For Quick Alerts
ALLOW NOTIFICATIONS  
For Daily Alerts

ತಾಯಿಯ ಗುಣಗಳನ್ನು ಆಧರಿಸಿ ರಾಶಿಚಕ್ರದಲ್ಲಿ ಕ್ರಮವಾಗಿ ಉತ್ತಮ ತಾಯಿಯ ಪಟ್ಟಿ ಇಲ್ಲಿದೆ

|

ತಾಯಿಯ ಮಮತೆಗೆ ಬೆಲೆ ಕಟ್ಟಲಾದೀತೇ? ಇಲ್ಲ! ಚಿಕ್ಕ ಮಗುವನ್ನು ಬೆಳೆಸಿ ಉತ್ತಮ ನಾಗರಿಕರನ್ನಾಗಿಸುವಲ್ಲಿ ತಾಯಿಯ ಪಾತ್ರ ಮಹತ್ತರದ್ದಾಗಿದೆ. ಆದರೆ, ಪ್ರತಿ ತಾಯಿಯೂ ತನ್ನ ಮಗುವನ್ನು ಸಲಹುವ ರೀತಿ ಪ್ರತ್ಯೇಕವಾಗಿ ಭಿನ್ನವಾಗಿರಬಹುದು. ಅಚ್ಚರಿ ಎಂದರೆ, ಈ ಭಿನ್ನತೆ ತಾಯಿಯ ರಾಶಿಫಲಕ್ಕನುಸಾರವಾಗಿ ಒಂದು ಕ್ರಮವನ್ನು ಅನುಸರಿಸುವುದನ್ನು ಜ್ಯೋತಿಷ್ಯಾಸ್ತ್ರಜ್ಞರು ಗಮನಿಸಿದ್ದಾರೆ. ಕೆಲವು ರಾಶಿಯಲ್ಲಿ ಜನಿಸಿದ ತಾಯಂದಿರು ತಮ್ಮ ಮಕ್ಕಳಿಗೆ ಅತ್ಯುತ್ತಮ ಎನಿಸುವಂತಹ ಶಿಕ್ಷಣವನ್ನು ನೀಡಿದರೆ ಇನ್ನು ಕೆಲವು ರಾಶಿಯಲ್ಲಿ ಜನಿಸಿದ ತಾಯಂದಿರು ತಮ್ಮ ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಬಹುದು. ಇಂದಿನ ಲೇಖನದಲ್ಲಿ ರಾಶಿಫಲಕ್ಕನುಸಾರವಾಗಿ ಯಾವ ತಾಯಂದಿರು ಮಕ್ಕಳ ಲಾಲನೆಯ ವಿಷಯದಲ್ಲಿ ಅತ್ಯುತ್ತಮ ಸ್ಥಾನ ಪಡೆಯುತ್ತಾರೆ ಎಂಬ ಮಾಹಿತಿಯನ್ನು ಕ್ರಮಾಂಕದ ರೂಪದಲ್ಲಿ ನೀಡಲಾಗಿದೆ.

1. ಮೀನ

1. ಮೀನ

ಮೀನ ರಾಶಿಯಲ್ಲಿ ಜನಿಸಿದ ತಾಯಂದಿರು ತಮ್ಮ ಮಕ್ಕಳಲ್ಲಿ ಕಲೆಯ ಕುರಿತು ಮೆಚ್ಚುಗೆಯನ್ನು ಮೂಡಿಸಿ ಕ್ರಿಯಾತ್ಮಕರಾಗಿರಲು ಪ್ರೋತ್ಸಾಹಿಸುವ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯ ತಾಯಂದಿರು ಸೂಕ್ಷ್ಮ ಸಂವೇದಎನೆಯುಳ್ಳವರೂ, ಕಲ್ಪಿಸಿಕೊಳ್ಳುವವರೂ ಹಾಗೂ ಸ್ವತಂತ್ರ ಮನೋಭಾವದವರಾಗಿದ್ದು ಇತರರಿಗೆ ಸಹಾಯ ಮಾಡುವಲ್ಲಿ ಸಂತೋಷ ಪಡುವವರೂ ಪ್ರಕೃತಿಯನ್ನು ಪ್ರೀತಿಸುವವರೂ ಆಗಿರುತ್ತಾರೆ.

ಈ ತಾಯಂದಿರು ತಮ್ಮ ಮಕ್ಕಳಲ್ಲಿ ಕನಸನ್ನು ಮೂಡಿಸಿ ಈ ಕನಸುಗಳನ್ನು ನನಸಾಗಿಸುವತ್ತ ಪ್ರೇರಣೆ ನೀಡುವವರೂ ಆಗಿರುತ್ತಾರೆ ಹಾಗೂ ಈ ನಿಟ್ಟಿನಲ್ಲಿ ಎಲ್ಲಾ ಪ್ರೋತ್ಸಾಹವನ್ನು ನೀಡುವವರಾಗಿದ್ದು ಮಕ್ಕಳೇ ಸ್ವತಃ ಪ್ರಯತ್ನಗಳನ್ನು ನಡೆಸುವಂತೆ ಮಾಡುವವರಾಗಿರುತ್ತಾರೆ.

2. ಮೇಷ

2. ಮೇಷ

ಮೇಷ ರಾಶಿಯ ತಾಯಂದಿರು ತಮ್ಮ ಮಕ್ಕಳ ವೇಳಾಪಟ್ಟಿಯಯಲ್ಲಿ ಸಂಗೀತ ಪಾಠಗಳು, ಕ್ರೀಡೆ, ಹವ್ಯಾಸಗಳು, ಸಾಮಾಜಿಕ ಚಟುವಟಿಕೆಗಳು ಮತ್ತು ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಮೊದಲಾದವು ಇರುವಂತೆ ನೋಡಿಕೊಳ್ಳುತ್ತಾರೆ. ಇದಕ್ಕೂ ಮೊದಲು ಈ ರಾಶಿಯ ತಾಯಂದಿರು ಸ್ವತಃ ತಾವೇ ಒಂದು ಪೂರ್ಣ ವೇಳಾಪಟ್ಟಿಯನ್ನು ಅನುಸರಿಸುವವರಾಗಿರುತ್ತಾರೆ. ತಮ್ಮ ಮಕ್ಕಳು ಸಾಹಸ ಪ್ರವೃತ್ತಿ ಉಳ್ಳವರಾಗಿರಬೇಕು ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುವುದಕ್ಕೆ ಯಾವುದೇ ಹಿಂಜರಿಕೆ ತೋರಬಾರದು ಎಂದು ಬಯಸುತ್ತಾರೆ. ಮಕ್ಕಳು ನಂಬಿರುವ ವಿಷಯದ ಬಗ್ಗೆ ಹೋರಾಡಲು ಪ್ರೇರೇಪಿಸುತ್ತಾಳೆ. ಆಗಾಗ, ಮಕ್ಕಳ ಬಗ್ಗೆ ಕೊಂಚ ಕಟುವಾಗಿದ್ದರೂ ತಕ್ಷಣವೇ ಇದಕ್ಕೆ ವಿಷಾದಿಸಿ ಮನವೊಲಿಸಿಕೊಳ್ಳುತ್ತಾಳೆ. ಮಕ್ಕಳು ಮುಂದುವರೆಯಲು ಇವರು ಅಗತ್ಯವಿರುವ ಬೆಂಬಲವನ್ನು ನೀಡುತ್ತಾರೆ. ಕೆಲವೊಮ್ಮೆ, ಮಕ್ಕಳಿಗೆ ಏನು ಬೇಕು ಮತ್ತು ಏನು ಬೇಡ ಎಂಬುದನ್ನು ನಿಜವಾಗಿ ಕೇಳಲು ಈ ವ್ಯಕ್ತಿಗಳು ಕೊಂಚ ನಿಧಾನಿಸಬೇಕಾಗುತ್ತದೆ.

3. ಮಿಥುನ

3. ಮಿಥುನ

ಮಿಥುನ ರಾಶಿಯಲ್ಲಿ ಜನಿಸಿರುವ ಅಮ್ಮಂದಿರು ತಮ್ಮ ಮಕ್ಕಳ ಜೊತೆ ಯಾವ ವಿಷಯದ ಬಗ್ಗೆಯೂ ಮಾತನಾಡುವವರಾಗಿರುತ್ತಾರೆ. ವಿಶೇಷವಾಗಿ 'ಆಪ್ತ' ವಿಷಯಗಳನ್ನು ಮಕ್ಕಳಿಗೆ ಚಿಕ್ಕ ವಯಸ್ಸಿಗೇ ಕಲಿಸುತ್ತಾರೆ. ಈ ಅಮ್ಮಂದಿರು ತಮ್ಮ ಮಕ್ಕಳಿಂದ ಯಾವುದೇ ವಿಷಯವನ್ನು ಗುಟ್ಟಾಗಿ ಇರಿಸುವುದಿಲ್ಲ.

ಈ ಅಮ್ಮಂದಿರಿಗೆ ಜನಿಸಿದ ಮಕ್ಕಳು ಸಂವಹನ ಕೌಶಲ್ಯವನ್ನು ಹೊಂದಿರುತ್ತಾರೆ ಮತ್ತು ಅವರ ಸುತ್ತಲಿನ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ.

ಮಿಥುನ ರಾಶಿಯಲ್ಲಿ ಜನಿಸಿರುವ ಅಮ್ಮಂದಿರನ್ನು ವಿಶಿಷ್ಟವಾಗಿಸುವ ಒಂದು ವಿಷಯವೆಂದರೆ, ಮಕ್ಕಳ ಲಿಂಗ ಅಥವಾ ಅವರ ವಯಸ್ಸಿನ ಹೊರತಾಗಿಯೂ ಅವರನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ತಮ್ಮ ಮಕ್ಕಳಿಗೆ ಈ ತಾಯಂದಿರು ಅತ್ಯುತ್ತಮ ಜೊತೆ ನೀಡುತ್ತಾರೆ ಮತ್ತು ಮುಖ್ಯ ಕ್ಷಣಗಳನ್ನು ಪರಿಪೂರ್ಣವಾಗಿ ಅನುಭವಿಸುವಂತೆ ಮಾಡುತ್ತಾರೆ.

4. ಮಕರ

4. ಮಕರ

ಮಕರ ರಾಶಿಯಲ್ಲಿ ಜನಿಸಿರುವ ಅಮ್ಮಂದಿರು ತಮ್ಮ ಮಕ್ಕಳಿಗಾಗಿ ಹೋರಾಡಿ ಸಾವನ್ನಪ್ಪಲೂ ಸಿದ್ಧರಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ತೀವ್ರ ನಿಷ್ಠಾವಂತರು ಮತ್ತು ತಮ್ಮ ಮಕ್ಕಳ ಪರವಾಗಿ ಪೂರ್ಣ ಬೆಂಬಲ ನೀಡುತ್ತಾರೆ.

ಈ ಅಮ್ಮಂದಿರು ಗೊಂದಲಕ್ಕೀಡಾಗುವುದಿಲ್ಲ ಮತ್ತು ಮಕ್ಕಳ ಪಾಲನೆಯ ವಿಷಯ ಇವರಿಗೆ ಅತಿ ಗಂಭೀರವಾದ ವಿಷಯವಾಗಿದೆ. ಅವರು ತಮ್ಮ ಮಕ್ಕಳು ಶಿಸ್ತನ್ನು ಕಲಿಯಲು ಹಾಗೂ ಪೂರ್ಣ ಗಮನವನ್ನು ನೀಡುವವರಾಗಬೇಕು ಹಾಗೂ

ಕೆಲಸದಲ್ಲಿ ನೀತಿಯನ್ನು ಪಾಲಿಸುವವರಾಗಿರಬೇಕು ಎಂದು ಬಯಸುತ್ತಾರೆ.

ಈ ಮಕ್ಕಳಿಗೆ ತಮ್ಮ ಕೆಲಸಕ್ಕಾಗಿ ವೇತನ ನೀಡಲು ಸಾಧ್ಯವಾಗುವುದಾದರೆ, ಈ ವೇತನವನ್ನು ಅವರು ತಮ್ಮ ಒಡಹುಟ್ಟಿದವರನ್ನು ಸಲಹುವ, ಮನೆಗೆಲಸ ಮಾಡುವ ಮೂಲಕ ಅವರು ಸಾರ್ಥಕವಾಗಿ ಗಳಿಸುತ್ತಾರೆ ಎಂದು ಖಚಿತವಾಗಿ ಹೇಳಬಹುದು.

ಮಕರ ರಾಶಿಯಲ್ಲಿ ಜನಿಸಿರುವ ಅಮ್ಮಂದಿರು ಮಕ್ಕಳಿಗಾಗಿ ತಮ್ಮೆಲ್ಲಾ ಸಮಯವನ್ನು ವ್ಯಯಿಸುವ ಕಾರಣ, ಕೆಲವೊಮ್ಮೆ ಇವರು ತಮಗಾಗಿಯೂ ಸಮಯವನ್ನು ಮೀಸಲಿರಿಸಲು ನೆನಪಿಸಬೇಕಾಗುತ್ತದೆ ಹಾಗೂ ಜೀವನದ ಪ್ರತಿ ನಿಮಿಷವನ್ನೂ ಕುಟುಂಬಕ್ಕಾಗಿಯೇ ಮೀಸಲಿರಿಸುವ ಅಗತ್ಯವಿಲ್ಲ ಎಂಬುದನ್ನು ಆಗಾಗ ಹೇಳಬೇಕಾಗುತ್ತದೆ.

5. ವೃಷಭ

5. ವೃಷಭ

ವೃಷಭ ರಾಶಿಯಲ್ಲಿ ಜನಿಸಿದ ತಾಯಂದಿರು ನಂಬಲಾಗದಷ್ಟು ತಾಳ್ಮೆ ಉಳ್ಳವರಾಗಿರುತ್ತಾರೆ - ಎಷ್ಟರಮಟ್ಟಿಗೆಂದರೆ ಇವರು ಭೂಮಿಗೆ ಇಳಿದ ಭಗವಂತನ ರೂಪದಲ್ಲಿರುತ್ತಾರೆ. ವಾಸ್ತವದಲ್ಲಿ, ಈ ತಾಯಂದಿರು ಅತಿ ಸರಳ ವ್ಯಕ್ತಿತ್ವವುಳ್ಳವರೂ ಮತ್ತು ಸ್ಪಷ್ಟ ವ್ಯಕ್ತಿತ್ವದವರೂ ಆಗಿರುತ್ತಾರೆ.

ವೃಷಭ ರಾಶಿಯಲ್ಲಿ ಜನಿಸಿದ ತಾಯಂದಿರು ಕೊಂಚ ಹಠಮಾರಿಗಳು ಅನ್ನಿಸಬಹುದು, ಇದೇ ಕಾರಣಕ್ಕೆ ಹದಿಹರೆಯಕ್ಕೆ ಕಾಲಿರಿಸಿದ ಬಳಿಕ ಮಕ್ಕಳೊಂದಿಗೆ ಹೊಂದಿಕೊಳ್ಳಲು ಇವರಿಗೆ ಕಷ್ಟವಾಗಬಹುದು.

ವೃಷಭ ರಾಶಿಯಲ್ಲಿ ಜನಿಸಿದ ತಾಯಂದಿರ ಮಕ್ಕಳು ಸೌಂದರ್ಯ ಮತ್ತು ಪ್ರಕೃತಿಯ ಅಭಿಮಾನಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಆಹಾರ ಮತ್ತು ಖರ್ಚು ಮಾಡುವ ನಿಟ್ಟಿನಲ್ಲಿ ಅತಿ ಧಾರಾಳಿಗಳಾಗಿರುವ ಕಾರಣ ಈ ತಾಯಂದಿರು ತಮ್ಮ ಮಕ್ಕಳು ಹಣದ ಮೌಲ್ಯವನ್ನು ಅರಿತು ಅಗತ್ಯಕ್ಕಿಂತಲೂ ಹೆಚ್ಚು ಖರ್ಚು ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಬೇಕಾಗುತ್ತದೆ.

6. ತುಲಾ

6. ತುಲಾ

ತುಲಾ ರಾಶಿಯಲ್ಲಿ ಜನಿಸಿದ ಅಮ್ಮಂದಿರನ್ನು ಅತ್ಯುತ್ತಮ ಎಂದು ಕರೆಯಬಹುದು, ಏಕೆಂದರೆ ಈ ವ್ಯಕ್ತಿಗಳು ತುಂಬಾ ಸಮತೋಲಿತ ಮತ್ತು ಶಾಂತಿಯುತ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ತನ್ನ ಮನೆಯಲ್ಲಿ ಸಾಮರಸ್ಯ ಇರುವಂತೆ ಪ್ರೋತ್ಸಾಹಿಸುತ್ತಾರೆ, ಮತ್ತು ಒಡಹುಟ್ಟಿದವರ ನಡುವೆ ಭಿನ್ನಾಭಿಪ್ರಾಯ ಇದ್ದಾಗ, ಅವರು ಪ್ರತಿಯೊಬ್ಬರ ದೃಷ್ಟಿಕೋನವನ್ನು ನೋಡುವ ಸ್ವಭಾವ ಹೊಂದಿರುವವರಾಗಿರುತ್ತಾರೆ. ಪ್ರತಿ ಮಕ್ಕಳ ದೃಷ್ಟಿಕೋನವನ್ನು ಅರಿತು ಭವಿಷ್ಯದಲ್ಲಿ ಉತ್ತಮ ನೆಲೆ ಪಡೆಯುವಂತೆ ಮಾಡಲು ಈ ತಾಯಂದಿರು ಶಕ್ತರಿರುತ್ತಾರೆ.

ತುಲಾ ರಾಶಿಯಲ್ಲಿ ಜನಿಸಿದ ಅಮ್ಮಂದಿರು ಅತಿ ಶಿಸ್ತನ್ನು ಇಷ್ಟಪಡದ ವ್ಯಕ್ತಿಗಳಾಗಿದ್ದು ಮಕ್ಕಳಿಗೆ ಪೋಷಕರಿಗಿಂತಲೂ ಹೆಚ್ಚಾಗಿ ಸ್ನೇಹಿತರಾಗಿರುತ್ತಾರೆ. ಆದರೆ, ಈ ಸ್ನೇಹ ಮಕ್ಕಳು ಸಾಕಷ್ಟು ಬೆಳೆಯುವವರೆಗೆ ಮಾತ್ರವೇ ಇರುತ್ತದೆ

ತುಲಾ ರಾಶಿಯಲ್ಲಿ ಜನಿಸಿದ ಅಮ್ಮಂದಿರು ತಮ್ಮ ಮಕ್ಕಳಿಗೆ ಕಲಿಸುವ ಮುಖ್ಯ ವಿಷಯಗಳೆಂದರೆ, ಹಂಚಿಕೊಂಡು ಬಾಳುವುದು, ಇತರರ ಬಗ್ಗೆ ಹೇಗೆ ಸಹಾನುಭೂತಿ ಇರಿಸಬೇಕು ಹಾಗೂ ಉತ್ತಮ ಸ್ನೇಹಿತರಾಗಿರುವುದು ಹೇಗೆ ಇತ್ಯಾದಿಗಳು.

7. ಕಟಕ

7. ಕಟಕ

ಕಟಕ ಅಥವಾ ಕರ್ಕಾಟಕ ರಾಶಿಯಲ್ಲಿ ಜನಿಸಿದ ಅಮ್ಮಂದಿರು ತಮ್ಮ ಮಕ್ಕಳನ್ನು ರಕ್ಷಿಸುವ ಮತ್ತು ಪೋಷಿಸುವ ಗುಣ ಹೊಂದಿರುತ್ತಾರೆ. ಈ ಮಕ್ಕಳು ತಾವು ಪ್ರೀತಿಸಲ್ಪಡುತ್ತೇವೆ ಹಾಗೂ ಕಾಳಜಿ ವಹಿಸಲ್ಪಡುತ್ತೇವೆ ಎಂಬ ಭಾವನೆ ಹೊಂದಿರುತ್ತಾರೆ.

ಮಗುವಿನ ಭಾವನೆಗಳನ್ನು ಅರಿಯಲು ಹಾಗೂ ಇನ್ನೂ ಉತ್ತಮವಾಗಿ ಭಾವಿಸಲು ಈ ತಾಯಂದಿರು ಸದಾ ಇರುತ್ತಾರೆ. ತನ್ನ ಮನೆ ಪ್ರೀತಿ ತುಂಬಿರುವ ಮತ್ತು ಸೌಕರ್ಯಗಳಿರುವ ಸ್ಥಳವಾಗಬೇಕೆಂದು ಈ ಅಮ್ಮಂದಿರು ಬಯಸುತ್ತಾರೆ, ಮತ್ತು ಅವಳ ಮಕ್ಕಳು ಆಕೆಯೊಂದಿಗೆ ಯಾವುದೇ ವಿಷಯವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಬೇರಾವುದೇ ವಿಷಯ ಸಫಲಗೊಳ್ಳದಿದ್ದಾಗಲೂ ಕರ್ಕಾಟಕ ರಾಶಿಯಲ್ಲಿ ಜನಿಸಿದ ಅಮ್ಮಂದಿರು ತಮ್ಮ ಮಕ್ಕಳು ಇಷ್ಟಪಡುವ ತಿಂಡಿ ಮತ್ತು ಆಹಾರಗಳನ್ನಂತೂ ತಯಾರಿಸುವವರೇ ಆಗಿರುತ್ತಾರೆ. ಈ ಮೂಲಕ ಮಕ್ಕಳು ತಮ್ಮನ್ನು ತಮ್ಮ ಅಮ್ಮ ಎಷ್ಟೊಂದು ಆರೈಕೆ ಮಾಡುತ್ತಾಳೆ ಎಂದು ಅರಿತುಕೊಳ್ಳುತ್ತಾರೆ. ಅಲ್ಲದೇ ಮಗುವಿನ ಕ್ರಿಯಾಶೀಲತೆಯನ್ನು ಅಭಿವೃದ್ದಿಪಡಿಸಲು ನೆರವಾಗುತ್ತಾಳೆ ಹಾಗೂ ಮಗುವಿನ ಕೌಶಲ್ಯವನ್ನು ಜಗತ್ತಿಗೆ ಪ್ರಕಟಿಸಲು ಯಾವುದೇ ಹಿಂಜರಿಕೆ ತೋರುವುದಿಲ್ಲ.

8. ಧನು

8. ಧನು

ಧನು ರಾಶಿಯಲ್ಲಿ ಜನಿಸಿರುವ ಅಮ್ಮಂದಿರು ವಿಶಾಲಹೃದಯಿ ವ್ಯಕ್ತಿಗಳಾಗಿರುತ್ತಾರೆ ಮತ್ತು ತಮ್ಮ ಮಕ್ಕಳೊಂದಿಗೆ ಜಗತ್ತನ್ನು ಹಂಚಿಕೊಳ್ಳಲು ಬಯಸುತ್ತಾರೆ.

ಅವರು ಮಕ್ಕಳು ಚಿಕ್ಕ ವಯಸ್ಸಿನವರಾಗಿದ್ದಾಗಿನಿಂದಲೇ ಜೊತೆ ನೀಡುವುದನ್ನು ಪ್ರಾರಂಭಿಸುತ್ತಾರೆ. ಅವರು ತಮ್ಮ ಮಕ್ಕಳಲ್ಲಿ ಜ್ಞಾನದ ದಾಹ ಮತ್ತು ಸ್ವಾತಂತ್ರ್ಯದ ಬಲವಾದ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವಂತೆ ಮಾಡುತ್ತಾರೆ ಕುತ್ಸಿತ ಹಾಸ್ಯಪ್ರಜ್ಞೆಯನ್ನೂ ಉಂಟುಮಾಡುತ್ತಾರೆ.

ಧನು ರಾಶಿಯಲ್ಲಿ ಜನಿಸಿರುವ ಅಮ್ಮಂದಿರು ವಿನೋದ ಪ್ರವೃತ್ತಿಯುಳ್ಳವರೂ ಮಕ್ಕಳ ಬಾಲ್ಯ ಅಲ್ಪಕಾಲಿಕ ಎಂದು ತಿಳಿದಿರುವವರಾಗಿದ್ದು ತನ್ನ ಮಕ್ಕಳು ಬಾಲ್ಯದ ಪ್ರತಿ ಕ್ಷಣವನ್ನೂ ಪೂರ್ಣವಾಗಿ ಆನಂದಿಸಬೇಕೆಂದು ಬಯಸುತ್ತಾರೆ. ಆದರೂ, ಈ ತಾಯಂದಿರು ಕೆಲವು ಕ್ಷಣಗಳಲ್ಲಿ ವಿಪರೀತ ಸ್ವಭಾವವನ್ನು ತೋರಬಹುದು, ಮರುಕ್ಷಣವೇ ಸಿಟ್ಟನ್ನು ಇಳಿಸಿ ಶಾಂತ ಸ್ವಭಾವಕ್ಕೆ ಇಳಿಯುವವರೂ ಆಗಿರುತ್ತಾರೆ.

ತಮ್ಮ ಮಕ್ಕಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮವನ್ನೇನೂ ಈ ತಾಯಂದಿರು ಹೇರುವುದಿಲ್ಲ, ಬದಲಿಗೆ, ಮಕ್ಕಳು ತಮ್ಮ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು, ತನ್ನ ಪಡಿಯಚ್ಚು ಆಗಬಾರದು ಎಂದು ಬಯಸುತ್ತಾರೆ.

9. ಕನ್ಯಾ

9. ಕನ್ಯಾ

ಕನ್ಯಾರಾಶಿಯಲ್ಲಿ ಜನಿಸಿದ ತಾಯಂದಿರು ತನ್ನ ಮಕ್ಕಳ ಯಾವುದೇ ತಪ್ಪನ್ನು ಸರಿಪಡಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುವವರಾಗಿರುತ್ತಾರೆ. ಇದು ಚಿಕ್ಕ ಆಟಿಕೆಯೂ ಆಗಿರಬಹುದು ಅಥವಾ ಭಗ್ನ ಹೃದಯವೇ ಆಗಿರಬಹುದು. ತನ್ನ ಮಕ್ಕಳಿಂದ ಈ ತಾಯಂದಿರು ಅಪಾರವಾದ ನಿರೀಕ್ಷೆಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಈ ನಿರೀಕ್ಷೆ ತೀಕ್ಷ್ಣವೂ ಆಗಿರಬಹುದು. ಆದರೆ ಮಕ್ಕಳು ಆಕೆಯ ನಿರೀಕ್ಷೆಗೆ ತಕ್ಕಂತೆ ನಿರ್ವಹಿಸದೇ ಇದ್ದರೂ ತನ್ನ ಮಕ್ಕಳನ್ನು ಆಕೆ ಅಪಾರವಾಗಿ ಪ್ರೀತಿಸುವವಳೇ ಆಗಿರುತ್ತಾಳೆ.

ಈ ತಾಯಂದಿರು ಏಕಕಾಲದಲ್ಲಿ ಹಲವು ಕೆಲಸ ನಿರ್ವಹಿಸುವ ನಿಪುಣರಾಗಿರುತ್ತಾರೆ, ಪೋಷರಾಗಿ, ಮನೆಕಲಸ, ಪ್ರೇರಣೆ ನೀಡುವ ವ್ಯಕ್ತಿಯಾಗಿರುವ ಜೊತೆಗೇ ತನ್ನ ಮನೆಯನ್ನು ಒಪ್ಪ ಓರಣವಾಗಿ ಇರಿಸಿಕೊಳ್ಳುತ್ತಾರೆ. ಅಲ್ಲದೇ ತನ್ನ ಮಕ್ಕಳೂ ಶಿಸ್ತು ಬದ್ದ ಜೀವನ ನಡೆಸಲು ಹಾಗೂ ಸಂದರ್ಭಗಳು ಕಷ್ಟಕರವಾದಾಗ ಹಿಮ್ಮೆಟ್ಟದಂತೆ ಪ್ರೋತ್ಸಾಹಿಸುವವರಾಗಿರುತ್ತಾರೆ.

ಕನ್ಯಾರಾಶಿಯಲ್ಲಿ ಜನಿಸಿದ ತಾಯಂದಿರು ಪರಿಪೂರ್ಣತಾವಾದವನ್ನು ಹೊಂದಿರುತ್ತಾರೆ ಮತ್ತು ಇದನ್ನೇ ತನ್ನ ಮಕ್ಕಳಿಂದ ಪಡೆಯಲು ಆಕೆ ಹೇರುವ ಒತ್ತಡ, ಎಚ್ಚರಿಕೆ ವಹಿಸದಿದ್ದರೆ ಕೆಲವೊಮ್ಮೆ ಮಕ್ಕಳಿಗೆ ಭಾರಿಯಾಗಿ ಪರಿಣಮಿಸಬಹುದು.

10. ವೃಶ್ಚಿಕ

10. ವೃಶ್ಚಿಕ

ವೃಶ್ಚಿಕ ರಾಶಿಯಲ್ಲಿ ಜನಿಸಿದ ಅಮ್ಮಂದಿರು ತಮ್ಮ ಮಕ್ಕಳು ಮಾಡುವ ಪ್ರತಿ ನಡೆಯನ್ನೂ ಮುಂಚಿತವಾಗಿ ಊಹಿಸುವಷ್ಟು ಅತಿ ಹೆಚ್ಚಾಗಿ ಪಡೆದಿರುತ್ತಾರೆ. ಈ ತಾಯಂದಿರು ನಿಷ್ಠ, ಪ್ರಾಮಾಣಿಕ ಮತ್ತು ರಕ್ಷಣಾತ್ಮಕ ವ್ಯಕ್ತಿಗಳಾಗಿರುತ್ತಾರೆ ಮತ್ತು ಎಲ್ಲಿಯವರೆಗೆ ಅವರ ಮಕ್ಕಳು ಸತ್ಯವನ್ನು ಹೇಳುತ್ತಿದ್ದಾರೋ ಮತ್ತು ಇತರರಿಗಾಗಿ ಗಮನಹರಿಸುವವವರಾಗಿರುತ್ತಾರೋ ಅಲ್ಲಿಯವರೆಗೆ ಇವರೂ ಒಳ್ಳೆಯವರೇ ಆಗಿರುತ್ತಾರೆ. ಈಕೆಯ ಮಕ್ಕಳಿಗೆ ಯಾವುದೇ ಅವಮಾನ ಅಥವಾ ತೊಂದರೆಯನ್ನು ನೀಡಿದಲ್ಲಿ ಈ ತಾಯಂದಿರು ಉಗ್ರರೂಪ ತಾಳುತ್ತಾರೆ. ತನಗಿಂತಲೂ ಹೆಚ್ಚಾಗಿ ಆಕೆ ತನ್ನ ಮಕ್ಕಳಿಗಾಗಿ ಹೋರಾಡುತ್ತಾಳೆ. ತನಗಿಂತಲೂ ಕುಟುಂಬದ ವಿಷಯಗಳಿಗೆ ಆಕೆ ಹೆಚ್ಚಿನ ಆದ್ಯತೆ ನೀಡುತ್ತಾಳೆ ಹಾಗೂ ಮಕ್ಕಳಿಗೆ ಬೆದರಿಕೆ ಒಡ್ಡಿದ ಸಂದರ್ಭ ಎದುರಾದಾಗ ಸ್ವಯಂಪ್ರೇರಿತಳಾಗಿ ಈ ಬೆದರಿಕೆಗಳನ್ನು ಎದುರಿಸುತ್ತಾರೆ.

11. ಕುಂಭ

11. ಕುಂಭ

ಕುಂಭ ರಾಶಿಯಲ್ಲಿ ಜನಿಸಿದ ಅಮ್ಮಂದಿರು ತಮ್ಮ ಸ್ವಂತಿಕೆಗೆ ಬದ್ದರಾಗದ ವ್ಯಕ್ತಿಗಳಾಗಿರುತ್ತಾರೆ. ಮಕ್ಕಳು ಆದಷ್ಟೂ ಮನೆಯಲ್ಲಿಯೇ ಕಲಿಯುವಂತೆ ಮಾಡುವ ಜೊತೆಗೇ ಮಕ್ಕಳು ಹೊರಗಿನ ತರಗತಿಗಳಿಗೂ ಹಾಜರಾಗುವಂತೆ ಮಾಡುತ್ತಾರೆ. ಇತರರಿಗೆ ಸಹಾಯ ಮಾಡುವ ಪ್ರಾಮುಖ್ಯತೆಯ ಬಗ್ಗೆ ಮಕ್ಕಳು ತಿಳಿದಿದ್ದಾರೆ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆ ತನ್ನ ಮಕ್ಕಳು ಅರಿವನ್ನು ಹೊಂದಿರುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ.

ಕುಂಭ ರಾಶಿಯಲ್ಲಿ ಜನಿಸಿದ ಅಮ್ಮಂದಿರು ತಮ್ಮ ಮಕ್ಕಳಲ್ಲಿ ಕಲ್ಪನೆ ಮತ್ತು ಪ್ರಯೋಗಗಳ ಮೂಲಕ ಕಲಿಕೆಯನ್ನು ಪ್ರೋತ್ಸಾಹಿಸುವುದು ಖಚಿತವಾಗಿದೆ. ಆದರೆ, ಮಕ್ಕಳ ಕೋರಿಕೆಗೆ ಈ ತಾಯಂದಿರು ಅಷ್ಟು ಸುಲಭವಾಗಿ ಬಗ್ಗುವವರಲ್ಲ ಹಾಗೂ ಭಾವನಾತ್ಮಕವಾಗಿ ಇವರು ಹೆಚ್ಚು ದೃಢರಾಗಿರುತ್ತಾರೆ.

ಇದೇ ಕಾರಣಕ್ಕೆ, ಈ ತಾಯಂದಿರ ಮಕ್ಕಳಿಗೆ ತಮ್ಮ ತಾಯಿ ಅವರನ್ನು ನಿಜವಾಗಿಯೂ ಪ್ರೀತಿಸುತ್ತಾಳೆ ಎಂಬುದನ್ನು ಈ ತಾಯಂದಿರೇ ಆಗಾಗ ನೆನಪಿಸಬೇಕಾಗುತ್ತದೆ.

12. ಸಿಂಹ

12. ಸಿಂಹ

ಸಿಂಹ ರಾಶಿಯಲ್ಲಿ ಜನಿಸಿದ ಅಮ್ಮಂದಿರು ಮಕ್ಕಳಿಗೆ ಸರಿಸಮನಾದ ನಡವಳಿಕೆಯನ್ನು ಹೊಂದಿರುತ್ತಾರೆ. ಇವರು ಮಕ್ಕಳೊಂದಿಗೆ ಆಡುವುದನ್ನು, ಮಕ್ಕಳಿಗೆ ದುಬಾರಿ ಉಡುಗೊರೆಗಳನ್ನು ನೀಡುವುದನ್ನು ಆನಂದಿಸುತ್ತಾರೆ. ಆದರೆ, ಮಕ್ಕಳ ಆದ್ಯತೆಯ ಎದುರು ತನ್ನ ಸ್ವಂತ ಆದ್ಯತೆಗಳನ್ನು ಹಿಂದಿಕ್ಕುವಷ್ಟೂ ಈ ತಾಯಂದಿರು ಮಗ್ನರಾಗಬಹುದು.

ಮಕ್ಕಳು ಬಯಸಿದಂತೆ ಈ ತಾಯಂದಿರುವ ದುಬಾರಿ ಔತಣಕೂಟಗಳನ್ನು ಏರ್ಪಡಿಸಬಹುದು ಅಥವಾ ಈ ಮೂಲಕ ಇತರ ತಾಯಂದಿರನ್ನು ಮೆಚ್ಚಿಸುವ ಪ್ರಯತ್ನವೂ ಆಗಿರಬಹುದು.

ಈ ತಾಯಂದಿರು ತಮ್ಮ ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಾರೆ ಎಂಬುದೇನೋ ನಿಜ ಆದರೆ ಜೊತೆಗೇ ಆತ್ಮಶ್ಲಾಘನೆಯತ್ತಲೂ ಈ ವ್ಯಕ್ತಿಗಳು ವಾಲುತ್ತಿದ್ದಿರಬಹುದು. ಅಂದರೆ, ತನ್ನ ಮಕ್ಕಳು ತನ್ನಂತೆಯೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬಹುದು. ತನ್ಮೂಲಕ ತನ್ನ ಮಕ್ಕಳ ಬಗ್ಗೆ, ಮಕ್ಕಳಿಗೆ ಇದರಿಂದ ಮುಜುಗರವಾಗುತ್ತಿದ್ದರೂ ಸರಿ, ಮಕ್ಕಳ ಶಿಕ್ಷಕರಲ್ಲಿ ಕೊಚ್ಚಿಕೊಳ್ಳುವಲ್ಲಿ ಈ ತಾಯಂದಿರು ಹಿಂಜರಿಗೆ ತೋರುವುದಿಲ್ಲ.

English summary

Zodiac Signs Who Make Great Moms, Ranked From Best To Worst

Here we are going to tell you Zodiac Signs Who Make Great Moms, Ranked From Best To Worst. Moms need to be so many things for their kids: an advocate, a supporter, a teacher, a caregiver, a driver, and a parent. Some moms are “cool” and others are more traditional and try to instill those traditional values in their children. Read more
Story first published: Saturday, May 22, 2021, 18:15 [IST]
X
Desktop Bottom Promotion