For Quick Alerts
ALLOW NOTIFICATIONS  
For Daily Alerts

ತಿನ್ನಲು ಯೋಗ್ಯವಾಗಿರುವ ವಿಶ್ವದ ಅತ್ಯಂತ ದುಬಾರಿ ಮೊಟ್ಟೆಗಳು ಇವೇ ನೋಡಿ..!

|

ನೈಸರ್ಗಿಕವಾಗಿ ಲಭ್ಯವಿರುವ ಪ್ರೋಟೀನ್‌ನ ಉತ್ತಮ ಮೂಲವೆಂದರೆ ಮೊಟ್ಟೆಗಳು... ಮೊಟ್ಟೆಗಳು ಕೇವಲ ಪ್ರೊಟೀನ್ ಅನ್ನು ಒದಗಿಸುವುದಲ್ಲದೇ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಸಮೃದ್ಧ ಮೂಲವಾಗಿದೆ. ಇದಕ್ಕೆ ಸಾಮಾನ್ಯವಾಗಿ ಎಲ್ಲರೂ ಸೇವಿಸೋದು ಕೋಳಿ ಮೊಟ್ಟೆಗಳನ್ನೇ.. ಆದರೆ ಕೋಳಿ ಮೊಟ್ಟೆಗಳ ಹೊರತಾಗಿಯೂ ಅನೇಕ ಮೊಟ್ಟೆಗಳು ತಿನ್ನಲು ಯೋಗ್ಯವಾಗಿವೆ. ಅಷ್ಟೇ ಅಲ್ಲ, ಕೋಳಿ ಮೊಟ್ಟೆಗಿಂತ ಬಹಳಷ್ಟು ದುಬಾರಿಯಾಗಿರುತ್ತವೆ. ಅಂತಹ ಮೊಟ್ಟೆಗಳ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ.

cover

ತಿನ್ನಲು ಯೋಗ್ಯವಾಗಿರುವ ಜಗತ್ತಿನ ದುಬಾರಿ ಮೊಟ್ಟೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಗಲ್ ಹಕ್ಕಿಯ ಮೊಟ್ಟೆ

ಗಲ್ ಹಕ್ಕಿಯ ಮೊಟ್ಟೆ

ಗಲ್ ಪಕ್ಷಿಯ ಮೊಟ್ಟೆಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿದೆ. ಈ ಮೊಟ್ಟೆಗಳು ಅಪರೂಪವಾಗಿದ್ದು, ವರ್ಷಕ್ಕೆ ಕೇವಲ 4 ವಾರಗಳವರೆಗೆ ಲಭ್ಯವಿರುತ್ತವೆ. ಇದು ದುಬಾರಿಯಾಗಿದ್ದು, ಬೇಯಿಸಿದಾಗ ಈ ಮೊಟ್ಟೆಗಳು ಅತ್ಯುತ್ತಮವಾದ ರುಚಿಯನ್ನು ಹೊಂದಿರುತ್ತವೆ. ಜೊತೆಗೆ ಸುವಾಸನೆಯಿಂದ ಕೂಡಿರುತ್ತವೆ. ಒಂದು ಮೊಟ್ಟೆಯ ಬೆಲೆ 800ರೂ.ಗಳವರೆಗೆ ಇರುತ್ತದೆ.

ಕ್ವಿಲ್ ಮೊಟ್ಟೆ

ಕ್ವಿಲ್ ಮೊಟ್ಟೆ

ಈ ಚಿಕ್ಕ ಚಿಕ್ಕ ಮೊಟ್ಟೆಗಳು ಬಹುಪಯೋಗಿಯಾಗಿದ್ದು, ಪ್ರತಿ ಡಜನ್‌ಗೆ ಸುಮಾರು 400 ರೂಗಳಿರುತ್ತವೆ. ಆದರೆ ಅವುಗಳಷ್ಟು ಒಬ್ಬರಷ್ಟೇ ಸೇವಿಸಬಹುದು. ಕಬ್ಬಿಣದಲ್ಲಿ ಸಮೃದ್ಧವಾಗಿರುವ ಈ ಮೊಟ್ಟೆಗಳು ಸಾಮಾನ್ಯ ಕೋಳಿ ಮೊಟ್ಟೆಯ ರುಚಿಯನ್ನು ಹೋಲುತ್ತವೆ. ಅಷ್ಟೇ ಅಲ್ಲ, ಇದನ್ನು ಬೇಗನೇ ಬೇಯಿಸಬಹುದು. ಹೆಚ್ಚಿನ ಸಮಯದ ಅವಶ್ಯಕತೆ ಇರುವುದಿಲ್ಲ.

ಎಮುವಿನ ಮೊಟ್ಟೆ

ಎಮುವಿನ ಮೊಟ್ಟೆ

ಈ ಮೊಟ್ಟೆಗಳು ಎಷ್ಟು ದೊಡ್ಡದಾಗಿದೆ ಎಂದರೆ ಒಂದು ಎಮು ಮೊಟ್ಟೆಯು ಒಂದು ಡಜನ್ ಅಥವಾ ಸುಮಾರು 15 ಕೋಳಿ ಮೊಟ್ಟೆಗಳಿಗೆ ಸಮನಾಗಿರುತ್ತದೆ. ಇದರಿಂದ ತಯಾರಿಸುವ ಆಮ್ಲೆಟ್‌ಗಳು ಬಹಳ ರುಚಿಕರವಾಗಿದ್ದು, ಒಂದು ಮೊಟ್ಟೆಯ ಆಮ್ಲೆಟನ್ನು ಹಲವಾರು ಜನರು ಸೇವಿಸಬಹುದು. ಈ ಮೊಟ್ಟೆಗಳು ರುಚಿ ಮತ್ತು ನೋಟ ಎರಡರಲ್ಲೂ ತುಂಬಾ ವಿಶಿಷ್ಟವಾಗಿದ್ದು, ಒಂದು ಎಮು ಮೊಟ್ಟೆಯು ನಿಮಗೆ ಸುಮಾರು 2000ರೂ.ಗಳಲ್ಲಿ ಸಿಗಬಹುದು.

ಟರ್ಕಿ ಮೊಟ್ಟೆ

ಟರ್ಕಿ ಮೊಟ್ಟೆ

ಟರ್ಕಿಗಳು ಮೊಟ್ಟೆಯಿಡಲು ಸಮಯ ತೆಗೆದುಕೊಳ್ಳುವುದರಿಂದ ಈ ಮೊಟ್ಟೆಗಳನ್ನು ವಿರಳವಾಗಿ ಮಾರಾಟ ಮಾಡಲಾಗುತ್ತದೆ. ಇವುಗಳು ವಾರಕ್ಕೆ ಒಂದೆರಡು ಮೊಟ್ಟೆಗಳನ್ನು ಮಾತ್ರ ಇಡಬಹುದು. ಟರ್ಕಿ ಮೊಟ್ಟೆಗಳು ಕೋಳಿ ಮೊಟ್ಟೆಯಂತೆಯೇ ಇರುತ್ತದೆಯಾದರೂ, ಕೋಳಿ ಮೊಟ್ಟೆಗಿಂತ ಹೆಚ್ಚು ಪೋಷಕಾಂಶವನ್ನು ಹೊಂದಿರುತ್ತದೆ. ನಿಮಗೂ ಟರ್ಕಿ ಮೊಟ್ಟೆ ತಿನ್ನುವ ಆಸೆಯಿದ್ದರೆ, ಒಂದು ಡಜನ್‌ಗೆ ಸುಮಾರು 3000ರೂ.ಗಳಷ್ಟು ವೆಚ್ಚ ತಗಲಬಹುದು.

ಬಾತುಕೋಳಿ ಮೊಟ್ಟೆ

ಬಾತುಕೋಳಿ ಮೊಟ್ಟೆ

ಈ ಪಟ್ಟಿಯಲ್ಲಿರುವ ಇತರ ವಿಧದ ಮೊಟ್ಟೆಗಳಂತೆ ಅಪರೂಪವಲ್ಲದಿದ್ದರೂ, ಬಾತುಕೋಳಿ ಮೊಟ್ಟೆಗಳು ಉತ್ತಮ ರುಚಿಯನ್ನು ಹೊಂದಿದ್ದು, ಸಾಮಾನ್ಯ ಮೊಟ್ಟೆಗಳಿಗಿಂತ ಹೆಚ್ಚು ವೆಚ್ಚವನ್ನು ಹೊಂದಿರುತ್ತವೆ. ಒಂದು ಡಜನ್ ಮೊಟ್ಟೆ ನಿಮಗೆ ಸುಮಾರು 1000ರೂ.ಗಳಲ್ಲಿ ಸಿಗಬಹುದು. ಬಾತುಕೋಳಿಯ ಮೊಟ್ಟೆಗಳು ಕೋಳಿ ಮೊಟ್ಟೆಗಳಿಗಿಂತ ದೊಡ್ಡದಾಗಿದ್ದು, ಹೆಚ್ಚಾಗಿ ರೈತರ ಮಾರುಕಟ್ಟೆಗಳಲ್ಲಿ ಕಂಡುಬರುತ್ತವೆ. ಈ ಮೊಟ್ಟೆಗಳು ರುಚಿಕರವಾಗಿರುವುದು ಮಾತ್ರವಲ್ಲ, ಸಾಮಾನ್ಯ ಮೊಟ್ಟೆಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುತ್ತವೆ.

English summary

Most Expensive Eggs in the World and Know the Reason Why They Cost So Much in Kannada

Here we talking about Most Expensive Eggs in the World and Know the Reason Why They Cost So Much in Kannada, read on
X
Desktop Bottom Promotion