ಪುರುಷರ ಸಪ್ತಾಹ: ಅಪ್ಪನಾಗಲು ಸೂಕ್ತ ವಯಸ್ಸು ಯಾವುದು?

By: Arshad
Subscribe to Boldsky

ತಾಯಿಯಾಗಲು ಸೂಕ್ತ ವಯಸ್ಸಿನ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತಾ ಬಂದಿದೆ, ಆದರೆ ತಂದೆಯಾಗಲು ಯಾವ ವಯಸ್ಸು ಸೂಕ್ತ ಎಂಬ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ, ಅಥವಾ ಇದೊಂದು ಚರ್ಚೆಗೆ ಗ್ರಾಸವಾಗಬಹುದಾದ ವಿಷಯ ಎಂದೇ ಹೆಚ್ಚಿನವರು ತಿಳಿದಿಲ್ಲ. ಇದುವರೆಗಿನ ನಂಬಿಕೆಯ ಪ್ರಕಾರ ಪುರುಷನಿಗೆ ಯಾವುದೇ ರಜೋನಿವೃತ್ತಿ ಎಂಬುದೇ ಇಲ್ಲವಾದುದರಿಂದ ಯಾವುದೇ ವಯಸ್ಸಿನಲ್ಲಿ ತಂದೆಯಾಗಲು ಸಾಧ್ಯ.

ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು

ಆದರೆ ವಾಸ್ತವವಾಗಿ ಪುರುಷರಲ್ಲಿಯೂ ತಂದೆಯಾಗಲು ಸೂಕ್ತವಾದ ವಯಸ್ಸೊಂದಿದ್ದು ಈ ಅವಧಿಯಲ್ಲಿ ಪಡೆಯುವ ಮಕ್ಕಳು ಅತ್ಯಂತ ಆರೋಗ್ಯ ಪೂರ್ಣರಾಗಿರುತ್ತಾರೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಯಾವ ಮಹಿಳೆಯ ಪತಿಯ ವಯಸ್ಸು ನಲವತ್ತು ಮೀರಿರುತ್ತದೆಯೋ ಅವರಿಗೆ ಗರ್ಭಾಂಕುರವಾಗಲು ಇತರರಿಗಿಂತ ಕಡಿಮೆ ಅವಕಾಶವಿರುತ್ತದೆ. ಆದರೆ ಪತಿಯ ವಯಸ್ಸು ಇಪ್ಪತ್ತೈದರ ಆಸುಪಾಸಿದ್ದರೆ ಈ ಅವಕಾಶ ಗರಿಷ್ಠವಾಗಿರುತ್ತದೆ. ಬನ್ನಿ, ಈ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ..... 

ಟೆಸ್ಟೋಸ್ಟೆರೋನ್ ಮಟ್ಟ

ಟೆಸ್ಟೋಸ್ಟೆರೋನ್ ಮಟ್ಟ

ಪುರುಷರಿಗೆ ಮೀಸಲಾದ ರಸದೂತ ಅಥವಾ ಟೆಸ್ಟೋಸ್ಟೆರೋನ್ ಎಂಬ ಹಾರ್ಮೋನ್ ಇಪ್ಪತ್ತೈದರ ವಯಸ್ಸಿನಲ್ಲಿ ಅತಿ ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ. ಮೂವತ್ತು ದಾಟಿದ ಬಳಿಕ ಇದರ ಮಟ್ಟ ಪ್ರತಿವರ್ಷ ಒಂದೊಂದು ಶೇಖಡಾ ಕಡಿಮೆಯಾಗುತ್ತಾ ಬರುತ್ತದೆ. ಪರಿಣಾಮವಾಗಿ ವೀರ್ಯಾಣುಗಳ ಉತ್ಪತ್ತಿಯೂ ಇದೇ ಪ್ರಕಾರ ಕಡಿಮೆಯಾಗುತ್ತದೆ.

ವೀರ್ಯಾಣುಗಳ ಗುಣಮಟ್ಟ

ವೀರ್ಯಾಣುಗಳ ಗುಣಮಟ್ಟ

ಗರ್ಭಧಾರಣೆಗೆ ಒಂದೇ ವೀರ್ಯಾಣು ಅಗತ್ಯವಿದ್ದರೂ ಇವುಗಳ ಸಾಂದ್ರತೆ ಪ್ರತಿ ಸಿಸಿಯಲ್ಲಿ ಇಪ್ಪತ್ತು ಲಕ್ಷ ಇದ್ದರೆ ಮಾತ್ರವೇ ಗರ್ಭಧಾರಣೆ ಸಾಧ್ಯವಾಗುವುದು ನಿಸರ್ಗದ ಒಂದು ಸೋಜಿಗ. ಅಷ್ಟೇ ಅಲ್ಲ, ವೀರ್ಯಾಣುಗಳ ಗುಣಮಟ್ಟ ಅಥವಾ ಪರಿಪೂರ್ಣತೆಯೂ ಸರಿಸುಮಾರು ಮೂವತ್ತೈದು ವರ್ಷದವರೆಗೆ ಉತ್ತಮವಗಿರುತ್ತದೆ. ಆದರೆ ಕ್ರಮೇಣ ಇದು ಕ್ಷೀಣಿಸುತ್ತಾ ಬರುತ್ತದೆ.

ವೀರ್ಯಾಣುಗಳ ಚಲನಶೀಲತೆ

ವೀರ್ಯಾಣುಗಳ ಚಲನಶೀಲತೆ

ವೀರ್ಯಾಣುಗಳನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ನೋಡಿದಾಗ ಪುಟ್ಟಬಾಲವನ್ನು ಆಡಿಸುತ್ತಾ ಈಜುತ್ತಿರುವ ಮೀನುಗಳಂತೆ ಗೋಚರಿಸುತ್ತದೆ. ಈ ಚಲನೆ ಇಪ್ಪತ್ತೈದರ ವಯಸ್ಸಿನ ಪುರುಷರ ವೀರ್ಯಾಣುಗಳಲ್ಲಿ ಅತಿ ಹೆಚ್ಚಾಗಿರುತ್ತದೆ ಹಾಗೂ ಸುಮಾರು ಐವತ್ತೈದು ವರ್ಷ ವಯಸ್ಸಿನವರಲ್ಲಿ ಹೆಚ್ಚೂ ಕಡಿಮೆ ಇಲ್ಲವಾಗುತ್ತದೆ. ಅಂದರೆ ಈ ವಯಸ್ಸಿನಲ್ಲಿ ತಂದೆಯಾಗುವ ಸಾಧ್ಯತೆಯನ್ನು ಅರ್ಧಕ್ಕರ್ಧ ಕಳೆದುಕೊಂಡಿರುತ್ತಾರೆ. ಅಂದರೆ ಈ ಚಲನಶೀಲತೆ ವಯಸ್ಸಿಗನುಗುಣವಾಗಿ ಕುಂದುತ್ತಾ ಬಂದಿರುವುದನ್ನು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ.

ಜೀವನಶೈಲಿಯ ಅಭ್ಯಾಸಗಳು

ಜೀವನಶೈಲಿಯ ಅಭ್ಯಾಸಗಳು

ವಯಸ್ಸಿನ ಹೊರತು ಪುರುಷರ ವಂಶಾಭಿವೃದ್ದಿಯ ಕ್ಷಮತೆಯನ್ನು ಇನ್ನು ಯಾವ ಗುಣಗಳು ನಿರ್ಧರಿಸುತ್ತವೆ? ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಧೂಮಪಾನ, ಪೌಷ್ಟಿಕಾಂಶದ ಕೊರತೆ, ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದು, ಸಾಕಷ್ಟು ನಿದ್ದೆ ಇಲ್ಲದಿರುವುದು ಇವೆಲ್ಲವೂ ನಿಧಾನವಾಗಿ ಪುರುಷರ ಫಲವತ್ತತೆಯನ್ನು ಕುಂದಿಸುವುದನ್ನು ಕಂಡುಕೊಳ್ಳಲಾಗಿದೆ.

ಸೂಕ್ತ ವಯಸ್ಸು ಯಾವುದು?

ಸೂಕ್ತ ವಯಸ್ಸು ಯಾವುದು?

ಹಾಗಾದರೆ ತಂದೆಯಾಗಲು ಸೂಕ್ತ ವಯಸ್ಸು ಯಾವುದು? ಸಂಶೋಧನೆಗಳ ಪ್ರಕಾರ 22 ರಿಂದ 25ನೇ ವಯಸ್ಸಿನಲ್ಲಿ ಆರೋಗ್ಯ ಹಾಗೂ ವೀರ್ಯಾಣುಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಆದರೆ ಈ ವಯಸ್ಸಿನಲ್ಲಿ ಪುರುಷರು ಇನ್ನೂ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಿದ್ದು ಒಂದು ನೆಲೆಯನ್ನು ಕಂಡುಕೊಳ್ಳುವ ಹಂತದಲ್ಲಿರುತ್ತಾರೆ. ಸುಮಾರು ಇಪ್ಪತ್ತೈದರಿಂದ ಇಪ್ಪತ್ತೆಂಟು ವರ್ಷದ ವಯಸ್ಸಿನಲ್ಲಿ ಜೀವನದ ಮಹತ್ತರ ಘಟ್ಟವನ್ನು ಸಾಧಿಸಿ ಒಂದು ಹಂತಕ್ಕೆ ಸ್ಥಿತಗೊಳ್ಳುವಾಗ ಸುಮಾರು ಇಪ್ಪತ್ತೆಂಟು ವರ್ಷ ವಯಸ್ಸಾಗಿರುತ್ತದೆ. ಹಾಗಾಗಿ ಇಪ್ಪತ್ತೆಂಟರಿಂದ ಮೂವತ್ತು ವರ್ಷ ವಯಸ್ಸು ಅತ್ಯುತ್ತಮವಾಗಿದೆ. ಆದರೆ ಇದಕ್ಕೂ ಹೆಚ್ಚು ತಡಮಾಡಕೂಡದು. ಏಕೆಂದರೆ ಮೂವತ್ತರ ಬಳಿಕ ಇವರ ಕ್ಷಮತೆಯೂ ಉಡುಗತೊಡಗುತ್ತದೆ.

ಹಾಗಾದರೆ ಹದಿಹರೆಯ?

ಹಾಗಾದರೆ ಹದಿಹರೆಯ?

ಹದಿನೈದರಿಂದ ಹತ್ತೊಂಭತ್ತರ ಹರೆಯದಲ್ಲಿಯೂ ಬಾಲಕರ ದೇಹದಲ್ಲಿ ಉತ್ತಮ ಬೆಳವಣಿಗೆಯಾಗಿದ್ದು ವೀರ್ಣಾಣುಗಳ ಉತ್ಪತ್ತಿಯೂ ಈಗತಾನೇ ಪ್ರಾರಂಭವಾಗಿರುತ್ತದೆ. ಈ ವಯಸ್ಸಿನಲ್ಲಿ ಆಗುವ ಗರ್ಭಧಾರಣೆಯಿಂದ ಹೆಚ್ಚಿನ ಸಂದರ್ಭದಲ್ಲಿ ಗರ್ಭದಲ್ಲಿಯೇ ಸತ್ತಿರುವ ಮಕ್ಕಳು ಹುಟ್ಟುವ ಸಾಧ್ಯತೆ ಅತಿ ಹೆಚ್ಚು. ಆದ್ದರಿಂದ ಪ್ರಾಪ್ತ ವಯಸ್ಕರಾಗುವವರೆಗೂ ಈ ನಿಟ್ಟಿನಲ್ಲಿ ಮುಂದುವರೆಯುವುದು ಸರಿಯಲ್ಲ.

ಡಿ ಎನ್ ಎ

ಡಿ ಎನ್ ಎ

ಮೂವತ್ತು ವರ್ಷದ ಬಳಿಕ ಪ್ರತಿವರ್ಷವೂ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನಿನ ಪ್ರಮಾಣ ಕಡಿಮೆಯಾಗುತ್ತಾ ಸಾಗುತ್ತದೆ. ಹಾಗೂ ಮೂವತ್ತೈದು ವರ್ಷದ ಬಳಿಕ ವೀರ್ಯಾಣುಗಳಲ್ಲಿನ ಡಿಎನ್ ಎ ರಚನೆಯಲ್ಲಿಯೂ ಬದಲಾವಣೆ (mutations) ಕಂಡುಬರುತ್ತದೆ. ಆದ್ದರಿಂದ ಈ ವಯಸ್ಸಿನಲ್ಲಿ ತಂದೆಯಾಗುವುದರಿಂದ ಕೆಲವಾರು ತೊಡಕುಗಳು ಎದುರಾಗಬಹುದು. ಉದಾಹರಣೆಗೆ ವಿಕಲಾಂಗ ಅಥವಾ ಮನೋವೈಕಲ್ಯ ಹೊಂದಿರುವ ಮಕ್ಕಳು ಹುಟ್ಟಬಹುದು. ಆದ್ದರಿಂದ ಮೂವತ್ತರ ಆಸುಪಾಸಿನಲ್ಲಿ, ಇದಕ್ಕೂ ತುಂಬಾ ತಡ ಎಂದರೆ ಮೂವತ್ತೈದರ ಒಳಗೆ ತಂದೆಯಾಗಿಬಿಡಬೇಕು.

English summary

What's The Best Age For A Man To Have A Baby?

A lot has been discussed and debated about the right age for women to get pregnant but a very less has been discussed about the right age for men to become a father. Yes, even men should be aware of the fact that the right age matters a lot in producing healthy children. A study claims that women who have partners who are above 40 years of age, generally take time to conceive. But women whose partners are around the age of 25 get pregnant faster. Here are more facts.
Subscribe Newsletter