For Quick Alerts
ALLOW NOTIFICATIONS  
For Daily Alerts

ಕಾಲಿಗೆ ಕಪ್ಪುದಾರ ಕಟ್ಟುವುದರ ಹಿಂದಿರುವ ನಂಬಿಕೆ, ವೈಜ್ಞಾನಿಕ ಸತ್ಯ

|

ದುಷ್ಟ ಮತ್ತು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ವಿಭಿನ್ನ ಧರ್ಮಗಳು ವಿಭಿನ್ನ ನಂಬಿಕೆಗಳನ್ನು ಹೊಂದಿವೆ. ಅದರಲ್ಲೂ ಕೆಟ್ಟ ದೃಷ್ಟಿ ಬೀಳದಿರಲಿ, ನಕಾರಾತ್ಮಕತೆಗಳತ್ತ ನಮ್ಮ ಗಮನ ಹೋಗದಿರಲಿ ಎಂದು ಎಲ್ಲಾ ಧರ್ಮಗಳು ತಮ್ಮದೇ ಆದ ಸಾಕಷ್ಟು ಸಂಪ್ರದಾಯಗಳನ್ನು ಪಾಲಿಸುವುದನ್ನು ನಾವು ಗಮನಿಸಿರುತ್ತೇವೆ. ಈ ಲೇಖನದಲ್ಲಿ ಪಾದ, ಕುತ್ತಿಗೆ, ಸೊಂಟ ಅಥವಾ ಮಣಿಕಟ್ಟಿನ ಸುತ್ತಲೂ ಕಪ್ಪು ದಾರವನ್ನು ಧರಿಸಿರುವುದರ ಹಿಂದಿನ ವಿಶೇಷ, ಇದಕ್ಕೆ ಇರುವ ಮೌಢ್ಯಾರ್ಥ ಹಾಗೂ ವೈಜ್ಞಾನಿಕ ಸಂಗತಿಗಳನ್ನು ತಿಳಿಸಿಕೊಡಲಿದ್ದೇವೆ.

ಹಿಂದಿನಿಂದಲೂ ಬಂದ ಸಂಪ್ರದಾಯಗಳಲ್ಲಿ ಇತ್ತೀಚೆಗೆ ಟ್ರೆಂಡ್‌ ಆಗಿ ಪಾಲಿಸುವ ಸಂಪ್ರದಾಯವೆಂದರೆ ಅದು ಪಾದ, ಕುತ್ತಿಗೆ, ಸೊಂಟ ಅಥವಾ ಮಣಿಕಟ್ಟಿನ ಸುತ್ತಲೂ ಕಪ್ಪು ದಾರವನ್ನು ಧರಿಸಿರುವುದು. ಇತ್ತೀಚಿನ ದಿನಗಳಲ್ಲಿ, ಕೆಲವು ಮಹಿಳೆಯರು ಮತ್ತು ಪುರುಷರು ಇದನ್ನು ಸೊಗಸಾಗಿ ಕಾಣುವಂತೆ ಸ್ಟೈಲ್‌ ಗಾಗಿ ಧರಿಸುತ್ತಾರೆ, ಇತರರು ಇದನ್ನು ಪವಿತ್ರ ದಾರವೆಂದು ಮತ್ತು ಅದು ಅವರ ಸುತ್ತಲಿನ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎಂದು ನಂಬುತ್ತಾರೆ. ಇನ್ನೂ ಕೆಲವರು ಕಪ್ಪುದಾರ ಅವರಿಗೆ ಅದೃಷ್ಟವನ್ನು ತರುತ್ತದೆ ಎಂದು ಸಹ ನಂಬುತ್ತಾರೆ.

ಕಪ್ಪು ಎಂದರೆ ಅಪನಂಬಿಕೆಗಳೇ ಹೆಚ್ಚು

ಕಪ್ಪು ಎಂದರೆ ಅಪನಂಬಿಕೆಗಳೇ ಹೆಚ್ಚು

ಭಾರತದಲ್ಲಿ ಕಪ್ಪು ಬಣ್ಣವನ್ನು ನಕಾರಾತ್ಮಕ ಶಕ್ತಿ, ಯಾವುದೇ ಪವಿತ್ರ ಕೆಲಸವನ್ನು ಮಾಡುವಾಗ ಬಳಸುವಂತಿಲ್ಲ ಎಂಬ ಅಪನಂಬಿಕೆಗಳೇ ಹೆಚ್ಚಿದೆ. ಪವಿತ್ರ ಸಮಾರಂಭದಲ್ಲಿ ಅಥವಾ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿದ ಜನರನ್ನು ನೀವು ವಿರಳವಾಗಿ ಕಾಣಬಹುದು ಹಾಗೂ ಧರಿಸಿದರೆ ಅವರನ್ನೇ ನಕಾರಾತ್ಮಕವಾಗಿ ಕಾಣುವುದೂ ಉಂಟು. ಆದರೆ ನಿಜವಾಗಿಯೂ ಕಪ್ಪುದಾರ ಧರಿಸುವುದರಿಂದ ವೈಜ್ಞಾನಿಕವಾಗಿ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ ಅಲ್ಲದೇ ಸಾಂಪ್ರದಾಯಿಕವಾಗಿಯೂ ಕೆಲವು ನಂಬಿಕಗೆಳನ್ನು ಹೊಂದಲಾಗಿದೆ. ಇವುಗಳ ಬಗ್ಗೆ ವಿಸ್ತೃತವಾದ ವಿವರಣೆ ಮುಂದೆ ಲೇಖನದಲ್ಲಿ ತಿಳಿಯೋಣ.

ಕಪ್ಪುದಾರದಿಂದ ಆಗುವ ವೈಜ್ಞಾನಿಕ ಪ್ರಯೋಜನಗಳು

1) ಜೀರ್ಣಕ್ರಿಯೆಗೆ ಸಹಕಾರಿ

1) ಜೀರ್ಣಕ್ರಿಯೆಗೆ ಸಹಕಾರಿ

ಸೊಂಟದ ಸುತ್ತಲಿ ಕಪ್ಪುದಾರ ತೂಕ ಮತ್ತು ಸೊಂಟದ ಗಾತ್ರವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅಲ್ಲದೇ ಜೀರ್ಣಕ್ರಿಯೆಗೂ ಈ ದಾರ ಅನುಕೂಕರವಾಗಿದೆ. ನಾವು ಸೊಂಟದ ಮೇಲೆ ದಾರವನ್ನು ಧರಿಸಿದಾಗ ಮತ್ತು ಆ ದಾರವು ಸಡಿಲವಾದರೆ ಇದರರ್ಥ ನಾವು ತೂಕವನ್ನು ಕಳೆದುಕೊಂಡಿದ್ದೇವೆ ಮತ್ತು ಅದು ಬಿಗಿಯಾದರೆ ನಾವು ತೂಕವನ್ನು ಹೊಂದಿರಬೇಕು ಎಂದರ್ಥ.

2) ಬೆಲ್ಲಿ ಕರಗಿಸುತ್ತೆ

2) ಬೆಲ್ಲಿ ಕರಗಿಸುತ್ತೆ

ಸೊಂಟದ ಸುತ್ತಲಿನ ಚಯಾಪಚಯವನ್ನು ಹೆಚ್ಚಿಸುವ ಮೂಲಕ ಬೆಲ್ಲಿಯನ್ನು ಕರಗಿಸಲು ಅಥವಾ ಬರದಂತೆ ತಡೆಯಲು ಇದು ಸಹಾಯ ಮಾಡುತ್ತದೆ. ಆದ್ದರಿಂದ ಇತರೆ ಬೆಲ್ಲಿ ಕರಗಿಸುವ ಇತರ ಪ್ರಾಡಕ್ಟ್‌ಗಳಿಗಿಂತ ಇದು ಉತ್ತಮ ಮತ್ತು ಅಗ್ಗವಾಗಿದೆ. ನಮ್ಮ ಆರೋಗ್ಯದ ಮೇಲೆ ಸ್ವಲ್ಪ ವ್ಯತಿರಿಕ್ತ ಪರಿಣಾಮ ಬೀರಬಹುದು. ಚಯಾಪಚಯ ಕ್ರಿಯೆಯ ಹೆಚ್ಚಳದಿಂದಾಗಿ ನಾವು ವಾತಾ, ಪಿತ್ತ ಮತ್ತು ಕಫ ನಿವಾರಣೆಯಾಗುತ್ತದೆ.

3) ಬೆನ್ನುಮೂಳೆಗೆ ಬಲ

3) ಬೆನ್ನುಮೂಳೆಗೆ ಬಲ

ಕಪ್ಪುದಾರವು ಸೊಂಟದ ಬೆನ್ನುಮೂಳೆಗೆ ಬೆಂಬಲ ನೀಡುವ ಮೂಲಕ ಬೆನ್ನುಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಕಪ್ಪುದಾರವು ಬೆನ್ನುಮೂಳೆಯ ದ್ರವವನ್ನು ಉಳಿಸಿಕೊಳ್ಳುವ ಮೂಲಕ ಕಡಿಮೆ ಬೆನ್ನುನೋವು, ಬೆನ್ನುಮೂಳೆ ತೊಂದರೆಗಳು, ಸ್ಲಿಪ್ ಡಿಸ್ಕ್ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.

4) ಫಲವತ್ತತೆ ಹೆಚ್ಚಿಸುತ್ತದೆ

4) ಫಲವತ್ತತೆ ಹೆಚ್ಚಿಸುತ್ತದೆ

ಸೊಂಟದ ಮೇಲಿನ ಕಪ್ಪು ದಾರವು ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಸೊಂಟದ ಹತ್ತಿರ ಮತ್ತು ಸಂತಾನೋತ್ಪತ್ತಿ ಅಂಗಗಳನ್ನು ತಂಪಾಗಿರಿಸಲು ಸಹ ಸಹಕಾರಿಯಾಗಿದೆ.

5) ಚಯಾಪಚಯ ಸಮತೋಲನ

5) ಚಯಾಪಚಯ ಸಮತೋಲನ

ದೇಹದ ಯಾವುದೇ ಭಾಗದಲ್ಲಿ ಕಪ್ಪುದಾರವನ್ನು ಕಟ್ಟುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ. ಸಮತೋಲದ ಚಯಾಪಚಯಕ್ಕೆ ಕಪ್ಪು ದಾರ ಸಹಕಾರಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

6) ರಕ್ತದ ಸಂಚಾರ ನಿಯಂತ್ರಿಸುತ್ತದೆ

6) ರಕ್ತದ ಸಂಚಾರ ನಿಯಂತ್ರಿಸುತ್ತದೆ

ಕಪ್ಪುದಾರ ಕಟ್ಟುವುದರಿಂದ ದೇಹದಲ್ಲಿ ರಕ್ತಸಂಚಾರವನ್ನು ಸುಗಮ ನಡೆಸಲು ನೆರವಾಗುತ್ತದೆ, ಅಲ್ಲದೇ ರಕ್ತದೊತ್ತಡ ಉಂಟಾಗದಂತೆ ಸಹ ತಡೆಯುತ್ತದೆ.

ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಗೊತ್ತಾ?

ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಗೊತ್ತಾ?

ಹಿಂದೂ ಧರ್ಮದಲ್ಲಿ, ಕಪ್ಪು ಬಣ್ಣವು ನ್ಯಾಯ ಮತ್ತು ಶಿಕ್ಷೆಯ ದೇವರಾದ ಶನಿಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ಶನಿ ಎಲ್ಲಾ ನಕಾರಾತ್ಮಕ ಕಂಪನಗಳನ್ನು ನಿವಾರಿಸುತ್ತಾರೆ ಮತ್ತು ಭರವಸೆ, ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಶೀರ್ವದಿಸುತ್ತಾರೆ. ಆದ್ದರಿಂದ ಪಾದದ ಸುತ್ತಲೂ, ಕುತ್ತಿಗೆ, ಸೊಂಟ ಅಥವಾ ತೋಳುಗಳಲ್ಲಿ ಕಪ್ಪುದಾರವನ್ನು ಧರಿಸಿದವರು ನಕಾರಾತ್ಮಕ ಮತ್ತು ದುಷ್ಟ ಶಕ್ತಿಯಿಂದ ದೂರವಿರುತ್ತಾನೆ. ಇನ್ನೂ ಕೆಲವರು ಮಾಟಮಂತ್ರದಂಥ ಕೆಟ್ಟ ಉದ್ದೇಶಗಳನ್ನು ಹೊಂದಿರುವ ಜನರಿಂದ ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಲು ಇದನ್ನು ಧರಿಸುತ್ತಾರೆ.

ಕಪ್ಪುದಾರವನ್ನು ಧರಿಸುವುದರಿಂದ ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಮತ್ತು ಅದನ್ನು ಹೇಗೆ ಧರಿಸಬೇಕು ಇಲ್ಲಿದೆ ಕೆಲವು ಸಲಹೆಗಳು.

ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಗೊತ್ತಾ?

ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಗೊತ್ತಾ?

1. ಕಪ್ಪುದಾರದ ಸುತ್ತಲೂ ಒಂಬತ್ತು ಗಂಟುಗಳನ್ನು ಕಟ್ಟಿದ ನಂತರ ಕಪ್ಪು ದಾರವನ್ನು ಧರಿಸಬೇಕು.

2. ಕಪ್ಪು ದಾರವನ್ನು ಧರಿಸುವ ಮೊದಲು ಅದನ್ನು ಶನಿ ಮತ್ತು ಹನುಮನಿಗೆ ಅರ್ಪಿಸಬೇಕು. ಇದನ್ನು ಅನುಸರಿಸಿದಾಗ ಮಾತ್ರ ಕಪ್ಪುದಾರ ಪವಿತ್ರವಾಗುತ್ತದೆ ಮತ್ತು ಇದರಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ ಎನ್ನಲಾಗುತ್ತದೆ.

3. ಇದನ್ನು ಪವಿತ್ರ ಮುಹೂರ್ತದಲ್ಲಿ ಮಾತ್ರ ಧರಿಸಬೇಕು. ಇಲ್ಲದಿದ್ದರೆ ಕಪ್ಪುದಾರ ಪರಿಣಾಮಕಾರಿಯಾಗದಿರಬಹುದು.

ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಗೊತ್ತಾ?

ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಗೊತ್ತಾ?

4. ಆಂಜನೇಯನಿಗೆ ಮೊದಲು ಅರ್ಪಿಸಿದ ನಂತರ ಕುತ್ತಿಗೆಯ ಕಟ್ಟಿದ ಕಪ್ಪುದಾರದಿಂದ ವ್ಯಕ್ತಿಯು ಆರೋಗ್ಯ ಮತ್ತು ಸಕಾರಾತ್ಮಕ ಶಕ್ತಿಯಿಂದ ಆಶೀರ್ವದಿಸಲ್ಪಡುತ್ತಾನೆ.

6. ನೀವು ಶಾನಿಯ ಆಶೀರ್ವಾದ ಪಡೆಯಲು ಮತ್ತು ನಿಮಗೆ ತೊಂದರೆ ನೀಡಬಯಸುವ ವ್ಯಕ್ತಿಯಿಂದ ದೂರವಿರಲು ಬಯಸಿದರೆ, 9 ಗಂಟುಗಳನ್ನು ಕಟ್ಟಿದ ಕಪ್ಪುದಾರವನ್ನು ಶನಿವಾರದಂದು ಧರಿಸಬೇಕು.

ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಗೊತ್ತಾ?

ಸಾಂಪ್ರದಾಯಿಕವಾಗಿ ಯಾವೆಲ್ಲಾ ಲಾಭ ಇದೆ ಗೊತ್ತಾ?

7. ನಿಮ್ಮ ದೇಹದ ಯಾವುದೇ ಭಾಗದಲ್ಲಿ ಕಪ್ಪುದಾರವನ್ನು ಕಟ್ಟಿದ ನಂತರ ರುದ್ರ ಗಾಯತ್ರಿ ಮಂತ್ರವನ್ನು ಪಠಿಸಿ. ಮಂತ್ರವನ್ನು ಪಠಿಸಲು ನಿರ್ದಿಷ್ಟ ಸಮಯವನ್ನು ಸಹ ನೀವು ನಿರ್ಧರಿಸಬೇಕು.

ಮಂತ್ರ ಹೀಗಿದೆ: ರುದ್ರ ಗಾಯತ್ರಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ,

ಮಹಾದೇವಾಯ ಧೀಮಹೀ ತನ್ನೋ ರುದ್ರ ಪ್ರಚೋದಯಾತ್ ||

ರುದ್ರ ಗಾಯತ್ರಿ ಮಂತ್ರದ ಅರ್ಥ:

ನಾನು ದೇವತೆಗಳ ಅತ್ಯಂತ ಮಹತ್ವಾಕಾಂಕ್ಷ ಆದರ್ಶ ಪುರುಷ ಮಹಾದೇವನನ್ನು ಪ್ರಾರ್ಥಿಸುತ್ತೇನೆ. ಜ್ಞಾನದಿಂದ ನನ್ನನ್ನು ಆಶೀರ್ವದಿಸು ಮತ್ತು ಜ್ಞಾನದಿಂದ ನನನ್ನು ಬೆಳಗುವಂತೆ ಮಾಡು

8. ಈಗಾಗಲೇ ಮಣಿಕಟ್ಟಿನ ಮೇಲೆ ಹಳದಿ, ಕೆಂಪು ಅಥವಾ ಕೇಸರಿ ಬಣ್ಣದ ದಾರವನ್ನು ಧರಿಸಿರುವವರು, ಕೈಯಲ್ಲಿ ಕಪ್ಪು ದಾರವನ್ನು ಕಟ್ಟಬಾರದು.

9. ಕಪ್ಪು ದಾರವು ಶನಿಯನ್ನು ಸಂಕೇತಿಸುವುದರಿಂದ, ಗ್ರಹಗಳ ಚಲನೆ ಮತ್ತು ದಶಾ (ಗ್ರಹಗಳ ಆಳುವ ಅವಧಿಗಳನ್ನು) ವಿಶ್ಲೇಷಿಸಿದ ನಂತರವೇ ಅದನ್ನು ಧರಿಸಬೇಕು.

English summary

Why Do People Wear Black Thread And Benefits of It

Here we are discussing about Why Do People Wear Black Thread, what are benifits of it according to science and beliefs according hinduism .There are so many beliefs associated with the wearing of black threads. Scroll down to know more. Read more
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X