Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆ ಪ್ಲೈಟ್‌ನಲ್ಲಿ ತಾಯಿಯೂ ಪೈಲೆಟ್-ಮಗಳು ಪೈಲೆಟ್- ವೀಡಿಯೋ ಆಯ್ತು ವೈರಲ್
ಅವರಿಗೆ ಬಹುದೊಡ್ಡ ಕನಸು ನನಸಾದ ಕ್ಷಣವು, ಆ ಸುಂದರ ವೀಡಿಯೋವನ್ನು ನೆಟ್ಟಿಗರು ಕೂಡ ಮೆಚ್ಚಿಕೊಂಡಿದ್ದಾರೆ. ಪ್ರತಿಯೊಬ್ಬ ತಂದೆ-ತಾಯಿಗೆ ನನ್ನ ಮಗ-ಮಗಳು ಏನು ಆಗಬೇಕು ಎಂಬ ಆಸೆ ಇರುತ್ತದೆ, ಅದರಂತೆ ಅವರು ಆದಾಗ ಅವರು ತುಂಬಾ ಹೆಮ್ಮೆ ಪಡುತ್ತಾರೆ, ಈ ತಾಯಿ ಕೂಡ ಅಷ್ಟೇ ತುಂಬಾ ಹೆಮ್ಮೆ ಪಡುತ್ತಿರುವ ದೃಶ್ಯ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಸೌತ್‌ವೆಸ್ಟ್ ಏರ್‌ಲೈನ್ಸ್ ಇದೊಂದು ಐತಿಹಾಸಿಕ ಕ್ಷಣ ಎಂದು ಟ್ವೀಟ್ ಮಾಡಿದೆ. ತಾಯಿ ಪೈಲೆಟ್ ಆಗಿರುವ ವಿಮಾನದಲ್ಲಿ ಮಗಳು ಕೂಡ ಪೈಲೆಟ್, ಈ ಒಬ್ಬರು ಪೈಲೆಟ್ ಸೇರಿ ಜುಲೈ 23ಕ್ಕೆ ಫ್ಲೈಟ್ 3658ನ್ನು ಡೆನ್ವರ್ ನಿಂದ ಸೇಂಟ್ ಲೂಯಿಸ್‌ಗೆ ಹಾರಿಸಿದ್ದಾರೆ.
ಕ್ಯಾಪ್ಟನ್ ಹೋಲಿ ಮಗಳು ಕೀಲಿಯನ್ನು ಪ್ರಯಾಣಿಕರಿಗೆ ಪರಿಚಯಿಸುತ್ತಿರುವ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು Good Morning Americaದಲ್ಲಿ ಅದನ್ನು ಮಂಗಳವಾರ ಪ್ರಸಾರ ಕೂಡ ಮಾಡಲಾಗಿತ್ತು.
ತಾಯಿ ಮಗಳು ಫೋಟೋಗ್ರಾಫ್ ಹಿಡಿದು ನಿಂತಿರುವ ಚಿತ್ರದೊಂದಿಗೆ ವೀಡಿಯೋ ಪ್ರಾರಂಭವಾಗುತ್ತೆ ಆ ಫೋಟೋಗ್ರಾಫ್‌ನಲ್ಲಿ "POV:You become the first mother-daughter duo at Southwest"ಎಂದು ಬರೆಯಲಾಗಿತ್ತು.
ಈ ದಿನ ನನಗೆ ವಿಶೇಷವಾದ ದಿನವಾಗಿದೆ, ನಾನು ನಿಮಗೆ ನಿಮ್ಮ ಫಸ್ಟ್ ಆಫೀಸರ್ ಅನ್ನು ಪರಿಚಯಿಸುತ್ತಿದ್ದೇನೆ, ಸೌತ್‌ವೆಸ್ಟ್ ಟೀಂನ ಪೈಲೆಟ್‌ಗಳಲ್ಲಿ ಇವರು ಹೊಸ ಸದಸ್ಯರು, ಇವರು ನನ್ನ ಮಗಳು ಕೀಲಿ' ಎಂದು ಪರಿಚಯಿಸಿದ್ದಾರೆ.
ನನ್ನ ಕನಸು ನನಸಾಗಿದೆ, ಮೊದಲಿಗೆ ಈ ವೃತ್ತಿಯನ್ನು ನಾನು ಇಷ್ಟಪಟ್ಟು ಬಂದೆ, ಈಗ ನನ್ನ ಮಗಳು ಕೂಡ ಇಷ್ಟಪಟ್ಟು ಬಂದಿದ್ದಾಳೆ, ಖುಷಿಯಾಗಿದೆ ಎಂದು ಹೇಳಿದ್ದಾರೆ.
ಕೀಲಿ 14 ವರ್ಷ ಇರುವಾಗಲೇ ಪೈಲೆಟ್ ಆಗ ಬಯಸಿದಳು, 2017ರಲ್ಲಿ ಇಂಟರ್ನ್‌ಶಿಪ್ ಮಾಡಿದರು, ಅಲ್ಲಿಂದ ತಿರುಗಿ ನೋಡೊಯೇ ಇಲ್ಲ....
ಪೈಲೆಟ್ ಅಮ್ಮ-ಮಗಳನ್ನು ನೋಡಿ ನೆಟ್ಟಿಗರು ಕೂಡ ಖುಷಿ ಪಟ್ಟಿದ್ದಾರೆ.



Click it and Unblock the Notifications

