For Quick Alerts
ALLOW NOTIFICATIONS  
For Daily Alerts

ಮಗನು ಹಸ್ತಮೈಥುನ ಮಾಡಿಕೊಳ್ಳುವುದನ್ನು ಕಂಡು, ಪೋಷಕರು ಸಿಸಿ ಟಿವಿಯನ್ನು ಅಳವಡಿಸಿದರು!

|

"ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು" ಎನ್ನುವು ಅತ್ಯಂತ ಅರ್ಥ ಪೂರ್ಣವಾದ ಸತ್ಯ. ಮಕ್ಕಳ ಮನಸ್ಸು ಬಿಳಿಯ ಹಾಳೆ ಇದ್ದ ಹಾಗೆ ಇರುತ್ತದೆ. ಅವರ ಮನಸ್ಸಿನಲ್ಲಿ ನಾವು ಯಾವ ಬಗೆಯ ಭಾವನೆಯನ್ನು ಬೀರುತ್ತೇವೆ ಎನ್ನುವುದರ ಆಧಾರದ ಮೇಲೆ ಅವರ ಮನಃಸ್ಥಿತಿ ನಿಂತಿರುತ್ತದೆ. ಒಳ್ಳೆಯ ಆಚಾರ-ವಿಚಾರಗಳನ್ನು ಹೇಳಿಕೊಟ್ಟರೆ ಅದೇ ಭಾವನೆಗಳು ಸ್ಪಷ್ಟವಾಗುತ್ತವೆ. ಮಕ್ಕಳಲ್ಲಿ ವೀಕ್ಷಿಸುವ ಹಾಗೂ ಅದನ್ನು ತಮ್ಮ ವರ್ತನೆಯಲ್ಲಿ ಅಳವಡಿಸಿಕೊಳ್ಳುವ ಸಾಮಥ್ರ್ಯವೂ ಇರುವುದರಿಂದ ನಮ್ಮ ವರ್ತನೆಯಲ್ಲೂ ಸೂಕ್ತ ಹಿಡಿತ ಹಾಗೂ ಒಳ್ಳೆಯತನ ಇರಬೇಕಾಗುವುದು.

ವ್ಯಕ್ತಿ ಹುಟ್ಟಿದಾಗಿನಿಂದ ಬದಲಾವಣೆಗಳನ್ನು ವಿಶೇಷ ಚಿಂತನೆಗಳನ್ನು ಕಲಿಯುತ್ತಲೇ ಸಾಗುತ್ತಾರೆ. ಅಂತೆಯೇ ಪ್ರಾಯಕ್ಕೆ ಅಥವಾ ಹದಿ ಹರೆಯದ ವಯಸ್ಸಿಗೆ ಬಂದಾಗ ದೇಹದಲ್ಲಾಗುವ ಬದಲಾವಣೆಗಳು ಮತ್ತು ಹಾರ್ಮೋನ್ ವ್ಯತ್ಯಾಸಗಳಿಂದ ವರ್ತನೆಯಲ್ಲಿ ಸಾಹಕಷ್ಟು ಬದಲಾವಣೆಗಳು ಉಂಟಾಗುವುದು ಸಹಜ. ಅಂತಹ ಸಂದರ್ಭದಲ್ಲಿ ಮಕ್ಕಳು ಪಾಲಕರಿಂದ ಸ್ವಲ್ಪ ದೂರ ಸರಿಯುವುದು, ಕೆಲವು ವಿಷಯಗಳನ್ನು ಮರೆಮಾಚುವುದು, ವಿರುದ್ಧ ಲಿಂಗದವರೊಂದಿಗೆ ಹೆಚ್ಚು ಆಕರ್ಷಣೆಗೆ ಒಳಗಾಗುವುದು ಸಹಜವಾಗಿರತ್ತದೆ. ಅಂತಹ ಸಂದರ್ಭದಲ್ಲಿ ಪಾಲಕರು ವಿಶೇಷ ಕಾಳಜಿ ಹಾಗೂ ಬಹಳ ನಯವಾದ ರೀತಿಯಲ್ಲಿ ಮಕ್ಕಳನ್ನು ನಿಯಂತ್ರಿಸುವುದು ಹಾಗೂ ಒಳ್ಳೆಯ ಮಾರ್ಗದಲ್ಲಿ ನಡೆಯಲು ಸೂಚಿಸಬೇಕಾಗುತ್ತದೆ.

ಹದಿ ಹರೆಯದಲ್ಲಿ ಸಾಕಷ್ಟು ಜನರು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ದಿನ ಕಳೆದಂತೆ ಅದು ಅವರಿಗೊಂದು ಚಟ ಅಥವಾ ಹವ್ಯಾಸವಾಗಿ ಪರಿವರ್ತನೆಯಾಗಬಹುದು. ಅಂತಹ ವರ್ತನೆಯನ್ನು ನಿಯಂತ್ರಿಸಿಕೊಳ್ಳಲು ಕಷ್ಟವಾಗುವುದು. ಜೊತೆಗೆ ಮಾನಸಿಕವಾಗಿಯೂ ಕೆಲವು ತೊಂದರೆಯನ್ನು ಅನುಭವಿಸಬೇಕಾಗುವುದು. ಇಂತಹ ಒಂದು ಸ್ಥಿತಿಯ ಕುರಿತು ಇಲ್ಲೊಂದು ಪಾಲಕರು ತಮ್ಮ ಮಗನೊಂದಿಗೆ ನಡೆದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಮಗನ ವರ್ತನೆಯನ್ನು ನಿಯಂತ್ರಿಸಿದ್ದರು:

ಮಗನ ವರ್ತನೆಯನ್ನು ನಿಯಂತ್ರಿಸಿದ್ದರು:

ಇವರು ತಮ್ಮ ಮಗನು ಹಸ್ತ ಮೈಥುನ ಮಾಡಿಕೊಳ್ಳುವುದನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಇದರಿಂದ ಕೆಲವು ವರ್ತನೆಯನ್ನು ಮಗನಲ್ಲಿ ಕಂಡರು. ಅದು ಏನು? ಮಗನನ್ನು ಯಾವ ರೀತಿಯಲ್ಲಿ ಹಿಡಿದಿಟ್ಟುಕೊಂಡಿದ್ದರು ಎನ್ನುವುದನ್ನು ಮುಂದೆ ವಿವರಿಸಿದ್ದಾರೆ.

ಮಗನು ಹಸ್ತ ಮೈಥುನ ಮಾಡುವುದನ್ನು ಕಂಡರು:

ಮಗನು ಹಸ್ತ ಮೈಥುನ ಮಾಡುವುದನ್ನು ಕಂಡರು:

ದೇಹದಲ್ಲಾಗುವ ಬದಲಾವಣೆಗಳು ಹಾಗೂ ಮಾನಸಿಕ ಚಿಂತನೆಗಳಲ್ಲಿ ಭಿನ್ನತೆಯನ್ನು ತರುತ್ತದೆ. ಜೊತೆಗೆ ಕೆಲವು ಆಸೆಯನ್ನು ಹುಟ್ಟಿಸುವುದು ಸಹಜ. ಇಂತಹ ಒಂದು ಹಂತದಲ್ಲಿ ಇವರ ಮಗ ಇರುವಾಗ ಒಂದು ದಿನ ಮಗನ ಕೋಣೆಗೆ ಹೋದರು. ತಂದೆಯು ಬಾಗಿಲನ್ನು ತಟ್ಟದೆ ಕೋಣೆ ಒಳಗೆ ಹೋದರು. ಆಗ ಮಗನು ಮಾಡುತ್ತಿದ್ದ ವರ್ತನೆಯನ್ನು ಕಂಡು ಒಮ್ಮೆಲೇ ಕಿರುಚಿದರು. ಜೊತೆಗೆ ಹಾಗೆ ಮಾಡಬಾರದು ಎಂದು ಹೇಳಿದರು.

ಮುಂದೆ ಓದಿ...

ಮುಂದೆ ಓದಿ...

ಆ ಹುಡುಗ ಕೇವಲ 15 ವರ್ಷ ವಯಸ್ಸಿನ ಹದಿಹರೆಯದ ಹುಡುಗ. ಇವರು ಯುಎಸ್‍ಎ ಯ ಅಟ್ಲಾಂಟದವನು. ಇವನು ಸಾಮಾಜಿಕ ಜಾಲ ತಾಣದಲ್ಲಿ ಕೆಲವು ಸಲಹೆಯನ್ನು ಕೇಳಿದ್ದನು. ಅವನು ಹಾಕಿರುವ ಪೋಸ್ಟ್ ಅಲ್ಲಿ, ತನ್ನ ಪಾಲಕರು ನಾನು ಹಸ್ತ ಮೈಥುನ ಮಾಡಬಾರದು ಎಂದು ನನ್ನ ಕೋಣೆ ಹಾಗೂ ಸ್ನಾನದ ಕೋಣೆಯಲ್ಲಿ ಸಿಸಿಕ್ಯಾಮೆರಾ ಅನ್ನು ಅಳವಡಿಸಿದ್ದಾರೆ ಎಂದು ಹಾಕಿದ್ದನು.

Most Read: ಬಾಲಕಿಯ ಸೊಂಟ ಮುಟ್ಟಿದ ಬಾಲಕನನ್ನು ರಸ್ತೆಯಲ್ಲೇ ನಗ್ನವಾಗಿಸಿದ ತಾಯಿ!

ಅವನ ಪೋಷಕರು ಕ್ಯಾಮೆರಾದಲ್ಲಿ ವೀಕ್ಷಿಸುತ್ತಿದ್ದರು:

ಅವನ ಪೋಷಕರು ಕ್ಯಾಮೆರಾದಲ್ಲಿ ವೀಕ್ಷಿಸುತ್ತಿದ್ದರು:

ಹದಿ ಹರೆಯದ ಆ ಹುಡುಗ ಅಚಾನಕ್ ಆಗಿ ಹಸ್ತಮೈಥುನ ಮಾಡಿಕೊಳ್ಳುತ್ತಿರುವುದು ಪಾಲಕರ ಕಣ್ಣಿಗೆ ಬಿತ್ತು. ಆ ಕ್ಷಣದಿಂದಲೇ ಪಾಲಕರು ಈ ರೀತಿಯ ವರ್ತನೆ ಉಚಿತವಲ್ಲ. ಗುಪ್ತ ಅಂಗಾಂಗಗಳನ್ನು ಮುಟ್ಟಿಕೊಳ್ಳುವುದು ಸರಿಯಲ್ಲ ಎಂದು ಸಾಕಷ್ಟು ತಿಳಿಹೇಳಿದರು. ನಂತರ ಈ ವರ್ತನೆಯು ತನ್ನ ಮಗನಿಂದ ಮುಂದುವರಿಯಬಾರದು ಎಂದು ಅವನ ಮಲಗುವ ಕೋಣೆ ಹಾಗೂ ಸ್ನಾನದ ಕೋಣೆಯಲ್ಲಿ ಸಿಸಿ ಕ್ಯಾಮೆರಾ ಅನ್ನು ಅಳವಡಿಸಿದರು. ನಂತರದ ದಿನಗಳಲ್ಲಿ ನಿತ್ಯವೂ ಅವನು ಏನು ಮಾಡುತ್ತಾನೆ ಎನ್ನುವುದನ್ನು ವೀಕ್ಷಿಸುತ್ತಿದ್ದರು.

Most Read: ಮಸಾಜ್ ಮಾಡುತ್ತಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ! ಕೊನೆಗೆ ಏನಾಯಿತು ಗೊತ್ತೇ?

ನಂತರದ ದಿನಗಳಲ್ಲಿ ಪೋಸ್ಟ್ ತೆಗೆಯಲಾಗಿತ್ತು:

ನಂತರದ ದಿನಗಳಲ್ಲಿ ಪೋಸ್ಟ್ ತೆಗೆಯಲಾಗಿತ್ತು:

ವರದಿಯ ಪ್ರಕಾರ ಹುಡುಗರ ಪಾಲಕರು ತಮ್ಮ ಮಗನು ವಿವಾಹಕ್ಕೂ ಮುಂಚೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಎಂದು ಬಯಸುತ್ತಾರೆ. ಜೊತೆಗೆ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಿದ ವಿಷಯವನ್ನು ಓದುವುದು ಸ್ನೇಹಿತರೊಂದಿಗೆ ಚರ್ಚಿಸುವುದು ಮಾಡಬಾರದು ಎಂದು ಬಯಸುತ್ತಾರೆ. ಆಶ್ಚರ್ಯ ಎನ್ನುವಂತೆ ಕೆಲದಿನದ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಲಾದ ಪೋಸ್ಟ್ ಅನ್ನು ತೆಗೆಯಲಾಗಿತ್ತು. ನಂತರ ಆ ಹುಡಗನಿಗೆ ನಂತರ ಏನಾಯಿತು ಎನ್ನುವುದು ತಿಳಿಯದೆ ಹೋಯಿತು. ಏನೇ ಇರಲಿ, ಇಂದಿನ ಜಗತ್ತು ಅತ್ಯಂತ ವೇಗದಲ್ಲಿ ಸಾಗುತ್ತಿದೆ. ನಮ್ಮ ಮಕ್ಕಳು ಸಹ ಸಂಗತಿಗಳನ್ನು ಬಹುಬೇಗ ತಿಳಿದುಕೊಳ್ಳುತ್ತಾರೆ. ವಿಚಾರ ಅಥವಾ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು ಜನರಿಗೆ ಅತ್ಯಂತ ಸುಲಭವಾಗಿದೆ. ಅದರಲ್ಲೂ ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ವೀಡಿಯೋ, ಫೋಟೋಸ್ ಗಳು ಹರಿದಾಡುತ್ತಲೇ ಇರುತ್ತವೆ. ಹಾಗಾಗಿ ನಮ್ಮ ಮಕ್ಕಳು ಹದಿಹರೆಯಕ್ಕೆ ಬಂದಾಗ ಅವರ ಗಮನವನ್ನು ಹೇಗೆ ನಿಯಂತ್ರಿಸಬೇಕು ಹಾಗೂ ಯಾವ ರೀತಿಯಲ್ಲಿ ಲೈಂಗಿಕ ವಿಷಯದ ಬಗ್ಗೆ ಜ್ಞಾನವನ್ನು ಬೆಳೆಸಬೇಕು ಎನ್ನುವುದನ್ನು ಪಾಲಕರು ತಿಳಿದುಕೊಳ್ಳಬೇಕಿದೆ. ಜೊತೆಗೆ ತಮ್ಮ ಮಕ್ಕಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳುವುದು ಒಂದು ಸವಾಲಿನ ಸಂಗತಿಯೂ ಹೌದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಹಂಚಿಕೊಳ್ಳಿ.

English summary

Parents Do Not Want Son To Touch Himself

Parenting in the right way can be tough as you need to make sure that you are not feeding your child's brain with filthy stuff, since you as parents are their first teachers! Here is a case of a teenager who shared a bizarre incident of how his parents behaved when they caught him masturbating.Check out the details of the entire incident.
X