For Quick Alerts
ALLOW NOTIFICATIONS  
For Daily Alerts

ಈ 5 ರಾಶಿಚಕ್ರದವರು ವಿದ್ಯಾಭ್ಯಾಸದಲ್ಲಿ ಅತ್ಯಂತ ಬುದ್ಧಿವಂತರಾಗಿರುತ್ತಾರಂತೆ!

|

ವ್ಯಕ್ತಿಯ ಬುದ್ಧಿವಂತಿಕೆಯು ಅವನು ತೋರುವ ವರ್ತನೆ ಹಾಗೂ ಮಾತಿನಲ್ಲಿ ಅಡಕವಾಗಿರುತ್ತದೆ. ವ್ಯಕ್ತಿ ಪಡೆದುಕೊಳ್ಳುವ ಜ್ಞಾನ ಹಾಗೂ ಬುದ್ಧಿವಂತಿಕೆಯು ಅವನು ಪಡೆದುಕೊಂಡ ಪುಸ್ತಕ ಜ್ಞಾನದಿಂದ ಹಾಗೂ ಬೆಳೆದುಬಂದ ಪರಿಸರದ ಪ್ರಭಾವದಿಂದ ಎಂದು ಹೇಳಲಾಗುವುದು. ಬಹುತೇಕ ಮಂದಿ ಪುಸ್ತಕಗಳು, ಪತ್ರಿಕೆಗಳು, ಸಾಕ್ಷ್ಯ ಚಿತ್ರಗಳು ಹಾಗೂ ಇನ್ನಿತರ ಪುಸ್ತಕದ ಮೂಲಗಳಿಂದಲೇ ಅಧಿಕ ಜ್ಞಾನ ಮತ್ತು ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ ಎಂದು ಹೇಳಲಾಗುವುದು. ದೇಶವನ್ನು ಸುತ್ತಲು ಸಾಧ್ಯವಾಗದೆ ಇದ್ದರೆ ಕೋಶವನ್ನು ಓದಿಯಾದರೂ ಜ್ಞಾನವನ್ನು ಪಡೆದುಕೊಳ್ಳಬಹುದು ಎನ್ನುವ ಮಾತು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ.

ಜ್ಞಾನ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಜ್ಯೋತಿಯನ್ನು ಬೆಳಗಿಸುವುದು. ಅಂದಕಾರದಿಂದ ಬೆಳಕಿನತ್ತ ತನ್ನ ಜೀವನವನ್ನು ಕೊಂಡೊಯ್ಯುವರು. ದೇಹದಲ್ಲಿ ಶಕ್ತಿಯಿಲ್ಲದಿದ್ದರೂ ಬುದ್ಧಿವಂತಿಕೆ ಇದೆ ಎಂದಾದರೆ ಎಂತಹ ಕೆಲಸವನ್ನಾದರೂ ನಿರ್ವಹಿಸಬಲ್ಲ ಎನ್ನುತ್ತಾರೆ. ಏಕೆಂದರೆ ದೇಹದಲ್ಲಿ ಶಕ್ತಿ ಹಾಗೂ ಬಲವಿದ್ದು, ಬುದ್ಧಿಯಲ್ಲಿ ಯೋಚನಾ ಶಕ್ತಿ ಹಾಗೂ ಸೃಜನ ಶೀಲತೆ ಇಲ್ಲದೆ ಹೋದರೆ ಅವರಿಗೆ ಜೀವನ ಬಹಳ ಕಷ್ಟ ಎನಿಸಬಹುದು. ಇಲ್ಲವೇ ಇತರರು ಅವರನ್ನು ತುಳಿಯಬಹುದು. ಅದೇ ದೇಹದಲ್ಲಿ ಶಕ್ತಿಯಿಲ್ಲದೆ ಹೋದರೂ ಬುದ್ಧಿವಂತಿಕೆ ಇದೆ ಎಂದಾಗ ಅವರು ಬಹುಬೇಗ ಕೆಲಸ ನಿರ್ವಹಿಸುವರು. ಜೀವನದಲ್ಲೂ ಯಶಸ್ಸನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ವಿಶೇಷ ಶಕ್ತಿ ಹಾಗೂ ಬುದ್ಧಿವಂತಿಕೆಯು ಇರುತ್ತದೆ. ಅದು ಅವರ ರಾಶಿಚಕ್ರ ಹಾಗೂ ನಕ್ರತ್ರಗಳ ಪ್ರಭಾವದಿಂದ ಬಂದಿರುತ್ತದೆ. ಗ್ರಹಗತಿಗಳ ಪ್ರಭಾವ ನಮ್ಮ ಕುಂಡಲಿಯಲ್ಲಿ ಯಾವ ರೀತಿಯ ಪ್ರಭಾವ ಬೀರುವುದು ಎನ್ನುವುದರ ಆಧಾರದ ಮೇಲೆ ನಮ್ಮ ಬುದ್ಧಿವಂತಿಕೆ ನಿರ್ಧರಿತವಾಗುವುದು. ಹನ್ನೆರಡು ರಾಶಿಕ್ರಗಳಲ್ಲಿ ಕೆಲವು ರಾಶಿಚಕ್ರದವರು ಅತ್ಯಂತ ಪುಸ್ತಕ ಪ್ರಿಯರು ಹಾಗೂ ಓದಿನಿಂದಲೇ ಹೆಚ್ಚು ಬುದ್ಧಿವಂತಿಕೆ ಹಾಗೂ ಜ್ಞಾನವನ್ನು ಪಡೆದುಕೊಂಡಿರುತ್ತಾರೆ. ಅದಕ್ಕಾಗಿ ಅವರಿಗೆ ಯಾವುದೇ ವಿಶೇಷ ಗ್ರಹಗಳ ಪ್ರಭಾವ ಬೇಕಿರುವುದಿಲ್ಲ ಎಂದು ಸಹ ಹೇಳಲಾಗುವುದು. ರಾಶಿಚಕ್ರಗಳಿಗೆ ಅನುಗುಣವಾಗಿ ಹುಟ್ಟಿನಿಂದಲೇ ವಿಶೇಷ ಜ್ಞಾನ ಶಕ್ತಿಯನ್ನು ಪಡೆದುಕೊಂಡಿರುತ್ತಾರೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಆ ರಾಶಿಚಕ್ರಗಳ ಪಟ್ಟಿಯಲ್ಲಿ ನಿಮ್ಮ ರಾಶಿ ಚಕ್ರವು ಇದೆಯೇ? ಅವರಲ್ಲಿ ಓದಿನ ಮಟ್ಟ ಹೇಗಿರುತ್ತದೆ? ಪುಸ್ತಕ ಜ್ಞಾನ ಜೀವನದಲ್ಲಿ ಎಂತಹ ಯಶಸ್ಸು ಹಾಗೂ ಅದೃಷ್ಟವನ್ನು ತಂದುಕೊಡುವುದು? ಎನ್ನುವಂತಹ ಅನೇಕ ವಿಷಯ ಅಥವಾ ಸಂಗತಿಗಳ ಕುರಿತು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ

ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಮಿಥುನ

ಮಿಥುನ

ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಮೂಕ ಪ್ರೇಕ್ಷಕರಾಗಿ ಇರುತ್ತಾರೆ. ಬಹುತೇಕ ಸಂದರ್ಭದಲ್ಲಿ ತಾರ್ಕಿಕ ಮನಸ್ಸನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಎಲ್ಲಾ ವಿಷಯದಲ್ಲೂ ವಿಶೇಷ ಅರ್ಥವನ್ನು ಕಂಡು ಕೊಳ್ಳುವರು. ಮಿತವಾಗಿ ಮಾತನಾಡುವ ಇವರು ಕೆಲವು ಸ್ನೇಹಿತರನ್ನು ಹೊಂದಿರುತ್ತಾರೆ. ತಾವು ಸಮಯವನ್ನು ಕಳೆಯುವ ವ್ಯಕ್ತಿಗಳೊಂದಿಗೆ ಅತ್ಯುತ್ತಮ ವರ್ತನೆಯನ್ನು ತೋರುವರು. ಗಾಸಿಪ್ ಹುಟ್ಟಿಸುವ ವ್ಯಕ್ತಿಗಳು ಹಾಗೂ ಸಮಯವನ್ನು ವ್ಯರ್ಥಮಾಡುವ ವ್ಯಕ್ತಿಗಳಿಂದ ಆದಷ್ಟು ದೂರ ಸರಿಯುವರು. ಇವರು ಹೆಚ್ಚಿನ ಸಮಯದಲ್ಲಿ ಪುಸ್ತಕವನ್ನು ಓದಲು ಬಯಸುತ್ತಾರೆ. ಇವರ ಅತ್ಯುತ್ತಮ ಸ್ನೇಹಿತ ಪುಸ್ತಕ ಎಂದರೆ ತಪ್ಪಾಗಲಾರದು. ಪುಸ್ತಕದಿಂದಲೇ ಅಪಾರ ಜ್ಞಾನವನ್ನು ಹೊಂದುವುದರ ಮೂಲಕ ಜೀವನದಲ್ಲಿ ಬಹುಬೇಗ ಯಶಸ್ಸನ್ನು ಕಂಡುಕೊಳ್ಳುವರು. ಜೊತೆಗೆ ಹಾಸ್ಯಗಳ ಮೂಲಕ ವಿನೋದವ ನ್ನುಂಟು ಮಾಡುವರು.

ಕನ್ಯಾ

ಕನ್ಯಾ

ಈ ರಾಶಿಯ ವ್ಯಕ್ತಿಗಳು ಬುಧನಿಂದ ಆಳಲ್ಪಡುವ ವ್ಯಕ್ತಿ ಗಳಾಗಿರುತ್ತಾರೆ. ಇವರು ಎಲ್ಲಾ ವಿಷಯದಲ್ಲೂ ತೀಕ್ಷ್ಣ ಬುದ್ಧಿಯನ್ನು ಹೊಂದಿದವರಾಗಿರುತ್ತಾರೆ. ಅಲ್ಲದೆ ಅತಿಯಾದ ಸೂಕ್ಷ್ಮತೆಯು ಇವರಲ್ಲಿ ಕೆಲವೊಮ್ಮೆ ತಾರ್ಕಿಕ ಮನೋಭಾವ ವನ್ನುಂಟು ಮಾಡುವುದು. ಸತ್ಯವನ್ನು ಹೇಳಲು ಹಾಗೂ ಕೇಳಲು ಬಯಸುವ ವ್ಯಕ್ತಿಗಳು ಇವರು. ಇವರು ಪಡೆದ ಜ್ಞಾನ ಹಾಗೂ ವಿಷಯವನ್ನು ಎಂದಿಗೂ ಮರೆಯುವುದಿಲ್ಲ. ತಮ್ಮ ನೆನಪಿನ ಗೂಡಿನಲ್ಲಿ ಶೇಖರಿಸಿಟ್ಟುಕೊಂಡಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ಇವರು ತಾವು ತಿಳಿದ ಪುಸ್ತಕ ಜ್ಞಾನದಿಂದಲೇ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಇವರು ಹೆಚ್ಚಿನ ಸಮಯವನ್ನು ಓದುವುದರಲ್ಲಿ ವ್ಯಯಿಸುವರು.

ತುಲಾ

ತುಲಾ

ಈ ರಾಶಿಯ ವ್ಯಕ್ತಿಗಳು ಅತ್ಯಂತ ಬುದ್ಧಿವಂತರು ಎಂದು ಹೇಳಲಾಗುವುದು. ಇವರು ಅತ್ಯಂತ ಕ್ರಿಯಾಶೀಲ ವ್ಯಕ್ತಿಗಳೂ ಹೌದು. ಇವರು ಕೈಗೊಳ್ಳುವ ನಿರ್ಧಾರ ಹಾಗೂ ಚಿಂತನೆಗಳು ಸಮತೋಲನ ಹಾಗೂ ಸತ್ಯದ ಪರವಾಗಿ ನಿಂತಿರುತ್ತದೆ. ಜೀವನದ ಪ್ರತಿಯೊಂದು ಹಂತದಲ್ಲೂ ಸಮತೋಲನವನ್ನು ಕಂಡುಕೊಳ್ಳುವರು. ಯಾವುದೇ ಸಂಗತಿ ಸಂಭವಿಸಿದರೂ ಅದರಿಂದ ಸತ್ಯವನ್ನು ಅರಿಯಲು ಪ್ರಯತ್ನಿಸುವರು. ಇವರು ಹೆಚ್ಚು ಪುಸ್ತಕ ಓದುವುದು ಹಾಗೂ ಅದರಿಂದಲೇ ತಮ್ಮ ಜ್ಞಾನವೃದ್ಧಿಯನ್ನು ಪಡೆದುಕೊಳ್ಳುವರು. ಅದು ಅವರಿಗೆ ಹೆಚ್ಚಿನ ಸಂತೋಷ ಹಾಗೂ ಯಶಸ್ಸನ್ನು ತಂದುಕೊಡುವುದು. ಶಾಂತಿ ಪ್ರಿಯರಾದ ಇವರು ಸತ್ಯದ ವರ್ತನೆ ಹಾಗೂ ನಿರ್ಣಯ ಕೈಗೊಳ್ಳುವುದರ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ತಾವು ಮಾತನಾಡುವ ಸಂದರ್ಭವು ಯೋಗ್ಯವಾಗಿದೆ ಎಂದಾಗ ಮಾತ್ರ ಮಾತನಾಡುವರು.

ಧನು

ಧನು

ಈ ರಾಶಿಯ ವ್ಯಕ್ತಿಗಳು ಅಸಾಧ್ಯ ಎನ್ನುವ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹಾಗೂ ಅನ್ವೇಷಣೆ ಮಾಡಲು ಪ್ರಯತ್ನಿಸುವರು. ಇವರು ಸಾಕಷ್ಟು ವಿಷಯಗಳಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಹಪಹಪಿಸುತ್ತಲೇ ಇರುತ್ತಾರೆ. ವಿಭಿನ್ನವಾದ ಜ್ಞಾನ ಪಡೆದು ಕೊಳ್ಳುವುದು, ಸಿದ್ಧಾಂತಗಳ ಬಗ್ಗೆ ಚರ್ಚೆ ನಡೆಸುವುದು

ಹಾಗೂ ಜಗತ್ತಿನ ಬಗ್ಗೆ ಹೆಚ್ಚು ಯೋಚಿಸುವುದು ಎಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ ಹಾಗೂ ಆಸೆಯನ್ನು ಹೊಂದಿರುತ್ತಾರೆ. ಅತ್ಯುತ್ತಮವಾಗಿ ಮಾತನಾಡಲು ಬಯಸುವ ಇವರು ಅಪಾರ ಜ್ಞಾನವನ್ನು ಓದುವುದರ ಮೂಲಕ ಪಡೆದುಕೊಳ್ಳುವರು. ಇವರ ಜ್ಞಾನವೇ ಇವರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸುವುದು.

ಮಕರ

ಮಕರ

ಈ ರಾಶಿಯ ವ್ಯಕ್ತಿಗಳು ಹುಟ್ಟಿನಿಂದಲೇ ಹೆಚ್ಚು ಪುಸ್ತಕ ಪ್ರಿಯರು ಎನ್ನಲಾಗುವುದು. ಅಲ್ಲದೆ ವೃತ್ತಿ ಆಧಾರಿತ ವಿದ್ಯಾರ್ಥಿಗಳು ಸಹ ಎನ್ನಬಹುದು. ಇವರು ತಾವು ಕೈಗೊಳ್ಳುವ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಗುರಿಯ ಬಗ್ಗೆ ಸಾಕಷ್ಟು ಜ್ಞಾನವನ್ನು ಪಡೆದುಕೊಳ್ಳದೆ ಮುಂದಿನ ಹೆಜ್ಜೆಯನ್ನು ಇಡರು. ಪುಸ್ತಕವನ್ನು ಓದುವ ಅದ್ಭುತ ಜ್ಞಾನಿಗಳು ಎಂದು ಸಹ ಹೇಳಬಹುದು. ಓದುವುದರ ಮೂಲಕ ಸಾಕಷ್ಟು ಜ್ಞಾನವನ್ನು ಪಡೆದುಕೊಂಡು ಜೀವನದಲ್ಲಿ ತೃಪ್ತಿಯನ್ನು ಪಡೆದುಕೊಳ್ಳುವರು. ವಿದ್ಯಾಭ್ಯಾಸದ ಸಂದರ್ಭದಲ್ಲೂ ಅದ್ಭುತ ವಿದ್ಯಾಭ್ಯಾಸ ನಡೆಸುವುದರ ಮೂಲಕ ಜ್ಞಾನವನ್ನು ಪಡೆದು ಕೊಳ್ಳುವರು. ಜೊತೆಗೆ ಅದ್ಭುತ ಪ್ರತಿಭಾವಂತರಾಗಿರುತ್ತಾರೆ. ತಾವು ನಡೆಸುವ ಕೆಲಸ-ವ್ಯಾಪಾರದಲ್ಲಿ ಅದ್ಭುತವಾದ ಜ್ಞಾನವನ್ನು ಹೊಂದಿರುತ್ತಾರೆ.

English summary

Zodiac Signs Known To Be Book Smart And Studious

Ever wondered how some people are just like walking libraries or have inbuilt ROM in their heads? Well, these belong to five specific zodiac signs, says astrology. You may call them studious or book smart, but once the information is stored, it can be retrieved whenever they want These are complete stores of knowledge.
X
Desktop Bottom Promotion