For Quick Alerts
ALLOW NOTIFICATIONS  
For Daily Alerts

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಸೇನಾನಿಗಳ ನೆನಪು

|

ಜುಲೈ.26 ಕಾರ್ಗಿಲ್ ವಿಜಯ ದಿವಸ. ಕಾರ್ಗಿಲ್ ಯುದ್ಧ ಅಥವಾ ಆಪರೇಷನ್ ವಿಜಯದಲ್ಲಿ ಭಾರತದ ಗೆಲುವನ್ನು ಆಚರಿಸಲು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. 1999ರಲ್ಲಿ ಮೇ 3ರಿಂದ ಜುಲೈ 26ರ ತನಕ ಪಾಕಿಸ್ತಾನ ವಿರುದ್ಧ ಭಾರತೀಯ ಸೈನಿಕರು ಕಾರ್ಗಿಲ್ ನಲ್ಲಿ ಯುದ್ಧ ಮಾಡಿದರು. ಜಮ್ಮುಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಈ ಯುದ್ಧವು ಲೈನ್ ಆಫ್ ಕಂಟ್ರೋಲ್(ಎಲ್ ಒಸಿ) ಉಲ್ಲಂಘನೆ ವೇಳೆ ನಡೆದಿದೆ. ಭಾರತವು ವಿಜಯಿಯಾದ ಈ ಯುದ್ಧ ದಿನವನ್ನು ಜುಲೈ 26ರನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಣೆ ಮಾಡುತ್ತದೆ.

ಹಲವಾರು ಮಂದಿ ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡ ಪರಿಣಾಮವಾಗಿ ಈ ಗೆಲುವು ಬಂದಿದೆ. ಸೈನಿಕರ ಈ ಬಲಿದಾನವು ಭಾರತೀಯರೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಮತ್ತು ಕಾರ್ಗಿಲ್ ದಿವಸವನ್ನು ತುಂಬಾ ಭಾವನಾತ್ಮಕವಾಗಿ ಕೂಡ ಈ ದಿನ ಆಚರಣೆ ಮಾಡಲಾಗುತ್ತದೆ.

Kargil War

ಹಲವಾರು ಕುಟುಂಬಗಳು ತಮ್ಮ ಮಗ, ಸೋದರ ಮತ್ತು ಮಕ್ಕಳು ತಮ್ಮ ತಂದೆ ಕಳೆದುಕೊಂಡಿದ್ದಾರೆ. ಇವರ ದುಃಖಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದಾಗ್ಯೂ, ಸೈನಿಕರಷ್ಟೇ ಅವರ ಕುಟುಂಬಗಳು ಕೂಡ ಧೈರ್ಯಶಾಲಿಯಾಗಿ ತಮ್ಮ ದುಃಖ ಸಹಿಸಿಕೊಂಡಿದ್ದಾರೆ. ತಮ್ಮ ಕೊನೆಯ ಉಸಿರು ಇರುವ ತನಕವೂ ಶತ್ರುಗಳ ವಿರುದ್ಧ ಹೋರಾಡಿದ್ದಾರೆ. ಕಾರ್ಗಿಲ್ ವಿಜಯ ದಿವಸದ ಆಚರಣೆಯ ಸಂದರ್ಭದಲ್ಲಿ ಈ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ನಮ್ಮ ಕೆಲವು ವೀರ ಸೈನಿಕರ ನೆನಯುವ.

ಕ್ಯಾಪ್ಟನ್ ವಿಜಯ್ ಬಾತ್ರಾ

ಭಾರತದ ಅತೀ ಉನ್ನತ ಮತ್ತು ಪ್ರತಿಷ್ಠಿತ ಶೌರ್ಯ ಪ್ರಶಸ್ತಿಯಾಗಿರುವಂತಹ ಪರಮ ವೀರ ಚಕ್ರದಿಂದ ಗೌರವಿಸಲಾಗಿದೆ. ಭಾರತದ ಇತಿಹಾಸದಲ್ಲಿ ತುಂಬಾ ಕಠಿಣವಾಗಿದ್ದಂತಹ ಆಪರೇಷನ್ ನ್ನು ಅವರು ಮುನ್ನಡೆಸಿದ್ದರು. ಇವರ ಶೌರ್ಯ ಮತ್ತು ಕಳೆಗುಂದದ ಸ್ಪೂರ್ತಿಯನ್ನು ನೋಡಿದ್ದ ಪಾಕಿಸ್ತಾನದ ಸೇನೆ ಕೂಡ ಇದನ್ನು ಶೇರ್ ಶಾ'' ಎಂದು ಕರೆದಿತ್ತು.

ಕ್ಯಾಪ್ಟನ್ ಅನುಜ್ ನಯ್ಯರ್

1997ರಲ್ಲಿ ಅನುಜ್ ನಯ್ಯರ್ ಅವರು ಭಾರತೀಯ ಸೇನೆಯ 17ನೇ ಬ್ಯಾಟಲಿಯನ್ ನ ಜಟ್ ರೆಜಿಮೆಂಟ್ ನ್ನು ಸೇರಿಕೊಂಡಿದ್ದರು. ಪಾಯಿಂಟ್ 4875ಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವೇಳೆ ಇವರು ತಮ್ಮ ಪ್ರಾಣ ಕಳೆದುಕೊಂಡರು. ಪರ್ವತದ ಶಿಖರದಲ್ಲಿದ್ದ ಈ ಪಾಯಿಂಟ್ ನ್ನು ರಕ್ಷಿಸುವುದು ಭಾರತೀಯ ಸೇನೆಯ ಕಾರ್ಯತಂತ್ರದಿಂದ ಇದು ಅತೀ ಮಹತ್ವದ್ದಾಗಿತ್ತು. ಶತ್ರುಗಳು ಗ್ರೇನೇಡ್ ಹಾಕಿ ಉಡಾಯಿಸಿದ ರಾಕೆಟ್ ನಿಂದ ಅವರು ಗಾಯಗೊಂಡರು. ಗಾಯಾಳುವಾದರೂ ಅವರು ತನ್ನ ಬ್ಯಾಟಲಿಯನ್ ನ್ನು ಮುಂದಕ್ಕೆ ಕೊಂಡೊಯ್ದು ಪಾಯಿಂಟ್ 4875ಯಲ್ಲಿ ಕೊನೆಯ ಬಂಕರ್ ನ್ನು ಸ್ಥಾಪಿಸಿದ್ದರು. ಇದರ ಬಳಿಕ ಅವರು ಕೊನೆಯುಸಿರೆಳೆದರು. ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಭಾರತದ ಎರಡನೇ ಅತೀ ಪ್ರತಿಷ್ಠಿತ ಶೌರ್ಯ ಪ್ರಶಸ್ತಿ ಮಹಾವೀರ ಚಕ್ರದಿಂದ ಅವರನ್ನು ಸನ್ಮಾನಿಸಲಾಯಿತು.

ಕ್ಯಾಪ್ಟನ್ ವಿಜಯಾಂತ್ ಥಾಪರ್

ಸೇನಾನಿ ಕುಟುಂಬದಲ್ಲಿ ಜನಿಸಿದ ವಿಜಯಾಂತ್ ಥಾಪರ್ ಅವರು ತನ್ನ ತಂದೆಯನ್ನು ಮಾದರಿಯನ್ನಾಗಿಸಿಕೊಂಡಿದ್ದರು. ಅವರಿಗೆ ಮೂರು ಪ್ರದೇಶಗಳಾಗಿರುವಂತಹ ತ್ರೀ ಪಿಂಪಲ್ಸ್, ಕನೋಲ್ ಮತ್ತು ಲೋನೆ ಹಿಲ್ ಪ್ರದೇಶವನ್ನು ಮರುವಶಪಡಿಸಿಕೊಳ್ಳುವಂತಹ ಜವಾಬ್ದಾರಿ ನೀಡಲಾಗಿತ್ತು. 1999ರ ಜೂನ್ 28ರಂದು ಈ ತುಕುಡಿ ಮೇಲೆ ಶತ್ರುಗಳು ದಾಳಿ ಮಾಡಿದರು. ಕನೋಲ್ ಪ್ರದೇಶಕ್ಕೆ ತುಂಬಾ ಹತ್ತಿರವಾಗಿದ್ದ ವೇಳೆ ನಡೆದ ಸ್ಫೋಟದಲ್ಲಿ ಕ್ಯಾಪ್ಟನ್ ವಿಜಯಾಂತ್ ಥಾಪರ್ ಅವರು ಗಾಯಗೊಂಡರು. ಅವರು ತನ್ನ 22ನೇ ವಯಸ್ಸಿನಲ್ಲಿ ಹುತಾತ್ಮರಾದರು ಮತ್ತು ಅವರಿಗೆ ವೀರ ಚಕ್ರ ನೀಡಿ ಗೌರವಿಸಲಾಗಿದೆ. ವಿಜಯಾಕಾಂತ್ ಅವರ ಹಮ್ಮೆಯ ತಂದೆ ತನ್ನ ಮಾತುಗಳನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ. ದೇಶವು ಯುವ ವಿಜಯಕಾಂತ್ ರಿಂದ ಏನು ನಿರೀಕ್ಷೆ ಮಾಡಿದೆಯೋ ಅದನ್ನು ನೀಡಿದ್ದಾರೆ. ಕಾರ್ಗಿಲ್ ಯುದ್ಧವು ಭಾರತ ಇತಿಹಾಸದ ಅತೀ ಉತ್ತಮ ಯುದ್ಧವಾಗಿದೆ. ವಿಜಯಕಾಂತ್ ಅವರಂತಹ ಸೇನಾನಿಗಳು ಶೌರ್ಯವನ್ನು ಕಲಿಸಿದ್ದಾರೆ ಮತ್ತು ದೇಶದ ಜನರು ತಮ್ಮ ಪ್ರೀತಿ ಹಾಗೂ ಬೆಂಬಲವನ್ನು ತೋರಿಸಿದ್ದಾರೆ. ಅವರು ಮಾಡಿರುವ ಕಾರ್ಯದ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಆದರೆ ಯುವ ಪುತ್ರನನ್ನು ಕಳೆದುಕೊಳ್ಳುವುದು ತುಂಬಾ ನೋವಿನ ಸಂಗತಿ.''

ಕ್ಯಾಪ್ಟನ್ ಸೌರಭ್ ಕಾಲಿಯಾ

ಇವರು ಭಾರತೀಯ ಸೇನೆಯ ಗಸ್ತು ಪಡೆಯ ಭಾಗವಾಗಿದ್ದರು ಮತ್ತು ಕೆಲವು ಮಂದಿ ಸೈನಿಕರನ್ನು ಇವರನ್ನು ಪಾಕಿಸ್ತಾನದ ಸೇನೆಯು ಸೆರೆ ಹಿಡಿದಿತ್ತು. ಇವರನ್ನು ಯುದ್ಧ ಕೈದಿಗಳೆಂದು ಪರಿಗಣಿಸಲಾಗಿತ್ತು ಮತ್ತು ತುಂಬಾ ಹಿಂಸೆ ನೀಡಿದ ಬಳಿಕ ಕೊಲ್ಲಲಾಗಿತ್ತು. ಯುದ್ಧ ಸಂದರ್ಭದಲ್ಲಿ ನೀಡುವಂತಹ ಈ ಹಿಂಸೆಗೆ ಕೊನೆ ಹಾಡಬೇಕೆಂಬ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಅದಾಗ್ಯೂ, ಪಾಕಿಸ್ತಾನವು ಅನೈತಿಕ ರೀತಿಯಲ್ಲಿ ಇವರನ್ನು ಕೊಂದರೂ ಅದನ್ನು ನಿರಾಕರಿಸುತ್ತಲೇ ಬಂದಿದೆ.

image source

ಮೇಜರ್ ಪದ್ಮಪಾನಿ ಆಚಾರ್ಯ

ಮೇಜರ್ ಆಚಾರ್ಯ ಅವರು ರಾಜಪುತ ರೈಫಲ್ಸ್ ನ ಅಧಿಕಾರಿ ಆಗಿದ್ದರು ಮತ್ತು ಕಾರ್ಗಿಲ್ ಯುದ್ಧದ ಸಮಯದಲ್ಲಿ 1999ರ ಫೆಬ್ರವರಿ 28ರಂದು ಅವರು ಪ್ರಾಣ ಕಳೆದುಕೊಂಡರು. ಈ ವೀರ ಸೇನಾನಿಗೆ ನೆಲಬಾಂಬ್, ಸ್ವೀಪಿಂಗ್ ಮೆಷಿನ್ ಗನ್ ಮತ್ತು ಇತರ ಆಯುಧಗಳಿಂದ ತುಂಬಿದ್ದ ಶತ್ರುಗಳ ಜಾಗವನ್ನು ವಶಪಡಿಸಿಕೊಳ್ಳುವಂತಹ ಜವಾಬ್ದಾರಿ ನೀಡಲಾಗಿತ್ತು. ಇವರು ತನ್ನ ಜೀವನ ಹಂಗು ತೊರೆದು ಅಪಾಯವನ್ನು ಲೆಕ್ಕಿಸದೆ ಮುನ್ನಡೆದಿದ್ದರು. ಇವರು ತಾಯಿ, ಪತ್ನಿ ಮತ್ತು ಅವರ ಸಾವಿನ ಬಳಿಕ ಜನಿಸಿದ ಅಪರಾಜಿತ ಎಂಬ ಮಗಳನ್ನು ಅಗಲಿದ್ದಾರೆ. ಅವರ ತಾಯಿಯ ಮಾತುಗಳು, ತಾಯಿಯಾಗಿ ನನಗೆ ಖಂಡಿತವಾಗಿಯೂ ತುಂಬಾ ಬೇಸರವಾಗಿದೆ ಮತ್ತು ಮನಸ್ಸಿಗೆ ನೋವಾಗಿದೆ. ಆದರೆ ದೇಶಭಕ್ತೆಯಾಗಿ ನನ್ನ ಮಗನ ಬಗ್ಗೆ ಹೆಮ್ಮೆಯಿದೆ. ಆತ ಅಮರ. ಸೇನೆಗೆ ಸೇರುವ ವೇಳೆ ಸತ್ತರೂ ನೀವು ಅಳಬಾರದು ಎಂದು ಆತ ನನ್ನಲ್ಲಿ ವಚನ ತೆಗೆದುಕೊಂಡಿದ್ದ.''

ಲ್ಯಾನ್ಸ್ ನಾಯಕ್ ನಿರ್ಮಲ್ ಸಿಂಗ್

ಇವರು 8 ಸಿಕ್ಖ್ ರೆಜಿಮೆಂಟ್ ಗೆ ಸೇರಿದ್ದರು ಮತ್ತು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 1999ರಲ್ಲಿ ಜುಲೈ 6ರಂದು ಅವರು ಟೈಗರ್ ಹಿಲ್ ನಲ್ಲಿ ಪ್ರಾಣ ಕಳೆದುಕೊಂಡಿದ್ದರು. ಇವರ ಸಾವಿನ ವೇಳೆ ಅವರ ಮಗನಿಗೆ ಕೇವಲ ಮೂರು ವರ್ಷ ಮಾತ್ರ. ಅವರ ಪತ್ನಿ ಜಸ್ವಿಂದರ್ ಕೌರ್ ಮಗನನ್ನು ಬೆಳೆಸಿದ್ದಾರೆ. ಪತಿಯ ಯೂನಿಫರ್ಮ್ ನ್ನು ಅವರು ತುಂಬಾ ಗೌರವಿಸುತ್ತಾರೆ. ಈ ಯೂನಿಫಾರ್ಮ್ ಅವರ ಗೌರವಾಗಿದೆ ಮತ್ತು ಈಗ ನನ್ನ ಸಂಗಾತಿಯಾಗಿದೆ. ನಿಯಮಿತವಾಗಿ ಇದನ್ನು ತೊಳೆದು ಇಸ್ತ್ರಿ ಹಾಕಿಡುತ್ತೇನೆ ಮತ್ತು ನನಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅನಿಸಿದ ವೇಳೆ ಅದರತ್ತ ನೋಡುತ್ತೇನೆ. ನಿಜವಾದ ಸೈನಿಕರ ಯೂನಿಫಾರ್ಮ್ ನನಗೆ ಲೈಟ್ ಹೌಸ್ ಇದ್ದಂತೆ. ನನ್ನ ಮಗನನ್ನು ಕೂಡ ನಿಜವಾದ ಸೈನಿಕ ಪಥದಲ್ಲಿ ಸಾಗಿಸಲು ಪ್ರಯತ್ನಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ವೀರ ಸೇನಾನಿಗಳ ಕಥೆಗಳು ಖಂಡಿತವಾಗಿಯೂ ನಮಗೆ ಪ್ರೇರಣೆ ನೀಡುವುದು ಮತ್ತು ಭಾರತದ ಭವಿಷ್ಯ ನಿರ್ಮಾಣಕ್ಕೆ ಇದು ನೆರವಾಗುವುದು.

English summary

Remembering The Martyrs Of Kargil War

Kargil Vijay Diwas is celebrated to commemorate the victory of India's Operation Vijay in Kargil War. The most significant conflict between India and Pakistan took place between May 3 and July 26, 1999 in the Kargil district of Kashmir. Ever since, July 26 is observed as Kargil Vijay Diwas in India. On this occasion, we bring a few stories of such legendary heroes.
X
Desktop Bottom Promotion