For Quick Alerts
ALLOW NOTIFICATIONS  
For Daily Alerts

ಮಕ್ಕಳ ಕುತೂಹಲಕ್ಕೆ ಕಡಿವಾಣ ಬೇಕು

|
Child
ಮಕ್ಕಳನ್ನು ಆದಷ್ಟು ದೊಡ್ಡವರ ಟಿವಿ ಕಾರ್ಯಕ್ರಮಗಳನ್ನು, ಸಿನಿಮಾಗಳನ್ನು ನೋಡದಂತೆ ಹಿರಿಯರು ತಾಕೀತು ಮಾಡುತ್ತಾರೆ. ಆದರೆ ಇಂದು ಟಿವಿಗಿಂತ ಮಿಗಿಲಾಗಿ ಇಂಟರ್ ನೆಟ್ ಮತ್ತು ಮೊಬೈಲ್ ಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ, ಇವು ಮುಂದೆ ಅವರನ್ನು ಕೆಟ್ಟ ನಡುವಳಿಕೆಗಳಿಗೆ ಪ್ರೇರೆಪಿಸುತ್ತವೆ ಎಂದು ಸಂಶೋಧನೆಗಳಿಂದ ಸಹ ದೃಢ ಪಟ್ಟಿದೆ.

12-18 ರ ಒಳಗಿನ ಮಕ್ಕಳು ಸಿನಿಮಾದಲ್ಲಿರುವ ಅನಗತ್ಯವಾದ ದೃಶ್ಯಗಳಿಂದ ಪ್ರೇರಪಣೆಗೊಂಡು ಚಿಕ್ಕ ವಯಸ್ಸಿನಲ್ಲಿಯೆ ಸೆಕ್ಸ್ ಮುಂತಾದ ಬೇಡದ ವಿಷಯಗಳತ್ತ ಗಮನಹರಿಸಿ ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ತಂದು ಕೊಳ್ಳುತ್ತಾರೆ.

ಆದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದರಿಂದ ಮ್ಕಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಬಹುದಾಗಿದೆ.

1. ಮಿತಿ ಮೀರಿ ಟಿವಿ ನೋಡಲು ಬಿಡಬೇಡಿ, ಅದರ ಬದಲು ಮಕ್ಕಳಿಗೆ ಹೋಗಿ ಆಡಲು ಹೇಳಿ ಇದರಿಂದ ಅವರ ದೈಹಿಕ ಬೆಳವಣಿಗೆ ಕೂಡ ಚೆನ್ನಾಗಿರುತ್ತದೆ.

2.
ಮ್ಕಕಳಿಗೆ ನೋಡಬಹುದಾಂತ ಸಿನಿಮಾಗಳನ್ನು ತೋರಿಸಿ, ಮಕ್ಕಳ ಎದುರು ಮನೆಯವರು ಸಹ ಅಂತಹ ಸಿನಿಮಾಗಳನ್ನು ನೋಡದೆ ಇರುವುದು ಒಳ್ಳೆಯದು.

3. ಮ್ಕಕಳನ್ನು ರೂಮಿನಲ್ಲಿ ಓದಲು ಹೇಳಿ ಮನೆಯವರು ಸಿನಿಮಾವನ್ನು ನೋಡುತ್ತಿದ್ದರೆ ಮಕ್ಕಳಿಗೂ ಓದಲು ಮನಸ್ಸು ಆಗುವುದಿಲ್ಲ, ಆದ್ದರಿಂದ ಒಳ್ಳೆಯ ಕಾರ್ಯಕ್ರಮವನ್ನು ಅವರ ಜೊತೆ ಸೇರಿ ನೋಡಿ.

4. ಮಕ್ಕಳ ರೂಮಿನಲ್ಲಿ ಟಿವಿ ಇಡದಿರುವುದು ಒಳ್ಳೆಯದು.

5. ಕಂಪ್ಯೂಟರ್ ಗೆ ನೆಟ್ ಸಂಪರ್ಕವಿದ್ದರೆ ಅದನ್ನು ಮನೆಯ ಹಾಲ್ ನಲ್ಲಿ ಇಡುವುದು ಪ್ರತ್ಯೇಕವಾಗಿ ಮಕ್ಕಳ ರೂಮಿನಲ್ಲಿ ಕೊಡಿಸುವುದಕ್ಕಿಂತ ಒಳ್ಳೆಯದು.

6. ಸಣ್ಣ ವಯಸ್ಸಿನ ಮಕ್ಕಳ ಕೈಗೆ ಮೊಬೈಲ್ ಕೊಡಸದಿರುವುದು ಒಳ್ಳೆಯದು, ಒಂದು ವೇಳೆ ಕೊಡಿಸಿದರೂ ಅದು ಕ್ಯಾಮೆರಾ ಮೊಬೈಲ್ ಆಗದಿರಲಿ.

7.
ಕಾರ್ಟೋನ್ ಗಳನ್ನು ವೀಕ್ಷಿಸುವಾಗ ಸಹ ಅತಿ ಹಿಂಸಾಚಾರದ, ಕ್ರೂರವಾದ ಕಥೆಯನ್ನು ಹೊಂದಿರುವ ಕಾರ್ಟೋನ್ ಗಳ ವೀಕ್ಷಣೆ ಕೂಡ ಒಳ್ಳೆಯದಲ್ಲ.

8. ಮಕ್ಕಳ ಸ್ನೇಹಿತರ ಬಗ್ಗೆ ತಿಳಿದುಕೊಳ್ಳುವುದು ಸಹ ಒಳ್ಳೆಯದು.

ಮ್ಕಕಳಿಗೆ ಒಳಿತು ಕೆಡಕುಗಳ ಅನುಭವವಿರುವುದಿಲ್ಲ ಅದನ್ನು ಚಿಂತಿಸುವಷ್ಟು ಚಿಂತನೆ ಕೂಡ ಇರುವುದಿಲ್ಲ, ಇಂತಹ ಸಂದರ್ಭದಲ್ಲಿ ಹೆತ್ತವರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಲು ತಮ್ಮ ಸಮಯವನ್ನು ಹೆಚ್ಚಾಗಿ ಕಳೆದರೆ ಮಕ್ಕಳಲ್ಲಿ ಉತ್ತಮ ನಡುವಳಿಕೆ ಬೆಳೆಸಬಹುದಾಗಿದೆ.

English summary

Keep Children Away From The Adult Content | Reason For Children Behaviour | ಅನಗತ್ಯ ವಿಷಯಗಳಿಂದ ಮಕ್ಕಳನ್ನು ದೂರವಿಡಿ | ಮಕ್ಕಳ ನಡುವಳಿಕೆಗೆ ಕಾರಣಗಳು

A recent study reveals that children who are exposed to adult contents in the early stage are more likely to become sexually active. The researchers found that the younger the children were exposed to adult content on TV and movies, the more they involve in illegal things. Take a look.
Story first published: Wednesday, October 12, 2011, 12:03 [IST]
X
Desktop Bottom Promotion