For Quick Alerts
ALLOW NOTIFICATIONS  
For Daily Alerts

ಮಗುವಿನಲ್ಲಿ ಸ್ಟ್ರಾಬೆರಿ ರೀತಿಯ ಹುಣ್ಣು ಇದೆಯೇ? ನೀವು ತಿಳಿಯಲೇಬೇಕಾದ ಸಂಗತಿಗಳಿವು

|

ಸ್ಟ್ರಾಬೆರಿ ಎಂಬ ಹೆಸರು ಕೇಳಿದ ಕೂಡಲೇ ನಮ್ಮ ಮನಸ್ಸಿನಲ್ಲಿ ಕೆಂಪಗಿನ ಹೃದಯಾಕಾರದ ಹುಣ್ಣು ಕಣ್ಣ ಮುಂದೆ ಬರುತ್ತದೆ. ಈ ಆಕಾರ ಮತ್ತು ಬಣ್ಣವನ್ನೇ ಮತ್ತು ಕೊಂಚ ಹೊರಮೈ ಈ ಹಣ್ಣಿನಂತೆಯೇ ತೋರುವ ಹುಟ್ಟು ಕಲೆಯೊಂದನ್ನು ಈ ಹಣ್ಣಿನ ಹೆಸರಿನ ಜೊತೆಯಾಗಿಸಿ ಇಡಲಾಗಿದೆ. ಸ್ಟ್ರಾಬೆರಿ ಹಿಮಾಂಜಿಯೋಮಾ ಎಂಬುದು ಹುಟ್ಟಿನಿಂದಲೇ ಚರ್ಮದ ಮೇಲೆ ಕಾಣಿಸಿಕೊಳ್ಳುವ ಪ್ರಮುಖವಾಗಿ ಎದ್ದು ಕಾಣುವ ಮಚ್ಚೆಯೇ ಆಗಿದೆ. ಒಂದು ವೇಳೆ ನಿಮ್ಮ ಮಗುವಿನ ಮೈ ಮೇಲೆ ಈ ಬಗೆಯ ಯಾವುದೇ ಕಲೆ ಇದ್ದರೆ ಈ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಈ ಲೇಖನದಲ್ಲಿವೆ.

ಅಂದ ಹಾಗೆ, ಇದೇನೂ ಮಾರಕ ತೊಂದರೆಯಲ್ಲ. ನೋಡಲಿಕ್ಕೆ ಕೊಂಚ ವಿಚಿತ್ರವಾಗಿ ಕಾಣುತ್ತವೆಯೇ ಹೊರತು ಮಗುವಿನ ಆರೋಗ್ಯಕ್ಕೇನೂ ತೊಂದರೆಯಿಲ್ಲ. ಸಾಮಾನ್ಯವಾಗಿ ಮಗುವಿನ ಬೆಳವಣಿಗೆಯೊಂದಿಗೆ ಈ ಕಲೆಗಳು ತಾವಾಗಿಯೇ ಮರೆಯಾಗುತ್ತವೆ.

ಸ್ಟ್ರಾಬೆರಿ ಹಿಮಾಂಜಿಯೋಮಾ (Strawberry Hemangioma) ಕಲೆಯನ್ನು infantile hemangiomas ಅಥವಾ ಬಾಲ್ಯದ ಹಿಮಾಂಜಿಯೋಮಾಸ್ ಎಂದೂ ಕರೆಯಲಾಗುತ್ತದೆ. ಮಗುವಿನ ಬೆಳವಣಿಗೆಯ ಯಾವುದೋ ತೊಂದರೆಯಿಂದ ಚರ್ಮದ ಅಡಿಯಲ್ಲಿ ಬೆಳೆಯಬೇಕಾಗಿದ್ದ ರಕ್ತನಾಳಗಳು ಅತಿ ಎನಿಸುವಷ್ಟು ಹೆಚ್ಚು ಬೆಳೆಯುತ್ತವೆ ಹಾಗೂ ಒತ್ತೊತ್ತಾಗಿ ಹೊರಚರ್ಮವನ್ನು ಅಡಿಯಿಂದ ಒತ್ತುತ್ತವೆ. ಈಗ ಹೊರಪದರ ಅತಿ ತೆಳ್ಳಗಾಗಿ ರಕ್ತನಾಳದ ಕೆಂಪುಬಣ್ಣ ಸ್ಪಷ್ಟವಾಗಿ ಗೋಚರಗೊಳ್ಳುತ್ತದೆ. ಒಂದರ ಪಕ್ಕ ಇನ್ನೊಂದರಂತೆ ಲಕ್ಷಾಂತರ ರಕ್ತನಾಳಗಳು ಹೀಗೆ ಒತ್ತೊತ್ತಾಗಿರುವ ಕಾರಣದಿಂದಲೇ ಇದರ ಹೊರಮೈ ದೊರಗು ಅಥವಾ ಚಿಕ್ಕಚಿಕ್ಕ ಗುಳ್ಳೆಗಳ ಗೊಂಚಲಿನಂತೆ ಅಥವಾ ಸ್ಟ್ರಾಬೆರಿ ಹಣ್ಣಿನಂತಲೂ ತೋರಬಹುದು. ಕೆಲವೊಮ್ಮೆ ನಯವಾದ, ನೀಲಿಮಿಶ್ರಿಯ ನೇರಳೆ ಬಣ್ಣವನ್ನೂ ಹೊಂದಿರುತ್ತದೆ. ಮೇಲ್ನೋಟಕ್ಕೆ ಪೆಟ್ಟು ಬಿದ್ದ ಭಾಗದಂತೆಯೋ ತೋರಬಹುದು.

ಸುಮಾರು ಐದರಿಂದ ಹತ್ತು ಶೇಖಡಾ ಮಕ್ಕಳಲ್ಲಿ ಈ ತೊಂದರೆ ಕಾಣಿಸಿಕೊಳ್ಳಬಹುದು. ಕೆಲವು ಮಕ್ಕಳಲ್ಲಿ ಹುಟ್ಟುವಾಗಲೇ ಇದ್ದರೆ ಕೆಲವು ಮಕ್ಕಳಿಗೆ ಕೆಲವು ವಾರಗಳು ಅಥವಾ ತಿಂಗಳುಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಪ್ರಕಟಗೊಳ್ಳಲು ಪ್ರಾರಂಭವಾದ ಬಳಿಕ ಮುಂದಿನ ಮೂರರಿಂದ ಐದು ತಿಂಗಳ ಅವಧಿಯಲ್ಲಿ ವೇಗವಾಗಿ ಬೆಳೆಯುತ್ತವೆ. ಬಳಿಕ ನಿಧಾನವಾಗಿ ಉಡುಗಲು ತೊಡಗುತ್ತವೆ.

ಸ್ಟ್ರಾಬೆರಿ ಹಿಮಾಂಜಿಯೋಮಾ ಕಲೆಗಳು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತವೆ?

ಸ್ಟ್ರಾಬೆರಿ ಹಿಮಾಂಜಿಯೋಮಾ ಕಲೆಗಳು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತವೆ?

ಮಗುವಿನ ದೇಹದ ಯಾವುದೇ ಭಾಗದಲ್ಲಿ ಇವು ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮುಖ, ನೆತ್ತಿ, ಬೆನ್ನು ಅಥವಾ ಎದೆಯ ಮೇಲೂ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಗದ್ದ, ತುಟಿಯ ಭಾಗದಲ್ಲಿಯೂ ಕಾಣಿಸಿಕೊಂಡು ಗಡ್ಡ ಮೀಸೆಗಳಂತೆಯೂ ತೋರಬಹುದು.

ಸ್ಟ್ರಾಬೆರಿ ಹಿಮಾಂಜಿಯೋಮಾ ಎದುರಾಗಲು ಕಾರಣಗಳೇನು?

ಸ್ಟ್ರಾಬೆರಿ ಹಿಮಾಂಜಿಯೋಮಾ ಎದುರಾಗಲು ಕಾರಣಗಳೇನು?

ಸ್ಟ್ರಾಬೆರಿ ಹಿಮಾಂಜಿಯೋಮಾ ಎಂಬ ಸ್ಥಿತಿಯಲ್ಲಿ ಈ ಭಾಗದಲ್ಲಿಯೇ ಏಕಾಗಿ ಪೂರ್ಣ ಬೆಳವಣಿಗೆ ಪಡೆಯದ ರಕ್ತನಾಳಗಳು ಸಾಂದ್ರತೆಗೊಳ್ಳುತ್ತವೆ ಎಂಬ ಪಶ್ನೆಗೆ ವಿಜ್ಞಾನದ ಬಳಿ ಉತ್ತರವಿಲ್ಲ. ಸಾಮಾನ್ಯವಾಗಿ ಹೆಣ್ಣು ಮಗುವಿನಲ್ಲಿಯೇ ಈ ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ, ಅದರಲ್ಲೂ ಚರ್ಮದ ಬಣ್ಣ ಬೆಳ್ಳಗಿರುವ, ಅವಳಿ ಮಕ್ಕಳು ಮತ್ತು ಅವಧಿಪೂರ್ವ ಜನಿಸಿದ ಹೆಣ್ಣು ಮಕ್ಕಳಿಗೇ ಕಾಣಿಸಿಕೊಳ್ಳುತ್ತದೆ. ಈ ಮಕ್ಕಳಿಗೇ ಏಕಾಗಿ ಈ ಕಲೆ ಎದುರಾಗುತ್ತದೆ, ಬೇರೆ ಮಕ್ಕಳಿಗೆ ಏಕಿಲ್ಲ ಎಂಬ ಪ್ರಶ್ನೆಗೂ ಸೂಕ್ತ ಉತ್ತರ ದೊರಕುವುದಿಲ್ಲ.

ಈ ಕಲೆಗಳು ಹೇಗೆ ಮತ್ತು ಯಾವಾಗ ನಿವಾರಣೆಯಾಗುತ್ತವೆ?

ಈ ಕಲೆಗಳು ಹೇಗೆ ಮತ್ತು ಯಾವಾಗ ನಿವಾರಣೆಯಾಗುತ್ತವೆ?

ಸಾಮಾನ್ಯವಾಗಿ ಈ ಕಲೆಗಳು ನಿಧಾನವಾಗಿ ಉಡುಗುತ್ತಾ ಹೋಗುತ್ತವೆ ಹಾಗೂ ಕಾಲಕ್ರಮೇಣ ಬಹುತೇಕ ಮರೆಯಾಗುತ್ತವೆ. ಆದರೆ ಪರಿಪೂರ್ಣವಾಗಿ ಹೋಗುವುದಿಲ್ಲ. ಮಗುವಿನ ಮೊದಲ ವರ್ಷದಲ್ಲಿ ಈ ಕಲೆಗಳು ಚಿಕ್ಕದಾಗತೊಡಗುತ್ತವೆ, ಕ್ರಮೇಣ ಬಣ್ಣ ತಿಳಿಗೊಳ್ಳುತ್ತಾ ಸಹಜವರ್ಣದ ಹತ್ತಿರ ಬರುತ್ತಾ ಹೋಗುತ್ತದೆ. ಈ ಕುಂದುವಿಕೆ ಮಗುವಿನ ನಾಲ್ಕನೆಯ ಅಥವಾ ಐದನೆಯ ವರ್ಷಕ್ಕೂ ಮುಂದುವರೆಯಬಹುದು. ಒಂದು ವೇಳೆ ಪೂರ್ಣವಾಗಿ ಇಲ್ಲವಾದರೂ ಇದು ಇದ್ದ ಕಲೆ ತೆಳ್ಳಗೆ ಉಳಿದುಕೊಳ್ಳಬಹುದು.

ಆದರೆ, ಈ ಕಲೆಗಳನ್ನು ಬಲವಂತವಾಗಿ ನಿವಾರಿಸಲು ಯತ್ನಿಸಿದರೆ, ಇದು ಅತಿ ಸ್ಪಷ್ಟವಾಗಿ ಕಾಣಲಾಗುವಂತಹ ಶಾಶ್ವತ ಕಲೆಯನ್ನು ಉಂಟು ಮಾಡಬಹುದು. ಆದ್ದರಿಂದ ಇದನ್ನು ತಾನಾಗಿಯೇ ವಾಸಿಯಾಗುವಂತೆ ಬಿಡುವುದೇ ಒಳ್ಳೆಯದು.

ಒಂದು ವೇಳೆ ಈ ಕಲೆ ಮಗುವಿನ ಕಣ್ಣಿಗೆ ಅತಿ ಹತ್ತಿರವಿದ್ದು ಇದರ ಬೆಳವಣಿಗೆಯಿಂದ ಕಣ್ಣಿಗೆ ಅಪಾಯ ಎಂದು ಮಕ್ಕಳ ತಜ್ಞರು ಅಭಿಪ್ರಾಯಪಟ್ಟರೆ ಮಾತ್ರವೇ ವೈದ್ಯರು ತಜ್ಞರ ಸಮಾಲೋಚನೆಯ ಬಳಿಕವೇ ಇದನ್ನು ನಿವಾರಿಸುವ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಇದೇ ಪ್ರಕಾರ, ತುಟಿ, ಬಾಯಿ, ಮೂಗು ಮೊದಲಾದ ಭಾಗಗಳಲ್ಲಿ ಎದುರಾಗಿ ಊಟ ಮಾಡಲು, ಉಸಿರಾಡಲು ಅಥವಾ ಮಾತನಾಡಲು ಕಷ್ಟಕರವಾಗಿಸಿದಾಗಲೂ ನಿವಾರಣೆಯ ಬಗ್ಗೆ ತಜ್ಞರಿಂದ ಶಸ್ತ್ರ ಚಿಕಿತ್ಸೆ ಅಥವಾ ಲೇಸರ್ ಚಿಕಿತ್ಸೆಯ ಬಗ್ಗೆ ಸಲಹೆ ಯನ್ನು ಪಡೆಯಲಾಗುತ್ತದೆ. ಉಳಿದಂತೆ ಇವನ್ನು ತಾವಾಗಿಯೇ ವಾಸಿಯಾಗಲು ನೆರವಾಗುವ ಔಷಧಿಗಳು, ಚರ್ಮಕ್ಕೆ ಹಚ್ಚಿಕೊಳ್ಳಬಹುದಾದ ಕ್ರೀಮ್ ಅಥವಾ ಚುಚ್ಚುಮದ್ದುಗಳ ಚಿಕಿತ್ಸೆಯನ್ನೂ ನೀಡಬಹುದು.

ಈ ತೊಂದರೆಯನ್ನು ನೀವು ಗಮನಿಸಿದ ಬಳಿಕ ವೈದ್ಯರಲ್ಲಿ ಯಾವಾಗ ಸಲಹೆ ಪಡೆಯಬೇಕು?

ಈ ತೊಂದರೆಯನ್ನು ನೀವು ಗಮನಿಸಿದ ಬಳಿಕ ವೈದ್ಯರಲ್ಲಿ ಯಾವಾಗ ಸಲಹೆ ಪಡೆಯಬೇಕು?

ಈ ಕಲೆಯನ್ನು ನೀವು ಗಮನಿಸಿದ ಬಳಿಕ ಆದಷ್ಟೂ ಬೇಗನೇ ಮಕ್ಕಳ ತಜ್ಞರಲ್ಲಿ ತೋರಿಸಬೇಕು. ಬಹುತೇಕ ಎಲ್ಲಾ ಕಲೆಗಳು ನಿರಪಾಯಕಾರಿಯಾದರೂ ಕಣ್ಣು, ಬಾಯಿ ಮೂಗುಗಳ ಬಳಿ ಎದುರಾಗಿದ್ದರೆ ಇದು ಕಾಳಜಿಯ ವಿಷಯವಾಗಿದೆ.

ಈ ಕಲೆಗಳು ಅತಿ ಶೀಘ್ರವಾಗಿ ಬೆಳೆಯುತ್ತವೆ ಹಾಗೂ ಈ ಬೆಳವಣಿಗೆಯನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಕಾಲ ಕಾಲಕ್ಕೆ ಚಿತ್ರಗಳನ್ನು ತೆಗೆದು ಸಂಗ್ರಹಿಸಿಟ್ಟುಕೊಳ್ಳುವುದು ಇನ್ನೂ ಉತ್ತಮ. ಒಂದು ವೇಳೆ ವೈದ್ಯರು ಇದಕ್ಕೆ ಶಸ್ತ್ರ ಚಿಕಿತ್ಸೆ ಅಥವಾ ಲೇಸರ್ ಚಿಕಿತ್ಸೆಯ ಅಗತ್ಯವಿದೆ ಎಂದು ಸೂಚಿಸಿದರೆ ಮಗುವಿಗೆ ಒಂದು ತಿಂಗಳಾಗುತ್ತಿದ್ದಂತೆಯೇ ಇದನ್ನು ನಡೆಸಬೇಕು. ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ ಎಂದಾದರೆ ವೈದ್ಯರೇ ಸೂಕ್ತ ಔಷಧಿ ಹಾಗೂ ಇತರ ಕ್ರಮಗಳನ್ನು ಕೈಗೊಳ್ಳಲು ಸಲಹೆ ಮಾಡುತ್ತಾರೆ.

English summary

Strawberry Hemangioma Birthmarks: Causes, Symptoms, and Effects in Kannada

Strawberry Hemangioma Birthmarks: Causes, Symptoms, and Effects, read on,
X
Desktop Bottom Promotion