Just In
Don't Miss
- News
Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್ಡಿಎ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Movies
ಬಾಂಬೆ ಹೈಕೋರ್ಟ್ ನಲ್ಲಿ ಹಿನ್ನಡೆ: ಸಂಕಷ್ಟದಲ್ಲಿ ಸೋನು ಸೂದ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಟ್ಟೆ ಒಗೆಯುವುದನ್ನು ಈ ಚಿಂಪಾಂಜಿ ನೋಡಿ ಕಲಿಯಬೇಕು ನೋಡಿ
ಬಟ್ಟೆ ಒಗೆಯುವುದೇ ತುಂಬಾ ದೊಡ್ಡ ಸಮಸ್ಯೆಯಪ್ಪಾ? ಮೆಷಿನ್ ಇದ್ದರೂ ಎಲ್ಲಾ ಬಟ್ಟೆ ಅದರಲ್ಲಿ ಹಾಕಲು ಸಾಧ್ಯವಾಗುವುದಿಲ್ಲ, ಯಾರಾದರೂ ಸಹಾಯ ಮಾಡಿದರೆ ಒಳ್ಳೆಯದಿತ್ತು? ಎಂದು ಅಂದುಕೊಂಡಿದ್ದರೆ ಈ ಚಿಂಪಾಂಜಿ ನೋಡಿ ಛೇ.. ಈ ಚಿಂಪಾಜಿ ನನ್ನ ಮನೆಯಲ್ಲಾದರೂ ಇರಬಾರದಿತ್ತಾ ಎಂದು ಖಂಡಿತ ನೀವು ಅಂದುಕೊಳ್ಳುವಿರಿ.
ಇನ್ನು ನಂಗೆ ಬಟ್ಟೆ ಒಗೆಯುವುದಕ್ಕೇ ಬರಲ್ಲ ಎನ್ನುವವರು ಈ ಚಿಂಪಾಂಜಿ ನೋಡಿ ಕಲಿಯುವುದು ಬಹಳಷ್ಟಿದೆ. ಕೊಳದ ಪಕ್ಕದಲ್ಲಿ ಕೂತು ಸೋಪನ್ನು ಚೆನ್ನಾಗಿ ಬಟ್ಟೆಗೆ ಹಾಕಿ ತಿಕ್ಕಿ ಅದು ಒಗೆಯುವ ರೀತಿಯಿದೆಲ್ಲಾ ಯಾವ ಅಗಸನಿಗೂ ಕಮ್ಮಿಯಿಲ್ಲ ಬಿಡಿ.
ಯಾವ ಪ್ರಾಣಿಗಳ ಮೆದುಳು ದೊಡ್ಡದಿರುತ್ತದೋ ಅದರ ಬುದ್ಧಿಶಕ್ತಿಯೂ ಅಧಿಕವಿರುತ್ತದೆ, ಮನುಷ್ಯನ ಮೆದುಳು ಇತರ ಪ್ರಾಣಿಗಳಿಗಿಂತ ದೊಡ್ಡದಾಗಿರುವುದರಿಂದ ತುಂಬಾ ಬುದ್ಧಿವಂತ, ಇನ್ನು ಚಿಂಪಾಂಜಿಗೆ ಮಂಗಗಳಿಗಿಂತ ಹೆಚ್ಚಿನ ಬುದ್ಧಿಶಕ್ತಿಯಿದೆ. ಚೈನಾದ ಲೆಹೆ ಲೆಡು ಥೀಮ್ ಪಾರ್ಕ್‌ನಲ್ಲಿ 18 ವರ್ಷದ ಯುಹಿ ಎಂಬ ಚಿಂಪಾಂಜಿ ಬಟ್ಟೆ ಒಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೊಳದ ಬಳಿಗೆ ಬಂದ ಚಿಂಪಾಂಜಿ ಸೋಪ್ ನೋಡುತ್ತದೆ. ಅಲ್ಲೇ ಇರುವ ಟೀ ಶರ್ಟ್ ಕೂಡ ಕಾಣುತ್ತದೆ. ಅದನ್ನು ತೆಗೆದು ನೀರಿನಲ್ಲಿ ಅದ್ದಿ ನಂತರ ಸೋಪ್ ಹಾಕಿ ತಿಕ್ಕುತ್ತದೆ. ಆ ಪಾರ್ಕ್‌ನ ಕಾವಲುಗಾರ ಬಟ್ಟೆ ಒಗೆಯುವುದನ್ನು ನೋಡಿ ಚಿಂಪಾಂಜಿ ಕಲಿತುಕೊಂಡಿದೆ ಎನ್ನಲಾಗಿದೆ. ಚಿಂಪಾಜಿಗಳು ಮನುಷ್ಯ ಮಾಡಿದಂತೆ ಮಾಡುವುದನ್ನು ಈ ಹಿಂದೆಯೂ ನೋಡಲಾಗಿದೆ. ಚಿಂಪಾಂಜಿ ನಾಯಿಗೆ ಮನುಷ್ಯ ಮಾಡಿಸಿದಂತೆ ಸ್ನಾನ ಮಾಡಿಸುವುದು, ಮತ್ತೊಂದು ಚಿಂಪಾಜಿ ನೆಲ ಗುಡಿಸುವುದು ಇವೆಲ್ಲಾ ಸಿನಿಮಾಗಳಲ್ಲಿ ಕೂಡ ಚಿತ್ರೀಕರಣವಾಗಿದೆ.
ಯುಹಿ ಮನುಷ್ಯರನ್ನು ಅನುಕರಿಸುವಲ್ಲಿ ನಿಸ್ಸೀಮನಾಗಿದ್ದುಕೈ ಬೆರಳುಗಳಲ್ಲಿ ನಾವು ತೋರಿಸಿದಂತೆ ಹೃದಯವನ್ನು ತೋರಿಸುವುದು, ಒಂಟಿ ಕಾಲಿನಲ್ಲಿ ನಿಲ್ಲುವುದನ್ನು ಮಾಡುತ್ತದೆ ಎನ್ನುತ್ತಾರೆ ಅದನ್ನು ಆರೈಕೆ ಮಾಡುತ್ತಿರುವ ಸಿಬ್ಬಂದಿ.