For Quick Alerts
ALLOW NOTIFICATIONS  
For Daily Alerts

ಪಿತೃವಾಕ್ಯ ಪರಿಪಾಲಕ ಪರಶುರಾಮ ಜಯಂತಿ ಬಗ್ಗೆ ನಿಮಗೆಷ್ಟು ಗೊತ್ತು?

|

ಪರಶುರಾಮ, ತಂದೆಯ ಮಾತಿಗಾಗಿ ತಾಯಿಯ ಶಿರವನ್ನೇ ಕಡಿದು ಪಿತೃಭಕ್ತಿಯನ್ನು ಮೆರೆದ ಮಹಾನ್ ವ್ಯಕ್ತಿ. ಅಲ್ಲದೇ ಪರಶುರಾಮ ಒಬ್ಬ ಬ್ರಾಹ್ಮಣ ಯೋಧನಾಗಿ ಕ್ಷತ್ರಿಯರನ್ನೇ ಸದೆಬಡಿದ ಯೋಧನಾಗಿ ಪ್ರಸಿದ್ಧನಾದವನು. ಏಪ್ರಿಲ್ 22ರಂದು ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ಪರಶುರಾಮನ ಜಯಂತಿ ಆಚರಿಸಲಾಗುವುದು.

Parshuram Jayanthi: Significance, Rituals and History

ಪ್ರತಿವರ್ಷ ಪರಶುರಾಮ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನದಂದು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನವನ್ನು ಪರಶುರಾಮ ಜಯಂತಿ ಎಂದೇ ಆಚರಿಸಲಾಗುತ್ತದೆ. ಈ ದಿನ ಶೋಭಾಯಾತ್ರೆ ಮಾಡಲಾಗುವುದು. ಪರಶುರಾಮ ವಿಷ್ಣುವಿನ ಆರನೇ ಅವತಾರ. ಭ್ರಿಗು ರಾಜವಂಶದ ರಾಜ ಪ್ರಸೇನ್ಜಿತ ಅವರ ಮಗಳು ರೇಣುಕಾ ಮತ್ತು ಮಹರ್ಷಿ ಜಮದಗ್ನಿ ದಂಪತಿಗೆ ಮಗನಾಗಿ ಜನಿಸಿದವ ಪರಶುರಾಮ. ಜಮದಗ್ನಿ ಮತ್ತು ರೇಣುಕಾ ಅವರ ಐದನೇ ಮಗನಾದ ಪರಶುರಾಮನಿಗೆ ರುಮನ್ವಂತ, ಸುಶೇನ, ವಿಶ್ವ ಮತ್ತು ವಿಶ್ವವಾಸು ಎಂಬ ನಾಲ್ಕು ಹಿರಿಯ ಸಹೋದರರು ಇದ್ದರು.

ಭಗವಾನ್ ಪರಶುರಾಮ

ಭಗವಾನ್ ಪರಶುರಾಮ

ಪರಶುರಾಮ ಶಿವನಿಗೆ ಪ್ರಿಯವಾದವನು. ಶಿವನಿಗೆ ತನ್ನನ್ನು ತಾನು ಭಕ್ತಿಯಿಂದ ಅರ್ಪಿಸಿಕೊಂಡವನು. ಹಾಗಾಗಿಯೇ ಶಿವನಂಥ ಶಕ್ತಿ ಅವನಿಗೆ! ಪರಶುರಾಮ ಅಪಾರ ಜ್ಞಾನಿ. ಆತ ಒಬ್ಬ ಮಹಾನ್ ಯೋಧನೂ ಕೂಡ ಹೌದು. ಪರಶುರಾಮ ಜಯಂತಿಯನ್ನು ಭಾರತದಾದ್ಯಂತ ಬಹಳ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಹವನ, ಪೂಜಾ ವಿಧಿವಿಧಾನಗಳ ಜೊತೆಗೆ ಪರಶುರಾಮ ಶೋಭಯಯಾತ್ರೆ ಯನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ.

ಮೂಲತಃ, ಪರಶುರಾಮನನ್ನು ರಾಮ ಎಂಬ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಶಿವನು ಪರಶುರಾಮನಿಗೆ 'ಪರಶು' ಎಂಬ ಅತೀಂದ್ರಿಯ ಆಯುಧವನ್ನು ಕೊಡುತ್ತಾನೆ. ಇದರಿಂದಾಗಿ ಪರಶುರಾಮ ಎಂದು ಕರೆಯಲಾಗುತ್ತದೆ. ಪುರಾಣಗಳ ನಂಬಿಕೆಗಳ ಪ್ರಕಾರ, ಪರಶುರಾಮ ಕ್ಷತ್ರಿಯರನೇ ಸೋಲಿಸಿದವನು. ಕ್ಷತ್ರಿಯರ ಹೆಮ್ಮೆಯ ಜಗತ್ತನ್ನು ಮುಕ್ತಗೊಳಿಸುವ ಸಲುವಾಗಿಯೇ ಪರಶುರಾಮ ಜನಿಸಿದನು ಎಂದು ಹೇಳಲಾಗುತ್ತದೆ.

ವೈಶಾಖ ಶುಕ್ಲ ಪಕ್ಷ ತೃತೀಯ ದಿನದಂದು ತ್ರೇತಾಯುಗ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ (ಭಗವದ್ಗೀತೆ), ಹೈದೇಯ ರಾಜವಂಶದ ರಾಜರನ್ನು ನಾಶಮಾಡಲು ಪರಶುರಾಮ ಜನ್ಮ ತಾಳಿದನು. ಮಾನವಕುಲದ ಹಿತಕ್ಕಾಗಿಯೇ ಬದುಕಲು ನಿರ್ಧಸಿದ್ದವನು ಪರಶುರಾಮ! ಅಗತ್ಯವಿರುವ ಜನರಿಗೆ, ಪರಶುರಾಮ ಸದಾ ಸಹಾಯಹಸ್ತ ಚಾಚುತ್ತಿದ್ದನು.

ಪರಶುರಾಮ ಜಯಂತಿಯ ಮಹತ್ವ

ಪರಶುರಾಮ ಜಯಂತಿಯ ಮಹತ್ವ

ದ್ವಾಪರ ಯುಗದಲ್ಲಿ, ಪರಶುರಾಮ ಒಬ್ಬ ಬ್ರಾಹ್ಮಣ ಯೋಧನಾಗಿದ್ದನು. ಅವನು ಶಿವನ ಮಹಾನ್ ಶಿಷ್ಯ ಎಂದೇ ಗುರುತಿಸಿಕೊಂಡಿದ್ದಾನೆ. ಪರಶುರಾಮ, ಶಿವನಿಂದ ಪಡೆದ ಪೌರಾಣಿಕ ಕೊಡಲಿಯಾದ 'ಪರಶು' ವನ್ನು ಹೊಂದಿದ್ದು, ಮಹಾಭಾರತ ಪಾತ್ರಗಳಾದ ದ್ರೋಣಾಚಾರ್ಯ, ಭೀಷ್ಮ ಮತ್ತು ಕರ್ಣರಿಗೆ ಮಾರ್ಗದರ್ಶಕನಾಗಿದ್ದನು.

ಒಂದು ದಂತಕಥೆಯ ಪ್ರಕಾರ, ವಿಷ್ಣು ತನ್ನ ಪರಶುರಾಮನ ಅವತಾರದಲ್ಲಿ ಕ್ಷತ್ರಿಯ ಜನಾಂಗದ ವಿಶ್ವಾಸಘಾತುಕತನವನ್ನು ಕೊನೆಗೊಳಿಸಿದನು ಮತ್ತು ರಾಕ್ಷಸ ರಾಜ ಕಿರತಾರ್ಜುನನನ್ನು ಸೋಲಿಸಿದನು. ಈ ಮೂಲಕ ಮಹಾ ವಿಷ್ಣುವು ಭೂಮಿಯ ಮೇಲೆ ಶಾಂತಿ ಮತ್ತು ಧರ್ಮವನ್ನು ಪುನಃಸ್ಥಾಪಿಸಿದನು ಎನ್ನಲಾಗುತ್ತದೆ. ಹೀಗಾಗಿ ಪರಶುರಾಮ ಜಯಂತಿಯ ದಿನವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನದಂದು ಭಕ್ತರು ದಿನವಿಡೀ ಉಪವಾಸ ಮಾಡುತ್ತಾರೆ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.

ಪರಶುರಾಮನ ಕಥೆ

ಪರಶುರಾಮನ ಕಥೆ

ಮಹಾ ವಿಷ್ಣುವು ಭಾರತೀಯ ಪುರಾಣ ಮತ್ತು ಧರ್ಮದಲ್ಲಿ ಅಖಂಡ ಸ್ಥಾನವನ್ನು ಪಡೆದಿದ್ದಾನೆ. ಶ್ರೀ ವಿಷ್ಣುವು ತನ್ನ ಅನೇಕ ಅವತಾರಗಳಿಗೆ ಹೆಸರುವಾಸಿಯಾಗಿದ್ದಾನೆ. ಪರಶುರಾಮ ಮಹಾ ವಿಷ್ಣುವಿನ ಆರನೇ ಅವತಾರ ಎಂದು ನಂಬಲಾಗಿದೆ. ಪರಶುರಾಮನ ಕಥೆ ತ್ರೇತಾ ಯುಗಕ್ಕೆ ಸೇರಿದೆ. ಪರಶುರಾಮ ಎಂಬ ಪದಕ್ಕೆ ಕೊಡಲಿಯೊಂದಿಗಿರುವ (ಹೊಂದಿರುವ) ಭಗವಾನ್ ರಾಮ ಎಂಬ ಅರ್ಥವಿದೆ.

ಪರಶುರಾಮನಿಗೆ ಸಂಬಂಧಿಸಿದ ಇನ್ನೊಂದು ಪುರಾಣ ಕಥೆಯೆಂದರೆ, ಒಮ್ಮೆ ರಾಜ ಕಾರ್ತವಿರ್ಯ ಸಹಸ್ರಾರ್ಜುನ ಮತ್ತು ಅವನ ಸೈನ್ಯವು ಪರಶುರಾಮನ ತಂದೆಯ ಮಾಂತ್ರಿಕ ಹಸುವಾದ 'ಕಾಮದೇನು' ವನ್ನು ಬಲವಂತವಾಗಿ ಅಪಹರಿಸಲು ಪ್ರಯತ್ನಿಸಿದರು.

ಆಚರಣೆಗಳು ಮತ್ತು ಕ್ರಿಯಾವಿಧಾನಗಳು

ಆಚರಣೆಗಳು ಮತ್ತು ಕ್ರಿಯಾವಿಧಾನಗಳು

ಭಕ್ತರು, ಪರಶುರಾಮ ಜಯಂತಿಯ ಹಿಂದಿನ ರಾತ್ರಿಯಿಂದ ಜಯಂತಿಯ ದಿನದವರೆಗೆ ಉಪವಾಸವನ್ನು ಮಾಡುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ, ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹಾವಿಷ್ಣುವಿನ ಭಕ್ತರು ರಾತ್ರಿಯಿಡೀ ಎಚ್ಚರವಾಗಿದ್ದು, ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತಾರೆ. ಈ ದಿನದಂದು ಬ್ರಾಹ್ಮಣರಿಗೆ ಫಲಾಹಾರವನ್ನು ದಾನ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.

ಪರಶುರಾಮ ಜಯಂತಿಯಂದು ಉಪವಾಸ ಮತ್ತು ಇತರ ಧಾರ್ಮಿಕ ಕಾರ್ಯಗಳನ್ನು ಮಾಡುವುದು ಶತಮಾನಗಳಿಂದ ಈ ದಿನದ ಗುರುತಾಗಿವೆ. ಈ ದಿನ ಮಾಡಿದ ಯಾವುದೇ ಶುಭ ಕಾರ್ಯವು ಫಲಪ್ರದ ಫಲಿತಾಂಶವನ್ನು ನೀಡುತ್ತದೆ. ಜೊತೆಗೆ ಈ ದಿನವನ್ನು ಬಹಳ ಶುಭವೆಂದು ಹೇಳಲಾಗುತ್ತದೆ.

ಆಚರಣೆಗಳು ಮತ್ತು ಕ್ರಿಯಾವಿಧಾನಗಳು

ಆಚರಣೆಗಳು ಮತ್ತು ಕ್ರಿಯಾವಿಧಾನಗಳು

ಭಕ್ತರು, ಪರಶುರಾಮ ಜಯಂತಿಯ ಹಿಂದಿನ ರಾತ್ರಿಯಿಂದ ಜಯಂತಿಯ ದಿನದವರೆಗೆ ಉಪವಾಸವನ್ನು ಮಾಡುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ, ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹಾವಿಷ್ಣುವಿನ ಭಕ್ತರು ರಾತ್ರಿಯಿಡೀ ಎಚ್ಚರವಾಗಿದ್ದು, ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತಾರೆ. ಈ ದಿನದಂದು ಬ್ರಾಹ್ಮಣರಿಗೆ ಫಲಾಹಾರವನ್ನು ದಾನ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.

ಪರಶುರಾಮ ಜಯಂತಿಯಂದು ಉಪವಾಸ ಮತ್ತು ಇತರ ಧಾರ್ಮಿಕ ಕಾರ್ಯಗಳನ್ನು ಮಾಡುವುದು ಶತಮಾನಗಳಿಂದ ಈ ದಿನದ ಗುರುತಾಗಿವೆ. ಈ ದಿನ ಮಾಡಿದ ಯಾವುದೇ ಶುಭ ಕಾರ್ಯವು ಫಲಪ್ರದ ಫಲಿತಾಂಶವನ್ನು ನೀಡುತ್ತದೆ. ಜೊತೆಗೆ ಈ ದಿನವನ್ನು ಬಹಳ ಶುಭವೆಂದು ಹೇಳಲಾಗುತ್ತದೆ.

ಪರಶುರಾಮನ ಬಗ್ಗೆ ಇನ್ನಷ್ಟು ಮಾಹಿತಿ

ಪರಶುರಾಮನ ಬಗ್ಗೆ ಇನ್ನಷ್ಟು ಮಾಹಿತಿ

ಪರಶುರಾಮನ ಇತರ ಹೆಸರುಗಳು: ಭಾರ್ಗವ ರಾಮ, ರಾಮಭದ್ರ

ಸಂಬಂಧ (ಅಫಿಲಿಯೇಶನ್): ವಿಷ್ಣುವಿನ ಆರನೇ ಅವತಾರ, ಪರಶುರಾಮನನ್ನು ದೇವರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ

ವಾಸಸ್ಥಾನ: ಮಹೇಂದ್ರಗಿರಿ, ಒರಿಸ್ಸಾ

ಶಸ್ತ್ರಾಸ್ತ್ರ: ಕೊಡಲಿ

ಪತ್ನಿ: ಧಾರಿಣಿ, ಅನಾಮಿಕಾ ಎಂದೂ ಕರೆಯುತ್ತಾರೆ

ಪೋಷಕರು: ಜಮದಗ್ನಿ (ತಂದೆ), ರೇಣುಕಾ (ತಾಯಿ)

English summary

Parshuram Jayanthi: Significance, Rituals and History

Here we are discussing about Parshuram Jayanthi: Significance, Rituals and History. Parshuram Jayanti is celebrated on Tritiya of Shukla Paksha, meaning the third day of Shukla Paksha. Lord Parshuram was born on Vaishakh Shukla Tritiya. Hence, this day is celebrated as Parshuram Jayanti. Read more.
X
Desktop Bottom Promotion