For Quick Alerts
ALLOW NOTIFICATIONS  
For Daily Alerts

ದೈನಂದಿನ ಜೀವನದ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ?

|

ಈ ಶೀರ್ಷಿಕೆಯು ನಿಮ್ಮ ಕುತೂಹಲವನ್ನು ಬಡಿದೆಬ್ಬಿಸೀತು, ಅಷ್ಟೇ ಅಲ್ಲ; ಅನೇಕ ಬಾರಿ ಅಸಹನೀಯವಾದ ಜಗತ್ತಿನ ವಿವಿಧ ಬಗೆಯ ಸಮಸ್ಯೆಗಳಿಗೆ ಕೇವಲ ಒಂದೇ ಒಂದು ಅಥವಾ ಏಕಮಾತ್ರ ಪರಿಹಾರವಿರಲು ಹೇಗೆ ತಾನೇ ಸಾಧ್ಯ ಎಂದು ನಿಮ್ಮಲ್ಲಿ ಕೆಲವರು ಆಶ್ಚರ್ಯಗೊಳ್ಳಬಹುದು.

How to Solve Daily Life Problems

ಆದರೆ ನೆನಪಿಡಿ ಸಮಸ್ಯೆ ಪರಿಹಾರಕ್ಕೆ ಯಾವುದೇ ಯಕ್ಷಿಣಿಯ ಮಂತ್ರದಂಡವೇನೂ ಇಲ್ಲ. ಈ ಬಗ್ಗೆ ಮೊದಲೇ ಎಚ್ಚರಿಸುತ್ತೇವೆ. ಬದಲಿಗೆ, ನೀವು ಯಾವುದರ ಕುರಿತಾಗಿ ಕಾರ್ಯಾಚರಿಸಬೇಕಾಗುತ್ತದೆ ಎಂಬುದನ್ನಷ್ಟೇ ಹೇಳಬಲ್ಲೆವು; ಅರ್ಥಾತ್ ಪರಿಹಾರದ ಬೀಜಗಳನ್ನು ಮಾತ್ರ ನಿಮಗೆ ಕೊಡಬಲ್ಲೆವು.

ಸಮಸ್ಯೆಗಳ ಸ್ವರೂಪಗಳು

ಸಮಸ್ಯೆಗಳ ಸ್ವರೂಪಗಳು

ನಾವು ಮೊದಲು ಸಮಸ್ಯೆಗಳ ಕುರಿತು ಗಮನಹರಿಸೋಣ. ನಾವು ಸರಿಯಾಗಿ ವಿಶ್ಲೇಷಿಸಿ ಗಮನಿಸಿದರೆ, ಜೀವನದಲ್ಲಿನ ಪರಿಸ್ಥಿತಿಗಳೇ ವಾಸ್ತವವಾಗಿ ಸಮಸ್ಯೆಗಳಾಗಿ ಪರಿವರ್ತಿತವಾಗಿವೆ ಎಂಬುದನ್ನು ಮನಗಾಣುತ್ತೇವೆ. ನಿಮ್ಮದೇ ಮನೆಯಲ್ಲಿ ನೀವು ಆರಾಮವಾಗಿ ಕುಳಿತಿದ್ದರೆ ಮತ್ತು ನಿಮಗೆ ಹಸಿವಾಗುತ್ತಿದೆ ಎಂದು ಅನಿಸಲಾರಂಭಿಸಿದರೆ, ನಿಮಗೆ ಸಮಸ್ಯೆಯನ್ನುಂಟು ಮಾಡುತ್ತಿರುವುದು ಆ ಹಸಿವೆಯಲ್ಲ. ಅಡುಗೆಮನೆಯಲ್ಲಿ ಆಹಾರವಿರುತ್ತದೆ; ಇಲ್ಲವೆಂದಾದಲ್ಲಿ, ನೀವು ಹೋಟೆಲಿಗೆ ಹೋಗುತ್ತೀರಿ. ಆದರೆ ನೀವು ಎಲ್ಲೋ ದೂರ ಹೊರಟುಹೋಗಿದ್ದು ಅಲ್ಲಿ ಆಹಾರವು ಲಭ್ಯವಿಲ್ಲವೆಂದಾದಲ್ಲಿ ಅಥವಾ ಆಹಾರವನ್ನು ಕೊಂಡುಕೊಳ್ಳಲು ನಿಮ್ಮ ಬಳಿ ಸಾಕಷ್ಟು ಹಣವಿಲ್ಲವೆಂದಾದಲ್ಲಿ, ಆಗ ಆ ಹಸಿವು ನಿಮಗೆ ಸಮಸ್ಯೆಯಾಗಿ ಕಾಡಲಾರಂಭಿಸುತ್ತದೆ. ಏಕೆಂದರೆ, ಆಗ ನಿಮಗೆ ಹಸಿವಿನೊಡನೆ ಹೇಗೆ ವ್ಯವಹರಿಸಬೇಕೆಂದು ಗೊತ್ತಿರುವುದಿಲ್ಲ

ಪರಿಸ್ಥಿತಿಗಳೊಂದಿಗೆ ವ್ಯವಹರಿಸಲು ಅಸಮರ್ಥರಾಗುವುದು

ಪರಿಸ್ಥಿತಿಗಳೊಂದಿಗೆ ವ್ಯವಹರಿಸಲು ಅಸಮರ್ಥರಾಗುವುದು

ಪರಿಸ್ಥಿತಿಯನ್ನು ನಿಭಾಯಿಸಲು ಅಸಾಮರ್ಥ್ಯವಿದ್ದಾಗಲೆಲ್ಲಾ, ಪರಿಸ್ಥಿತಿಯು ಸಮಸ್ಯೆಯಾಗಿ ಕಾಡಲಾರಂಭಿಸುತ್ತದೆ.

ಮೊದಲನೆಯದಾಗಿ, ನೀವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ಹೋದಲ್ಲಿ, ಅಂತಹ ಪರಿಸ್ಥಿತಿಯು ಒಂದು ಸಮಸ್ಯೆಯಾಗಿ ಬಿಡುತ್ತದೆ. ಎರಡನೆಯದಾಗಿ, ನೀವು ಅದನ್ನು ಅರ್ಥಮಾಡಿಕೊಂಡಿರಾದರೂ ಅದಕ್ಕೆ ಪರಿಹಾರವನ್ನೇನೂ ಕಂಡುಕೊಳ್ಳಲಾರದೇ ಹೋದರೆ, ಆಗಲೂ ಅದು ಸಮಸ್ಯೆಯೇ ಆಗಿಬಿಡುತ್ತದೆ. ಮೂರನೆಯದಾಗಿ, ಪರಿಹಾರವೇನೋ ಇದೆ; ಆದರೆ ಅದು ಕೈಗೆಟುಕುವಂತಿರದಿದ್ದಲ್ಲಿ, ಆಗಲೂ ಅದು ಸಮಸ್ಯೆಯೇ ಆಗಿಬಿಡುತ್ತದೆ. ಕಟ್ಟಕಡೆಯದಾಗಿ, ಎಲ್ಲವೂ ಕೈಗೆಟುಕುವಂತೆಯೇ ಇರಬಹುದು; ಆದರೆ ಅವನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕೆಂದು ನಿಮಗೆ ತಿಳಿಯದಾದಲ್ಲಿ, ಖಂಡಿತವಾಗಿಯೂ, ಅದು ಒಂದು ಸಮಸ್ಯೆಯಾಗಿಯೇ ಉಳಿದುಬಿಡುತ್ತದೆ.

ಮಾನವರಿಗೆ ಒಂದು ವಿಚಿತ್ರ ಬಗೆಯ ಸಾಮರ್ಥ್ಯವಿದೆ - ನಾವೇನನ್ನೇ ಸ್ಪರ್ಶಿಸಿದರೂ ಅದೊಂದು ಸಮಸ್ಯೆಯೇ ಆಗಿಬಿಡುತ್ತದೆ. ಏನನ್ನೇ ಸ್ಪರ್ಶಿಸಿದರೂ ಅದು ಚಿನ್ನವೇ ಆಗಿಬಿಡುತ್ತಲ್ಲಾ! ಅಂತಹ ಸ್ಪರ್ಶ!! ಆತನ ಕೋರಿಕೆಯ ಈಡೇರಿಕೆಯೂ ಆತನ ಪಾಲಿಗೆ ಒಂದು ಸಮಸ್ಯೆಯೇ ಆಗಿಬಿಟ್ಟಿತು!

ಸಮಸ್ಯೆಗಳನ್ನು ವರ್ಗೀಕರಿಸುವುದು

ಸಮಸ್ಯೆಗಳನ್ನು ವರ್ಗೀಕರಿಸುವುದು

ಹಾಗಾದರೆ, ನಾವೇನು ಮಾಡಬೇಕು ? ಮೊಟ್ಟಮೊದಲನೆಯದಾಗಿ ನಾವು ಮಾಡಬೇಕಾದದ್ದೇನೆಂದರೆ, ಪರಿಸ್ಥಿತಿಯನ್ನು ವಸ್ತುನಿಷ್ಟವಾಗಿ ಅವಲೋಕಿಸುವುದು ಹಾಗೂ ಅದೇಕೆ ಸಮಸ್ಯೆಯಾಗಿ ಕಾಡುತ್ತಿದೆ ಎಂಬುದನ್ನು ಪರಿಶೀಲಿಸುವುದು ಅಥವಾ ವಿಶ್ಲೇಷಿಸುವುದು. ಈ ಹಂತದಲ್ಲಿಯೇ ಪರಿಸ್ಥಿತಿಯು ಕೇವಲ ಒಂದು ಪರಿಸ್ಥಿತಿಯಷ್ಟೇ ಹೊರತು ಅದು ಸಮಸ್ಯೆ ಅಲ್ಲವೇ ಅಲ್ಲ ಎಂದು ನಮಗನಿಸೀತು. ಇಷ್ಟಾದರೂ ಕೂಡಾ, ಅದು ಒಂದು ಸಮಸ್ಯೆಯಾಗಿಯೇ ಕಾಡಲಾರಂಭಿಸಿದಲ್ಲಿ, ಅದನ್ನು ವರ್ಗೀಕರಿಸಲು ಮುಂದಾಗಿರಿ. ಅದು ಈ ಕೆಳಗೆ ಹೆಸರಿಸಿರುವವುಗಳ ಪೈಕಿ ಯಾವುದಾದರು ಒಂದಾಗಿರಬಹುದು;

- ಹಣಕಾಸಿನ ತಾಪತ್ರಯವೋ, ಶರೀರದ ರೋಗವೊಂದರ ಕುರಿತಾದದ್ದೋ ಅಥವಾ ಸೋರುತ್ತಿರುವ ಛಾವಣಿಯಂತಹ ಯಾವುದೋ ಒಂದು ವಾಸ್ತವಿಕ ಸಮಸ್ಯೆಯಾಗಿರಬಹುದು.

- ಕಾರೊಂದರ ಅಪಘಾತವಾಗುವಿಕೆಯೋ, ಯಾರಾದಾದರೊಬ್ಬರ (ತನ್ನ ಅಥವಾ ತನ್ನ ಆಪ್ತರ) ಆತಂಕಪೂರ್ಣ ದೃಷ್ಟಿಕೋನವೋ ಅಥವಾ ಸಾಮಾನ್ಯ ನೆಗಡಿಯೊಂದರಿಂದ ಉದ್ಭವಿಸುವ ರೋಗಲಕ್ಷಣಗಳಿಂದ ಗಂಭೀರ ಸ್ವರೂಪದ ಖಾಯಿಲೆಯೊಂದರ ಕುರಿತಾದ ಕಲ್ಪನೆಯಂತಹ ಕಾಲ್ಪನಿಕ ಸಮಸ್ಯೆಯಾಗಿರಬಹುದು.

- ಪ್ರಬಲವಾದ ಇಷ್ಟಗಳು ಮತ್ತು ಅನಿಷ್ಟಗಳು, ಪೂರ್ವಾಗ್ರಹಗಳು, ವ್ಯಾಮೋಹಗಳು ಮತ್ತು ಇನ್ನೂ ಮೊದಲಾದವುಗಳ ಆಧಾರದ ಮೇಲಿನ ವೈಯುಕ್ತಿಕ ಚಿಂತನೆಗಳನ್ನು ಆಧರಿಸಿರುವ ಸಮಸ್ಯೆ.

ಪರಿಹಾರವನ್ನು ಗುರುತಿಸುವುದು

ಪರಿಹಾರವನ್ನು ಗುರುತಿಸುವುದು

ಮುಂದಿನ ಹೆಜ್ಜೆಯು ಪರಿಹಾರವನ್ನು ಕಂಡುಕೊಳ್ಳುವುದರ ಕುರಿತದ್ದಾಗಿದೆ. ಒಂದು ವೇಳೆ ಅದೊಂದು ವಾಸ್ತವಿಕ ಸಮಸ್ಯೆಯಾಗಿದ್ದಲ್ಲಿ, ನೀವು ಈ ಕೆಳಗಿನ ಕ್ರಮವನ್ನು ಅನುಸರಿಸಬಹುದು:

ಎ. ಒಂದು ಕಾಗದವನ್ನು ಮತ್ತು ಪೆನ್ನನ್ನು ತೆಗೆದುಕೊಂಡು ಹಾಗೆಯೇ ಸುಮ್ಮನೇ ಕುಳಿತುಕೊಳ್ಳಿರಿ.

ಬಿ. ಸಮಸ್ಯೆಯನ್ನೊಡ್ಡುವ ಆ ಪರಿಸ್ಥಿತಿಯನ್ನು ಬರೆದಿಡಿರಿ.

ಸಿ. ಅದಕ್ಕೆ ಸಾಧ್ಯವಿರುವ ಎಲ್ಲಾ ಪರಿಹಾರಗಳನ್ನೂ ಪಟ್ಟಿ ಮಾಡಿರಿ.

ಡಿ. ಅವುಗಳ ಪೈಕಿ ಅತ್ಯಂತ ಪ್ರಾಯೋಗಿಕ ಪರಿಹಾರಗಳ ಒಂದು ಚಿಕ್ಕ ಪಟ್ಟಿಯನ್ನು ಮಾಡಿರಿ.

ಇ. ಅನುಷ್ಠಾನಗೊಳಿಸುವ ದಿಶೆಯಲ್ಲಿ, ಆ ಚಿಕ್ಕ ಪಟ್ಟಿಯಿಂದ, ನಿಮ್ಮ ಸಾಮರ್ಥ್ಯದ ಇತಿಮಿತಿಯೊಳಗಿನ ಪರಿಹಾರವನ್ನು ಆಯ್ದುಕೊಳ್ಳಿರಿ.

ಎಫ್. ಪರಿಹಾರವು ಸಾಕಾರಗೊಳ್ಳಲು ಅವಕಾಶವನ್ನು ಮಾಡಿಕೊಡಿ - ಅರ್ಥಾತ್ ಅದನ್ನು ಸಾಕಾರಗೊಳಿಸಿರಿ.

ಉದಾಹರಣೆಗೆ, ಒಂದು ವೇಳೆ ನೀವು ಹೈದರಾಬಾದ್ ನಿಂದ ಮುಂಬಯಿಗೆ ಹೋಗಬೇಕಾಗಿದ್ದಲ್ಲಿ, ಪ್ರಯಾಣದ ಪರ್ಯಾಯ ಮಾರ್ಗೋಪಾಯಗಳನ್ನು ಪಟ್ಟಿ ಮಾಡಿರಿ - ವಾಯುಮಾರ್ಗವಾಗಿ, ಕಾಲ್ನಡಿಗೆಯ ಮೂಲಕ, ರಸ್ತೆಯ ಮಾರ್ಗವಾಗಿ, ಅಥವಾ ರೈಲು ಮಾರ್ಗವಾಗಿ. ಕಾಲ್ನಡಿಗೆಯಂತಹ ಅಪ್ರಾಯೋಗಿಕ ಪ್ರಯಾಣ ವಿಧಾನವನ್ನು ಹೊಡೆದು ಹಾಕಿರಿ. ಒಂದು ವೇಳೆ ವಿಮಾನ ಪ್ರಯಾಣವು ನಿಮ್ಮ ಹಣಕಾಸಿನ ಸ್ಥಿತಿಗೆ ಎಟುಕುವಂತಿಲ್ಲವೆಂದಾದಲ್ಲಿ, ಅದನ್ನು ಹೊಡೆದು ಹಾಕಿರಿ. ಈಗ ನಿಮ್ಮ ಬದಲೀ ಮಾರ್ಗೋಪಾಯಗಳು ರಸ್ತೆಯ ಮಾರ್ಗ ಮತ್ತು ರೈಲು ಮಾರ್ಗಗಳಾಗಿ ಉಳಿದುಕೊಂಡಿವೆ. ಲಭ್ಯತೆ, ವೈಯಕ್ತಿಕ ಅನುಕೂಲ ಮತ್ತು ಸಮಯದ ಆಧಾರದ ಮೇಲೆ ಈ ಎರಡು ಮಾರ್ಗಗಳ ಪೈಕಿ ನೀವೀಗ ಯಾವುದಾದರೊಂದನ್ನು ಆಯ್ದುಕೊಳ್ಳಬಹುದು.

ಒಮ್ಮೆ ನೀವು ಪರಿಹಾರೋಪಾಯವನ್ನು ಕಂಡುಕೊಂಡ ಬಳಿಕ, ನಿರಾಳರಾಗಿರಿ ಮತ್ತು ಅದನ್ನು ಸಾಕಾರಗೊಳಿಸಿರಿ. ವಿಮಾನದೊಳಗೆ ಕುಳಿತುಕೊಂಡ ಬಳಿಕವೂ ಚಿಂತೆಗೀಡಾಗುವ ಕೆಲವು ಜನರಿರುತ್ತಾರೆ: "ವಿಮಾನ ಚಾಲಕನು ಚೆನ್ನಾಗಿ ತರಬೇತಿ ಪಡೆದಿರಲೆಂದು ನಾನು ಹಾರೈಸುವೆ. ಯಾವುದೇ ವಿಮಾನ ಅಪಹರಣಕಾರರು ಇಲ್ಲವೆಂದು ಭಾವಿಸುವೆ. ಹವಾಮಾನವು ಕೆಟ್ಟದ್ದಾಗಿರುವಂತೆ ಕಾಣುತ್ತಿದೆ. ಬಿರುಗಾಳಿಯು ಎದ್ದರೆ ಏನು ಗತಿ ?" ಇವೇ ಮೊದಲಾದ ವ್ಯರ್ಥ ಆಲೋಚನೆಗಳು.... ನಮ್ಮ ನಿಯಂತ್ರಣದಲ್ಲಿಲ್ಲದ ಯಾವುದೇ ವಿಚಾರದ ಬಗ್ಗೆಯೂ ಆಲೋಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಎಲ್ಲಾ ಚಿಂತೆಗಳನ್ನೂ ಕೊಡವಿಹಾಕಿ ಮತ್ತು ಆರಾಮವಾಗಿರಿ.

ಸರಿಯಾದ ಚಿಂತನೆ - ಒಂದು ನೈಜ ಪರಿಹಾರ

ಸರಿಯಾದ ಚಿಂತನೆ - ಒಂದು ನೈಜ ಪರಿಹಾರ

ಅದೊಂದು ಕಾಲ್ಪನಿಕ ಸಮಸ್ಯೆಯಾಗಿದ್ದಲ್ಲಿ ಸರಿಯಾದ ಚಿಂತನೆಯು ಅದೊಂದು ಸಮಸ್ಯೆಯೇ ಅಲ್ಲವೆಂದು ತೋರಿಸಿಕೊಡುತ್ತದೆ. ಅದು ಹೇಗೆ ತಲೆದೋರಿತೋ ಹಾಗೆಯೇ ಮಂಜಿನಂತೆ ಕರಗಿ ಹೋಗುತ್ತದೆ! ಕಾರು ಅಪಘಾತದ ಕುರಿತಾದ ಭಯವೋ ಅಥವಾ ಅಸ್ವಾಸ್ಥ್ಯದ ಬಗ್ಗೆಯೋ ಭಯವಿರುವುದು ನಮ್ಮ ಮನಸ್ಸಿನಲ್ಲಿ ಮಾತ್ರ. ಸರಿಯಾದ ಚಿಂತನೆಯ ನೆರವಿನಿಂದ ನನ್ನೋರ್ವನಿಂದಲೇ ಆ ಕಾಲ್ಪನಿಕ ಸಮಸ್ಯೆಯನ್ನು ನನ್ನ ಮನಸ್ಸಿನಿಂದ ಕಿತ್ತುಹಾಕಲು ಸಾಧ್ಯವಿದೆ.

ಸರಿಯಾದ ಚಿಂತನೆಯ ಅಭಾವದಿಂದಲೇ ಎಲ್ಲಾ ಸಮಸ್ಯೆಗಳೂ ಉದ್ಭವಿಸುತ್ತವೆಯೆಂದು ಹೇಳಲಾಗುತ್ತದೆ. ನಮ್ಮೆಲ್ಲಾ ವ್ಯಾಮೋಹ, ದು:ಖ, ಮತ್ತು ಸಮಸ್ಯೆಗಳಿಗೆ ಅದು ಮೂಲಕಾರಣವಾಗಿ ಉಳಿದುಬಿಡುತ್ತದೆ. ಹೀಗಾಗಿ, ನಮ್ಮೆಲ್ಲಾ ಸಮಸ್ಯೆಗಳಿಗೂ ಸರಿಯಾದ ಚಿಂತನಾಕ್ರಮವೇ ಏಕೈಕ ಪರಿಹಾರ.

English summary

How to Solve Daily Life Problems

This title may kindle your curiosity, and some of you may wonder how there can be just a single solution to the various, and often intolerable, problems in the world. Let us first focus on problems. If we analyse and observe, we will find that actually situations in life are what become problems. If you are comfortably sitting in your own house and begin to feel hungry, the hunger does not pose a problem.
Story first published: Tuesday, October 1, 2019, 15:53 [IST]
X
Desktop Bottom Promotion