Just In
Don't Miss
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Movies
ರಿಷಿ ಕಪೂರ್ ಅರ್ಧಕ್ಕೆ ಬಿಟ್ಟು ಹೋದ ಪಾತ್ರ ಮುಂದುವರಿಸಲಿದ್ದಾರೆ ಪರೇಶ್ ರಾವಲ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕ್ಕಳಿಗೆ ಟಾಯ್ಲೆಟ್ ಬಳಕೆಯನ್ನು ಅಭ್ಯಾಸ ಮಾಡಿಸುವುದು ಹೇಗೆ?
ನಿಮ್ಮ ಮಗು ಶೌಚಾಲಯವನ್ನು ಬಳಸಲು ಪ್ರಾರಂಭಿಸಲು ಸಿದ್ಧವಾಗುವ ನಿರ್ದಿಷ್ಟ ವಯಸ್ಸು ಎಂದೇನೂ ಇಲ್ಲ. ಆದರೂ ಹೆಚ್ಚಿನ ಮಕ್ಕಳು 18 ತಿಂಗಳಿನಿಂದ ಮೂರು ವರ್ಷ ವಯಸ್ಸಿನ ನಡುವೆ ಇದ್ದಾಗ ಸಾಮಾನ್ಯವಾಗಿ ಸಿದ್ಧರಾಗುತ್ತಾರೆ.
ಆದರೆ ಅದಕ್ಕಿಂತ ಮೊದಲೇ ಅಂದರೆ ಆರು ತಿಂಗಳು ಕಳೆಯುತ್ತಿದ್ದಂತೆ ಅವರಿಗೆ ಪೋಟಿ ಟ್ರೈನಿಂಗ್ ಅಂತ ಮಾಡಿದರೆ ಒಳ್ಳೆಯದು. ಮಕ್ಕಳಿಗೆ ಪೋಟಿ ಮಾಡಿಸಲು ಬಳಸುವ ಚಿಕ್ಕ ಟಬ್ ರೀತಿಯ ವಸ್ತು ಸಿಗುತ್ತದೆ, ಅದನ್ನು ತಂದು ಅದರಲ್ಲಿ ಕೂರುವುದನ್ನು ಅಭ್ಯಾಸ ಮಾಡಿಸಬೇಕು, ನಂತರ 2 ವರ್ಷ ಕಳೆಯುತ್ತಿದ್ದಂತೆ ಟಾಯ್ಲೆಟ್‌ನಲ್ಲಿ ಕೂರುವುದನ್ನು ಅಭ್ಯಾಸ ಮಾಡಿಸಬೇಕು. ಹೀಗೆ ಅಭ್ಯಾಸ ಮಾಡಿಸುವಾಗ ಪೋಷಕರಲ್ಲಿ ತಾಳ್ಮೆ ಅತ್ಯಗ್ಯತ. ಇಲ್ಲದಿದ್ದರೆ ಅವರು ಅದರಲ್ಲಿ ಕೂರಲು ಮುಂದಾಗುವುದಿಲ್ಲ. ಅವರನ್ನು ಅದರಲ್ಲಿ ಕೂರುವಂತೆ ಹುರಿದುಂಬಿಸಬೇಕು.

ಶೌಚಕ್ರಿಯೆಯ ತರಬೇತಿ ಯಶಸ್ವಿಯಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಶೌಚಕ್ರಿಯೆಯ ತರಬೇತಿಯ ವಿವಿಧ ಹಂತಗಳನ್ನು ಕರಗತ ಮಾಡಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು. ಕೆಲವು ಮಕ್ಕಳು ಕೆಲವೇ ದಿನಗಳಲ್ಲಿ ಮುಗಿಸಿದರೂ, ವಿಶೇಷವಾಗಿ ರಾತ್ರಿ ಹೊತ್ತಿನ ತರಬೇತಿಯನ್ನು ಪೂರ್ಣಗೊಳಿಸಲು ಇತರರಿಗೆ ವಾರಗಳು ಅಥವಾ ತಿಂಗಳುಗಳೇ ಬೇಕಾಗುತ್ತವೆ.
ನಿಮ್ಮ ಮಗುವಿಗೆ ಶೌಚಕ್ರಿಯೆ ಇಷ್ಟೇ ಹೊತ್ತಿನಲ್ಲಿ ಮುಗಿಸಬೇಕು ಎಂಬ ಸಮಯವನ್ನು ನಿಗದಿಪಡಿಸಿ ಮತ್ತು ಮಗು ಹಂತ ಹಂತವಾಗಿ ಈ ಹೊಸ, ಸಂಕೀರ್ಣ ಪ್ರಕ್ರಿಯೆಯನ್ನು ಬಳಸಿಕೊಳ್ಳಲಿ. ನಂತರ ಮಗು ತನ್ನ ಸಮಯದಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಮುಂದುವರೆಯಬಹುದು. ಈ ಸಮಯದಲ್ಲಿ ಕಥೆಗಳು ಮತ್ತು ಪ್ರೋತ್ಸಾಹಗಳನ್ನು ನೀಡುವ ಮೂಲಕ ಮಗುವಿನ ಆಸಕ್ತಿಯನ್ನು ಉತ್ತೇಜಿಸಿ.
ಸ್ವಲ್ಪ ಸಮಯದವರೆಗೆ ನಿಜವಾಗಿಯೂ ಮೂತ್ರ ವಿಸರ್ಜನೆ ಅಥವಾ ಶೌಚಕ್ರಿಯೆ ನಡೆಸಲು ಮಗುವಿಗೆ ನಿಮ್ಮಿಂದ ಕೆಲವು ನಿರ್ದೇಶನಗಳು ಬೇಕಾಗುತ್ತದೆ ಎಂಬುದನ್ನು ನೆನಪಿಡಿ. ಅಂಬೆಗಾಲಿಡುವ ಮಗುವಿಗೆ, ಗಮನವೆಲ್ಲಾ ಆಟದ ಕಡೆ ಇದ್ದಾಗ ಶೌಚಕ್ರಿಯೆಗೆ ಹೋಗುವುದು ಕಡೆಯ ಆದ್ಯತೆಯಾಗಿರುತ್ತದೆ. ಆದ್ದರಿಂದ "ಮೊದಲು ಮೂತ್ರವಿಸರ್ಜೆನೆಗೆ ಪ್ರಯತ್ನಿಸು ಮತ್ತು ಮೂತ್ರ ವಿಸರ್ಜಿಸಿದ ನಂತರ ಹೋಗಿ ಆಟ ಮುಂದುವರೆಸಬಹುದು" ಎಂದು ಹೇಳಿ.

ಶೌಚಕ್ರಿಯೆಯ ತರಬೇತಿಗೆ ನಾವು ಹೇಗೆ ಸಿದ್ಧರಾಗಬಹುದು?
ನಿಮ್ಮ ಮಗುವಿಗೆ ಶೌಚಾಲಯದ ಕುರ್ಚಿಯನ್ನು ಖರೀದಿಸುವ ಮೊದಲು, ನೀವು ತರಬೇತಿಯನ್ನು ಹೇಗೆ ನಿರ್ವಹಿಸಲು ಯೋಜಿಸುತ್ತೀರಿ ಎಂಬುದರ ಕುರಿತು ಯೋಚಿಸಿ. ನಿರ್ಧರಿಸಿ:
ನೀವು ಯಾವಾಗ ಪ್ರಾರಂಭಿಸಲು ಬಯಸುತ್ತೀರಿ
ನೀವು ಹೇಗೆ ಪ್ರಾರಂಭಿಸಲು ಬಯಸುತ್ತೀರಿ
ನೀವು ಬಳಸುವ (ಯಾವುದಾದರೂ ಇದ್ದರೆ) ಪ್ರತಿಫಲಗಳು
ನೀವು ಅಪಘಾತಗಳನ್ನು ಹೇಗೆ ನಿಭಾಯಿಸುತ್ತೀರಿ. (ಮಗು ಜಾರಿ ಬೀಳುವ ಸಂಭವ ಇತ್ಯಾದಿ)

ಕುಟುಂಬದವರ ಸಹಕಾರ ಪಡೆಯಿರಿ
ನಿಮ್ಮ ಪತಿ, ಕುಟುಂಬದ ಹಿರಿಯರು, ನಿಮ್ಮ ವೈದ್ಯರು ಮತ್ತು ಇತರ ಪೋಷಕರೊಂದಿಗೆ ನಿಮ್ಮ ಯೋಜನೆಯ ಬಗ್ಗೆ ನೀವು ಮಾತನಾಡಬಹುದು, ಅವರು ಅನುಭವದಿಂದ ಪಡೆದ ಯಾವುದೇ ಸಲಹೆಗಳು ನಿಮಗೆ ಅಪಾರ ನೆರವು ನೀಡಬಲ್ಲವು.
ಒಮ್ಮೆ ನೀವು ಯೋಜನೆಯನ್ನು ರೂಪಿಸಿದ ನಂತರ, ನಿಮ್ಮ ಮಗುವನ್ನು ನೋಡಿಕೊಳ್ಳುವ ಎಲ್ಲರೂ ಈ ಯೋಜನೆಯನ್ನು ಒಪ್ಪಿಕೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಬೇರೆ ಬೇರೆ ವ್ಯಕ್ತಿಗಳಿಂದ ಬೇರೆ ಬೇರೆ ವಿಧಾನ ಪಡೆದ ಮಗು ಗೊಂದಲಗೊಳಿಸುವುದನ್ನು ತಪ್ಪಿಸುತ್ತದೆ.

ಶೌಚಕ್ರಿಯೆಯ ತರಬೇತಿಯ ಸಮಯದಲ್ಲಿ ನಾವು ಅವನನ್ನು ಯಾವಾಗ ಹೊಗಳಬೇಕು?
ಮಗು ಶೌಚಕ್ರಿಯೆಯ ತರಬೇತಿಯಲ್ಲಿದ್ದಾಗ, ನಿಮ್ಮ ಮಗು ತನ್ನ ಹೊಸ ಕೌಶಲ್ಯಗಳನ್ನು ಸಫಲಗೊಳಿಸಿದ ಸಂತೋಷದಲ್ಲಿ ತನ್ನ ಪಾಲಕರಿಮ್ದ ಸಕಾರಾತ್ಮಕ ಮೆಚ್ಚುಗೆಯನ್ನು ಬಯಸುತ್ತದೆ. ಮಗುವನ್ನು ನಿರಾಶೆಗೊಳಿಸದಿರಿ.
ಮಗು ಈ ಹೊಸ ಹೆಜ್ಜೆಯತ್ತ ಸಾಗಿದಾಗ ಅಥವಾ ಶೌಚಕ್ರಿಯೆಯ ಸಾಧನವನ್ನು ಬಳಸಲು ಪ್ರಯತ್ನಿಸಿದಾಗ, ಮಗು ಉತ್ತಮವಾಗಿ ಕಾರ್ಯನಿರ್ವಹಿಸಿದುದಕ್ಕಾಗಿ ಮತ್ತು ನೀವು ಈ ಬಗ್ಗೆ ಹೆಮ್ಮೆಪಡುತ್ತೀರಿ ಎಂದು ಹೇಳಿ.
ಅಂದ ಹಾಗೆ, ತೀರಾ ಹೆಚ್ಚಿನ ಹೊಗಳಿಕೆಯೂ ಬೇಡ, ಏಕೆಂದರೆ ಮುಂದಿನ ಬಾರಿ ತನ್ನಿಂದ ಏನಾದರೂ ಚಿಕ್ಕ ತಪ್ಪಾದರೂ ಮಗು ಹೆದರಿಕೊಳ್ಳಬಹುದು ಹಾಗೂ ಅಪಫಾತ ಸಂಭವಿಸಬಹುದು.
ಶೌಚಕ್ರಿಯೆಯ ತರಬೇತಿ ಅಪಘಾತಗಳನ್ನು ನಾವು ಹೇಗೆ ಸಕಾರಾತ್ಮಕವಾಗಿ ಪರಿವರ್ತಿಸಬಹುದು?
ವಾಸ್ತವಿಕವಾಗಿ ಪ್ರತಿ ಮಗುವಿಗೂ ಹಗಲಿನಲ್ಲಿ ಮತ್ತು ರಾತ್ರಿಯಲ್ಲಿ ಸಂಪೂರ್ಣವಾಗಿ ತರಬೇತಿ ಪಡೆಯುವ ಮೊದಲು ಅಪಘಾತಗಳು ಸಂಭವಿಸಬಹುದು. ನಿಮ್ಮ ಮಗುವಿನ ಬಗ್ಗೆ ಕೋಪಗೊಳ್ಳದಿರಲು ಅಥವಾ ಶಿಕ್ಷಿಸದಿರಲು ಪ್ರಯತ್ನಿಸಿ. ಪ್ರಕ್ರಿಯೆಯನ್ನು ಕಲಿತುಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಮಗುವಿಗೆ ಯಾವುದೇ ಅಪಘಾತ ಸಂಭವಿಸಿದಾಗ, ಅದನ್ನು ಶಾಂತವಾಗಿ ಸ್ವಚ್ಛಗೊಳಿಸಿ, ಮತ್ತು ಮುಂದಿನ ಬಾರಿ ಮಗು ಪ್ರಯತ್ನಿಸಿದಾಗ ಅವನ ಶೌಚ ಸಾಧನವನ್ನು ಸರಿಯಾಗಿ ಬಳಸುವಂತೆ ಸೂಚಿಸಿ ಹಾಗೂ ಸರಿಯಾದ ಮಾರ್ಗದರ್ಶನ ನೀಡಿ. ಹೀಗೆ ಮಾಡಿದಾಗ ಒಂದೆರಡು ಪ್ರಯತ್ನಗಳಲ್ಲಿಯೇ ಮಗು ಶೌಚಕ್ರಿಯೆ ತಾನೇ ನಿರ್ವಹಿಸಿಕೊಳ್ಳುವುದನ್ನು ಕಲಿತುಕೊಳ್ಳುತ್ತದೆ.