For Quick Alerts
ALLOW NOTIFICATIONS  
For Daily Alerts

ಶರನ್ನವರಾತ್ರಿ: ಘಟಸ್ಥಾಪನ ಮುಹೂರ್ತ ಯಾವಾಗ, ಸಮೃದ್ಧಿಗಾಗಿ ಈ ಮಂತ್ರಗಳನ್ನು ಪಠಿಸಿ

|

ಶರನ್ನನವರಾತ್ರಿಯ ಸಡಗರ-ಸಂಭ್ರಮಕ್ಕೆ ಇಡೀ ನಾಡು ಸಜ್ಜಾಗುತ್ತಿದೆ. ದೇವಿ ದುರ್ಗೆಯ ಒಂಭತ್ತು ಅವತಾರಗಳನ್ನು ಒಂಭತ್ತು ದಿನಗಳು ಆಚರಿಸುವ ಈ ಹಬ್ಬವನ್ನು ದುಷ್ಟತನ ವಿರುದ್ಧ ಒಳ್ಳೆಯತನದ ವಿಜಯದ ಸಂಕೇತವಾಗಿ ಆಚರಿಸಲಾಗುವುದು. ನವರಾತ್ರಿಯ ಪ್ರತಿಯೊಂದು ದಿನವೂ ದೇವಿಯ ಒಂದೊಂದು ರೂಪವನ್ನು ಆಚರಿಸಲಾಗುವುದು.

ವರ್ಷದಲ್ಲಿ ನವರಾತ್ರಿಯನ್ನು ನಾಲ್ಕು ಬಾರಿ ಆಚರಿಸಲಾಗುವುದು. ಅದರಲ್ಲಿ ಚೈತ್ರ ಹಾಗೂ ಶರನ್ನವರಾತ್ರಿ ತುಂಬಾ ಪ್ರಮುಖವಾಗಿದೆ. ಶರನ್ನವರಾತ್ರಿ ಅಶ್ವಿಯುಜ ಮಾಸದ ಶುಕ್ಲ ಪಕ್ಷದ ಪ್ರತಿಪದದಿಂದ ಪ್ರಾರಂಭ. ಈ ವರ್ಷ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 5ರವರೆಗೆ 9 ದಿನಗಳ ಕಾಲ ನವರಾತ್ರಿಯನ್ನು ಆಚರಿಸಲಾಗುವುದು. ಈ ವರ್ಷ ಘಟಸ್ಥಾಪನೆ ಎಷ್ಟು ಹೊತ್ತಿಗೆ ಮಾಡಲಾಗುವುದು, ಶರನ್ನವರಾತ್ರಿ ಮಹತ್ವವೇನು ಎಂದು ನೋಡೋಣ ಬನ್ನಿ:

ಪ್ರತಿಪದ ಪ್ರಾರಂಭ ಮತ್ತು ಮುಕ್ತಾಯ

ಪ್ರತಿಪದ ಪ್ರಾರಂಭ ಮತ್ತು ಮುಕ್ತಾಯ

ಪ್ರತಿಪದ ದಿನಾಂಕ ಪ್ರಾರಂಭ - 26 ಸೆಪ್ಟೆಂಬರ್ 2022, ಬೆಳಗ್ಗೆ 03.23ರಿಂದ

ಪ್ರತಿಪದದ ಮುಕ್ತಾಯ: ದಿನಾಂಕ - 27 ಸೆಪ್ಟೆಂಬರ್ 2022, ಬೆಳಗ್ಗೆ 03:08 ಕ್ಕೆ

ಘಟಸ್ಥಾಪನ ಮುಹೂರ್ತ

ಘಟಸ್ಥಾಪನ ಮುಹೂರ್ತ

ಬೆಳಗ್ಗೆ 06.17ರಿಮದ- 07.55ರವರೆಗೆ

ಅವಧಿ - 01 ಗಂಟೆ 38 ನಿಮಿಷಗಳು

ಘಟಸ್ಥಾಪನ ಅಭಿಜಿತ್ ಮುಹೂರ್ತ - ಬೆಳಗ್ಗೆ11:54 ರಿಂದ ಮಧ್ಯಾಹ್ನ12:42

ಅವಧಿ - 48 ನಿಮಿಷಗಳು

ಈ ಬಾರಿ ಆನೆಯ ಮೇಲೆ ಸವಾರಿ ಮಾಡುತ್ತಿದ್ದಾಳೆ ದುರ್ಗೆ ಮಾತೆ

ಈ ಬಾರಿ ಆನೆಯ ಮೇಲೆ ಸವಾರಿ ಮಾಡುತ್ತಿದ್ದಾಳೆ ದುರ್ಗೆ ಮಾತೆ

ಪ್ರತಿವರ್ಷ ದುರ್ಗಮಾತೆ ಒಂದೊಂದು ವಾಹನಗಳ ಮೇಲೆ ಸವಾರಿ ಮಾಡುತ್ತಾಳೆ, ಅದರ ಆಧಾರದ ಮೇಲೆ ಈ ವರ್ಷದ ಭವಿಷ್ಯ ಹೇಗಿರಲಿದೆ ಎಂದು ಹೇಳಲಾಗುವುದು. ಈ ವರ್ಷ ದುರ್ಗೆ ಮಾತೆ ಆನೆಯ ಮೇಲೆ ಸವಾರಿ ಮಾಡುತ್ತಿದ್ದಾಳೆ. ಆನೆಯ ಮೇಲೆ ದುರ್ಗೆ ದೇವಿಯು ಸವಾರಿ ಮಾಡುತ್ತಿರುವುದರಿಂದ ಈ ವರ್ಷ ಅತ್ಯಮತ ಮಂಗಳಕರವಾಗಿದೆ ಎಂದು ಪರಿಗಣಿಸಲಾಗಿದೆ. ದೇವಿ ಆನೆಯ ಮೇಲೆ ಸವಾರಿ ಮಾಡಿದರೆ ಅತ್ಯಂತ ಸಮೃದ್ಧಿ, ಸಂತೋಷ ತರುತ್ತಾಳೆ ಎಂದು ಹೇಳಲಾಗುವುದು.

ನವರಾತ್ರಿಯಲ್ಲಿ ಪೂಜಿಸುವ ದೇವಿಯ 9 ಅವತಾರಗಳು

ನವರಾತ್ರಿಯಲ್ಲಿ ಪೂಜಿಸುವ ದೇವಿಯ 9 ಅವತಾರಗಳು

ಶೈಲಪುತ್ರಿ

ಬ್ರಹ್ಮಚಾರಿಣಿ

ಚಂದ್ರಘಂಟ

ಕೂಶ್ಮಾಂಡ

ಸ್ಕಂದ ಮಾತಾ

ಕಾತ್ಯಾಯಿನಿ

ಕಾಳರಾತ್ರಿ ಮಹಾಮಾಯ

ಮಹಾಗೌರಿ

ಸಿದ್ಧಿದಾತ್ರಿ

ದುರ್ಗೆಯ ಮಂತ್ರಗಳು

ದುರ್ಗೆಯ ಮಂತ್ರಗಳು

ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣೀ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ದಧಾನ ಕರ ಪದ್ಮಾಭ್ಯಾಮ ಅಕ್ಷಮಲಾ ಕಾಮಂಡಳು |ದೇವಿ ||ಪ್ರಸೀದಾತುಮಾ||

ಓಂ ದೇವಿ ಶೈಲಪುತ್ರ್ಯೈ ನಮಃ॥

ಯಾ ದೇವಿ ಸರ್ವ ಭೂತೇಷು ಶಕ್ತಿ ರೂಪೇಣ ಸಂಸ್ಥಿತಃ|

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

ಧ್ಯಾನ ಮಂತ್ರ

ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್

ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್

ದುರ್ಗಾ ಶತ್ರು ಶಾಂತಿ ಮಂತ್ರ

ರಿಪವಾಹ ಸಂಕ್ಷ್ಯಾಮ್ ಯಂತಿ ಕಲ್ಯಾಣಮ್

ಚಾಪ್ ಪಾದಾಯತೇ ನಂದತೇ ಚ ಕುಲಮ್ ಪುನಾಸಮ್ ಮಹಾತ್ಮಮಮ್ ಮಾ ಶ್ರೀನು ಯಾನ್‌ಮನ್

ಸರ್ವ ಬಾಧಾ ಮುಕ್ತಿ ಮಂತ್ರ

ಸರ್ವ ಬಾಧಾ ವಿನಿರ್‌ಮುಕ್ತೊ ಧನ ಧ್ಯಾನ ಸುತನ್‌ವಿತಃ

ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್‌ಶಯಃ

ದುರ್ಗಾ ದುಸ್ವಪ್ನ ನಿವಾರಣೆ ಮಂತ್ರ

ಶಾಂತಿ ಕರ್ಮಣಿ ಸರ್ವತ್ರ ತ ದುಃಸ್ವಪ್ನ ದರ್ಶನೆ

ಗೃಹ ಪೀಡಸು ಚೊಗ್ರಾಸು ಮಹಾತ್ಮಯಾನ್ ಶ್ರೀನು ಯಾನ್‌ಮಮ್

English summary

Shardiya Navratri 2022 Dates And Ghatasthapana Muhurat Time, Significance and Rituals in Kannada

Shardiya Navratri: Here are information about dayes, ghatsthapana muhurat timing and significance read on
X
Desktop Bottom Promotion