For Quick Alerts
ALLOW NOTIFICATIONS  
For Daily Alerts

ಸಮಾಜದ ಕಟ್ಟುಪಾಡು ಮುರಿದು ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವೈದ್ಯೆಯರು

|

ಮದುವೆ ಎಂಬುವುದು ಹೆಣ್ಣು-ಗಂಡಿನ ನಡುವೆ ಏರ್ಪಡುವ ಪವಿತ್ರವಾದ ಬಂಧ ಎಂಬುವುದನ್ನು ಈ ಸಮಾಜ ಬಲವಾಗಿ ನಂಬುತ್ತದೆ. ಒಂದು ಜೋಡಿಯ ನಿಶ್ಚಿತಾರ್ಥ ಎಂದರೆ ಅದು ಹುಡುಗ-ಹುಡುಗಿಯ ನಡುವೆ ನಡೆದಿರುತ್ತದೆ ಎಂದೇ ಅಂದ್ಕೊಳ್ಳುತ್ತೇವೆ. ಆದರೆ ನಾಗ್‌ಪುರ್‌ದಲ್ಲಿ ಇತ್ತೀಚೆಗೆ ನಡೆದ ಒಂದು ನಿಶ್ಚಿತಾರ್ಥ ದೇಶದ ಗಮನ ಸೆಳೆದಿದೆ, ಅದಕ್ಕೆ ಕಾರಣ ಆ ಜೋಡಿ ತುಂಬಾ ವಿಶೇಷ ಜೋಡಿ ಅನಿಸಿರುವುದು.

Lesbian Doctor couple breaks stereotypes

ಹೌದು ಮದುವೆ ಎಂಬ ಬಂಧಕ್ಕೆ ಒಳಗಾಗಿ ನಿನಗೆ ನಾನು-ನನಗೆ ನೀನು ಎಂದು ಜೊತೆಯಾಗಿ ಬಾಳುತ್ತೇವೆ ಎಂದು ಹೊರಟಿರುವವರು ಇಬ್ಬರು ಹುಡುಗಿಯರು. ಇಬ್ಬರು ಹುಡುಗಿಯರು ಅಥವಾ ಇಬ್ಬರು ಹುಡುಗರು ಬಾಳುವುದು ಹೊಸತಲ್ಲ, ಆದರೆ ಈ ಸಮಾಜ ಅದನ್ನುಒಪ್ಪಿಕೊಳ್ಳಲು ಸ್ವಲ್ಪ ಹಿಂದೆ-ಮುಂದೆ ನೋಡುತ್ತದೆ. ಹೀಗಿರುವಾಗ ಎಷ್ಟೋ ಜೋಡಿಗಳು ಗುಪ್ತವಾಗಿ ಸಂಸಾರ ನಡೆಸಿದರೆ ಕೆಲವೇ ಕೆಲವು ಜೋಡಿಗಳಷ್ಟೇ ನಾವಿಬ್ಬರು ಸಲಿಂಗಿಗಳು ಎಂಬುವುದನ್ನು ಹೇಳಿಕೊಳ್ಳುವ ಧೈರ್ಯ ಮಾಡುತ್ತಾರೆ.

ಈಗ ಅಂಥದ್ದೇ ಒಂದು ಜೋಡಿಯ ನಿಶ್ಚಿತಾರ್ಥ ದೇಶದ ಗಮನ ಸೆಳೆದಿದೆ. ಇಬ್ಬರು ಹುಡುಗಿಯರು ಕಳೆದ ವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗೋವಾದಲ್ಲಿ ಮದುವೆಯಾಗಲಿದ್ದಾರೆ.

ಸಲಿಂಗಿ ಜೋಡಿಯ ನಿಶ್ಚಿತಾರ್ಥ

ಸಲಿಂಗಿ ಜೋಡಿಯ ನಿಶ್ಚಿತಾರ್ಥ

ಇಬ್ಬರು ವೃತ್ತಿಯಲ್ಲಿ ವೈದ್ಯೆಯರು, ಜೊತೆಯಾಗಿ ಸಂಸಾರ ನಡೆಸಲು ಮುಂದಾಗಿದ್ದಾರೆ. ಪರೊಮಿತಾ ಮುಖರ್ಜಿ ಹಾಗೂ ಸುರ್ಭಿ ಮಿತ್ರ ನಾಗ್‌ಪುರ್‌ದಲ್ಲಿ ಡಿಸೆಂಬರ್ 29ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇವರ ಮದುವೆಗೆ ಮನೆಯವರ ಒಪ್ಪಿಗೆಯೂ ಇದೆ.

ಜೊತೆಯಾಗಿ ಬಾಳಲು ಮುಂದಾದ ಜೋಡಿಗೆ ಹಿರಿಯರ ಸಮ್ಮತಿ

ಜೊತೆಯಾಗಿ ಬಾಳಲು ಮುಂದಾದ ಜೋಡಿಗೆ ಹಿರಿಯರ ಸಮ್ಮತಿ

ಮದುವೆ ಬಗ್ಗೆ ಪರೊಮಿತಾ ಎಎನ್‌ಐ ಜೊತೆ ಮಾತನಾಡುತ್ತಾ 'ನನ್ನ ಲೈಂಗಿಕ ಆಸಕ್ತಿ ಕುರಿತು ತಂದೆಗೆ 2013ರಿಂದಲೇ ತಿಳಿದಿತ್ತು. ಆದರೆ ತಾಯಿಗೆ ಇತ್ತೀಚೆಗಷ್ಟೇ ತಿಳಿಸಿದೆ, ವಿಷಯ ತಿಳಿದು ಅವರು ಶಾಕ್‌ ಆದರು, ನಂತರ ನನ್ನ ಖುಷಿಯೇ ಮುಖ್ಯ ಎಂದು ಮದುವೆಗೆ ಒಪ್ಪಿಕೊಂಡರು' ಎಂದು ಹೇಳಿದ್ದಾರೆ.

ನನ್ನ ಕುಟುಂಬದವರಿಗೆ ನನ್ನ ಲೈಂಗಿಕ ಆಸಕ್ತಿ ಬಗ್ಗೆ ಯಾವುದೇ ವ ವಿರೋಧವಿರಲಿಲ್ಲ, ನಾನು ನನ್ನ ಪೋಷಕರ ಬಳಿ ಹೇಳಿದಾಗ ಸಂತೋಷದಿಂದಲೇ ಒಪ್ಪಿಕೊಂಡರು ಎಂದು ಸುಬ್ರಿ ಹೇಳಿದ್ದಾರೆ.

ಸಲಿಂಗಿಗಳ ನೋವು ಹೇಳಿಕೊಂಡ ವೈದ್ಯೆ

ಸಲಿಂಗಿಗಳ ನೋವು ಹೇಳಿಕೊಂಡ ವೈದ್ಯೆ

ಮಾನಸಿಕ ತಜ್ಞೆಯಾಗಿರುವ ಸುಬ್ರಿ 'ನನ್ನಂಥ(ಸಲಿಂಗಿಗಳು) ಎಷ್ಟೋ ಜನರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧಯವಾಗದೆ ಗೊಂದಲದಲ್ಲಿರುತ್ತಾರೆ' ಎಂದು ಸಲಿಂಗಿಗಳು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.

 ಸಲಿಂಗಿಗಳಾಗುವುದು ಹಾರ್ಮೋನ್‌ಗಳ ವ್ಯತ್ಯಾಸದಿಂದ

ಸಲಿಂಗಿಗಳಾಗುವುದು ಹಾರ್ಮೋನ್‌ಗಳ ವ್ಯತ್ಯಾಸದಿಂದ

ಹಾರ್ಮೋನ್‌ಗಳಲ್ಲಿ ವ್ಯತ್ಯಾಸದಿಂದಾಗ ತಮ್ಮದೇ ಲಿಂಗದವರ ಕಡೆಗೆ ಆಕರ್ಷತರಾಗುತ್ತಾರೆ, ವಿರುದ್ಧ ಲಿಂಗದವರ ಕಡೆಗೆ ಅವರಿಗೆ ಯಾವುದೇ ಆಕರ್ಷಕಣೆ ಇರುವುದಿಲ್ಲ, ಇಂಥ ಎಷ್ಟೋ ಜನರು ನಮ್ಮ ನಡುವೆ ಇದ್ದಾರೆ, ಎಷ್ಟೋ ಜನರು ಸಮಾಜಕ್ಕೆ ಹೆದರಿ ತಮ್ಮ ಭಾವನೆಗಳನ್ನು ಗುಪ್ತವಾಗಿ ಇಡುತ್ತಾರೆ. ಹೊರಗೆ ಹೇಳುವುದಕ್ಕೂ ಆಗದೆ ಅನುಭವಿಸಕ್ಕೂ ಆಗದೆ ಒದ್ದಾಡುತ್ತಿರುತ್ತಾರೆ. ಇಂಥವರಿಗೆ ವಿರುದ್ಧ ಲಿಂಗದವರ ಜೊತೆ ಮದುವೆಯಾದರೆ ಅವರ ಕಡೆಗೆ ಯಾವುದೇ ಆಕರ್ಷಣೆ ಇರುವುದಿಲ್ಲ, ಇದರಿಂದ ಸಂಸಾರದಲ್ಲಿ ಸಮಸ್ಯೆಗಳು ಏಳುವುದು. ಅದೇ ಸಲಿಂಗಿ ವ್ಯಕ್ತಿ ಸಿಕ್ಕರೆ ಅವರ ಜೊತೆ ಚೆನ್ನಾಗಿ ಇರುತ್ತಾರೆ. ಎಷ್ಟೋ ಸೆಲೆಬ್ರಿಟಿಗಳು ತಾವು ಸಲಿಂಗಿ ಎಂಬುವುದನ್ನು ಒಪ್ಪಿಕೊಳ್ಳುತ್ತಾರೆ, ಆದರೆ ಎಷ್ಟೋ ಜನರು ತಮ್ಮ ಲೈಂಗಿಕ ಆಸಕ್ತಿ ಬಗ್ಗೆ ಹೇಳಿದರೆ ಮನೆಯರು, ಸಮಾಜ ಹೇಗೆ ರಿಯಾಕ್ಟ್ ಮಾಡುತ್ತೋ ಎಂದು ಹೆದರಿ ತುಂಬಾ ಹಿಂಸೆ ಅನುಭವಿಸುತ್ತಿರುತ್ತಾರೆ.

English summary

Lesbian Doctor Couple Breaks Stereotypes, Gets Engaged in Nagpur

Lesbian Doctor couple breaks stereotypes, gets engaged in Nagpur...
Story first published: Monday, January 10, 2022, 22:49 [IST]
X
Desktop Bottom Promotion