For Quick Alerts
ALLOW NOTIFICATIONS  
For Daily Alerts

ಧನು ರಾಶಿಗೆ ಶುಕ್ರನ ಪ್ರವೇಶ: ಈ 3 ರಾಶಿಗಳಿಗೆ ಒಳ್ಳೆಯದಲ್ಲ, ಪರಿಹಾರವೇನು?

|

ಡಿಸೆಂಬರ್ 5ಕ್ಕೆ ಶುಕ್ರನು ಧನು ರಾಶಿಯನ್ನು ಪ್ರವೇಶಿಸಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನು ರಾಶಿ ಬದಲಾವಣೆ ಮಾಡಿದಾಗ ದ್ವಾದಶ ರಾಶಿಗಳಲ್ಲಿ ಅದರ ಸ್ಥಾನಕ್ಕೆ ತಕ್ಕಂತೆ ಪ್ರಭಾವ ಬೀರಲಿದೆ. ಶುಕ್ರ ದುರ್ಬಲ ಸ್ಥಾನದಲ್ಲಿದ್ದರೆ ಆ ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು. ಇದೀಗ ಶುಕ್ರ ಧನು ರಾಶಿಗೆ ಪ್ರವೇಶಿಸಿದ್ದು ಮೂರು ರಾಶಿಗಳಲ್ಲಿ ದುರ್ಬಲ ಸ್ಥಾನದಲ್ಲಿದೆ. ಆದ್ದರಿಂದ ಈ ಮೂರು ರಾಶಿಯವರು ಶುಕ್ರ ಧನು ರಾಶಿಯಲ್ಲಿರುವಾಗ ಎಚ್ಚರಿಕೆವಹಿಸಬೇಕು.

ನಿಮ್ಮ ರಾಶಿಯಲ್ಲಿ ಶುಕ್ರ ದುರ್ಬಲ ಸ್ಥಾನದಲ್ಲಿದ್ದರೆ ಬರುವ ಸಮಸ್ಯೆಗಳೇನು? ಶುಕ್ರನ ಕೆಟ್ಟ ಪರಿಣಾಮ ತಪ್ಪಿಸಲು ಏನು ಮಾಡಬೇಕು? ಶುಕ್ರ ದುರ್ಬಲ ಸ್ಥಾನದಲ್ಲಿರಯವ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಶುಕ್ರ ದುರ್ಬಲ ಸ್ಥಾನದಲ್ಲಿದ್ದರೆ ತೊಂದರೆಗಳೇನು?

ಶುಕ್ರ ದುರ್ಬಲ ಸ್ಥಾನದಲ್ಲಿದ್ದರೆ ತೊಂದರೆಗಳೇನು?

* ಆರ್ಥಿಕ ತೊಂದರೆ ಎದುರಾಗುವುದು

* ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುವುದು

* ಮದುವೆಯಲ್ಲಿ ಅಡಚಣೆ ಉಂಟಾಗುವುದು

* ಮುಟ್ಟಿನ ಚಕ್ರದಲ್ಲಿ ತೊಂದರೆಯಾಗುವುದು

* ಜೀವನದಲ್ಲಿ ಖುಷಿ ಕಡಿಮೆಯಾಗುವುದು

* ಸಾಲ ಹೆಚ್ಚುವುದು

ಶುಕ್ರ ದುರ್ಬಲನಾಗಿದ್ದಾಗ ಏನು ಮಾಡಬೇಕು?

ಶುಕ್ರ ದುರ್ಬಲನಾಗಿದ್ದಾಗ ಏನು ಮಾಡಬೇಕು?

* ಶುಕ್ರವಾರ ನಿರ್ಗತಿಕರಿಗೆ ದಾನ ಮಾಡಿ: ಶುಕ್ರವಾರ ನೀವು ಬದವರಿಗೆ ಹಾಲು, ಅಕ್ಕಿ ಪಾಯಸ, ಬಿಳಿ ಬಣ್ಣದ ಸಿಹಿ ಪದಾರ್ಥ, ಬಿಳಿ ಬಣ್ಣದ ಬಟ್ಟೆಗಳು ಇವುಗಳನ್ನು ದಾನ ಮಾಡಿ. ಇದರಿಂದ ಶುಕ್ರಗ್ರಹದ ಅನುಗ್ರಹ ಸಿಗುವುದು

* ಚೆನ್ನಾಗಿ ಅಲಂಕಾರ ಮಾಡಿ

ಶುಕ್ರ ಸೌಂದರ್ಯ ಗ್ರಹ. ವ್ಯಕ್ತಿ ತನ್ನ ಅಲಂಕಾರದ ಕಡೆ ಗಮನ ನೀಡುತ್ತಿಲ್ಲ ಎಂದಾದರೆ ಅವನಲ್ಲಿ ಶುಕ್ರ ಮತ್ತಷ್ಟು ದುರ್ಬಲವಾಗುತ್ತಾನೆ. ಶುಚಿತ್ವದ ಕಡೆ ಗಮನ ನೀಡಿ, ಅಲಂಕಾರ ಮಾಡಿ. ಸುಗಂಧ ದ್ರವ್ಯಗಳನ್ನು ಬಳಸಿ.

ಬಿಳಿ ವಸ್ತ್ರಗಳನ್ನು ಧರಿಸಿ

ಶುಕ್ರವಾರ ನೀವು ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿ ಹಾಗೂ ಬಿಳಿ ಸಿಹಿ ಪದಾರ್ಥ ಸೇವಿಸಿ.

ಶುಕ್ರವಾರ ಲಕ್ಷ್ಮಿಯನ್ನು ಆರಾಧಿಸಿ

ಯಾರಲ್ಲಿ ಶುಕ್ರ ದುರ್ಬಲ ಸ್ಥಾನದಲ್ಲಿರುತ್ತಾನೋ ಅವರು ಶುಕ್ರವಾರ ಲಕ್ಷ್ಮಿಯನ್ನು ಆರಾಧಿಸುವುದರಿಂದ ಕೆಟ್ಟ ಪ್ರಭಾವ ತಗ್ಗಿಸಬಹುದು, ಲಕ್ಷ್ಮಿಯ ಕೃಪೆಯಿಂದ ಆರ್ಥಿಕ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು. ಈ ದಿನ ಲಕ್ಷ್ಮಿಗೆ ಬಿಳಿ ಹೂಗಳನ್ನು ಅರ್ಪಿಸಿ, ಅಕ್ಕಿ ಪಾಯಸ ನೈವೇದ್ಯ ಇಡಿ.

 ಶುಕ್ರ ದುರ್ಬಲ ಸ್ಥಾನದಲ್ಲಿರುವ 3 ಗ್ರಹಗಳು

ಶುಕ್ರ ದುರ್ಬಲ ಸ್ಥಾನದಲ್ಲಿರುವ 3 ಗ್ರಹಗಳು

ಕರ್ಕ ರಾಶಿ

ಶುಕ್ರವು ಕರ್ಕ ರಾಶಿಯವರ 4ನೇ ಮತ್ತಿ 11ನೇ ಮನೆಯ ಅಧಿಪತಿ, ಈ ಸಂಚಾರದಲ್ಲಿ 6ನೇ ಮನೆಯಲ್ಲಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ತಾಯಿ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿವಹಿಸಬೇಕಾಗಿದೆ. ಏಕೆಂದರೆ ಈ ಸಮಯದಲ್ಲಿ ತಾಯಿಯ ಆರೋಗ್ಯದಲ್ಲಿ ತುಂಬಾನೇ ಏರುಪೇರು ಉಂಟಾಗಬಹುದು.

ರಹಸ್ಯ ವ್ಯವಹಾರಗಳು ಅಥವಾ ಅನೈತಿಕ ಸಂಬಂಧದಿಂದ ಸಮಾಜದ ಎದುರು ತಲೆತಗ್ಗಿಸಬೇಕಾಗುವುದು, ಇಂಥ ಕಾನೂನುಬಾಹಿರ ವಿಷಯಗಳಿಂದ ದೂರವಿರಿ. ಶುಕ್ರ 6ನೇ ಮನೆಯಲ್ಲಿ ಇರುವುದರಿಂದ ನೀವು ಸ್ನೇಹಿತರು ಅಂದುಕೊಂಡವರು ಶತ್ರುಗಳಾಗಬಹುದು, ಆದ್ದರಿಂದ ಯಾರನ್ನೂ ಕಣ್ಮುಚ್ಚಿ ನಂಬಬೇಡಿ. ನೀವು ಹೊಸ ಯಾವುದೇ ವ್ಯವಹಾರ ಮಾಡುವಾಗ ತುಂಬಾನೇ ಎಚ್ಚರವಹಿಸಬೇಕು.

ತುಲಾ ರಾಶಿ

ತುಲಾ ರಾಶಿ

ಶುಕ್ರ ನಿಮ್ಮ ಮೊದಲ ಹಾಗೂ 8ನೇ ಮನೆಯ ಅಧಿಪತಿ. ಈ ಸಂಚಾರದ ಸಮಯದಲ್ಲಿ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕಿರಿಯ ಸಹೋದರ ಆರೋಗ್ಯ ಗಮನಿಸಿ. ಈ ಅವಧಿಯಲ್ಲಿ ಖರ್ಚು ಹೆಚ್ಚಲಿದೆ, ಆರ್ಥಿಕ ತೊಂದರೆ ಉಂಟಾಗಬಹುದು, ಆದ್ದರಿಂದ ಅನಗ್ಯತ ದುಂದುವೆಚ್ಚಬೇಡ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಿಗೆ ಶುಕ್ರ 5 ಹಾಗೂ 10ನೇ ಮನೆಯ ಅಧಿಪತಿ. ಈ ಸಂಚಾರದ ಸಮಯದಲ್ಲಿ 12ನೇ ಮನೆಯಲ್ಲಿ ಸಾಗಲಿದೆ. ಇದು ನಷ್ಟದ ಮನೆ. ಆದ್ದರಿಂದ ರಫ್ತು-ಆಮದು ವ್ಯವಹಾರದಲ್ಲಿರುವ ಅಥವಾ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವ ಮಕರ ರಾಶಿಯವರುವರು ತುಂಬಾನೇ ಎಚ್ಚರವಹಿಸಬೇಕು.

ಈ ಸಂಚಾರದ ಅವಧಿಯಲ್ಲಿ ಪ್ರೇಮಿಗಳ ನಡುವೆ ತಪ್ಪು ಕಲ್ಪನೆ ಬರಬಹುದು. ಪ್ಲ್ಯಾನ್ ಮಾಡಿ ಹಣ ಖರ್ಚು ಮಾಡಿ, ಇಲ್ಲದಿದ್ದರೆ ಆರ್ಥಿಕ ತೊಂದರೆ ಬರಬಹುದು.

ಕೊನೆಯದಾಗಿ: ನಿಮ್ಮ ರಾಶಿಯಲ್ಲಿ ಶುಕ್ರನ ಕೆಟ್ಟ ಪರಿಣಾಮ ತಗ್ಗಿಸಲು ಮೇಲೆ ನೀಡಿರುವ ಪರಿಹಾರ ಮಾಡಿದರೆ ಒಳ್ಳೆಯದು.

English summary

Venus Transit in Sagittarius: Not Good For These 3 Zodaic Signs

Venus Transit in Sagittarius: Not Good For These 3 Zodaic Signs, What are The Remedies, Read on..
Story first published: Tuesday, December 6, 2022, 17:05 [IST]
X
Desktop Bottom Promotion