕ್ ಬಾಟಲಿಯನ್ನು ಬಳಸಬೇಕೆ? ಪ್ಲಾಸ್ಟಿಕ್ ಬಾಟಲಿ ತೂಕ ಕಡಿಮೆ ಇರುತ್ತದೆ, ಎಲ್ಲಿಗೆ ಬೇಕಾದರು ಎತ್ತಿಕೊಂಡು ಹೋಗಬಹುದು, ತಾಳಿಕೆ ಮತ್ತು ಬಾಳಿಕೆ ಹೆಚ್ಚು. ಆದರೆ ಇವುಗಳಲ್ಲಿಯೂ ಸಹ ದೋಷಗಳು ಇರುತ್ತವೆ. ಅವು ಮಗುವಿನ ಆರೋಗ್ಯವನ್ನು ಹಾಳು ಮಾಡಬಲ್ಲವು.

ಪ್ಲಾಸ್ಟಿಕ್ ಬಾಟಲಿಗಳು ಮಗುವಿಗೆ ಅಪಾಯಕಾರಿಯೇ?

ಪ್ಲಾಸ್ಟಿಕ್ ಬಾಟಲ್‌ಗಳನ್ನು ಉತ್ಪಾಸುವಾಗ ಹಲವಾರು ರಾಸಾಯನಿಕ ಉತ್ಪನ್ನಗಳನ್ನು ಅದರಲ್ಲಿ ಸೇರಿಸಲಾಗುತ್ತದೆ. ಬಿಸಿ ಹಾಲು ಮತ್ತು ಬಿಸಿಯಾದ ಪಾನೀಯಗಳನ್ನು ಅದಕ್ಕೆ ಸುರಿದಾಗ ಆ ಅಪಾಯಕಾರಿ ರಾಸಾಯನಿಕಗಳು ಈ ಪದಾರ್ಥಗಳಲ್ಲಿ ಸೇರಿಕೊಳ್ಳುತ್ತವೆ. ಅಂತಹ ಹಾಲನ್ನು ಮಗುವಿಗೆ ಕುಡಿಸುವುದರಿಂದ ಮುಂದೆ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಸಹಜ.

ಗಾಜಿನ ಬಾಟಲಿಗಳ ತೂಕ ಹೆಚ್ಚು, ಆಕಸ್ಮಿಕವಾಗಿ ಇವು ಕೆಳಗೆ ಬಿದ್ದರೆ, ಇವು ಒಡೆದು ಹೋಗುತ್ತವೆ. ಗಾಜಿನ ಬಾಟಲಿಯನ್ನು ಬಳಸುವ ಮುನ್ನ ಅವುಗಳ ಗುಣಾವಗುಣಗಳನ್ನು ನೀವು ಒಮ್ಮೆ ಪರಿಶೀಲಿಸುವುದು ಒಳ್ಳೆಯದು. ಬನ್ನಿ ಅದು ಏನು ಎಂದು ಒಮ್ಮೆ ನೋಡಿಕೊಂಡು ಬರೋಣ.

ಮಕ್ಕಳಿಗೆ ಗಾಜಿನ ಬಾಟಲಿಗಳು ಪ್ಲಾಸ್ಟಿಕ್ ಬಾಟಲಿಗಳಿಗಿಂತ ಸುರಕ್ಷಿತವೇ?
ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಿಸ್ಫೆನಲ್ ಎ ಎಂಬ ಅಪಾಯಕಾರಿ ರಾಸಾಯನಿಕಗಳು ಸೇರಿರುತ್ತವೆ. ಇವುಗಳು ಅವಧಿ ಪೂರ್ವ ಋತುಮತಿಯಾಗುವ ಸಮಸ್ಯೆಯ ಜೊತೆಗೆ, ಮೆದುಳಿನ ಮೇಲೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಪ್ಲಾಸ್ಟಿಕ್ ಬಾಟಲಿಯನ್ನು ಕಾಯಿಸಿದಾಗ ಈ ರಾಸಾಯನಿಕಗಳು ಆಹಾರದಲ್ಲಿ ಸೇರಿಕೊಳ್ಳುತ್ತವೆ.

ಗಾಜಿನ ಬಾಟಲಿಗಳ ಪ್ರಯೋಜನ
ಗಾಜಿನ ಬಾಟಲಿಗಳನ್ನು ಏಕೆ ಬಳಸಬೇಕು? ಇವುಗಳು BPA (ಬಿಸ್ಫೆನಲ್ ಎ) ನಿಂದ ಮುಕ್ತವಾಗಿರುತ್ತವೆ. ಇವುಗಳನ್ನು ತಯಾರಿಸುವಾಗ ಯಾವುದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಬೆರೆಸಿರುವುದಿಲ್ಲ. ಗಾಜಿನ ಬಾಟಲಿಗಳನ್ನು ಮರುಬಳಕೆ ಮಾಡಬಹುದು. ಇವುಗಳನ್ನು ಕಾಯಿಸಿದಾಗ ಅವುಗಳಿಂದ ಯಾವುದೇ ರಾಸಾಯನಿಕಗಳು ಬಿಡುಗಡೆಯಾಗುವುದಿಲ್ಲ. ಇವುಗಳನ್ನು ಶುಚಿಗೊಳಿಸುವುದು ಸುಲಭ ಮತ್ತು ಇವು ಕರಗುವುದಿಲ್ಲ ಹಾಗು ಆಕಾರದಲ್ಲಿ ವ್ಯತ್ಯಾಸವಾಗುವುದಿಲ್ಲ. ಇವುಗಳು ಮಕ್ಕಳಿಗೆ ಸುರಕ್ಷಿತವು ಹೌದು. ಇವುಗಳು ಹಾಲನ್ನು ತುಂಬಾ ಹೊತ್ತಿನವರೆಗೆ ಬೆಚ್ಚಗಿಡುತ್ತವೆ. ಜೊತೆಗೆ ಇದು ಪರಿಸರ ಸ್ನೇಹಿ.

ಗಾಜಿನ ಬಾಟಲಿಯ ಅವಗುಣಗಳು
ಗಾಜಿನ ಬಾಟಲಿಗಳು ಸುಲಭವಾಗಿ ಒಡೆದು ಹೋಗುತ್ತವೆ. ಇವುಗಳ ಚೂರುಗಳು ಮಕ್ಕಳಿಗೆ ಹಾನಿಯುಂಟು ಮಾಡುತ್ತವೆ. ಪ್ಲಾಸ್ಟಿಕ್‌ಗೆ ಹೋಲಿಸಿದರೆ ಇವು ದುಬಾರಿ. ಇವುಗಳನ್ನು ಎಲ್ಲಿಗಾದರು ಕೊಂಡೊಯ್ಯುವಾಗ ಜಾಗರೂಕತೆಯಿಂದ ತೆಗೆದುಕೊಂಡು ಹೋಗಬೇಕು. ಇವುಗಳು ಗಾಜಿನ ಬಾಟಲಿಯನ್ನು ಬಳಸುವುದರಿಂದ ದೊರೆಯುವ ಪ್ರಯೋಜನಗಳು ಮತ್ತು ಅವುಗಳಲ್ಲಿರುವ ಅಪಾಯಗಳು. ಈಗ ನಿಮ್ಮ ಮಗುವಿಗೆ ಯಾವ ಬಾಟಲಿಯನ್ನು ನೀಡಬೇಕು ಎಂದು ನೀವೇ ನಿರ್ಧರಿಸಿ.

English summary

Are Plastic Bottles Dangerous For Your Babies?

Many years ago glass bottles were used to feed the babies. Nowadays there are different varieties of plastic bottles available that are used for feeding babies. Mothers are always confused when they have to choose between plastic and glass bottles. So, now the question arises- are glass baby bottles better?
Story first published: Thursday, June 18, 2015, 10:09 [IST]
X
Desktop Bottom Promotion