For Quick Alerts
ALLOW NOTIFICATIONS  
For Daily Alerts

ನೋ ಎನ್ನಲು ಮುಜುಗರವೇ?, ತಪ್ಪಿತಸ್ಥ ಭಾವನೆ ಇಲ್ಲದೆ 'ನೋ' ಎನ್ನುವುದು ಹೇಗೆ?

|

ನಾವಿಂದು ಎಂಥಾ ಪ್ರಪಂಚದಲ್ಲಿದ್ದೇವೆ ಎಂದರೆ ಯಾರಿಗೆ ಆಗಲಿ "ಸಾರಿ" ಮತ್ತು "ಥ್ಯಾಂಕ್ಯೂ" ಹೇಳುವಷ್ಟು ಸುಲಭವಾಗಿ "ನೋ'' (ಆಗುವುದಿಲ್ಲ) ಎಂಬ ಪದವನ್ನು ಹೇಳಲು ಹಿಂಜರಿಯುತ್ತೇವೆ. ನಮ್ಮದೇ ಕೆಲಸ-ಕಾರ್ಯಗಳ ನಡುವೆ ಮತ್ತೊಬ್ಬರಿಗೆ ಸಮಯ ಮೀಸಲು ಮಾಡುವುದಕ್ಕಾಗಿ ನಮ್ಮೆಲ್ಲಾ ದಿನಚರಿಯನ್ನು ಮರುಹೊಂದಿಸಿಕೊಳ್ಳುವುದು ಕಷ್ಟವೇ ಹೌದು, ಅಲ್ಲದೇ ಈ ಗೊಂದಲವನ್ನು ಯಾರೂ ಇಷ್ಟಪಡುವುದಿಲ್ಲ.

ಆದರೆ ನಮಗೇ ಅರಿವಿಲ್ಲದಂತೆ ನಾವು ಎಲ್ಲದ್ದಕ್ಕೂ 'ಯಸ್' ಎನ್ನುವ ಅಭ್ಯಾಸವನ್ನು ಕೆಲವು ಸಂದರ್ಭಗಳಲ್ಲಿ ಇಷ್ಟವಿಲ್ಲದಿದ್ದರೂ ರೂಢಿಸಿಕೊಂಡಿದ್ದೇವೆ. ಅಲ್ಲದೇ ಇದು ಸಭ್ಯತೆಯ ಲಕ್ಷಣ ಎಂದೂ, ನೀವು ಒಪ್ಪದಿದ್ದರೆ ಸಭ್ಯತೆ ಇಲ್ಲದವರು, ಸ್ವಾರ್ಥಿ ಎನ್ನುವಂತೆ ನಮ್ಮನ್ನು ಬಿಂಬಿಸುತ್ತಾರೆ. ಇದು ನಮ್ಮಲ್ಲಿ ತಪ್ಪಿತಸ್ಥ ಎನ್ನುವ ಭಾವನೆಯನ್ನು ಉಂಟುಮಾಡಿಬಿಡುತ್ತದೆ.

ನಿಮ್ಮ ಸಂದರ್ಭೋಚಿತ ಮಾತುಗಳ ಮೂಲಕ ಅವರ ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕ ಅಂಶ ಉಂಟಾಗದಂತೆ ಯಾವ ರೀತಿ ಸಂದರ್ಭವನ್ನು ನಿಭಾಯಿಸಬಹುದು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ನೋ ಎನ್ನುವ ಮುನ್ನ ಯಸ್ ಪದ ಬಳಕೆಯನ್ನು ಮರೆತುಬಿಡಿ

ನೋ ಎನ್ನುವ ಮುನ್ನ ಯಸ್ ಪದ ಬಳಕೆಯನ್ನು ಮರೆತುಬಿಡಿ

ಯಾರು ಏನೇ ಹೇಳಿದರೂ ಮೊದಲು ಬಾಯಿಗೆ ಬರುವ ಯಸ್. ಈ ಪದ ಬಳಸುವ ಮುನ್ನ ಕೊಂಚ ಯೋಚಿಸಿ ನಂತರ ಉತ್ತರಿಸಿ. ಅದಕ್ಕೂ ಮೊದಲು ನೋ ಪದ ಕಲಿಯಬೇಕಾದರೆ ಯಸ್ ಪದ ಬಳಕೆಯನ್ನು ಆ ಕ್ಷಣಕ್ಕೆ ಮರೆಯಲೇಬೇಕು.

ಹಲವು ಸಂದರ್ಭಗಳಲ್ಲಿ ನೋ ಎನ್ನುವುದು ಅಷ್ಟು ಕಷ್ಟವೇನಲ್ಲ. ನಾವು ಏಕೆ ಇಲ್ಲ ಎನ್ನುತ್ತಿದ್ದೇವೆ ಎಂದು ಬಹುತೇಕ ನಮ್ಮ ಕುಟುಂಬದವರು ಹಾಗೂ ಆತ್ಮೀಯ ಸ್ನೇಹಿತರಿಗೆ ತಿಳಿದೇ ಇರುತ್ತದೆ. ಆದರೆ ಕೆಲವರು ಇಲ್ಲ ಎನ್ನುವುದನ್ನು ಉತ್ತರ ಎಂದೇ ಸ್ವೀಕರಿಸುವುದಿಲ್ಲ, ಇನ್ನೂ ಕೆಲವರು ಇದನ್ನು ತೀರಾ ವೈಯಕ್ತಿಕವಾಗಿ ಪರಿಗಣಿಸುತ್ತಾರೆ.

ನೀವು ಇಂಥ ಎಡವಟ್ಟು ಮಾಡದಿರಿ

ನೀವು ಇಂಥ ಎಡವಟ್ಟು ಮಾಡದಿರಿ

ಮುಖ್ಯವಾಗಿ ಇಲ್ಲಿ ಇಬ್ಬರು ಯಾವ ರೀತಿಯ ಸಂಬಂಧ-ಸ್ನೇಹವನ್ನು ಹೊಂದಿದ್ದಾರೆ ಹಾಗೂ ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ನಾವು ಸಹ ಇದೇ ಪ್ರಶ್ನೆಯನ್ನು ಬೇರೆಯವರಿಗೆ ಕೇಳುವ ಮುನ್ನ ಉತ್ತರ ಸಕಾರಾತ್ಮಕವೇ ಅಥವಾ ನಕಾರಾತ್ಮಕವೇ ಎಂಬುದನ್ನು ಮೊದಲೇ ಊಹಿಸಬಹುದು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆ ಕೇಳಿದರೆ ಬಹುಶಃ ಇಂಥಹ ಸಂದರ್ಭಗಳೇ ಉದ್ಭವಿಸುವುದಿಲ್ಲ.

ನಿಮಗೆ ಬೇಕಾದವರ ಮನಸ್ಸಿಗೆ ನೋವಾಗದಂತೆ ಇಲ್ಲ ಎನ್ನುವುದನ್ನು ನೇರವಾಗಿ, ಯಾವುದೇ ತಪ್ಪಿತಸ್ಥ ಭಾವನೆ ಇಲ್ಲದೆ ಹೇಳುವುದು ಹೇಗೆ?

1. ಪ್ರಾಮಾಣಿಕವಾಗಿರಿ

1. ಪ್ರಾಮಾಣಿಕವಾಗಿರಿ

ನಿಮ್ಮ ಇಲ್ಲ ಎನ್ನುವ ಉತ್ತರವನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕೆ?. ನೀವು ಕೊಡುವ ಉತ್ತರ ಪ್ರಾಮಾಣಿಕವಾಗಿರಲಿ, ಇಂತಹ ಉತ್ತರಗಳನ್ನು ಸಾಮಾನ್ಯವಾಗಿ ಜನರು ಒಪ್ಪಿಕೊಳ್ಳುತ್ತಾರೆ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಯಾರೇ ಆಗಲಿ ನಿಮ್ಮ ಪ್ರಾಮಾಣಿಕತೆಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಗೌರವಿಸುತ್ತಾರೆ ಎಂಬ ಬಗ್ಗೆ ನಿಮಗೆ ತಿಳಿದಿರಲಿ.

2. ಮುಂದೂಡಲು ಮನವಿ ಮಾಡಿ

2. ಮುಂದೂಡಲು ಮನವಿ ಮಾಡಿ

ನಿಮಗೆ ನಿಜವಾಗಿಯೂ ಇಲ್ಲ ಎನ್ನಲು ಇಷ್ಟವಿಲ್ಲವೇ, ಅವರ ಯೋಜನೆಯನ್ನು ಮುಂದೂಡಲು ಮನವಿ ಮಾಡಿ. ಇಂದು ಬರಲು ಅಥವಾ ಮಾಡಲು ಸಾದ್ಯವಿಲ್ಲ, ಸಾಧ್ಯವಾದರೆ ನಾಳೆ ಅಥವಾ ವಾರಾಂತ್ಯಕ್ಕೆ ಮಾಡುವುದಾಗಿ ಕೇಳಿಕೊಳ್ಳಿ. ಈ ಮೂಲಕ ಇಬ್ಬರಿಗೂ ಅನುಕೂಲವಾಗುವ ದಿನವನ್ನು ಹೊಂದಾಣಿಸಬಹುದು.

3. ಕೆಲಸಕ್ಕೆ ಅನ್ವಯಿಸದ ವ್ಯಕ್ತಿಯಾಗಿದ್ದರೆ ನೇರವಾಗಿ ತಿಳಿಸಿ

3. ಕೆಲಸಕ್ಕೆ ಅನ್ವಯಿಸದ ವ್ಯಕ್ತಿಯಾಗಿದ್ದರೆ ನೇರವಾಗಿ ತಿಳಿಸಿ

ಹಲವು ಸಂದರ್ಭಗಳಲ್ಲಿ ನೀವು ಆ ಕೆಲಸಕ್ಕೆ ಅನ್ವಯಿಸದ ಅಥವಾ ನಿಮ್ಮ ಪರಿಧಿಗೆ ಸಂಬಂಧಿಸದ ಕೆಲಸವಾಗಿರುತ್ತದೆ. ಅಲ್ಲದೇ ಆ ಕೆಲಸವನ್ನು ನಿಮಗಿಂತ ಮತ್ತೊಬ್ಬರು ಇನ್ನೂ ಚೆನ್ನಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ. ಅದನ್ನು ಅರ್ಥೈಸುವಂತೆ ಅವರಿಗೆ ಮನವರಿಕೆ ಮಾಡಿ.

ಉದಾಹರಣೆಗೆ: ನೀವು ಗ್ಯಾಡ್ಜೆಟ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಯಲ್ಲಿ ಪರಿಣಿತರಲ್ಲದಿದ್ದರೂ ನಿಮ್ಮ ಸ್ನೇಹಿತರು ಒತ್ತಾಯ ಮಾಡಿದರೆ, ಬಹುಶಃ ನೀವು ತಪ್ಪಾದ ವಸ್ತುವನ್ನು ಆಯ್ಕೆ ಮಾಡಬಹುದು. ಇದನ್ನು ತಿಳಿಸಿಹೇಳಿ.

4. ಗೌರವಿಸಿ

4. ಗೌರವಿಸಿ

ಕೆಲವು ಬಾರಿ ನಿಮ್ಮ ಉತ್ತರವನ್ನು ಅವರು ನಕಾರಾತ್ಮಕವಾಗಿ ಸ್ವೀಕರಿಸಿ, ನೀವು ಆ ವ್ಯಕ್ತಿಯನ್ನೇ ನಿರಾಕರಿಸುತ್ತೀದ್ದೀರಾ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದ್ದರಿಂದ ಅವರನ್ನು ಗೌರವಿಸಿ, ನೀವು ಅವರನ್ನು ಇಷ್ಟಪಡುವುದಾಗಿ ಹಾಗೂ ಈ ಕಾರಣಗಳಿಂದಾಗಿ ಸಮಯ ಯೋಜಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ.

5. ಗೊಂದಲಮಾಡಿಕೊಳ್ಳಬೇಡಿ

5. ಗೊಂದಲಮಾಡಿಕೊಳ್ಳಬೇಡಿ

ಇಡೀ ಸಂದರ್ಭವನ್ನು ಗೊಂದಲ ಮಾಡಿಕೊಂಡು ಅಥವಾ ಸಂಕೀರ್ಣಮಾಡಿಕೊಳ್ಳುವ ಬದಲು ಇಲ್ಲ ಎನ್ನುವ ಮೂಲಕ ನಿರಾಳರಾಗಿ. ಹಲವು ಸಂದರ್ಭಗಳಲ್ಲಿ ಮನನೋಯಿಸಬಾರದು ಎಂದು ಒಪ್ಪಿಕೊಂಡು ಪರಿಹರಿಸಲಾರದೇ, ಅವರನ್ನು ಸಮಸ್ಯೆಗೆ ಸಿಲುಕಿಸಿ, ನಾವು ಸಮಸ್ಯೆಗೆ ಸಿಲುಕುತ್ತೇವೆ. ನಂತರ ನಾವು ಮೊದಲೇ ಹೇಳಿದ್ದೇ ಇದು ನನ್ನಿಂದ ಸಾಧ್ಯವಾಗುವುದಿಲ್ಲವೆಂದು ಎಂದು ಸಮರ್ಥಿಸುತ್ತೇವೆ.

ಈ ರೀತಿಯ ಎಡವಟ್ಟಿಗಿಂತ ಹಲವು ಸಂದರ್ಭಗಳಲ್ಲಿ ಆರಂಭದಲ್ಲೇ ಇಲ್ಲ ಎನ್ನುವ ಕ್ಷಣಿಕದ ನೋವೇ ಸೂಕ್ತವಾಗಬಹುದು.

English summary

How To Say No Without Feeling Guilty

In a world where we are always told to use the words like 'sorry' and 'thank you', to say 'no' becomes troublesome. For most of our life, I never found it difficult to re-arrange my schedule and become totally available for someone even though I didn't want to. Our minds have been conditioned to say 'yes' to everything in order to set a basic standard of politeness and if you don't agree, you're just impolite, selfish and all those words that'll make you feel guilty.
Story first published: Wednesday, September 4, 2019, 15:10 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more