For Quick Alerts
ALLOW NOTIFICATIONS  
For Daily Alerts

ವಿಶ್ವ ಸ್ತನಪಾನ ಸಪ್ತಾಹ: ಎದೆಹಾಲುಣಿಸುವಾಗ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರ

|

ಎದೆಹಾಲು ಮಗುವಿಗೆ ಅಮೃತಕ್ಕೆ ಸಮ. ಮಗುವಿಗೆ 6 ತಿಂಗಳವರೆಗೆ ಎದೆ ಹಾಲು ಮಾತ್ರ ನೀಡಬೇಕು, ಇತರ ಆಹಾರಗಳನ್ನು ನೀಡಲೇಬಾರದು ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಮಗುವಿಗೆ ನೀರು ಕೂಡ ಕೊಡುವ ಅಗ್ಯತವಿಲ್ಲ, ಮಗುವಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಎದೆ ಹಾಲಿನಲ್ಲಿ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.

World Breastfeeding Week

ಆದರೆ ಎದೆಹಾಲುಣಿಸುವಾಗ ತಾಯಿಗೆ ಕೆಲ ಸವಾಲುಗಳು ಎದುರಾಗಬಹುದು. ಎದೆ ಹಾಲು ಸರಿಯಾಗಿ ಬಾರದೇ ಹೋಗಬಹುದ, ಮಗು ಹುಟ್ಟಿದಾಗ ಅದಕ್ಕೆ ಹಾಲುಣಿಸಲು ಸ್ತನ ತೊಟ್ಟು ಸರಿಯಾದ ಆಕಾರದಲ್ಲಿ ಇಲ್ಲದೇ ಹೋಗಬಹುದು, ಎದೆ ಹಾಲು ತುಂಬಿ ಧರಿಸಿದ ಬಟ್ಟೆ ಒದ್ದೆಯಾಗಬಹುದು, ಎದೆಹಾಲು ತುಂಬಿ ಸ್ತನಗಳಲ್ಲಿ ನೋವು ಕಾಣಿಸಬಹುದು, ಎದೆಹಾಲು ಸುರಿದು ದೇಹ ಹಾಲು-ಹಾಲು ವಾಸನೆ ಬೀರಬಹುದು, ತನ್ನ ಮಗುವಿಗಾಗಿ ತಾಯಿಯಾದವಳು ಇಂಥ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ನಾವಿಲ್ಲಿ ಎದೆಹಾಲುಣಿಸುವಾಗ ತಾಯಿಗೆ ಎದುರಾಗುವ ಸವಾಲುಗಳು ಹಾಗೂ ಅದಕ್ಕೆ ಪರಿಹಾರ ಹೇಳಿದ್ದೇವೆ ನೋಡಿ:

 ನವಜಾತ ಶಿಶುವಿಗೆ ಹಾಲುಣಿಸುವಾಗ ಸ್ತನಗಳಲ್ಲಿ ನೋವು

ನವಜಾತ ಶಿಶುವಿಗೆ ಹಾಲುಣಿಸುವಾಗ ಸ್ತನಗಳಲ್ಲಿ ನೋವು

ಹೆರಿಗೆಯಾದ ಸ್ತನ ತೊಟ್ಟುಗಳಲ್ಲಿ ಸ್ವಲ್ಪ ನೋವು ಕಂಡು ಬರುವುದು ಸಹಜ, ಮಗು ಹಾಲು ಕುಡಿಯಲು ಪ್ರಾರಂಭಿಸಿದ ಮೇಲೆ ಆ ನೋವು ಕಡಿಮೆಯಾಗುವುದು, ಪ್ರಾರಂಭದ ಒಂದೆರಡು ದಿನ ಸ್ವಲ್ಪ ಕಷ್ಟವಾಗಬಹುದು. ಕೆಲವೊಮ್ಮೆ ಮಗುವಿಗೆ ಸ್ತನ ತೊಟ್ಟು ಸರಿಯಾಗಿ ಸಿಗದೇ ಹೋಗಬಹುದು, ಆಗ ಅಳಲು ಪ್ರಾರಂಭಿಸುವುದು.

ಪರಿಹಾರ: ನೀವು ಮಗುವಿಗೆ ಹಾಲುಣಿಸುವ ಮುನ್ನ ಮೊಲೆತೊಟ್ಟನ್ನು ಅದರ ಮೂಗಿಗೆ ತಾಗಿಸಿ, ಮೆಲ್ಲನೆ ಉಜ್ಜಿ ಆಗ ಅದು ಬಾಯಿ ಸ್ವಲ್ಪ ದೊಡ್ಡದಾಗಿ ತೆರೆದುಕೊಂಡು ಮೊಲೆತೊಟ್ಟು ಸರಿಯಾಗಿ ಹಿಡಿದು ಹಾಲನ್ನು ಎಳೆದು ಕುಡಿಯಲಾರಂಭಿಸುವುದು. ಸ್ತನವನ್ನು ಮಗುವಿನ ಬಳಿ ತೆಗೆದುಕೊಂಡು ಹೋಗಬೇಡಿ, ಬದಲಿಗೆ ಮಗುವನ್ನು ಎತ್ತಿ ಸ್ತನ ಬಳಿಗೆ ತನ್ನಿ, ಆಗ ಮಗು ಬಾಯಿ ಓಪನ್ ಮಾಡಿ ಕುಡಿಯಲಾರಂಭಿಸುತ್ತದೆ.

 ಸ್ತನ ತೊಟ್ಟುಗಳು ಒಡೆಯುವುದು

ಸ್ತನ ತೊಟ್ಟುಗಳು ಒಡೆಯುವುದು

ಹೆರಿಗೆಯಾದ ಮೊದಲ ಕೆಲ ವಾರಗಳಲ್ಲಿ ಮಗು ಸರಿಯಾಗಿ ಹಾಲು ಕುಡಿಯದಿದ್ದರೆ ಸ್ತನಗಳ ತೊಟ್ಟುಗಳು ಒಣಗಿ ಒಡೆಯಬಹುದು, ಸ್ತನ ತೊಟ್ಟುಗಳು ಒಡೆದಾಗ ತುಂಬಾ ನೋವು ಅನಿಸುವುದು.

ಹೀಗಾದರೆ ಏನು ಮಾಡಬೇಕು?

ಮೊದಲಿಗೆ ಮಗುವನ್ನು ಸರಿಯಾದ ರೀತಿಯ್ಲಿ ಹಿಡಿದು ಕುಡಿಸುವುದನ್ನು ಕಲಿಯಬೇಕು. ನೋವು ತುಂಬಾ ಇದ್ದರೆ ನಿಮ್ಮ ವೈದ್ಯರು ಸೂಚಿಸಿದ ಜೆಲ್ ಹಚ್ಚಬಹುದು ಅಥವಾ ನೋವು ನಿವಾರಕ ತೆಗೆದುಕೊಳ್ಳಬಹುದು, ಎದೆ ಹಾಲುಣಿಸಿದ ಬಳಿಕ ಸ್ವಲ್ಪ ಹಾಲನ್ನು ತೊಟ್ಟಿಗೆ ಉಜ್ಜಿ. ದಿನದಲ್ಲಿ ಎರಡು ಬಾರಿ ಸೋಪು ಹಚ್ಚಿ ತೊಳೆಯಿರಿ.

ಎದೆ ತುಂಬಿ ಬಿಗಿಯಾಗುವುದು

ಎದೆ ತುಂಬಿ ಬಿಗಿಯಾಗುವುದು

ಈ ರೀತಿಯಾದ ತಾಯಿಗೆ ಒಂಥರಾ ಅಸ್ವಸ್ಥತೆ ಉಂಟಾಗುವುದು. ಎದೆ ತುಂಬಿದಾಗ ತುಂಬಾ ಬಿಗಿ ಅನಿಸಿ, ನೋವು ಕೂಡ ಉಂಟಾಗುವುದು. ಮಗು ಸರಿಯಾಗಿ ಹಾಲು ಕುಡಿಯದಿದ್ದಾಗ ಅಥವಾ ಮಗುವಿಗೆ ತುಂಬಾ ಹೊತ್ತಿನಿಂದ ಎದೆ ಹಾಲುಣಿಸದಿದ್ದರೆ ಈ ರೀತಿಯಾಗುವುದು.

ಪರಿಹಾರ: ಮಗು ಹಾಲನ್ನು ಸರಿಯಾಗಿ ಹೀರಿ ಕುಡಿಯುವಂತೆ ನೋಡಿಕೊಳ್ಳಿ, ಕುಡಿಯದಿದ್ದಾಗ ಹಾಲನ್ನು ಹಿಂಡಿ ಹೊರಚೆಲ್ಲಿ, ಬೇಕಿದ್ದರೆ ಪಂಪ್ ಮಾಡಿ ಎದೆ ಹಾಲು ದಾನ ಮಾಡಬಹುದು.

 ಸ್ತನಗಳಲ್ಲಿ ನೋವು ಹಾಗೂ ಜ್ವರ

ಸ್ತನಗಳಲ್ಲಿ ನೋವು ಹಾಗೂ ಜ್ವರ

ಬ್ಯಾಕ್ಟಿರಿಯಾ ಸೋಂಕು ತಗುಲಿದರೆ ಸ್ತನಗಳಲ್ಲಿ ನೋವು ಹಾಗೂ ಜ್ವರ ಉಂಟಾಗುವುದು. ಬ್ಯಾಕ್ಟಿರಿಯಾ ಸೋಂಕು ತಗುಲಿದಾಗ ಈ ರೀತಿಯಾಗುವುದು. ತುಂಬಾ ಹೊತ್ತು ಹಾಲುಣಿಸದಿದ್ದರೆ ಅಥವಾ ಹಾಲು ಕಟ್ಟಿದರೆ ಹೀಗೆ ಉಂಟಾಗುವುದು. ಹೀಗಾದಾಗ ವೈದ್ಯರಿಗೆ ತೋರಿಸಿ.

ಅಲ್ಲದೆ ಬ್ಯಾಕ್ಟಿರಿಯಾ ತಡೆಗಟ್ಟಲು ಬ್ರಾ, ಧರಿಸಿರುವ ಬಟ್ಟೆ , ನರ್ಸಿಂಗ್‌ ಪ್ಯಾಡ್‌ ಇವುಗಳನ್ನು ಬಿಸಿ ನೀರನಲ್ಲಿ ತೊಳೆಯಿರಿ.

 ಕಡಿಮೆ ಎದೆಹಾಲು

ಕಡಿಮೆ ಎದೆಹಾಲು

ಕೆಲವೊಮ್ಮೆ ಮಗುವಿಗೆ ಹೊಟ್ಟೆ ತುಂಬುವಷ್ಟು ಹಾಲು ಪೂರೈಕೆಯಾಗದೇ ಹೋಗಬಹುದು, ಆಗ ಮಗು ಹಸಿವಿನಿಂದ ಆಗಾಗ ಎಚ್ಚರವಾಗಿ ಅಳುವುದು.

ಪರಿಹಾರ: ಎದೆ ಹಾಲು ಕಡಿಮೆಯಿದ್ದರೆ ಎದೆಹಾಲು ಹೆಚ್ಚಿಸುವ ಪೌಡರ್‌ ಸಿಗುತ್ತೆ ಹಾಗೂ ಎದೆಹಾಲು ಎಚ್ಚಿಸುವ ಆಹಾರ ಸೇವಿಸಿ. ನುಗ್ಗೆಕಾಯಿ ಸೊಪ್ಪು, ಶತಾವರಿ, ಸಬ್ಬಸ್ಸಿಗೆ ಸೊಪ್ಪು ಇವೆಲ್ಲಾ ಎದೆಹಾಲು ಹೆಚ್ಚಿಸುವದು.

 ಎದೆಹಾಲು ಹೇಗೆ ಉಣಿಸಬೇಕು?

ಎದೆಹಾಲು ಹೇಗೆ ಉಣಿಸಬೇಕು?

ಕೆಲವರು ಒಂದು ಸ್ತನ ಹಾಲು ಮೊದಲು ನೀಡಿ ಮಗು ಅದರಲ್ಲಿರುವ ಹಾಲು ಸಂಪೂರ್ಣ ಕುಡಿದ ಮೇಲೆ ಮತ್ತೆ ಇನ್ನೊಂದು ಸ್ತನ ಕೊಡುತ್ತಾರೆ, ಹಾಗೇ ಮಾಡಬೇಡಿ, ಒಂದು ಸ್ತನ ಕುಡಿಸಿ ಸ್ವಲ್ಪ ಹೊತ್ತಿನಲ್ಲಿ ಮತ್ತೊಂದು ಸ್ತನ ಕುಡಿಸಿ, ಹೀಗೆ ಆಗಾಗ ಬದಲಾಯಿಸಿ ಕೊಡಿ, ಆಗ ಮಗು ಬೇಗ-ಬೇಗ ಹಾಲು ಹೀರಿ ಕುಡಿಯುತ್ತೆ, ಬೇಗ ಹೊಟ್ಟೆ ತುಂಬುವುದು.

English summary

World Breastfeeding Week : Common Breastfeeding Problems and Solutions in Kannada

World Breastfeeding Week : Here are common breastfeeding problems and tips to tackle this problem, read on...
Story first published: Tuesday, August 2, 2022, 20:40 [IST]
X
Desktop Bottom Promotion