For Quick Alerts
ALLOW NOTIFICATIONS  
For Daily Alerts

ಆಗಸ್ಟ್‌ನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ರಜಾ ದಿನಗಳು

|

ಜುಲೈನಲ್ಲಿ ಧೋ ಎಂದು ಸುರಿಯುವ ಮಳೆ ಆಗಸ್ಟ್ ವೇಳೆ ಸ್ವಲ್ಪ ಬಿಡುವ ನೀಡಿ ಸುರಿಯಲಾರಂಭಿಸುತ್ತದೆ. ಇವುಗಳ ಜೊತೆಗೆ ಶ್ರಾವಣದಲ್ಲಿ ತೊಡಗಿದ ಹಬ್ಬದ ಸಡಗರ ಮತ್ತಷ್ಟು ಅಧಿಕವಾಗುವುದು. ಏಕೆಂದರೆ ಈ ತಿಂಗಳಿನಲ್ಲಿ ಪ್ರಮುಖ ಹಬ್ಬಗಳಾದ ರಕ್ಷಾ ಬಂಧನ ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಹಬ್ಬ, ಓಣಂ ಹೀಗೆ ಅನೇಕ ಹಬ್ಬಗಳು ಬರಲಿವೆ.

Festivals in the month of August 2020

ರಕ್ಷಾ ಬಂಧನ ಆಗಸ್ಟ್ 3ರಂದು ದೇಶದ ಎಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಳಿದ ಹಬ್ಬಗಳನ್ನು ಯಾವ ದಿನ ಆಚರಿಸಲಾಗುವುದು ಎಂಬುವುದದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

 ನೆಹರೂ ಟ್ರೋಫಿ ಸ್ನೇಕ್ ಬೋಟ್‌ ರೇಸ್‌

ನೆಹರೂ ಟ್ರೋಫಿ ಸ್ನೇಕ್ ಬೋಟ್‌ ರೇಸ್‌

ಬೋಟ್‌ ರೇಸ್‌ ಕೇರಳದ ಪ್ರಸಿದ್ಧ ಹಾಗೂ ಸಡಗರದ ಆಚರಣೆಗಳಲ್ಲಿ ಒಂದು. ನೆಹರೂ ಟ್ರೋಫಿ ಸ್ನೇಕ್ ಬೋಟ್‌ ರೇಸ್‌ ಅನ್ನು ಭಾರತದ ಕಂಡು ಖುಷಿಕೊಂಡು ಮೊದಲ ಪ್ರಧಾನಿ ನೆಹರೂ ಅವರ ನೆನಪಿಗಾಗಿ ಆಚರಿಸಲಾಗುವುದು. ನೆಹರೂ 1952ರಲ್ಲಿ ಕೇರಳದ ಅಲೆಪ್ಪಿಗೆ ಬಂದಾಗ ಅಲ್ಲಿ ಅವರಿಗೆ ಸಿಕ್ಕಂತಹ ಅಭೂತಪೂರ್ವ ಸ್ವಾಗತ ಕಂಡು ರೇಸ್‌ನಲ್ಲಿ ಟ್ರೋಪಿ ಸನ್ಮಾನಿಸಿದರು. ಅಲ್ಲಿಂದ ನೆಹರೂ ಅವರ ಹೆಸರಿನಲ್ಲಿ ರೇಸ್‌ ನಡೆಸಲಾಗುವುದು. ಸುಮಾರು 70 ಬೋಟ್‌ಗಳು ಈ ರೇಸ್‌ನಲ್ಲಿ ಪಾಲ್ಗೊಳ್ಳುತ್ತವೆ. ಆಗಸ್ಟ್ 8ರಂದು ಈ ಬೋಟ್‌ ರೇಸ್‌ಗೆ ದಿನಾಂಕ ನಿಗದಿಯಾಗಿದೆ.

 ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ

ವಿಷ್ಣುವಿನ 8ನೇ ಅವತಾರವಾದ ಭಗವಾನ್‌ ಕೃಷ್ಣನ ಜನ್ಮದಿನವನ್ನು ಭಾರತದಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ಈ ಹಬ್ಬದಲ್ಲಿ ಮೊಸರು ಕುಡಿಕೆ ಹೊಡೆಯುವ ಸ್ಪರ್ಧಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುವುದು. ಆದರೆ ಈ ವರ್ಷಕೊರೊನಾದಿಂದಾಗಿ ಜನರು ಹೆಚ್ಚಾಗಿ ಗುಂಪು ಸೇರ ಬಾರದು. ಈ ಕಾರಣದಿಂದಾಗಿ ಮೊಸರು ಕುಡಿಕೆ ಹೊಡೆಯುವ ಮಸ್ತಿಗೆ ಬ್ರೇಕ್ ಬೀಳಲಿದೆ. ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 11-12ರಂದು ಆಚರಿಸಲಾಗುವುದು.

ಬ್ಯಾಂಕ್ ಹಾಗೂ ತುಂಬಾ ಕಚೇರಿಗಳಲ್ಲಿ ಈ ದಿನ ರಜೆ ಇರಲಿದೆ.

 ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ

ಭಾರತೀಯರ ಸಡಗರದ ಹಬ್ಬ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಆಚರಿಸಲಾಗುವುದು. ಬ್ರಿಟಿಷ್‌ರ ಕಪಿಮುಷ್ಟಿಯಿಂದ ಭಾರತ ಸ್ವಾತಂತ್ರಗೊಂಡ ದಿನ. ಈ ದಿನವನ್ನು ಪ್ರತೀವರ್ಷ ತುಂಬ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಆದರೆ ಅತೀ ಹೆಚ್ಚು ಜನ ಸೇರಲು ಅವಕಾಶ ಇಲ್ಲದಿರಬಹುದು.

ಬ್ಯಾಂಕ್‌ ಹಾಗೂ ಕಚೇರಿಗಳಿಗೆ ರಜೆ ಇರಲಿದೆ

 ಗೌರಿ ಹಬ್ಬ

ಗೌರಿ ಹಬ್ಬ

ಗೌರಿ ಹಬ್ಬ ಹೆಣ್ಮಕ್ಕಳ ಹಬ್ಬ. ಸೌಭಾಗ್ಯಕ್ಕಾಗಿ ಪ್ರಾರ್ಥಿಸಿ ಹೆಣ್ಮಕ್ಕಳು ಈ ಹಬ್ಬ ಮಾಡುತ್ತಾರೆ. ಮೊದಲು ಗೌರಿಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗುವುದು. ಗೌರಿ ಹಬ್ಬವನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಗೌರಿಯನ್ನು ಪೂಜಿಸುವುದರಿಂದ ಪತಿ, ಮಕ್ಕಳಿಗೆ ಒಳಿತಾಗುತ್ತದೆ, ಮನೆಯಲ್ಲಿ ಸಂಪತ್ತು ನೆಲೆಸುವುದು.

ಗಣೇಶ ಚತುರ್ಥಿ

ಗಣೇಶ ಚತುರ್ಥಿ

ವಿಘ್ನ ನಿವಾರಕ ಗಣೇಶನ ಹಬ್ಬವನ್ನು ಆಗಸ್ಟ್ 22ರಂದು ಆಚರಿಸಲಾಗುವುದು. ಗಣೇಶನ ಹಬ್ಬ ಎಂದರೆ ತುಂಬಾ ಸಡಗರದ ಹಬ್ಬ. ಮನೆಗಳಲ್ಲಿ, ಬೀದಿಗಳಲ್ಲಿ ಗಣಪನನ್ನು ಕೂರಿಸಿ, ಪೂಜಿಸಿ, ಅದ್ಧೂರಿಯ ಮೆರವಣಿಗೆ ಮಾಡಿ ವಿಸರ್ಜನೆ ಮಾಡುತ್ತಿದ್ದರು. ಈ ಬಾರಿ ಗಣೇಶ ಚತುರ್ಥಿ ಸರಳವಾಗಿ ಆಚರಿಸಬೇಕಾಗಿದೆ.

ಗಣೇಶ ಹಬ್ಬಕ್ಕೆ ಸಾರ್ವಜನಿಕ ರಜೆ ಇರಲಿದೆ.

 ಮೊಹರಂ

ಮೊಹರಂ

ಮೊಹರಂ ಹಬ್ಬವನ್ನು ಆಗಸ್ಟ್ 309ರಂದು ಆಚರಿಸಲಾಗುವುದು. ಇಸ್ಲಾಮಿಕ್ ಕ್ಯಾಲೆಂಡರ್‌ನ ಪ್ರಥಮ ತಿಂಗಳೇ ಮೊಹರಂ. ಚಂದ್ರನ ಚಲನೆಯನ್ನು ಆಧರಿಸಿರುವ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ನಾಲ್ಕು ತಿಂಗಳುಗಳನ್ನು ಪವಿತ್ರ ಮಾಸಗಳೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಪ್ರವಾದಿ ಹುಸೇನ್‌ರ ಸ್ಮರಣಾರ್ಥವಾಗಿ ಆಚರಿಸಲಾಗುವುದು.

 ಓಣಂ

ಓಣಂ

ಓಣಂ ಕೇರಳದ ಪ್ರಮುಖ ಹಬ್ಬವಾಗಿದೆ. 10 ದಿನಗಳ ಹೂವಿನ ರಂಗೋಲಿ ಬಿಡಿಸಿ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಹತ್ತು ದಿನವೂ ಸಡಗರದ ದಿನವಾಗಿದ್ದು 9 ಹಾಗೂ 10ನೇ ದಿನವನ್ನು ತುಂಬಾ ವಿಜೃಂಭಣೆಯಿಮದ ಆಚರಿಸಲಾಗುವುದು. ಹೂಗಳ ರಂಗೋಲಿ ಹಾಕಿ ಬಲಿ ಚಕ್ರವರ್ತಿಯನ್ನು ಸ್ವಾಗತಿಸಲು ಈ ಹಬ್ಬ ಆಚರಿಸಲಾಗುವುದು ಎಂಬ ಪೌರಾಣಿಕ ಕತೆ ಇದೆ.

 ಇತರ ಆಚರಣೆ

ಇತರ ಆಚರಣೆ

ಅಲ್ಲದೆ ಆಗಸ್ಟ್‌ನಲ್ಲಿ ಆಗಸ್ಟ್ 15ಕ್ಕೆ ಶ್ರಾವಣ ಏಕಾದಶಿ ಆಚರಿಸಲಾಗುವುದು

ಆಗಸ್ಟ್ 16ಕ್ಕೆ ಪ್ರದೋಷ ವ್ರತ ಮಾಡಲಾಗುವುದು

ಆಗಸ್ಟ್ 17ಕ್ಕೆ ಶ್ರಾವಣ ಸೋಮವಾರ ಆಚರಿಸಲಾಗುವುದು

ಆಗಸ್ಟ್ 29ಕ್ಕೆ ಪದ್ಮ ಏಕಾದಶಿ ಆಚರಿಸಲಾಗುವುದು.

English summary

Festivals and Vrats in the month of August 2020

Here are list of festivals in the month os August 2020, read on,
X
Desktop Bottom Promotion