Latest Updates
-
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು
ಶ್ರವಣ ನಕ್ಷತ್ರದಿಂದ ಧನಿಷ್ಠ ನಕ್ಷತ್ರಕ್ಕೆ ಶನಿ ಸಂಚಾರ: ಈ ರಾಶಿಗಳ ಮೇಲೆ ಶನಿಯ ಕೆಟ್ಟ ದೃಷ್ಟಿ ಇರಲ್ಲ
ಶನಿ ದೇವನ ಕೃಪೆ ನಮ್ಮ ಮೇಲೆ ಇದ್ದರೆ ಒಳಿತಾಗುತ್ತದೇ, ಅದೇ ಶನಿಯ ಕೋಪಕ್ಕೆ ಗುರಿಯಾದರೆ ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ಶನಿ ಸಾಡೇ ಸಾತಿ ಇದ್ದರೆ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುವುದು. ಶನಿಯ ರಾಶಿ ಬದಲಾವಣೆ ಕೂಡ 12 ರಾಶಿಗಳ ಮೇಲೆ ಪ್ರಭಾವ ಬೀರುವುದು.

ಆದರೆ ಶನಿಯ ರಾಶಿ ಬದಲಾವಣೆ ತುಂಬಾ ನಿಧಾನ, ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ, ಆದರೆ ಶನಿ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಚಲಿಸುವುದು.
ಶನಿಯು ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಸಂಚರಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಆದ್ದರಿಂದ ಶನಿಯ ನಕ್ಷತ್ರ ಬದಲಾವಣೆಯೂ ಜ್ಯೋತಿಷ್ಯ ದೃಷ್ಟಿಯಿಂದ ಪ್ರಮುಖವಾಗಿದೆ.

ಶನಿ ನಕ್ಷತ್ರ ಸಂಕ್ರಮಣ 2022
ಪಂಚಾಂಗದ ಪ್ರಕಾರ ಶನಿಯು ಪ್ರಸ್ತುತ ಶ್ರಾವಣ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ. ಶ್ರಾವಣ ನಕ್ಷತ್ರದಲ್ಲಿ ಶನಿದೇವನ ಸಂಕ್ರಮಣವು 22 ಜನವರಿ 2021 ರಂದು ಶನಿದೇವನು 18 ರಂದು ಆಗಿತ್ತು. ಈ ವರ್ಷ ಫೆಬ್ರವರಿ 2022, ಫೆ. 18ಕ್ಕೆ ಶನಿಯು ಧನಿಷ್ಠಾ ನಕ್ಷತ್ರಕ್ಕೆ ಸಾಗುತ್ತದೆ. ಶನಿಯು ಮುಂದಿನ ವರ್ಷ ಅಂದರೆ ಮಾರ್ಚ್ 15, 2023ರವರೆಗೆ ಇದೇ ರಾಶಿಯಲ್ಲಿ ಇರಲಿದೆ. .

ಧನಿಷ್ಠ ನಕ್ಷತ್ರ
ಪ್ರಾಚೀನ ಭಾರತದಲ್ಲಿ ಧನಿಷ್ಠಾವನ್ನು ಶ್ರಾವಿಷ್ಠ ಎಂದು ಕರೆಯಲಾಗುತ್ತಿತ್ತು. ಧನಿಷ್ಠ ಎಂದರೆ ಸಂಪತ್ತು ತುಂಬಿರುವುದು ಎಂದರ್ಥ. ಈ ನಕ್ಷತ್ರವು ಮಕರ ಮತ್ತು ಕುಂಭ ರಾಶಿಯನ್ನು ಸಂಪರ್ಕಿಸುವ ನಕ್ಷತ್ರವಾಗಿದೆ.

ಶನಿಯ ರಾಶಿ ಬದಲಾವಣೆ
ಪಂಚಾಂಗದ ಪ್ರಕಾರ 2022 ಏಪ್ರಿಲ್ 29ಕ್ಕೆ ಶನಿಯು ರಾಶಿಯನ್ನು ಬದಲಾಯಿಸಲಿದೆ. ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಸಾಗುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯ ಅಧಿಪತಿ ಶನಿದೇವ. ಶನಿಯು ಅಶುಭವಾಗಿರುವಾಗ ವಿಶೇಷ ಕಾಳಜಿ ವಹಿಸಬೇಕು. ಇದರೊಂದಿಗೆ ಸಾಡೇಸತಿ ಮತ್ತು ಶನಿದೇವರ ದೈಯ್ಯಾ ಸಮಯದಲ್ಲಿಯೂ ಜಾಗರೂಕರಾಗಿರಬೇಕು, ತಪ್ಪು ಕೆಲಸಗಳಿಂದ ದೂರವಿರಬೇಕು. ಮಂಗಳವಾರ ಮತ್ತು ಶನಿವಾರದಂದು ಶನಿದೇವನನ್ನು ಪೂಜಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.
ಶನಿ ದೈಯ್ಯಾ ಸಮಯದಲ್ಲಿ ಈ 4 ರಾಶಿಗಳು ಹುಷಾರಾಗಿರಬೇಕು

ತುಲಾ ರಾಶಿ:
ತುಲಾ ರಾಶಿಯವರು ಈ ಸಮಯದಲ್ಲಿ ಶನಿ ಧೈಯದಿಂದ ಬಳಲುತ್ತಿದ್ದಾರೆ. ಆದರೆ ಈ ವರ್ಷ ನೀವು ಶನಿಯ ಈ ತೊಂದರೆಯಿಂದ ಮುಕ್ತರಾಗುತ್ತೀರಿ. 29ನೇ ಏಪ್ರಿಲ್ 2022 ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದಾಗ, ನೀವು ಶನಿ ದೋಷದಿಂದ ಮುಕ್ತರಾಗುತ್ತೀರಿ

ಧನು ರಾಶಿ :
ಈ ಸಮಯದಲ್ಲಿ ಈ ರಾಶಿಯವರಿಗೆ ಶನಿ ಸಾಡೇ ಸತಿಯ ಕೊನೆಯ ಘಟ್ಟ ನಡೆಯುತ್ತಿದೆ. ಇದು ಶನಿದೇವನ ನೆಚ್ಚಿನ ರಾಶಿ. ಈ ರಾಶಿಯ ಅಧಿಪತಿ ಗುರುವಿಗೆ ಶನಿಯು ಅವನ ಶತ್ರುವೂ ಅಲ್ಲ ಅಥವಾ ದೃಢ ಮಿತ್ರನೂ ಅಲ್ಲ ಇದರಿಂದಾಗಿ ಶನಿಯು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ನಂಬಲಾಗಿದೆ. 29ನೇ ಏಪ್ರಿಲ್ 2022 ರಂದು ಧನು ರಾಶಿಯವರಿಗೆ ಶನಿ ಸಾಡೇ ಸತಿಯಿಂದ ಮುಕ್ತಿ ಸಿಗಲಿದೆ.

ಮಕರ ರಾಶಿ:
ಶನಿ ದೇವನು ಈ ರಾಶಿಯ ಅಧಿಪತಿ. ಸದ್ಯ ನಿಮ್ಮ ಮೇಲೆ ಎರಡನೇ ಹಂತದ ಶನಿ ಸಾಡೇ ಸತಿ ನಡೆಯುತ್ತಿದೆ. ಏಕೆಂದರೆ ಶನಿದೇವನು ಈ ರಾಶಿಯ ಅಧಿಪತಿಯಾಗಿರುವುದರಿಂದ ಶನಿಯು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಮಕರ ರಾಶಿಯವರು ಮಾರ್ಚ್ 29, 2025 ರಂದು ಶನಿ ಸಾಡೇ ಸತಿಯಿಂದ ಮುಕ್ತಿ ಪಡೆಯುತ್ತಾರೆ.

ಕುಂಭ ರಾಶಿ:
ಈ ರಾಶಿಯವರಿಗೆ ಶನಿ ಸಾಡೇ ಸತಿಯ ಮೊದಲ ಘಟ್ಟ ನಡೆಯುತ್ತಿದೆ. ಶನಿದೇವನು ಈ ರಾಶಿಯ ಅಧಿಪತಿ. 2027 ರಲ್ಲಿ ಶನಿ ಸಾಡೇಸಾತಿಯಿಂದ ನೀವು ಸ್ವಾತಂತ್ರ್ಯವನ್ನು ಪಡೆಯುತ್ತೀರಿ. ಅಲ್ಲಿಯವರೆಗೆ ನೀವು ಎಲ್ಲದರಲ್ಲೂ ಜಾಗರೂಕರಾಗಿರಬೇಕು.

ಮೀನ ರಾಶಿ:
ಪ್ರಸ್ತುತ, ಈ ರಾಶಿಯ ಜನರು ಶನಿಯ ದಶಾದ ಹಿಡಿತದಲ್ಲಿಲ್ಲ, ಆದರೆ ಏಪ್ರಿಲ್ 29, 2022 ರಿಂದ, ಶನಿ ಸಾಡೇ ಸತಿ ನಿಮ್ಮ ಮೇಲೆ ಪ್ರಾರಂಭವಾಗಲಿದೆ. ಈ ರಾಶಿಯ ಮೇಲೂ ಶನಿಯು ಕೆಟ್ಟ ಪರಿಣಾಮ ಬೀರುವುದಿಲ್ಲ.



Click it and Unblock the Notifications
