For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯಾಗಿರಬಹುದೇ ಎಂಬ ಸಂಶಯವೇ? ಉಪ್ಪು ಬಳಸಿಯೂ ಕಂಡು ಹಿಡಿಯಬಹುದು

|

ಗರ್ಭಿಣಿಯೇ ಎಂದು ತಿಳಿದುಕೊಳ್ಳಲು ಮೆಡಿಕಲ್‌ನಲ್ಲಿ ಪ್ರೆಗ್ನೆನ್ಸಿ ಕಿಟ್‌ಗಳು ದೊರೆಯುತ್ತವೆ, ಆದರೆ ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನು ಬಳಸಿ ನೀವು ಗರ್ಭಿಣಿ ಆಗಿದ್ದೀರಾ, ಇಲ್ವಾ ಎಂದು ತಿಳಿಯಬಹುದು. ಆದರೆ ಈ ಬಗೆಯ ಪರೀಕ್ಷೆಗಳು ಶೇ. 100ರಷ್ಟು ಸರಿಯಾಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಅದಕ್ಕೆ ನೀವು ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಲೇಬೇಕು.

Pregnancy Test

ಸೂಚನೆ: ನಿಮಗೆ ನೀವು ಗರ್ಭಧರಿಸಿರಬಹುದೇ ಎಂಬ ಸಂಶಯ ಬಂದಾಗ ವೈದ್ಯರ ಬಳಿ ಹೋಗುವ ಮುನ್ನ ಕನ್‌ಫರ್ಮ್‌ ಮಾಡಿಕೊಳ್ಳಲು ಈ ಪರೀಕ್ಷೆ ಬಳಸಬಹುದು. ಇದೊಂದು ಹಳೆಯ ಪರೀಕ್ಷೆ ವಿಧಾನವಾಗಿದ್ದು ಈ ಪರೀಕ್ಷೆ ಮೂಲಕ ನೀವು ಗರ್ಭವತಿಯೇ ಎಂದು ತಿಳಿಯಬಹುದಾಗಿದೆ.

ಬನ್ನಿ ಉಪ್ಪು ಬಳಸಿ ಗರ್ಭವತಿಯೇ? ಎಂದು ತಿಳಿಯುವುದು ಹೇಗೆ ಎಂದು ನೋಡೋಣ:

ಉಪ್ಪು ಬಳಸಿ ಗರ್ಭಿಣಿ ಹೌದೇ, ಅಲ್ಲವೇ ಎಂದು ತಿಳಿಯುವುದು ಹೇಗೆ?

ಉಪ್ಪು ಬಳಸಿ ಗರ್ಭಿಣಿ ಹೌದೇ, ಅಲ್ಲವೇ ಎಂದು ತಿಳಿಯುವುದು ಹೇಗೆ?

ಉಪ್ಪು ಬಳಸಿ ನಿಮ್ಮ ಗರ್ಭದ ಬಗ್ಗೆ ಖಚಿತಪಡಿಸಿ ನಿಮಗೆ ಬೇಕಾಗಿರುವುದು ಎರಡು ವಸ್ತು 1. ಉಪ್ಪು 2. ನಿಮ್ಮ ಮೂತ್ರ

ಈ ಎರಡನ್ನು ಶುದ್ಧವಾದ ಒಂದು ಬೌಲ್‌ನಲ್ಲಿ ಹಾಕಬೇಕು.

ಗರ್ಭಿಣಿಯಾಗಿದ್ದರೆ ನಿಮ್ಮ ಮೂತ್ರದಲ್ಲಿ ಕೋರಿಯಾನಿಕ್ ಗೊನಡೋಟ್ರೋಪಿನ್(hCG)ನಿಮ್ಮ ರಕ್ತದ ಮೂಲಕ ಮೂತ್ರಕ್ಕೆ ಸೇರುತ್ತದೆ. ನೀವು ಮೆಡಿಕಲ್ ಶಾಪ್‌ನಿಂದ ತಂದ ಪ್ರಗ್ನೆನ್ಸಿ ಕಿಟ್‌ ಕೂಡ ಇದೇ ಅಂಶ ಪತ್ತೆ ಹಚ್ಚಿ ನೀವು ಗರ್ಣಿಣಿಯೇ ಇಲ್ಲವೇ ಎಂದು ತಿಳಿಸುವುದು.

 ಈ ಪರೀಕ್ಷೆ ಮಾಡುವುದು ಹೇಗೆ?

ಈ ಪರೀಕ್ಷೆ ಮಾಡುವುದು ಹೇಗೆ?

ನೀವು ಬೆಳಗ್ಗೆ ಮಾಡುವ ಮೂತ್ರವನ್ನು ಒಂದು ಸ್ವಚ್ಛವಾದ ಪ್ಲಾಸ್ಟಿಕ್‌ ಬೌಲ್‌ನಲ್ಲಿ ಸಂಗ್ರಹಿಸಿ (ಇದಾದರೆ ಬಿಸಾಡಬಹುದು, ಯಾವುದೇ ಬೌಲ್ ಬಳಸಬಹುದು) ಅದಕ್ಕೆ 2 ಚಮಚ ಕಲ್ಲುಪ್ಪು ಹಾಕಿ ಕೆಲು ಗಂಟೆ ಬಿಡಿ, ನಂತರ ನೋಡಿದಾಗ ನಿಮ್ಮ ಮೂತ್ರ ಬಿಳಿ ಅಥವಾ ಚೀಸಿಯಾಗಿದ್ದರೆ ನೀವು ಗರ್ಭಿಣಿ ಎಂದರ್ಥ, ಮೂತ್ರದ ಬಣ್ಣದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರದಿದ್ದರೆ ನೀವು ಅಲ್ಲ ಎಂದರ್ಥ.

ಈ ಪರೀಕ್ಷೆಗೆ ಯಾವುದೇ ವೈಜ್ಞಾನಿಕ ವಿವರಣೆ ಇಲ್ಲ

ಈ ಪರೀಕ್ಷೆಗೆ ಯಾವುದೇ ವೈಜ್ಞಾನಿಕ ವಿವರಣೆ ಇಲ್ಲ

ಗರ್ಭಿಣಿಯಾಗಿದ್ದರೆ ಮೂತ್ರ ಜೊತೆ ಉಪ್ಪು ಸೇರಿಸಿದಾಗ ಬಣ್ಣ ಬದಲಾಗುತ್ತೆ,ಏಕೆ? ಎಂಬುವುದನ್ನು ಎಲ್ಲಿಯೂ ವೈಜ್ಞಾನಿಕವಾಗಿ ವಿವರಿಸಿಲ್ಲ.

 ಉಪ್ಪು ಗರ್ಭ ಪರೀಕ್ಷೆ ಮಾಡುವುದರಿಂದ 100ರಷ್ಟು ಫಲಿತಾಂಶ ಸಿಗುವುದೇ?

ಉಪ್ಪು ಗರ್ಭ ಪರೀಕ್ಷೆ ಮಾಡುವುದರಿಂದ 100ರಷ್ಟು ಫಲಿತಾಂಶ ಸಿಗುವುದೇ?

ಇದು ಒಂದು ಅಂದಾಜು ಪರೀಕ್ಷೆಯಾಗಿದ್ದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಪರೀಕ್ಷೆಯಲ್ಲಿ ನೀವು ಗರ್ಭಿಣಿಯೆಮದು ಗೊತ್ತಾದರೂ ಅಥವಾ ಗರ್ಭಿಣಿ ಅಲ್ಲ ಅಂತ ಬಂದು ನಿವು ತಿಂಗಳ ಮುಟ್ಟಾಗದಿದ್ದರೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿ.

ಇದೇ ಪರೀಕ್ಷೆ ನಂಬಿ ಕೂರಬೇಡಿ.

English summary

Pregnancy Test with Salt- How does it work and its effectiveness in Kannada

Pregnancy Test with Salt- How does it work and its effectiveness in Kannada, read on...
Story first published: Saturday, June 18, 2022, 19:48 [IST]
X
Desktop Bottom Promotion