For Quick Alerts
ALLOW NOTIFICATIONS  
For Daily Alerts

ಗುರುವಾರದ ದಿನ ಭವಿಷ್ಯ (24-10-2019)

|

ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ ಯಶಸ್ಸು ಉಂಟಾಗುವುದು ಎನ್ನಲಾಗುತ್ತದೆ.

ಗುರುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ಗುರುವು ಈದಿನ ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಿದ್ದಾನೆ ಎನ್ನುವುದನ್ನು ಅರಿಯಬೇಕೆಂದರೆ ಈ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ...

ಮೇಷ: 21 ಮಾರ್ಚ್ - 19 ಏಪ್ರಿಲ್

ಮೇಷ: 21 ಮಾರ್ಚ್ - 19 ಏಪ್ರಿಲ್

ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಉತ್ತಮವಾದ ದಿನ. ಹೊಸ ಹೂಡಿಕೆಗೆ ಮುಂದಾಗಬಹುದು. ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಅದರಿಂದ ದೊಡ್ಡ ಲಾಭಗಳನ್ನು ಪಡೆಯಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡೆತಡೆಯನ್ನು ಅನುಭವಿಸಬೇಕಾಗುವುದು. ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಇದ್ದಕ್ಕಿದ್ದಂತೆ ಹದಗೆಡಬಹುದು ಅಥವಾ ನಿಮ್ಮ ಅಮೂಲ್ಯ ಕಾಗದ ಪತ್ರಗಳು ಕಳೆದು ಹೋಗಬಹುದು. ಪರಿಸ್ಥಿತಿಯಿಂದ ಉದ್ವೇಗಕ್ಕೆ ಒಳಗಾಗಬೇಡಿ. ನಿಮ್ಮ ಸಮಸ್ಯೆಗೆ ಶಾಂತವಾಗಿ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಒಡಹುಟ್ಟಿದವರು ಬೆಂಬಲ ನೀಡುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಸಂಜೆ ನಡಿಗೆಯನ್ನು ಕೈಗೊಳ್ಳುವಿರಿ. ಅದರಿಂದ ನಿಮಗೆ ಸಂತೋಷ ದೊರೆಯುವುದು. ಆರೋಗ್ಯ ಇಂದು ಉತ್ತಮವಾಗಿರುತ್ತವೆ ಮತ್ತು ನೀವು ಸಕ್ರಿಯರಾಗಿರುತ್ತೀರಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 42

ಅದೃಷ್ಟ ಸಮಯ: ಸಂಜೆ 6 - ರಾತ್ರಿ 9:00

ವೃಷಭ: 20 ಏಪ್ರಿಲ್ - 20 ಮೇ

ವೃಷಭ: 20 ಏಪ್ರಿಲ್ - 20 ಮೇ

ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಇಂದು ಪರಿಹಾರ ಕಾಣುವುದು. ಅದರೊಂದಿಗೆ ನೀವು ದೊಡ್ಡ ಲಾಭವನ್ನು ಸಹ ಪಡೆದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಪ್ರಣಯವು ಪುನರುಜ್ಜೀವನಗೊಳ್ಳಬೇಕೆಂದು ನೀವು ಬಯಸಿದರೆ, ಮೊದಲು ನಿಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕು. ಪ್ರತಿಯೊಂದು ವಿಷಯದಲ್ಲೂ ಸಂಗಾತಿಗೆ ಕಿರಿಕಿರಿ ಉಂಟುಮಾಡಬೇಡಿ. ಸಂಗಾತಿಯೊಂದಿಗಿನ ಕೆಲವು ಭಿನ್ನಾಭಿಪ್ರಾಯಗಳು ಇಂದು ಗಂಭೀರವಾಗಬಹುದು. ಅವರನ್ನು ನಿರ್ಲಕ್ಷಿಸಬೇಡಿ. ಸಂಗಾತಿಯೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿ. ಹಣದ ವಿಷಯಗಳು ಸಾಮಾನ್ಯವಾಗಿರುತ್ತವೆ. ನಿಮ್ಮ ಬಜೆಟ್ ಪ್ರಕಾರ ನೀವು ಖರ್ಚು ಮಾಡುತ್ತೀರಿ. ನೀವು ಅಧಿಕೃತ ಉದ್ದೇಶಗಳಿಗೆ ನೀವು ಪ್ರಯಾಣ ಕೈಗೊಳ್ಳಬೇಕಾಗಬಹುದು.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 17

ಅದೃಷ್ಟ ಸಮಯ: ರಾತ್ರಿ 8:20 - ರಾತ್ರಿ 8:40

ಮಿಥುನ: 21 ಮೇ - 20 ಜೂನ್

ಮಿಥುನ: 21 ಮೇ - 20 ಜೂನ್

ಇಂದು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುವಿರಿ. ನಿಮ್ಮ ಪ್ರೀತಿಪಾತ್ರರರ ಜೊತೆ ಸಮಯ ಕಳೆಯಲು ಹೆಚ್ಚು ಗಮನ ಹರಿಸುತ್ತೀರಿ. ಬಹಳ ಸಮಯದ ನಂತರ ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ವಾಕ್ ಮಾಡಬಹುದು. ಅದು ನಿಮ್ಮ ಮನಸ್ಸನ್ನು ಸಂತೋಷಗೊಳಿಸುತ್ತದೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಕಡಿಮೆ ಕೆಲಸದ ಹೊರೆಯಿಂದಾಗಿ ಒತ್ತಡ ಕಡಿಮೆಯಾಗಿರುತ್ತದೆ. ನೀವು ವ್ಯಾಪಾರ ಮಾಡಿದರೆ, ದೊಡ್ಡ ಸಮಸ್ಯೆ ಇದ್ದಕ್ಕಿದ್ದಂತೆ ಉದ್ಭವಿಸಬಹುದು. ವಿಶೇಷವಾಗಿ ನೀವು ಹೊಸ ಒಪ್ಪಂದವನ್ನು ಅಂತಿಮಗೊಳಿಸಲು ಮುಂದಾಗುವಿರಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಹಣದ ಕೊರತೆಯಿಂದಾಗಿ ಪೂರ್ಣಗೊಳ್ಳದ ಕಾಮಗಾರಿ ಇಂದು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆರೋಗ್ಯದ ದೃಷ್ಟಿಯಿಂದ ದಿನಗಳು ಅನುಕೂಲಕರವಾಗಿರುತ್ತದೆ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಸಂಜೆ 4:05 - ರಾತ್ರಿ 9:00

ಕರ್ಕ: 21 ಜೂನ್ - 22 ಜುಲೈ

ಕರ್ಕ: 21 ಜೂನ್ - 22 ಜುಲೈ

ಉದ್ಯೋಗ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ನಿಮ್ಮನ್ನು ಅಸೂಯೆಪಡಿಸುವ ಕೆಲವು ಸಹೋದ್ಯೋಗಿಗಳ ಬಗ್ಗೆ ಜಾಗರೂಕರಾಗಿರಿ. ಬಹುಶಃ ಇಂದು ಅವರು ನಿಮ್ಮ ಪ್ರಮುಖ ಕೆಲಸಕ್ಕೆ ಅಡ್ಡಿಯಾಗಬಹುದು. ನೀವು ಕಠಿಣ ಪರಿಶ್ರಮದ ಮನ್ನಣೆ ಪಡೆಯಲು ಪ್ರಯತ್ನಿಸಬಹುದು. ಸಂಗಾತಿಯೊಂದಿಗೆ ಯಾವುದೇ ವಿವಾದವನ್ನು ಮಾಡದಿರಿ. ಇಲ್ಲದಿದ್ದರೆ ನೀವು ಕೆಲವು ದೊಡ್ಡ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬ ಜೀವನವು ಸಾಮಾನ್ಯವಾಗಿಯೇ ಇರುತ್ತದೆ. ಸಂಗಾತಿಯೊಂದಿಗೆ ಹೆಚ್ಚುವರಿ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಪ್ರಿಯರಿಗೆ ಸುಂದರವಾದ ಉಡುಗೊರೆಯನ್ನು ನೀಡಲು ಇಂದು ಸೂಕ್ತ ದಿನ. ಕೆಲವು ಆರ್ಥಿಕ ಲಾಭವನ್ನು ಪಡೆಯುವಿರಿ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಬೆಳಿಗ್ಗೆ 5:15 - ಮಧ್ಯಾಹ್ನ 3:00

ಸಿಂಹ: 23 ಜುಲೈ - 22 ಆಗಸ್ಟ್

ಸಿಂಹ: 23 ಜುಲೈ - 22 ಆಗಸ್ಟ್

ಇಂದು ನಿಮಗೆ ಅಷ್ಟು ಅನುಕೂಲಕರವಲ್ಲದ ದಿನ ಎನ್ನಬಹುದು. ಹಲವು ಸಂಗತಿಗಳಲ್ಲಿ ಬೇಸರವನ್ನು ಅನುಭವಿಸುವಿರಿ. ನಿಮ್ಮ ಕುಟುಂಬದ ಬೆಂಬಲ ಸಿಗದ ಕಾರಣ ನೀವು ತುಂಬಾ ನಿರಾಶೆಗೊಳ್ಳುವಿರಿ. ಪೋಷಕರು ನಿಮ್ಮ ಬಗ್ಗೆ ಬೇಸರವನ್ನು ವ್ಯಕ್ತಪಡಿಸುವರು. ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಸಂಗಾತಿಯು ಕಷ್ಟದ ಸಮಯದಲ್ಲಿ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಿರಿ. ಇಂದು ಬಹುತೇಕ ವಿಷಯದಲ್ಲಿ ಏರಿಳಿತವನ್ನು ಅನುಭವಿಸುವಿರಿ. ಇಂದು ನೀವು ಯಾವುದೇ ವಿಶೇಷ ಫಲಿತಾಂಶಗಳನ್ನು ಪಡೆಯುವುದಿಲ್ಲ. ಆರೋಗ್ಯ ಕುಸಿಯಬಹುದು. ಯಾವ ಅನಾರೋಗ್ಯದ ಬಗ್ಗೆಯೂ ನಿರ್ಲಕ್ಷ್ಯವನ್ನು ತೋರದಿರಿ.

ಅದೃಷ್ಟ ಬಣ್ಣ: ತಿಳಿ ಹಳದಿ

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ದಿನವು ಸಂತೋಷದಾಯಕ ಮತ್ತು ವಿನೋದಮಯವಾಗಿರುತ್ತದೆ. ನೀವು ಸ್ನೇಹಿತರೊಂದಿಗೆ ಮನರಂಜನಾ ಚಟುವಟಿಕೆಗಳಲ್ಲಿ ತೊಡಗುತ್ತೀರಿ. ಕೆಲಸದ ವಿಷಯದಲ್ಲಿ ದಿನವು ಫಲಪ್ರದವಾಗಿರುತ್ತದೆ. ನಿಮ್ಮ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಬಹುಮಾನ ದೊರೆಯುವ ಸಾಧ್ಯತೆಯಿದೆ. ನಿಮ್ಮ ಹಿರಿಯರು ಇಂದು ಬೆಂಬಲ ನೀಡುತ್ತಾರೆ. ಮತ್ತು ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಉದ್ಯಮಿಗಳಿಗೆ ದೊಡ್ಡ ಲಾಭ ದೊರೆಯುವುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರಣಯ ಜೀವನದಲ್ಲಿ ಒಂದು ಸುಂದರವಾದ ತಿರುವು ಕಾಯುತ್ತದೆ. ನಿಮ್ಮ ಸಂಗಾತಿಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಬೆಳಿಗ್ಗೆ 8:25 - ಮಧ್ಯಾಹ್ನ 12:55

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ನಿಮ್ಮ ಆಲೋಚನೆಗಳಲ್ಲಿ ಸ್ಪಷ್ಟತೆ ಪಡೆದುಕೊಂಡು ಪ್ರಮುಖ ವಿಷಯಗಳತ್ತ ಗಮನ ಹರಿಸಿ. ಅನುಚಿತ ವಿಷಯಗಳ ಬಗ್ಗೆ ಅನಗತ್ಯವಾಗಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಇಂದು ಕುಟುಂಬ ಜೀವನದಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧ ಹದಗೆಡಬಹುದು. ನಿಮ್ಮ ನಡವಳಿಕೆ ಮತ್ತು ಮಾತನ್ನು ಸಮತೋಲನದಲ್ಲಿಡುವುದು ಉತ್ತಮ. ನಿಮ್ಮ ಸಂಗಾತಿಯ ಆರೋಗ್ಯವು ಇಂದು ಕಳವಳಕಾರಿಯಾಗಿರುತ್ತದೆ. ಅವರಿಗೆ ಉತ್ತಮ ಆರೈಕೆ ಮತ್ತು ಚಿಕಿತ್ಸೆಯ ಅಗತ್ಯವಿರುವುದರಿಂದ ಉತ್ತಮ ವೈದ್ಯರನ್ನು ಸಂಪರ್ಕಿಸಿ. ಹಳೆಯ ಸಾಲವು ನಿಮ್ಮನ್ನು ಕಾಡುತ್ತದೆ. ಅನುಚಿತ ವಿಷಯಗಳಿಗೆ ಹಣವನ್ನು ವ್ಯರ್ಥ ಮಾಡದಿರಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಮಧ್ಯಾಹ್ನ 12:20 - ಸಂಜೆ 4:00

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ದಾಂಪತ್ಯ ಜೀವನದಲ್ಲಿ ಸಂತೋಷ ಇರತ್ತದೆ. ನಿಮ್ಮ ಪರಸ್ಪರ ತಿಳುವಳಿಕೆಯಿಂದಾಗಿ ಸಂಗಾತಿಯ ಪ್ರೀತಿ ಹೆಚ್ಚಾಗುತ್ತದೆ . ಕುಟುಂಬದಲ್ಲಿ ಶಾಂತಿ ಮುಂದುವರಿಯುತ್ತದೆ. ಪೋಷಕರೊಂದಿಗಿನ ನಿಮ್ಮ ಸಂಬಂಧವೂ ಉತ್ತಮವಾಗಿರುತ್ತದೆ. ಈ ರಾಶಿಚಕ್ರ ಚಿಹ್ನೆಯ ಪ್ರೇಮಿಗಳು ಇಂದು ಜಾಗರೂಕರಾಗಿರಬೇಕು. ನೀವು ವಿಷಾದಿಸಬೇಕಾದ ಕೆಲಸವನ್ನು ಮಾಡಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಇದ್ದಕ್ಕಿದ್ದಂತೆ ಸಂಪತ್ತು ಪಡೆಯುವ ಸಾಧ್ಯತೆಯಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸಮಯವು ಅನುಕೂಲಕರವಾಗಿಲ್ಲ. ನಿರ್ಧಾರವನ್ನು ಕೆಲವು ದಿನಗಳವರೆಗೆ ತಡೆಹಿಡಿಯಿರಿ. ಇಂದು ಪ್ರಯಾಣಿಸುವುದನ್ನು ತಪ್ಪಿಸಿ. ಇದು ನಿಮ್ಮ ದಣಿವು ಮತ್ತು ಆರೋಗ್ಯವನ್ನು ಹಾಳುಮಾಡುವುದು.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಮಧ್ಯಾಹ್ನ 2:00 - ಸಂಜೆ 4:20

ಧನು : 22 ನವೆಂಬರ್ - 21 ಡಿಸೆಂಬರ್

ಧನು : 22 ನವೆಂಬರ್ - 21 ಡಿಸೆಂಬರ್

ನಿಮ್ಮ ಜೀವನದ ಏರಿಳಿತಗಳಿಂದ ನೀವು ತೊಂದರೆಗೀಡಾಗುತ್ತೀರಿ. ಆದರೆ ಪರಿಸ್ಥಿತಿ ಉತ್ತಮವಾಗಿ ಸುಧಾರಿಸುತ್ತಿದೆ ಎಂದು ನೀವು ಭಾವಿಸುವಿರಿ. ನಿಮ್ಮ ಸುತ್ತಲೂ ಸಕಾರಾತ್ಮಕತೆ ಇರುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಐಕ್ಯತೆ ಕಾಣಿಸುತ್ತದೆ. ನಿಮ್ಮ ಒಡಹುಟ್ಟಿದವರು ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತಾರೆ. ತಾಯಿಯ ಆರೋಗ್ಯವೂ ಸುಧಾರಿಸುತ್ತದೆ. ಇಂದು ಯಾವುದೇ ಆತುರದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಸಂಜೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಬೆಳಿಗ್ಗೆ 9:00 - ಮಧ್ಯಾಹ್ನ 1:30

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ದಿನವು ಅದೃಷ್ಟಶಾಲಿಯಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಫಲಪ್ರದ ಫಲಿತಾಂಶವನ್ನು ಪಡೆಯುತ್ತೀರಿ. ಪ್ರಚಾರದೊಂದಿಗೆ ನಿಮ್ಮ ಕನಸು ನನಸಾಗಬಹುದು. ನಿಮಗೆ ಸಾಕಷ್ಟು ಲಾಭ ದೊರೆಯುತ್ತದೆ. ಇಂದು ನೀವು ಕೆಲವು ಹೊಸ ಕೆಲಸಗಳನ್ನು ಮಾಡಬಹುದು. ಕುಟುಂಬದ ಜೀವನವು ಸಂತೋಷವಾಗಿ ಉಳಿಯುತ್ತದೆ. ಮನೆಯಲ್ಲಿ ಶಾಂತಿಯುತ ವಾತಾವರಣವಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವೂ ಉತ್ತಮವಾಗಿರುವುದು. ಸಂಗಾತಿಯೊಂದಿಗಿನ ತಪ್ಪುಗ್ರಹಿಕೆಯನ್ನು ತೆರವುಗೊಳಿಸಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಲಿದೆ. ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಬೆಳಿಗ್ಗೆ 8:00 - ಮಧ್ಯಾಹ್ನ 12:30

ಕುಂಭ: 20 ಜನವರಿ - 18 ಫೆಬ್ರವರಿ

ಕುಂಭ: 20 ಜನವರಿ - 18 ಫೆಬ್ರವರಿ

ಅತಿಥಿಯ ಅನಿರೀಕ್ಷಿತ ಭೇಟಿಯಿಂದ ನಿಮಗೆ ಸ್ವಲ್ಪ ಕಿರಿಕಿರಿ ಉಂಟಾಗುವುದು. ಸಂಗಾತಿಯ ವೇಗದ ಮನೋಭಾವವು ನಿಮ್ಮಿಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಬಹುದು. ಇಂದು ನೀವು ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಅದು ನಿಮ್ಮ ಮಕ್ಕಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ಪ್ರಯತ್ನಿಸಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಯಾವುದೇ ದೊಡ್ಡ ಖರ್ಚು ಮಾಡುವ ಹವಣಿಕೆಯಲ್ಲಿದ್ದರೆ ಅದನ್ನು ಸ್ವಲ್ಪ ಸಮಯದ ವರೆಗೆ ಮುಂದೂಡಿ. ಇಲ್ಲದಿದ್ದರೆ ಅದು ನಿಮಗೆ ತೊಂದರೆಯಾಗಬಹುದು. ಪ್ರಣಯ ಜೀವನದಲ್ಲಿ ಆಸಕ್ತಿದಾಯಕವಾದದ್ದನ್ನು ಇಂದು ನಿರೀಕ್ಷಿಸಬಹುದು. ನಿಮ್ಮ ಸಂಗಾತಿ ನಿಮ್ಮಿಂದ ವಾಗ್ದಾದ ಮಾಡಬಹುದು.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 5

ಅದೃಷ್ಟ ಸಮಯ: ಸಂಜೆ 5:00 - ರಾತ್ರಿ 9:40

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ: 19 ಫೆಬ್ರವರಿ - 20 ಮಾರ್ಚ್

ಇಂದು ನೀವು ಮೋಜಿನ ಮನಸ್ಥಿತಿಯಲ್ಲಿರುತ್ತೀರಿ. ನೀವು ಕೆಲವು ಸಮಯದಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೀರಿ. ಇದೀಗ ಸ್ವಲ್ಪ ಸಮಯ ವಿಶ್ರಮಿಸಿ. ಹಣದ ವಿಷಯದಲ್ಲಿ ಇಂದು ಮಿಶ್ರ ಫಲಿತಾಂಶವನ್ನು ಪಡೆಯುವಿರಿ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ಇಂದು ನೀವು ಬಾಕಿ ಉಳಿದಿರುವ ಕೆಲವು ಬಿಲ್ ಪಾವತಿಸಬೇಕಾಗಬಹುದು. ಕುಟುಂಬ ಸದಸ್ಯರಲ್ಲಿ ಪರಸ್ಪರ ಹೊಂದಾಣಿಕೆ ಕ್ಷೀಣಿಸುತ್ತಿರುವುದರಿಂದ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ನೀವು ಇಂದು ಆಯಾಸ ಅನುಭವಿಸಬಹುದು. ವಿಶ್ರಾಂತಿಗೆ ಗಮನ ಕೊಡಿ. ಇಲ್ಲದಿದ್ದರೆ ನೀವು ಮಾನಸಿಕ ಒತ್ತಡ ಹಾಗೂ ಬೇಸರಕ್ಕೆ ಒಳಗಾಗಬಹುದು.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಮಧ್ಯಾಹ್ನ 12:00 - ಸಂಜೆ 7:30

English summary

Daily Horoscope 24 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Thursday, October 24, 2019, 4:00 [IST]
X