For Quick Alerts
ALLOW NOTIFICATIONS  
For Daily Alerts

ರವಿವಾರ ಜನಿಸಿದವರ ಜಾತಕ ಫಲ ಹೀಗಿರುತ್ತದೆ ನೋಡಿ

|

ವಿಶ್ವದ ಬಹುತೇಕ ಸಂಪ್ರದಾಯಗಳಲ್ಲಿ ರವಿವಾರವು ವಾರದ ಪ್ರಥಮ ದಿನವಾಗಿ ಪರಿಗಣಿಸಲ್ಪಡುತ್ತದೆ. ಸಾಮಾನ್ಯವಾಗಿ ರವಿವಾರದಂದು ಜನತೆ ವಿಶ್ರಾಂತಿ ಪಡೆದು ದೇವರ ಧ್ಯಾನ ಮಾಡುತ್ತಾರೆ. ಹಾಗೆಯೇ ಮುಂದಿನ ವಾರದ ಕೆಲಸಕ್ಕಾಗಿ ತಮ್ಮನ್ನು ತಾವು ಅಣಿಗೊಳಿಸುತ್ತಾರೆ. ಸೂರ್ಯದೇವ ಆಹ್ಲಾದಕರ ರವಿವಾರದ ಅಧಿಪತಿ ದೇವನಾಗಿರುವನು.

ಸೂರ್ಯನ ರೀತಿ ಬೆಳಗುವರು

ಸೂರ್ಯನ ರೀತಿ ಬೆಳಗುವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರವಿವಾರದಂದು ಜನಿಸಿದವರು ಸೂರ್ಯನ ರೀತಿಯಲ್ಲೇ ಪ್ರಭಾವಶಾಲಿಯಾಗಿ ಬೆಳಗುತ್ತಾರೆ ಎನ್ನಲಾಗಿದೆ. ಸಾಮಾನ್ಯ ವಸ್ತುಗಳಿಂದ ಇವರ ಮನಸ್ಸಿಗೆ ಸಮಾಧಾನವಾಗದು. ಗುಂಪಿನಲ್ಲಿ ಗೋವಿಂದನಾಗಲು ಇಷ್ಟಪಡದ ಇವರು ಎಲ್ಲರನ್ನೂ ಮೀರಿ ಉನ್ನತ ಸ್ಥಾನಕ್ಕೆ ಬೆಳೆಯಲು ಬಯಸುತ್ತಾರೆ. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಇವರು ಜೀವನದ ಎಲ್ಲ ತಿರುವುಗಳಲ್ಲಿ ಮುಂಚೂಣಿಯಲ್ಲಿರಲು ಬಯಸುತ್ತಾರೆ. ಧೈರ್ಯಶಾಲಿ, ಸ್ವ ಕೇಂದ್ರಿತ, ಹೆಮ್ಮೆಯ, ವಿನಯವಂತ ಹಾಗೂ ಆತ್ಮವಿಶ್ವಾಸದಿಂದ ತುಂಬಿರುವ ಈ ರವಿವಾರ ಜನಿಸಿದ ವ್ಯಕ್ತಿಗಳು ಸಮಾಜದ ಬಹು ದೊಡ್ಡ ಆಸ್ತಿ.

ರವಿವಾರ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ?

ರವಿವಾರ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ?

ಅಧಿದೇವ ಸೂರ್ಯನಿಂದ ನಿಯಂತ್ರಿಸಲ್ಪಡುವ ಇವರು ಯಾವಾಗಲೂ ಆಕರ್ಷಣೆಯ ಕೇಂದ್ರ ಬಿಂದುವಾಗಿರಲು ಮತ್ತು ಮನೆ ಹಾಗೂ ಸಮಾಜವನ್ನು ಹಿಡಿತದಲ್ಲಿರಿಸಿಕೊಳ್ಳಲು ಬಯಸುತ್ತಾರೆ. ಸೂರ್ಯನ ಸುತ್ತ ಎಲ್ಲ ಗ್ರಹಗಳು ಸುತ್ತುವ ರೀತಿಯಲ್ಲಿಯೇ ಇವರ ಆತ್ಮೀಯರು, ಮಕ್ಕಳು, ಸಾಕು ಪ್ರಾಣಿಗಳಿಂದ ಇವರು ಸುತ್ತುವರಿಯಲ್ಪಟ್ಟಿರುತ್ತಾರೆ. ಮೋಜಿನ ಹಾಗೂ ಮಹತ್ವಾ ಕಾಂಕ್ಷೆಯ ಜೀವನ ನಡೆಸಲು ಇವರು ಬಯಸುತ್ತಾರೆ.

ಆಗಾಗ ಪ್ರೀತಿಯಲ್ಲಿ ಆಟವಾಡುವುದು ಇವರ ಲಕ್ಷಣವಾಗಿದೆ. ಕಾಣಲು ತುಂಬಾ ವಿಶ್ವಾಸದಿಂದ ಇರುವಂತೆ ಕಂಡರೂ ಸಮಸ್ಯೆಗಳು ಎದುರಾದಾಗ ಒಳಗಿನಿಂದಲೇ ಸಿಕ್ಕಾಪಟ್ಟೆ ಕುಸಿದು ಹೋಗುತ್ತಾರೆ. ಯಾರು ಇವರಿಗೆ ಪ್ರಾಮುಖ್ಯತೆ ನೀಡುವರೋ ಅವರೊಂದಿಗೆ ಮಾತ್ರ ಇವರು ಗೆಳೆತನ ಮಾಡುವರು. ಸಂಖ್ಯೆ 1 ಇವರ ಅದೃಷ್ಟದ ಸಂಖ್ಯೆಯಾಗಿದೆ. ಇವರು ಪ್ರತಿದಿನ ಬೆಳಗ್ಗೆ ಅಥವಾ ಕನಿಷ್ಠ ರವಿವಾರದಂದು ಸೂರ್ಯನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ.

ರವಿವಾರ ಜನಿಸಿದವರ ವೃತ್ತಿ ಜೀವನ

ರವಿವಾರ ಜನಿಸಿದವರ ವೃತ್ತಿ ಜೀವನ

ರವಿವಾರ ಹುಟ್ಟಿದವರು ತಮ್ಮ ವೃತ್ತಿ ಜೀವನದಲ್ಲಿ ಸಹ ಸ್ವಾತಂತ್ರ್ಯವನ್ನು ಬಯಸುವರು. ಆರಿಸಿಕೊಂಡ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ತಪ್ಪು ವಿಚಾರಗಳಿಗೆ ಇವರು ರಾಜಿಯಾಗಲಾರರು. ಹೀಗಾಗಿ ಇವರೊಂದಿಗೆ ಕೆಲಸ ಮಾಡುವುದು ಬೇರೆಯವರಿಗೆ ಕಷ್ಟವೆನಿಸಬಹುದು. ಬುದ್ಧಿಶಕ್ತಿಯನ್ನು ಬಳಸಿ ಕೆಲಸ ಮಾಡುವ ವೃತ್ತಿಯನ್ನು ಇವರು ಆರಿಸಿಕೊಳ್ಳುವುದು ಒಳಿತು. ನಾಯಕತ್ವದ ಹುದ್ದೆಗಳು ಇವರಿಗೆ ಅತಿ ಸೂಕ್ತವಾಗಿವೆ. ಜಾಣತನ ಹಾಗೂ ಸ್ವಯಂ ಸ್ಫೂರ್ತಿಯಿಂದ ಇವರು ಜೀವನದಲ್ಲಿ ಉನ್ನತವಾದುದನ್ನು ಸಾಧನೆ ಮಾಡುತ್ತಾರೆ. ಆದರೆ ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಇತರ ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ಕೆಲಸ ಮಾಡುವುದು ಒಳಿತು.

ರವಿವಾರ ಜನಿಸಿದವರ ಪ್ರೀತಿ, ಪ್ರೇಮದ ಜೀವನ ಹೇಗಿರುತ್ತದೆ?

ರವಿವಾರ ಜನಿಸಿದವರ ಪ್ರೀತಿ, ಪ್ರೇಮದ ಜೀವನ ಹೇಗಿರುತ್ತದೆ?

ರವಿವಾರ ಹುಟ್ಟಿದವರು ಎಲ್ಲ ಸಂದರ್ಭಗಳಲ್ಲೂ ಸ್ವತಂತ್ರರಾಗಿ ಜೀವಿಸಲು ಇಷ್ಟ ಪಡುತ್ತಾರೆ. ಆದರೆ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುವ ಇವರ ಗೆಳೆಯರ ಬಳಗ ಸೀಮಿತವಾಗಿರುತ್ತದೆ. ಮೋಸ ಹೋಗುವ ಭೀತಿಯಿಂದ ಇವರು ಬೇರೆಯವರನ್ನು ಸುಲಭವಾಗಿ ನಂಬಲಾರರು. ಇದೇ ಕಾರಣದಿಂದ ಇವರಿಗೆ ಪ್ರೀತಿಯ ಸಂಗಾತಿ ದೊರಕುವುದು ಸಹ ಕಷ್ಟಕರವಾಗುತ್ತದೆ. ಆದರೆ ಒಮ್ಮೆ ಪ್ರೀತಿಯಲ್ಲಿ ಬಿದ್ದ ನಂತರ ಸಂಗಾತಿಯನ್ನು ಗಾಢವಾಗಿ ಪ್ರೀತಿಸಲಾರಂಭಿಸುತ್ತಾರೆ. ರವಿವಾರ ಜನಿಸಿದವರು ಸಾಮಾನ್ಯವಾಗಿ ಹಟಮಾರಿ ಹಾಗೂ ಮುಂಗೋಪಿಗಳಾಗಿರುವುದರಿಂದ ಪ್ರೀತಿಯ ಪಯಣದಲ್ಲಿ ಆಗಾಗ ಜಗಳ ಹಾಗೂ ಮನಸ್ತಾಪಗಳನ್ನು ಎದುರಿಸಬೇಕಾಗುತ್ತದೆ. ಸಂಗಾತಿಯ ಜೊತೆಗೆ ನೆಮ್ಮದಿಯಾಗಿ ಬಾಳಬೇಕಾದರೆ ಇವರು ಹೊಂದಾಣಿಕೆಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ ಹಾಗೂ ತಕ್ಷಣ ಭಾವನಾತ್ಮಕ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕಾಗುತ್ತದೆ.

MOST READ: ಮದುವೆಯಾದ ಮೂರೇ ನಿಮಿಷಕ್ಕೆ ಪತಿಗೆ ವಿಚ್ಛೇದನ ನೀಡಿದ ಮಹಿಳೆ!

ರವಿವಾರ ಜನಿಸಿದವರ ವೈವಾಹಿಕ ಜೀವನ

ರವಿವಾರ ಜನಿಸಿದವರ ವೈವಾಹಿಕ ಜೀವನ

ರವಿವಾರ ಜನಿಸಿದವರ ವೈವಾಹಿಕ ಜೀವನ ಸಿಹಿ ಕಹಿಗಳ ಮಿಶ್ರಣವಾಗಿರುತ್ತದೆ. ಯಾವಾಗಲೂ ಸ್ವತಂತ್ರವಾಗಿರಲು ಬಯಸುವ ಇವರು ತಮ್ಮಿಷ್ಟದಂತೆ ಜೀವಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಮನೆಯ ಹಾಗೂ ಹೊರಗಿನ ಜೀವನಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು ಕಷ್ಟವಾಗುತ್ತದೆ. ತಮ್ಮ ಅಹಂಕಾರ ಹಾಗೂ ಒಣ ಪ್ರತಿಷ್ಠೆಗಳಿಂದ ವೈವಾಹಿಕ ಜೀವನದಲ್ಲಿ ಮನಸ್ತಾಪ ತಂದುಕೊಳ್ಳುತ್ತಾರೆ. ತಮ್ಮಷ್ಟಕ್ಕೆ ತಾವಿರಲು ಬಯಸುವವರಾದರೂ ಸಂಬಂಧಗಳ ವಿಷಯ ಬಂದಾಗ ತಮ್ಮ ಮಾತೇ ನಡೆಯಬೇಕೆಂದು ಬಯಸುತ್ತಾರೆ.

ಸ್ವಯಂ ಪ್ರಶಂಸೆ ಹಾಗೂ ತೋರಿಕೆಯ ನಡವಳಿಕೆಯಿಂದ ಸಂಗಾತಿಗೆ ನೋವುಂಟು ಮಾಡುತ್ತಾರೆ. ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರ ಭಾವನೆಗಳನ್ನು ಗೌರವಿಸಿದಲ್ಲಿ ಇವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

English summary

People Born on Sunday Astrology

In most traditions of the world, Sunday is the first day of the week. People make use of Sundays to prepare for the week ahead, rest and worship. Sun is the ruler of this wonderful day. Those born on Sunday are truly shining stars like the sun. They are never satisfied with anything ordinary. They want to shine with a distinguished brilliance amidst other people. These are highly creative individuals who wish to place themselves in the first pale in every domain of life. These bold, self-centred, proud, noble and confident individuals are real assets to the society.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more