Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಷ್ಟಕ್ಕೂ ಸಣ್ಣ ಮಗುವಿಗೆ ಮಸಾಜ್‌ನ ಅಗತ್ಯವಿದೆಯಾ?
ಸಣ್ಣ ಮಕ್ಕಳ ದೇಹ ತುಂಬಾ ಸೂಕ್ಷ್ಮವಾಗಿರುವ ಕಾರಣದಿಂದ ತುಂಬಾ ಎಚ್ಚರಿಕೆಯಿಂದ ಅವುಗಳ ಆರೈಕೆ ಮಾಡಬೇಕಾಗುತ್ತದೆ. ಮಕ್ಕಳು ಒಂದು ವರ್ಷದ ತನಕ ಬೆಳವಣಿಗೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುವುದು. ಸಣ್ಣ ಮಕ್ಕಳಿಗೆ ಎಣ್ಣೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ ಸ್ನಾನ ಮಾಡಿಸಲಾಗುತ್ತದೆ. ಹೆಚ್ಚಿನ ಕಡೆಗಳಲ್ಲಿ ಮಕ್ಕಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಸುವುದು ಸಾಮಾನ್ಯ ವಿಷಯವಾಗಿದೆ.
ಮಸಾಜ್ ಮಾಡುವ ಬಗ್ಗೆ ಹಲವಾರು ಮಂದಿಯಲ್ಲಿ ಗೊಂದಲವಿದೆ ಮತ್ತು ಇದರ ಬಗ್ಗೆ ವಾದವು ನಡೆಯುತ್ತಿರುತ್ತದೆ. ಕೆಲವರು ಮಸಾಜ್ಮಾ ಡಬಹುದು ಎಂದು ಹೇಳಿದರೆ ಇನ್ನು ಕೆಲವರು ಮಸಾಜ್ ಮಾಡಬಾರದು ಎನ್ನುತ್ತಾರೆ. ಆದರೆ ಮಕ್ಕಳಿಗೆ ಮಸಾಜ್ ಮಾಡುವ ಬಗ್ಗೆ ಇರುವ ಸತ್ಯ ಹಾಗೂ ಕಟ್ಟುಕಥೆಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ತಿಳಿದುಕೊಂಡು ನಿಮ್ಮಲ್ಲಿರುವ ಗೊಂದಲ ನಿವಾರಿಸಿ....

ಮಸಾಜ್ ಅಗತ್ಯವೇ?
ಇದರ ಅಗತ್ಯವೇನಿಲ್ಲ. ಆದರೆ ಇದು ಹೆತ್ತವರ ಆಯ್ಕೆಗೆ ಬಿಟ್ಟಿರುವ ವಿಚಾರ. ಮಸಾಜ್ ನಿಂದ ಮಗುವಿನೊಂದಿಗಿನ ಭಾಂದವ್ಯವು ಹೆಚ್ಚಾಗುವುದು.

ಇದರ ಲಾಭಗಳು ಏನು?
ಮಕ್ಕಳಿಗೆ ಮಸಾಜ್ ಮಾಡುವುದರಿಂದ ಎಲುಬುಗಳ ಬೆಳವಣಿಗೆ, ರಕ್ತ ಸಂಚಾರ ಉತ್ತಮವಾಗುವುದು ಮತ್ತು ಶಿಶುವಿನ ದೇಹಕ್ಕೆ ಸರಿಯಾದ ಆಕಾರ ನೀಡಲು ಸಾಧ್ಯವಾಗುವುದು ಎಂದು ಹೇಳಲಾಗುತ್ತದೆ. ಆದರೆ ಇದೆಲ್ಲವು ಇದುವರೆಗೆ ಸಾಬೀತಾಗಿಲ್ಲ. ಮಸಾಜ್ ಮಾಡಿದಾಗ ಇದು ಹೆತ್ತವರು ಮತ್ತು ಮಗುವಿನ ನಡುವಿನ ಭಾಂದವ್ಯ ಹೆಚ್ಚಿಸುವುದು.

ಮಸಾಜ್ ಬೇರೆ ಏನು ಮಾಡುತ್ತದೆ?
ಮಗು ಆರಾಮವಾಗಿರಲು ಇದು ನೆರವಾಗುವುದು. ಮಗುವಿಗೆ ಒಳ್ಳೆಯ ನಿದ್ರೆ ಬರುವುದು. ದೊಡ್ಡವರಂತೆ ಮಕ್ಕಳು ಕೂಡ ಪ್ರೀತಿಯ ಸ್ಪರ್ಶ ಇಷ್ಟಪಡುತ್ತಾರೆ ಮತ್ತು ಒತ್ತಡ ನಿವಾರಿಸುವುದು. ಇತರ ಲಾಭಗಳು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ಮಸಾಜ್ ನಿಂದ ಯಾವುದೇ ಹಾನಿ ಇದೆಯಾ?
ಮಸಾಜ್ ನ್ನು ಸೂಕ್ಷ್ಮವಾಗಿ ಮಾಡದೇ ಹೋದರೆ ಅದರಿಂದ ಶಿಶುವಿನ ದೇಹದ ಮೇಲೆ ಹಾನಿಯಾಗಬಹುದು. ಹೊರಗಿನವರಲ್ಲಿ ಮಸಾಜ್ ಮಾಡಲು ಹೇಳಿದರೆ ಆಗ ಆಕೆ ತುಂಬಾ ಸೂಕ್ಷ್ಮ ಮತ್ತು ಪ್ರೀತಿಯಿಂದ ಇದನ್ನು ಮಾಡಲಿಕ್ಕಿಲ್ಲ. ಇದರಿಂದ ಮಗುವಿಗೆ ನೋವಾಗಬಹುದು.

ಬೇರೆ ಯಾವುದೇ ಸಮಸ್ಯೆಯಿದೆಯಾ?
ಮಗುವಿಗೆ ಮಸಾಜ್ ಮಾಡುವ ವ್ಯಕ್ತಿಯ ಕೈಗಳು ಸ್ವಚ್ಛವಾಗಿರದೆ ಇದ್ದರೆ ಅದರಿಂದ ಸೋಂಕು ಉಂಟಾಗುವ ಸಾಧ್ಯತೆಗಳು ಇವೆ. ಶಿಶುವಿನ ಮೃಧು ದೇಹ ಹಾಗೂ ಮೂಳೆಗಳು ಹೆಚ್ಚಿನ ಒತ್ತಡ ತೆಗೆದುಕೊಳ್ಳದು. ಇದರಿಂದ ಬೇರೆಯವರು ಮಗುವಿಗೆ ಮಸಾಜ್ ಮಾಡುವುದು ಅಷ್ಟು ಒಳ್ಳೆಯ ವಿಚಾರವಲ್ಲ.

ಏನು ಮಾಡಬೇಕು?
ಹೆತ್ತವರೇ ಶಿಶುವಿಗೆ ಮಸಾಜ್ ಮಾಡುವ ಕೆಲಸ ಮಾಡಬೇಕು. ಆದರೆ ಅವರು ತುಂಬಾ ಕೋಪದಲ್ಲಿ ಅಥವಾ ಉದ್ರಿಕ್ತರಾಗಿರುವಾಗ ಈ ಕೆಲಸ ಮಾಡಬಾರದು. ಯಾವುದೇ ಒತ್ತಡವಿಲ್ಲದೆ ಸಂಪೂರ್ಣವಾಗಿ ಆರಾಮವಾಗಿರುವಾಗ ಮಸಾಜ್ ಮಾಡಿ.

ಎಣ್ಣೆ ಬಳಸುತ್ತೀರಾ?
ಮಕ್ಕಳಿಗಾಗಿ ತಯಾರಿಸಿರುವಂತಹ ಎಣ್ಣೆಯನ್ನು ಬಳಸಿಕೊಂಡು ನಿಮ್ಮ ಬೆರಳುಗಳನ್ನು ಸರಿಯಾಗಿ ಬಳಸಿ ಮಗುವಿಗೆ ಮಸಾಜ್ ಮಾಡಿ. ಹೀಗೆ ಮಾಡುವಾಗ ಮಗು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಿದೆ ಎಂದು ನೋಡಿ. ಮಗು ಇದರಿಂದ ಖುಷಿ ಪಡುತ್ತಾ ಇದ್ದರೆ ಮುಂದುವರಿಯಿರಿ. ಮಗು ಅಳುತ್ತಿದ್ದರೆ ಮಸಾಜ್ ನಿಲ್ಲಿಸಿ.



Click it and Unblock the Notifications
