For Quick Alerts
ALLOW NOTIFICATIONS  
For Daily Alerts

ದೈವ ಶಕ್ತಿಯನ್ನು ಹೊಂದಿರುವ ಗಿಡ-ಮರಗಳನ್ನು ಪೂಜಿಸಿ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಿ

|

ಹಿಂದೂ ಧರ್ಮವು ವಿಶಾಲವಾದ ಹಾಗೂ ಪವಿತ್ರವಾದ ವ್ಯಾಪ್ತಿಯನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಕೃತಿಯು ಒಂದು ದೇವತೆ. ಅದರಲ್ಲಿ ಇರುವ ಕೆಲವು ಗಿಡ-ಮರಗಳು, ಪ್ರಾಣಿ ಪಕ್ಷಿಗಳು ಸಹ ದೈವ ಶಕ್ತಿಯೊಂದಿಗೆ ಸಂಯೋಜನೆಯನ್ನು ಪಡೆದುಕೊಂಡಿವೆ. ಕೆಲವು ವಿಶೇಷ ಗಿಡ-ಮರಗಳು ದೇವರ ಪ್ರತಿ ರೂಪ ಎಂದು ಪರಿಗಣಿಸಲಾಗುತ್ತದೆ. ದೇವರು ಮನುಜನಿಗೆ ಆಶೀರ್ವದಿಸಲು ಇವುಗಳ ಮೂಲಕ ಭೂಮಿಗೆ ಬರುತ್ತಾನೆ ಎನ್ನುವ ನಂಬಿಕೆಯಿದೆ. ಹಾಗಾಗಿ ದೇವರನ್ನು ಪ್ರತಿ ಬಿಂಬಿಸುವ ಗಿಡ ಮರಗಳಿಗೆ ವಿಶೇಷ ಪೂಜಾ ವಿಧಿಯನ್ನು ಕೈಗೊಳ್ಳಲಾಗುವುದು.

ದೇವತೆಗಳು ಇಷ್ಟಪಡುವ ಹಾಗೂ ಅವರ ರೂಪವನ್ನು ಪ್ರತಿ ಬಿಂಬಿಸುವ ಗಿಡ-ಮರಗಳಿಗೆ ಪೂಜೆ ಹಾಗೂ ವ್ರತ ವಿಧಾನವನ್ನು ಕೈಗೊಂಡರೆ ಜೀವನದಲ್ಲಿ ಅದೃಷ್ಟ ದೊರೆಯುವುದು. ಅಂತಹ ದೈವ ಶಕ್ತಿ ಹೊಂದಿರುವ ಗಿಡ-ಮರಗಳನ್ನು ಅನುಚಿತ ಕೆಲಸಗಳಿಗೆ ಬಳಸಿಕೊಳ್ಳುವುದು ಅಥವಾ ನಾಶ ಮಾಡುವ ಕೃತ್ಯವನ್ನು ಕೈಗೊಂಡರೆ ಜೀವನದಲ್ಲಿ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಜೊತೆಗೆ ಕೆಲವು ದೋಷಗಳು ಜೀವನ ಪೂರ್ತಿ ನಮ್ಮ ಬೆನ್ನತ್ತಿ ಬರುವುದು ಎಂದು ಸಹ ಹೇಳಲಾಗುವುದು.

Plants

ಧಾರ್ಮಿಕ ನಂಬಿಕೆಗಳು ಹಾಗೂ ಪ್ರಾಚೀನ ಪುರಾಣಗಳು ಹೇಳುವ ಪ್ರಕಾರ ಐದು ಗಿಡ-ಮರಗಳು ದೇವರೊಂದಿಗೆ ಉತ್ತಮ ಸಂಯೋಜನೆಯನ್ನು ಪಡೆದುಕೊಂಡಿವೆ. ಈ ಸಸ್ಯಗಳು ವಿಶೇಷ ಹಿನ್ನೆಲೆ ಹಾಗೂ ಕಥೆಗಳನ್ನು ಒಳಗೊಂಡಿವೆ. ಈ ಪವಿತ್ರ ಗಿಡ-ಮರಗಳ ರೂಪದಲ್ಲಿ ದೇವನು ಭೂಮಿಗೆ ಬರುತ್ತಾನೆ. ಮನುಜರಿಗೆ ಸಹಾಯ ಮಾಡುತ್ತಾನೆ ಎಂದು ಹೇಳಲಾಗುವುದು. ಈ ಗಿಡ ಮರಗಳು ಮನುಷ್ಯನ ಜೀವನವನ್ನು ಫಲವತ್ತತೆಯಿಂದ ಕೂಡಿರುವಂತೆ ಮಾಡುತ್ತವೆ. ಜೊತೆಗೆ ಅವರು ಸಾಕಷ್ಟು ಸಮೃದ್ಧಿ ಹಾಗೂ ಸುಖ-ಶಾಂತಿಯನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು. ಹಾಗಾದರೆ ಆ ಐದು ಪವಿತ್ರ ಗಿಡ-ಮರಗಳು ಯಾವವು ಎನ್ನುವುದನ್ನು ಲೇಖನದ ಮುಂದಿನ ಭಾಗದಲ್ಲಿ ಇರುವ ವಿವರಣೆಯನ್ನು ನೋಡಿ ತಿಳಿಯಿರಿ.

ಬಿಲ್ವ ಪತ್ರೆಯ ಮರ

ಬಿಲ್ವ ಪತ್ರೆಯ ಮರ

ಬಿಲ್ವ ಪತ್ರೆಯ ಮರವು ಶಿವನೊಂದಿಗೆ ಸಂಯೋಜನೆಯನ್ನು ಪಡೆದುಕೊಂಡಿದೆ. ಬಿಲ್ವ ಪತ್ರೆಯು ಶಿವನ ಆರಾಧನೆಗೆ ಅತ್ಯಂತ ಶ್ರೇಷ್ಠವಾದದ್ದು. ಅಲ್ಲದೆ ವೈಜ್ಞಾನಿಕವಾಗಿಯೂ ಅದ್ಭುತ ಔಷಧೀಯ ಗುಣವನ್ನು ಪಡೆದುಕೊಂಡಿದೆ. ಸೃಷ್ಟಿಯ ದೇವತೆಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಬಿಲ್ವ ಪತ್ರೆಯು ಸಂಕೇತಿಸುವುದು. ಬಿಲ್ವ ಪತ್ರೆ ಅಥವಾ ಬಿಲ್ವ ಎಲೆಯು ಮೂರು ಎಲೆಗಳ ಕುಡಿಯನ್ನು ಹೊಂದಿರುತ್ತದೆ. ಅವು ಶಿವನ ಮೂರು ಕಣ್ಣುಗಳನ್ನು ಹಾಗೂ ತ್ರಿಶೂಲದ ಮೂರು ತುದಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುವುದು. ಈ ಮರದ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಒಳಗೊಂಡಿವೆ. ಧಾರ್ಮಿಕವಾಗಿ ಈ ಮರದ ಒಂದೊಂದು ಭಾಗವು ಪಾರ್ವತಿ ದೇವಿಯ ಅವತಾರಗಳನ್ನು ಪ್ರತಿನಿಧಿಸುತ್ತವೆ.

ಬಾಳೆ ಮರ

ಬಾಳೆ ಮರ

ಬಾಳೆ ಮರವಲ್ಲದಿದ್ದರೂ ಅದನ್ನು ಬಾಳೆ ಮರ ಎಂದು ಕರೆಯುತ್ತಾರೆ. ಈ ಬಾಳೆ ಗಿಡ-ಅಥವಾ ಬಾಳೆ ಮರವು ವಿಷ್ಣು ಮತ್ತು ಲಕ್ಷ್ಮಿ ದೇವಿಯೊಂದಿಗೆ ಸಂಯೋಗ ಪಡೆದುಕೊಂಡಿದೆ ಎನ್ನಲಾಗುತ್ತದೆ. ಬಾಳೆ ಗಿಡವು ಎಲ್ಲಾ ಶುಭ ಕಾರ್ಯಗಳಿಗೂ ಪವಿತ್ರವಾದದ್ದು ಹಾಗೂ ಅಗತ್ಯವಾದ ಗಿಡವೂ ಹೌದು. ಬಾಳೆ ಗಿಡ, ಬಾಳೆ ಎಲೆ, ಬಾಳೆ ಹಣ್ಣು, ಬಾಳೆ ಹೂವು, ಬಾಳೆ ದಾರ, ಬಾಳೆ ದಿಂಡು ಎಲ್ಲವೂ ದೇವರ ಪೂಜೆಗೆ ಅತ್ಯಗತ್ಯವಾದ ವಸ್ತುಗಳು. ಇವುಗಳ ಬಳಕೆ ಇಲ್ಲದೆ ಪೂಜಾ ವಿಧಾನವು ಅಪೂರ್ಣವಾಗುತ್ತದೆ ಎನ್ನಲಾಗುವುದು. ಗುರುವಾರ ಯಾರು ಬಾಳೆ ಮರ ಅಥವಾ ಗಿಡಕ್ಕೆ ಪೂಜೆಯನ್ನು ಸಲ್ಲಿಸುತ್ತಾರೆ ಅವರ ಕುಟುಂಬದಲ್ಲಿ ಸಮೃದ್ಧಿಯು ನೆಲೆಸುವುದು ಎಂದು ಹೇಳಲಾಗುವುದು.

ತುಳಸಿ ಗಿಡ

ತುಳಸಿ ಗಿಡ

ಮನೆಯ ಮುಂದೆ ಇಟ್ಟು ಪೂಜಿಸುವ ಗಿಡವೇ ತುಳಸಿ ಗಿಡ. ತುಳಸಿ ಎಲೆ ಇಲ್ಲದೆ ಯಾವ ಪೂಜೆಯೂ ಸಂಪನ್ನಗೊಳ್ಳದು. ಯಾರು ತಮ್ಮ ಮನೆಯ ಮುಂದೆ ಇಟ್ಟು ಅದನ್ನು ಪೋಷಿಸುತ್ತಾರೆ ಅವರ ಮನೆಯಲ್ಲಿ ಸಮೃದ್ಧಿ ನೆಲೆಸುವುದು ಎನ್ನುವ ನಂಬಿಕೆಯಿದೆ. ಪ್ರಾಚೀನ ವೇದಗಳು ಹೇಳುವ ಪ್ರಕಾರ ಯಾರು ತುಳಸಿ ಗಿಡವನ್ನು ಸ್ಪರ್ಶಿಸುತ್ತಾರೋ ಅವರು ಆಂತರಿಕವಾಗಿ ಶುದ್ಧಿಯನ್ನು ಪಡೆದುಕೊಳ್ಳುವನು. ತುಳಸಿ ಗಿಡದಿಂದ ತಯಾರಿಸಿದ ಜಪದ ಸರಗಳನ್ನು ಋಷಿ ಮುನಿಗಳು, ಸಂತರು ಹಾಗೂ ಪುರೋಹಿತರು ಧರಿಸುತ್ತಾರೆ. ಇದು ಅತೀಂದ್ರೀಯ ಶಕ್ತಿಯನ್ನು ನೀಡುವುದು ಎನ್ನುವ ನಂಬಿಕೆಯಿದೆ. ಇದರಿಂದಾಗಿ ವಯಸ್ಸು, ಮನಸ್ಸು, ದೇಹ ಹಾಗೂ ಭಾವನೆಗಳೆಲ್ಲವೂ ಶುದ್ಧಿಯಾಗುತ್ತವೆ. ಆಯುರ್ವೇದದ ಔಷಧಿಯಲ್ಲಿ ತುಳಸಿಯನ್ನು ಅತ್ಯಂತ ಅಗತ್ಯ ವಸ್ತುವನ್ನಾಗಿ ಉಪಯೋಗಿಸಲಾಗುವುದು. ವಿಷ್ಣುವಿಗೆ ಪ್ರಿಯವಾದ ತುಳಸಿ ಗಿಡಕ್ಕೆ ನಿತ್ಯವೂ ಪೂಜೆಯನ್ನು ಸಲ್ಲಿಸಬೇಕು. ಮನೆಯಲ್ಲಿ ಧನಾತ್ಮಕ ಶಕ್ತಿಯ ಆಗಮನ ಆಗುವುದು.

ಆಲದ ಮರ

ಆಲದ ಮರ

ಆಲದ ಮರುವು ಬ್ರಹ್ಮ ದೇವನನ್ನು ಪ್ರತಿನಿಧಿಸುತ್ತದೆ. ಈ ಮರವು ಅತ್ಯಂತ ವಿಶಾಲತೆಯನ್ನು ಪಡೆದುಕೊಳ್ಳುವುದು. ಇದು ದೀರ್ಘಾಯುಷ್ಯವನ್ನು ಸಂಕೇತಿಸುತ್ತದೆ ಎಂದು ಹೇಳಲಾಗುವುದು. ಈ ಮರವು ಫಲವತ್ತತೆಯ ಸಂಕೇತವೂ ಹೌದು. ಧಾರ್ಮಿಕ ನಂಬಿಕೆಗಳ ಪ್ರಕಾರ ಮಕ್ಕಳನ್ನು ಹೊಂದಿರದ ವ್ಯಕ್ತಿಗಳು ಆಲದ ಮರಕ್ಕೆ ಪೂಜೆಯನ್ನು ಸಲ್ಲಿಸಿದರೆ ಸಂತಾನ ಫಲವನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು. ಈ ಮರವನ್ನು ಕತ್ತರಿಸುವುದು ಅತ್ಯಂತ ಪಾಪ ಕೃತ್ಯ ಎಂದು ಪರಿಗಣಿಸಲಾಗಿದೆ. ವಟ ವೃಕ್ಷ ಎಂದು ಕರೆಯುವ ಈ ಮರಕ್ಕೆ ವಿವಾಹಿತ ಮಹಿಳೆಯರು ಪತಿಯ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ಪೂಜೆಯನ್ನು ಸಲ್ಲಿಸುತ್ತಾರೆ.

 ಅಶ್ವತ್ಥ ಮರ

ಅಶ್ವತ್ಥ ಮರ

ಅಶ್ವತ್ಥ ಮರದಲ್ಲಿ ಎಲ್ಲಾ ದೇವಾನು ದೇವತೆಗಳ ವಾಸವಿರುತ್ತದೆ ಎನ್ನುವ ನಂಬಿಕೆಯಿದೆ. ಇದು ಪ್ರತಿಯೊಂದು ಗ್ರಾಮ ಹಾಗೂ ಊರಿನಲ್ಲಿ ಕನಿಷ್ಠ ಒಂದು ಮರವಾದರೂ ಇರುವುದನ್ನು ಕಾಣಬಹುದು. ಶನಿ ಮತ್ತು ಹನುಮಂತನ ದೇವಸ್ಥಾನದ ಎದುರು ಅಥವಾ ಆವರಣದಲ್ಲಿ ಅಶ್ವತ್ಥ ಮರವು ಕಡ್ಡಾಯವಾಗಿ ಇರುತ್ತದೆ. ಈ ಮರದಲ್ಲಿ ಲಕಕ್ಷಿ ದೇವಿಯು ಸದಾ ಕುಳಿತಿರುತ್ತಾಳೆ ಎನ್ನುವ ನಂಬಿಕೆಯೂ ಇದೆ. ಔಷಧೀಯ ಗುಣಗಳನ್ನು ಒಳಗೊಂಡಿರುವ ಈ ಮರವು ಸಾಕಷ್ಟು ಸಾಂಕ್ರಾಮಿಕ ರೋಗಗಳನ್ನು ಸಹ ದೂರ ಮಾಡುತ್ತದೆ. ಯಾರು ಈ ಮರಕ್ಕೆ ನಿತ್ಯ ದೀಪವನ್ನು ಬೆಳಗುವರು? ಯಾರು ನೀರನ್ನು ಎರೆಯುವರು? ಅವರ ಜೀವನದಲ್ಲಿ ಸದಾ ಸಂತೋಷ ಹಾಗೂ ಮನದಿಂಗಿತಗಳು ನೆರವೇರುತ್ತವೆ ಎಂದು ಹೇಳಲಾಗುವುದು.

ಈ ಐದು ವಿಶೇಷ ಗಿಡ-ಮರಗಳಿಗೆ ನಿತ್ಯವೂ ನೀರೆರೆಯುವುದು ಹಾಗೂ ದೀಪ ಬೆಳಗುವುದರ ಮೂಲಕ ಪೂಜೆಯನ್ನು ಸಲ್ಲಿಸಿದರೆ ಜೀವನದಲ್ಲಿ ಸಾಕಷ್ಟು ಲಾಭಗಳು ದೊರೆಯುವುದು. ಅಲ್ಲದೆ ಸದಾ ಕಾಡುತ್ತಿರುವ ಸಮಸ್ಯೆಗಳು ನಮ್ಮಿಂದ ದೂರವಾಗುವುದು ಎಂದು ಹೇಳಲಾಗುವುದು.

English summary

Which Plants Or Trees Are Considered Divine In India

According to Hinduism, worshipping divinity includes worshipping a few plants and trees which are considered holy. These trees boast of a lot of religious significance. Our ancient scriptures also indicate that worshipping plants and trees is indeed an ancient Indian practice.
Story first published: Thursday, November 14, 2019, 17:26 [IST]
X
Desktop Bottom Promotion