Just In
Don't Miss
- Technology
ಸ್ಯಾಮ್ಸಂಗ್ನ ಈ ದೈತ್ಯ 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ!
- Movies
"ಇದೆಲ್ಲಾ ನನ್ನ ಗೌರವಕ್ಕೆ ಧಕ್ಕೆ ತರಲು ಮಾಡುತ್ತಿರುವ ಅಪಪ್ರಚಾರ": ಮಂಗ್ಲಿ
- Sports
IND vs AUS Test: ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಹೊಸ ವೇಗದ ಅಸ್ತ್ರ!
- News
ಲಾರಿ ಮುಷ್ಕರ; ಬೆಂಗಳೂರು ದಕ್ಷಿಣದಲ್ಲಿ ನಂದಿನಿ ಹಾಲು ಪೂರೈಕೆ ವ್ಯತ್ಯಯ
- Finance
2 ಕೋಟಿಗೂ ಕಡಿಮೆ FD ಹಣಕ್ಕೆ ಹೆಚ್ಚು ಬಡ್ಡಿ ನೀಡುವ 5 ಬ್ಯಾಂಕ್ ಯಾವವು, ಅವುಗಳ ಬಡ್ಡಿ ದರ ಬಗ್ಗೆ ತಿಳಿಯಿರಿ
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2023ರಲ್ಲಿ ಗ್ರಹಗಳ ಸಂಚಾರಗಳು ವೃಷಭ ರಾಶಿಯ ಮೇಲೆ ಬೀರಲಿದೆ ಈ ಪ್ರಭಾವ
ವೃಷಭ ರಾಶಿಫಲ 2023ರ ಪ್ರಕಾರ, ಈ ವರ್ಷದ ಶನಿ ಹಾಗೂ ಗುರು ಗ್ರಹದ ಸಂಚಾರ ನಿಮ್ಮ ಮೇಲೆ ತುಂಬಾನೇ ಪ್ರಭಾವ ಬೀರಲಿದೆ. ಜನವರಿ 17ಕ್ಕೆ ಶನಿ ಕುಂಭ ರಾಶಿ ಪ್ರವೇಶಿಸಿದಾಗ ನಿಮ್ಮ ರಾಶಿಯಲ್ಲಿ 10ನೇ ಮನೆಯಲ್ಲಿ ಇರಲಿದೆ. ಏಪ್ರಿಲ್ 22ಕ್ಕೆ ಗುರು ಮೇಷ ರಾಶಿ ಪ್ರವೇಶಿಸಿದಾಗ ಗುರುವು ನಿಮ್ಮ 12ನೇ ಮನೆಯಲ್ಲಿ ನೆಲೆಸಲಿದೆ. ಈ ಎರಡೂ ಗ್ರಹಗಳ ಪ್ರಭಾವ ನಿಮ್ಮ ಮೇಲೆ ಇರುತ್ತದೆ.
ವೃಷಭ ರಾಶಿಯವರ ಸಂಪೂರ್ಣ ಭವಿಷ್ಯ ಕೊನೆಯಲ್ಲಿ ನೀಡಲಾಗಿದೆ
ರಾಹು ಮತ್ತು ಕೇತು ಪ್ರಭಾವ
ವರ್ಷದ ಕೊನೆಯ ತ್ರೈಮಾಸಿಕದಲ್ಲಿ, ಅಕ್ಟೋಬರ್ 30 ರಂದು, ರಾಹು ಮತ್ತು ಕೇತು ಕ್ರಮವಾಗಿ ಮೀನ ಮತ್ತು ಕನ್ಯಾರಾಶಿಯಲ್ಲಿ ಸಾಗುತ್ತಾರೆ ಮತ್ತು ಅದು ನಿಮ್ಮ ಹನ್ನೊಂದನೇ ಮತ್ತು ಐದನೇ ಮನೆಯಲ್ಲಿ ಇರಲಿದೆ. ಈ ಎಲ್ಲಾ ಗ್ರಹ ಸಂಚಾರಗಳು ನಿಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಿದೆ. ನೀವು ಯಶಸ್ಸು ಸಾಧಿಸಲು ಸಂಪೂರ್ಣ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ವರ್ಷದ ಆರಂಭದಲ್ಲಿ ನೀವು ಸ್ವಲ್ಪ ಮಾನಸಿಕ ಒತ್ತಡವನ್ನು ಅನುಭವಿಸುವಿರಿ, ಇದು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವುದು. ಈ ಸಮಯದಲ್ಲಿ, ಕೆಲಸದ ಒತ್ತಡ ಹಾಗೂ ಅನೇಕ ಸಂಗತಿಗಳು ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುವುದು. ವಿದೇಶಕ್ಕೆ ಹೋಗಲು ಬಯಸುವವರಿಗೆ ಆಸೆ ನೆರವೇರಲಿದೆ. ವರ್ಷದ ಆರಂಭದಲ್ಲಿ ನೀವು ಮುಚ್ಚಿಟ್ಟ ಕೆಲವೊಂದು ರಹಸ್ಯಗಳು ಹೊರಬರುವ ಸಾಧ್ಯತೆ ಇದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಶನಿ ನಿಮ್ಮಿಂದ ಹೆಚ್ಚು ಶ್ರಮ ಬಯಸುತ್ತಾನೆ
ವರ್ಷವಿಡೀ ಹತ್ತನೇ ಮನೆಯ ಮೇಲೆ ಶನಿ ಇರುವುದರಿಂದ ನೀವು ಈ ವರ್ಷ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ, ಆದರೆ ಈ ಕಠಿಣ ಪರಿಶ್ರಮವು ನಿಮ್ಮನ್ನು ಸರಿಯಾದ ವ್ಯಕ್ತಿಯನ್ನಾಗಿ ಮಾಡುತ್ತದೆ ಮತ್ತು ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ನಿಮ್ಮನ್ನು ಕರೆದೊಯ್ಯುತ್ತದೆ. ವರ್ಷದ ಆರಂಭಿಕ ತ್ರೈಮಾಸಿಕವು ಆರ್ಥಿಕ ಬಲವನ್ನು ನೀಡುತ್ತದೆ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ, ಆದರೆ ಎರಡನೇ ತ್ರೈಮಾಸಿಕದಲ್ಲಿ, ನಿಮ್ಮ ಹಣಕಾಸಿನ ಸ್ಥಿತಿಗೆ ನೀವು ವಿಶೇಷ ಗಮನ ಹರಿಸಬೇಕಾಗುತ್ತದೆ. ಅದರ ನಂತರ, ಮೂರನೇ ತ್ರೈಮಾಸಿಕವು ಆರ್ಥಿಕವಾಗಿ ಅನುಕೂಲಕರವಾಗಿದೆ.
ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಸ್ಥಳ ಬದಲಾವಣೆಯ ಸಾಧ್ಯತೆಗಳಿರುವುದರಿಂದ ವಾಸಸ್ಥಳವನ್ನು ನೀವು ಬದಲಾಯಿಸಬೇಕಾಗಬಹುದು. ಈ ಸಮಯದಲ್ಲಿ, ನೀವು ನಿಮ್ಮ ಕುಟುಂಬ ಸದಸ್ಯರಿಗೆ ಕಡಿಮೆ ಸಮಯವನ್ನು ನೀಡಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಕೆಲಸದಲ್ಲಿ ಹೆಚ್ಚು ನಿರತರಾಗಿರುತ್ತೀರಿ.
ಈ ಸಮಯವು ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ.
ಜನವರಿ-ಜೂನ್
ಜನವರಿಯಲ್ಲಿ ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನ ನೀಡಬೇಕು. ಫೆಬ್ರವರಿ ತಿಂಗಳಿನಲ್ಲಿ ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ. ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಶ್ರಮಕ್ಕೆ ತಕ್ಕಂತೆ ಮಾರ್ಚ್ ತಿಂಗಳು ಉತ್ತಮ ಯಶಸ್ಸನ್ನು ತರುತ್ತದೆ. ಏಪ್ರಿಲ್ ತಿಂಗಳು ಜೀವನದಲ್ಲಿ ಸಂತೋಷ ಹೆಚ್ಚಾಗುವುದು.
ಮೇ ತಿಂಗಳು ಉತ್ತಮವಾಗಿದ್ದರೂ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸುವುದು ಅಗತ್ಯ. ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ. ಜೂನ್ ತಿಂಗಳಲ್ಲಿ ನಿಮ್ಮಲ್ಲಿ ಕೆಲವರು ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ.
ಜುಲೈ -ಅಕ್ಟೋಬರ್
ಜುಲೈ ಮತ್ತು ಸೆಪ್ಟೆಂಬರ್ ನಡುವೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ. ನಿಮ್ಮ ಆತ್ಮವಿಶ್ವಾಸದ ಕೊರತೆಯೂ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು.
ಆದರೆ ಅಕ್ಟೋಬರ್ ನಂತರ ಪರಿಸ್ಥಿತಿ ಸುಧಾರಿಸಲಿದೆ, ಒಳ್ಳೆಯ ಬದಲಾವಣೆ ಕಾಣುವಿರಿ>
ನವೆಂಬರ್-ಡಿಸೆಂಬರ್
ವರ್ಷದ ಕೊನೆಯ ತಿಂಗಳು ಆರ್ಥಿಕ ದೃಷ್ಟಿಯಿಂದ ಲಾಭದಾಯಕವಾಗಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಈ ಸಮಯದಲ್ಲಿ ನೀವು ಬಯಸಿದ ಕೆಲಸ ಅಥವಾ ವರ್ಗಾವಣೆ ಸಿಗಬಹುದು. ಆಸ್ತಿ ಖರೀದಿಗೆ ಈ ಅವಧಿ ಅನುಕೂಲಕರವಾಗಿದೆ.
ವೃಷಭ ರಾಶಿ ಭವಿಷ್ಯ 2023: ಈ ರಾಶಿಯ ವ್ಯಾಪಾರಿಗಳಿಗೆ ಈ ವರ್ಷ ಬಂಪರ್ ಲಾಭ