Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಮಗುವಿನ ಚರ್ಮದ ಬಣ್ಣವನ್ನು ನಿರ್ಧರಿಸುವುದು ಹೇಗೆ?
ಗರ್ಭಾವಸ್ಥೆಯಲ್ಲಿ, ಎಲ್ಲಾ ನಿರೀಕ್ಷಿತ ತಾಯಂದಿರು ತಮ್ಮ ಮಗು ಹೇಗೆ ಕಾಣಬಹುದು ಎಂದು ಯೋಚಿಸುವುದು ಸಾಮಾನ್ಯವಾಗಿದೆ. ಕೂದಲಿನಿಂದ ಹಿಡಿದು ಕಣ್ಣಿನ ಬಣ್ಣ, ಚರ್ಮದ ಬಣ್ಣ ಮತ್ತು ಮಾನಸಿಕ ಲಕ್ಷಣಗಳು, ಗರ್ಭಾಶಯದಲ್ಲಿರುವ ಸಂದರ್ಭದಲ್ಲಿ ನಿಮ್ಮ ಮಗುವಿನ ನೋಟ ಮತ್ತು ವ್ಯಕ್ತಿತ್ವವು ನಿಗೂಢವಾಗಿ ಉಳಿಯುತ್ತದೆ. ಒಬ್ಬ ನಿರೀಕ್ಷಿತ ತಾಯಿಯಾಗಿ, ಒಂದು ಡಜನ್ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಸುತ್ತಬಹುದು ಮತ್ತು ನಿಮ್ಮನ್ನು ಯೋಚಿಸುವಂತೆ ಮಾಡಬಹುದು, ನಿಮ್ಮ ಮಗುವಿನ ಚರ್ಮದ ಬಣ್ಣವನ್ನು ಯಾವುದು ಅಥವಾ ಹೇಗೆ ನಿರ್ಣಯಿಸಬಹುದು ಎಂಬ ಪ್ರಶ್ನೆಯ ಬಗ್ಗೆ ನೀವು ಖಂಡಿತವಾಗಿ ಯೋಚಿಸಿದ್ದೀರಿ? ಅಲ್ವಾ?
ನವಜಾತ ಮಗುವಿನ ಚರ್ಮದ ಬಣ್ಣವನ್ನು ನಿರ್ಧರಿಸಲು ಜೀನ್(ವಂಶವಾಹಿ)ಗಳು ಮಹತ್ವದ ಪಾತ್ರವನ್ನು ಹೊಂದಿವೆ ಎಂದು ನಮಗೆ ತಿಳಿದಿದೆ, ಆದರೆ ನಿಮ್ಮ ಸಂಗಾತಿಯಿಂದ ಅಥವಾ ನಿಮ್ಮಿಂದ ನಿಮ್ಮ ಮಗು ನಿಖರವಾಗಿ ಏನನ್ನು ಪಡೆಯುತ್ತದೆ ಎಂಬುದನ್ನು ಜೀನ್ ಗಳು ಹೇಗೆ ನಿರ್ಧರಿಸುತ್ತವೆ? ಇದು ನಿಜವಾಗಿಯೂ ನಿಮ್ಮನ್ನು ಗೊಂದಲಕ್ಕೀಡುಮಾಡುತ್ತವೆ, ಅಲ್ಲವೇ? ಈ ಸಾಮಾನ್ಯ ವಿಷಯದ ಕುರಿತು ನಾವು ಇಲ್ಲಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದ್ದೇವೆ ಮತ್ತು ಮಗುವಿನ ಚರ್ಮದ ಬಣ್ಣಕ್ಕೆ ಸಂಬಂಧಿಸಿರುವ ಕೆಲವು ಸಾಮಾನ್ಯ ಮಾಹಿತಿಗಳನ್ನು ಈ ಲೇಖನವು ತೆರವುಗೊಳಿಸುತ್ತದೆ.
ನಿಮ್ಮ ಮಗುವಿನ ನೋಟವನ್ನು ನಿರ್ಧರಿಸುವುದು ಯಾವುದು?
ಡಿ.ಎನ್.ಎ ಎಂಬ ಪದವನ್ನು ಕೇಳಿದ್ದೀರಿ ಅಲ್ವಾ? ಅವು ಮಾನವನ ಕೋಶಗಳ ಒಂದು ಭಾಗವಾಗಿದ್ದು, ಅವುಗಳು ವಿವಿಧ ಗುಣಲಕ್ಷಣಗಳನ್ನು ಆನುವಂಶಿಕವಾಗಿ ಪಡೆಯುವುದಕ್ಕೆ ಕಾರಣವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ಮಗುವನ್ನು ಗರ್ಭದಲ್ಲಿ ಧರಿಸಿದಾಗ ಮಿಶ್ರವಾಗಬಹುದಾದ ಎಲ್ಲಾ ವಂಶವಾಹಿಗಳ ಸಂಯೋಜನೆಯಾಗಿದೆ. ಮಾನವನ ಡಿ.ಎನ್.ಎ ಸಾಮಾನ್ಯವಾಗಿ 'ಕ್ರೋಮೋಸೋಮ್(ವರ್ಣತಂತು)' ಎಂದು ಕರೆಯಲಾಗುವ ವಿವಿಧ ಆಕಾರಗಳಿಂದ ವಿಂಗಡಿಸಲ್ಪಟ್ಟಿದೆ, ಪ್ರತಿ ಮನುಷ್ಯನಲ್ಲಿ ಒಟ್ಟು 46 ಕ್ರೋಮೋಸೋಮ್ಗಳಿವೆ.

ಆದ್ದರಿಂದ,ನಿಮ್ಮ ಮಗು ನಿಮ್ಮಿಂದ ಮತ್ತು ನಿಮ್ಮ ಸಂಗಾತಿಯಿಂದ ತಲಾ 23 ಕ್ರೋಮೋಸೋಮ್ಗಳನ್ನು ಪಡೆಯುತ್ತದೆ. ಇವುಗಳಲ್ಲಿ ಒಂದು ಜೋಡಿ ಕ್ರೊಮೋಸೋಮ್ ನಿಮ್ಮ ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ. ತಜ್ಞರ ಪ್ರಕಾರ, ಮನುಷ್ಯನ ಒಟ್ಟು 46 ವರ್ಣತಂತುಗಳಲ್ಲಿ 60,000 ರಿಂದ 100,000 ವಂಶವಾಹಿಗಳಿವೆ(ಡಿ.ಎನ್.ಎ ಗೆ ಮಾಡಲ್ಪಟ್ಟಿದೆ). ಸಂಭಾವ್ಯ ಜೀನ್ ಸಂಯೋಜನೆಯೊಂದಿಗೆ, ಒಂದು ಜೋಡಿಯು 64 ಟ್ರಿಲಿಯನ್ ವಿಭಿನ್ನ ಮಕ್ಕಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ನಿಮ್ಮ ಮಗುವು ಹೇಗೆ ಕಾಣಬಹುದೆಂದು ಊಹಿಸಲು ಯಾರಿಗೂ ಅಸಾಧ್ಯವಾಗಿದೆ.
ಹೆಚ್ಚಿನ ಮಾನವ ಲಕ್ಷಣಗಳು ಪಾಲಿಜೆನಿಕ್ (ಅನೇಕ ವಂಶವಾಹಿಗಳ ಸಂಯೋಜನೆಯ ಫಲಿತಾಂಶ) ಆಗಿರಬೇಕು. ತೂಕ, ಎತ್ತರ ಮತ್ತು ವ್ಯಕ್ತಿತ್ವ ಮುಂತಾದ ಕೆಲವು ಲಕ್ಷಣಗಳ ವಿಷಯದಲ್ಲಿ ಜೀನ್ಗಳು ಪ್ರಬಲವಾಗಿರುತ್ತವೆ ಮತ್ತು ಕೆಲವು ಮೌನವಾಗಿ ಉಳಿದಿರುತ್ತವೆ.
ಆದ್ದರಿಂದ ನಿಸ್ಸಂಶಯವಾಗಿ, ಕೆಲವು ವಂಶವಾಹಿಗಳು ತಮ್ಮನ್ನು ಪ್ರಧಾನವಾಗಿ ವ್ಯಕ್ತಪಡಿಸುವಂತೆ ಕಂಡುಬರುತ್ತವೆ, ಆದರೆ ಇದರ ಹಿಂದಿನ ಸಿದ್ಧಾಂತವು ಇನ್ನೂ ತಿಳಿದಿಲ್ಲ. ಒಳಗೊಂಡಿರುವ ಅನೇಕ ವಂಶವಾಹಿಗಳೊಂದಿಗೆ, ಕೆಲವು ಲಕ್ಷಣಗಳು ತಲೆಮಾರುಗಳನ್ನು ಬಿಟ್ಟು ಹೋಗಬಹುದು, ಮತ್ತು ಆಶ್ಚರ್ಯಕರವಾಗಿರಬಹುದು.
ಗರ್ಭಾವಸ್ಥೆಯಲ್ಲಿ ಇರುವ ಮಗುವಿನ ಬಣ್ಣವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಮಾನವನ ಚರ್ಮದ ಬಣ್ಣವನ್ನು ಆನುವಂಶಿಕ ನಿರ್ಣಯವನ್ನು ನಿಖರವಾಗಿ ಊಹಿಸಲು ತಜ್ಞರಿಗೆ ಕಷ್ಟವಾಗಿದ್ದರೂ ಸಹ, ನಿಮ್ಮ ಮೆಲನಿನ್ನ್, ನಿಮ್ಮ ಚರ್ಮದ ಬಣ್ಣ ನಿಮ್ಮಿಂದ ನಿಮ್ಮ ಮಗುವಿಗೆ ಹಾದುಹೋಗುವುದು ಇದಕ್ಕೆ ಕಾರಣವಾಗಿದೆ. ಮಗುವಿನ ಪೋಷಕರಿಂದ ಕೂದಲಿನ ಬಣ್ಣ ಮತ್ತು ಇತರ ವೈಶಿಷ್ಟ್ಯಗಳನ್ನು ಹೇಗೆ ಪಡೆದುಕೊಳ್ಳುತ್ತದೆ ಎಂಬುದರಂತೆಯೇ, ನಿಮ್ಮ ಮಗುವಿಗೆ ವರ್ಗಾಯಿಸಲ್ಪಟ್ಟ ಮೆಲನಿನ್ ನ ಪ್ರಮಾಣ ಮತ್ತು ವಿಧವು ಜೀನ್ಗಳಿಂದ ನಿರ್ಧರಿಸಲ್ಪಡುತ್ತದೆ, ಪ್ರತಿಯೊಬ್ಬ ಪೋಷಕರಿಂದ ಒಂದು ಜೀನ್ ನ ನಕಲು ಪ್ರತಿಯನ್ನು ಹೊಂದಿರುತ್ತದೆ.
ಉದಾಹರಣೆಗೆ, ಮಿಶ್ರಿತ ಜನಾಂಗ ಅಥವಾ ಬುಡಕಟ್ಟಿನ ದಂಪತಿಗಳ ಸಂದರ್ಭದಲ್ಲಿ ಮಗುವು ಅರ್ಧದಷ್ಟು, ಪೋಷಕರ ಚರ್ಮದ ಬಣ್ಣ ಮತ್ತು ವಂಶವಾಹಿಗಳನ್ನು ಯಾದೃಚ್ಛಿಕವಾಗಿ ಪಡೆದುಕೊಳ್ಳುತ್ತದೆ, ಆದ್ದರಿಂದ ಮಗುವು ಹೆಚ್ಚಾಗಿ ಇಬ್ಬರೂ ಪೋಷಕರ ಮಿಶ್ರಣವನ್ನು ಹೊಂದಿರುತ್ತದೆ. ಜೀನ್ ಗಳನ್ನು ಸಾಮಾನ್ಯವಾಗಿ ಯಾದೃಚ್ಛಿಕವಾಗಿ ಅಂಗೀಕರಿಸಲಾಗುತ್ತದೆ, ಆದ್ದರಿಂದ ನಿಖರವಾಗಿ ನಿಮ್ಮ ಮಗುವಿನ ಚರ್ಮದ ಬಣ್ಣ ಏನೆಂದು ಊಹಿಸಲು ಅಸಾಧ್ಯ.
ಕೆಲವು ಮಿಥ್ಯ ಮತ್ತು ಸತ್ಯಗಳು
ಹುಟ್ಟಲಿರುವ, ಮಗುವಿನ ಪೋಷಕರಿಂದ ಜೀನ್ ಗಳ ಅನುವಂಶಿಕತೆಯ ಮೇಲೆ ಚರ್ಮದ ಬಣ್ಣವು ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂದು ಈಗ ನೀವು ತಿಳಿದಿರಬಹುದು. ಆದಾಗ್ಯೂ, ಇದನ್ನು ಅರ್ಥಮಾಡಿಕೊಳ್ಳುವ ಹೊರತಾಗಿಯೂ, ಹುಟ್ಟಲಿರುವ ಮಗುವಿನ ನೋಟ ಮತ್ತು ಚರ್ಮದ ಬಣ್ಣದ ಬಗ್ಗೆ ತಾಯಂದಿರ ನಿರೀಕ್ಷೆಯ ಬಗ್ಗೆ ಹಲವಾರು ಸಲಹೆಗಳಿವೆ.
ಮಿಥ್ಯ: ನಿಯಮಿತವಾಗಿ ಕೇಸರಿ ಹಾಲು ಸೇವಿಸುವುದು ಮಗುವಿನ ಉತ್ತಮ ಬಣ್ಣಕ್ಕೆ ಕಾರಣವಾಗುತ್ತದೆ.
ಸತ್ಯ: ನಿಮ್ಮ ಮಗು ಆರೋಗ್ಯಕರವಾಗಿರುವಂತೆ ಡಯಟ್(ಆಹಾರ)ಮಾತ್ರ ಸಹಾಯ ಮಾಡುತ್ತದೆ. ನಿಮ್ಮ ಮಗುವಿನ ಚರ್ಮದ ಬಣ್ಣವನ್ನು ನೀವು ತಿನ್ನುವ ಆಹಾರದಿಂದ ನಿರ್ಧರಿಸಲಾಗುವುದಿಲ್ಲ. ಯಾಕೆಂದರೆ ಅದು ಸಂಪೂರ್ಣವಾಗಿ ಆನುವಂಶಿಕವಾಗಿದೆ. ಕೇಸರಿಯು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ, ಮತ್ತು ಮಗುವಿನ ಎಲುಬುಗಳ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ನಿರೀಕ್ಷಿತ ತಾಯಂದಿರು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವಂತೆ ಪ್ರೇರೇಪಿಸುವ ಸಾಧ್ಯತೆ ಇದೆ, ಚರ್ಮದ ಬಣ್ಣದಂತಹ ಅಂಶಗಳು ಇವುಗಳೊಂದಿಗೆ ಸ್ಸೇರಿಸಲಾಗಿದೆ ಅಷ್ಟೇ.
ಮಿಥ್ಯ: ಬಾದಾಮಿ ಮತ್ತು ಕಿತ್ತಳೆ ಹೆಚ್ಚು ತಿನ್ನುವುದರಿಂದ ನಿಮ್ಮ ಮಗುವಿನ ಬಣ್ಣವನ್ನು ನಿರ್ಧರಿಸಬಹುದು.
ಸತ್ಯ: ಬಾದಾಮಿ ವಿಟಮಿನ್ ಇ ಇಂದ ಸಮೃದ್ಧವಾಗಿದೆ, ಮತ್ತು ಪ್ರೋಟೀನ್ಗಳು, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಸಿಯಮ್ ಮತ್ತು ರಿಬೋಫ್ಲಾವಿನ್ ಸೇರಿದಂತೆ ಹಲವು ಅತ್ಯಗತ್ಯ ಪೋಷಕಾಂಶಗಳನ್ನು ಹೊಂದಿದೆ, ಇದು ಶಿಶುಗಳ ಮಿದುಳಿನ ಕಾರ್ಯನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಕಿತ್ತಳೆ, ವಿಟಮಿನ್ C ಮತ್ತು ನಾರಿನಾಂಶದ ಮೂಲವಾಗಿದೆ. ಅವುಗಳು B ಜೀವಸತ್ವಗಳು, ಫೋಲೇಟ್, ತಾಮ್ರ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ನ ಕುರುಹುಗಳನ್ನು ಹೊಂದಿರುತ್ತವೆ, ಇದು ಸ್ಪಷ್ಟವಾದ ಚರ್ಮದ ವಿನ್ಯಾಸಕ್ಕೆ ಮತ್ತು ಪ್ರತಿರಕ್ಷೆಯ ಬೆಳವಣಿಗೆಗೆ ಅವಶ್ಯಕವಾಗಿದೆ. ಆದಾಗ್ಯೂ, ಚರ್ಮದ ಬಣ್ಣವನ್ನು ನಿರ್ಧರಿಸುವಲ್ಲಿ ಇವುಗಳಿಗೆ ಯಾವುದೇ ಪಾತ್ರವಿಲ್ಲ.
ಮಿಥ್ಯ: ನಿಮ್ಮ ಆಹಾರದಲ್ಲಿ ತುಪ್ಪವನ್ನು ಒಳಗೂಡಿಸುವುದು, ಮಗುವಿನ ಮೈಬಣ್ಣವನ್ನು ಹೊಳಪು ಮಾಡುವುದಲ್ಲದೆ ಸಾಮಾನ್ಯ ಮತ್ತು ಕಡಿಮೆ ನೋವಿನ ಹೆರಿಗೆಗೆ ಸಹಾಯಮಾಡುತ್ತದೆ.
ಸತ್ಯ: ಶುದ್ಧ ಹಸುವಿನ ತುಪ್ಪವು ಕೀಲುಗಳಿಗೆ ಒಳ್ಳೆಯ ಲೂಬ್ರಿಕಂಟ್(ಕೀಲೆಣ್ಣೆ)ಆಗಿದೆ ಮತ್ತು ಮಗು ಗರ್ಭದಲ್ಲಿದ್ದಾಗ ಮಿದುಳಿನ ಬೆಳವಣಿಗೆ ಮತ್ತು ಮಗುವಿನ ಚರ್ಮದ ಬೆಳವಣಿಗೆಗೆ ಅಗತ್ಯವಾದ ಸಾಕಷ್ಟು ಕೊಬ್ಬನ್ನು ಒದಗಿಸುತ್ತದೆ. ಅಂತೆಯೇ, ಪೌಷ್ಟಿಕ ಆಹಾರದ ಸೇವನೆಯನ್ನು ಉತ್ತೇಜಿಸುವ ಮೂಲಕ ತಾಯಿಯಾಗಲಿರುವ ಮಹಿಳೆಯರು ಸಾಕಷ್ಟು ಮಿಥ್ಯಗಳನ್ನು ಪಾಲಿಸುವಂತೆ ಮಾಡುತ್ತಾರೆ ಮತ್ತು ಅದನ್ನು ಮಗುವಿನ ಚರ್ಮದ ಬಣ್ಣದೊಂದಿಗೆ ಸಂಯೋಜಿಸುವುದು, ಕೇವಲ ಒಂದು ಟ್ರಿಕ್ ಆಗಿದೆ. ಮಗುವನ್ನು ನಿರೀಕ್ಷಿಸುತ್ತಿರುವ ತಾಯಂದಿರು ಅವುಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು. ಸಮತೋಲಿತ ಆಹಾರವನ್ನು ಸೇವಿಸುವುದು ತಾಯಿ ಮತ್ತು ಮಗು ಇಬ್ಬರಿಗೂ ಅತ್ಯಗತ್ಯ. ಇದು ಅಂತಹ ಕಥೆಗಳ ಹಿಂದಿನ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ, ನಿಮ್ಮ ಮಗುವಿನ ನೋಟದಲ್ಲಿ ಜೀನ್ ಗಳ ವಿವಿಧ ಸಂಯೋಜನೆಗಳು ಮತ್ತು ಪ್ರಭಾವದಿಂದ, ನಿಮ್ಮ ಮಗುವಿನ ಕಣ್ಣಿನ ಬಣ್ಣ, ಚರ್ಮದ ಬಣ್ಣ ಮತ್ತು ಕೂದಲು ಬಣ್ಣವನ್ನು ಊಹಿಸಲು ಅಸಾಧ್ಯ. ಆದರೆ, ಅದು ಮಗುವನ್ನು ನಿರೀಕ್ಷಿಸುವ ಮೋಜಿನ ಭಾಗವಾಗಿದೆ, ಅಲ್ಲವೇ?



Click it and Unblock the Notifications

