Just In
- 3 hrs ago
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯವರಿಗೆ ಒತ್ತಡವೇ ಸಮಸ್ಯೆ, ಎಚ್ಚರ
- 9 hrs ago
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- 11 hrs ago
ವಟ ಸಾವಿತ್ರಿ ವ್ರತ ಯಾವಾಗ? ಪತಿಯ ಪತಿಯ ಆಯುರ್-ಐಶ್ವರ್ಯ ವೃದ್ಧಿಗೆ ಈ ದಿನ ಏನು ಮಾಡಬೇಕು?
- 13 hrs ago
ಹಳದಿ ಉಗುರನ್ನು ನಿವಾರಿಸಲು ಈ 4 ಮನೆಮದ್ದನ್ನು ಬಳಸಿ ನೋಡಿ
Don't Miss
- Sports
ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ; ನಂಬಿಕಸ್ಥ ಆಟಗಾರ ಔಟ್!
- News
ಟೆಕ್ಸಾಸ್ ದಾಳಿ: ಅಮೆರಿಕ ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಾಟ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Automobiles
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಗುವಿನ ಜೀರ್ಣಕ್ರಿಯೆ, ಶೀತ, ಉತ್ತಮ ನಿದ್ರೆಗೆ ಜಾಯಿಕಾಯಿಯೇ ದಿವ್ಯೌಷಧ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಬಂದ ಆಹಾರ ಪದ್ಧತಿಯೇ ನಮ್ಮ ಇಂದಿನ ಆರೋಗ್ಯದ ಗುಟ್ಟು ಎಂದರೆ ತಪ್ಪಾಗಲಾರದು. ಇನ್ನು ಮಕ್ಕಳ ವಿಚಾರದಲ್ಲಿ, ನಮ್ಮ ಹಿರಿಯರು ವಿಶೇಷವಾದ ನೈಸರ್ಗಿಕ ಆಹಾರ ಶೈಲಿಯನ್ನು ಪಾಲಿಸುತ್ತಿದ್ದರು. ಪ್ರಸ್ತುತ ಕಾಲದಲ್ಲಿ ಯಾವ ವೈದ್ಯರು ಇದನ್ನು ಒಪ್ಪುವುದಿಲ್ಲವಾದರೂ ಇದರಲ್ಲಿರುವ ಸಾಕಷ್ಟು ಔಷಧೀಯ ಗುಣಗಳು ಮಕ್ಕಳ ಬೆಳವಣಿಗೆಗೆ ಬಹಳ ಸಹಕಾರಿಯಾಗಿತ್ತು. ಇಂಥಾ ಆಹಾರ ಶೈಲಿಯಲ್ಲಿ ಜಾಯಿಕಾಯಿ ಸಹ ಒಂದು.
ಭಾರತ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಬಹುತೇಕ ಅಡುಗೆಗೆ ಬಳಸುವ ಹಾಗೂ ಆಹಾರದ ರುಚಿ ಹೆಚ್ಚಿಸುವ ಜಾಯಿಕಾಯಿ ಮಕ್ಕಳ ಆರೋಗ್ಯಕ್ಕೆ ಪರಿಣಾಮಕಾರಿ ಔಷಧವಾಗಿದೆ. ಮಗುವಿಗೆ ಮೂರು ಅಥವಾ ಆರು ತಿಂಗಳ ಬಳಿಕ 2 ಚಿಟಿಕೆ ಜಾಯಿಕಾಯಿಯನ್ನು ನೀಡುವ ಪದ್ಧತಿ ಇತ್ತು. ಮಕ್ಕಳಿಗೆ ಜಾಯಿಕಾಯಿ ಹೇಗೆಲ್ಲಾ ಪ್ರಯೋಜನಕಾರಿಯಾಗಲಿದೆ ಮುಂದೆ ನೋಡೋಣ:

ಮಗುವಿಗೆ ಜಾಯಿಕಾಯಿ ಯಾವಾಗ ಕೊಡಬಹುದು?
ತಾಯಿಯು ಮಗುವಿಗೆ ಸಾಲಿಡ್ ಆಹಾರವನ್ನು ನೀಡಲು ಪ್ರಾರಂಭಿಸಿದ ಬಳಿಕ ಜಾಯಿಕಾಯಿಯನ್ನು ಮಗುವಿನ ಆಹಾರದಲ್ಲಿ ಸೇರಿಸಬಹುದು. ಆದರೂ, ನಿಮ್ಮ ಮಗುವಿನ ಆಹಾರದಲ್ಲಿ ಯಾವುದೇ ಮಸಾಲೆಗಳನ್ನು ಸೇರಿಸುವ ಮೊದಲು ಕನಿಷ್ಠ ಆರು ತಿಂಗಳು ಕಾಯುವುದು ಒಳ್ಳೆಯದು. ಮಸಾಲೆಗಳು ಶಿಶುಗಳಿಗೆ ಸುರಕ್ಷಿತವಾಗಿದ್ದರೂ, ಕುಟುಂಬದ ಹಿರಿಯರು ಅನ್ನಪ್ರಶಾನದ ನಂತರ ಅದರ ಬಳಕೆಯನ್ನು ಶಿಫಾರಸು ಮಾಡುತ್ತಾರೆ.
ಮಕ್ಕಳಿಗೆ ಜಾಯಿಕಾಯಿಯಿಂದಾಗುವ ಆರೋಗ್ಯ ಪ್ರಯೋಜನ

1. ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ
ಶಿಶುಗಳಿಗೆ ಸಂಪೂರ್ಣ ಪಕ್ವವಾದ ಜೀರ್ಣಾಂಗ ವ್ಯವಸ್ಥೆ ಇಲ್ಲದಿರುವುದರಿಂದ, ಇದು ಅವರಲ್ಲಿ ಅಜೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಮಗುವಿನ ಆಹಾರದಲ್ಲಿ ನೀವು ವಿವಿಧ ರೀತಿಯ ಘನ/ಸಾಲಿಡ್ ಆಹಾರವನ್ನು ಪರಿಚಯಿಸಿದಂತೆ, ಅವರ ಅಪಕ್ವವಾದ ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸದೇ ಇರಬಹುದು, ಇದರಿಂದ ಹೊಟ್ಟೆ ನೋವು, ಗ್ಯಾಸ್ ಅಥವಾ ಅತಿಸಾರವೂ ಎದುರಾಗಬಹುದು. ಶಿಶುಗಳಲ್ಲಿನ ಅತಿಸಾರ ಹಾಗೂ ಇತರ ಸಮಸ್ಯೆಗಳು ಎದುರಾಗದಂತೆ ತಡೆಯುವಲ್ಲಿ ಜಾಯಿಕಾಯಿ ಪರಿಣಾಮಕಾರಿಯಾಗಿದೆ.

2. ಶೀತ ಮತ್ತು ಕೆಮ್ಮಿಗೆ ದಿವ್ಯೌಷಧ
ಈ ಅದ್ಭುತ ಮಸಾಲೆಯು ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ ಮತ್ತು ಹೀಗಾಗಿ ಶಿಶುಗಳಲ್ಲಿ ಶೀತ ಮತ್ತು ಕೆಮ್ಮಿನ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಮಗುವಿನ ಶೀತಕ್ಕೆ ಜಾಯಿಕಾಯಿ ನೀಡುವುದು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ.

3. ಇದು ಹೊಟ್ಟೆಯ ಸಮಸ್ಯೆಗಳನ್ನು ದೂರವಿರಿಸುತ್ತದೆ
ನಿಮ್ಮ ಮಗುವಿಗೆ ಜಾಯಿಕಾಯಿ ನೀಡುವುದರಿಂದ ಮಗುವಿನ ಹೊಟ್ಟೆಯ ಸಮಸ್ಯೆಗಳು ಪರಿಹಾರವಾಗಬಹುದು. ಮಕ್ಕಳು ಗ್ಯಾಸ್ ಅಥವಾ ಉದರಶೂಲೆಗೆ ತುತ್ತಾಗುವುದು ಸಾಮಾನ್ಯ ಸಮಸ್ಯೆಯಾಗಿರುತ್ತದೆ, ಆದರೆ ಅವರ ಆಹಾರದಲ್ಲಿ ಜಾಯಿಕಾಯಿ ಅನ್ನು ಸೇರಿಸುವುದರಿಂದ ಅಂತಹ ಸಮಸ್ಯೆಗಳನ್ನು ದೂರವಿಡಬಹುದು. ಇದು ಹೊಟ್ಟೆಯ ಸೆಳೆತ ಅಥವಾ ಶಿಶುಗಳಲ್ಲಿನ ನೋವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

4. ಮಗು ಚೆನ್ನಾಗಿ ನಿದ್ರೆ ಮಾಡಲು ಸಹಕಾರಿ
ಹಿರಿಯರು ಜಾಯಿಕಾಯಿಯನ್ನು ಮಕ್ಕಳಿಗೆ ನನೀಡುತ್ತಿದ್ದ ಕಾರಣ ಇದರಿಂದ ಮಕ್ಕಳು ಚೆನ್ನಾಗಿ ನಿದ್ರಿಸುತ್ತಾರೆ ಎಂಬುದು. ಮಕ್ಕಳಿಗೆ ಜಾಯಿಕಾಯಿಯನ್ನು ತಿನ್ನಿಸುವುದರಿಂದ ಇದರ ಪರಿಮಳಯುಕ್ತ ಮಸಾಲೆಯು ಅವರಿಗೆ ಉತ್ತಮ ನಿದ್ರೆಯನ್ನು ಉಂಟುಮಾಡುತ್ತದೆ. ಈ ಮಸಾಲೆಯನ್ನು ನಿಮ್ಮ ಮಗುವಿನ ಹಾಲಿನಲ್ಲಿ ಬೆರೆಸಿದಾಗ, ನಿಮ್ಮ ಮಗು ನಿರಾಳವಾಗಿ ಮತ್ತು ಶಾಂತವಾಗಿ ಮಲಗಬಹುದು ಮತ್ತು ಹೆಚ್ಚು ಕಿರಿಕಿರಿ ಮಾಡದೇ ಮಲಗುತ್ತದೆ. ಅಲ್ಲದೆ, ಮಗುವಿನ ನಿದ್ರೆಗೆ ಅಡ್ಡಿಯಾಗುವ ಸಮಸ್ಯೆಗಳಿಂದ ಈ ಮಸಾಲೆಯು ಮುಕ್ತಿ ನೀಡುತ್ತದೆ.