For Quick Alerts
ALLOW NOTIFICATIONS  
For Daily Alerts

ತನ್ನ ಕಾರನ್ನು ತಂಪಾಗಿಡಲು ಸೆಗಣಿ ಸಾರಿಸಿಕೊಂಡು ಮಹಿಳೆ

|

ದೇಶದೆಲ್ಲೆಡೆಯಲ್ಲಿ ಈಗ ತಾಪಮಾನವು ಪ್ರತಿಕ್ಷಣವು ಹೆಚ್ಚಾಗುತ್ತಲಿದೆ. ಉತ್ತರ ಭಾರತದಲ್ಲಿ ಈಗಾಗಲೇ ಕೆಲವೊಂದು ರಾಜ್ಯಗಳಲ್ಲಿ ಉಷ್ಣಾಂಶವು 50ರ ಗಡಿ ದಾಟಿದೆ. ಹೀಗಾಗಿ ಸೆಕೆ ಹಾಗೂ ಅತಿಯಾದ ಉಷ್ಣತೆಯಿಂದ ಪಾರಾಗಲು ಹಲವಾರು ರೀತಿಯ ವಿಧಾನಗಳನ್ನು ಜನರು ಅಳವಡಿಸಿಕೊಳ್ಳುವುದು. ಅದೇ ರೀತಿಯಾಗಿ ಅಹ್ಮದಾಬಾದ್ ನ ಮಹಿಳೆಯೊಬ್ಬರು ತನ್ನ ಕಾರನ್ನು ತಂಪಾಗಿಡಲು ಅದಕ್ಕೆ ಸೆಗಣಿ ಸಾರಿಸಿಕೊಂಡಿದ್ದಾರೆ. ಇದು ಬೇಸಗೆಯಲ್ಲಿ ಕಾರನ್ನು ತಂಪಾಗಿ ಇಡುವುದು ಎಂದು ಅವರು ನಂಬಿರುವರು. ಕಾರಿನ ಮೇಲೆ ಸೆಗಣಿ ಸಾರಿಸಿರುವಂತಹ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೇಸ್ ಬುಕ್ ನಲ್ಲಿ ರೂಪೇಶ್ ಗೌರಾಂಗ್ ದಾಸ್ ಎಂಬವರು ಈ ಫೋಟೊವನ್ನು ಶೇರ್ ಮಾಡಿ, ಸೆಗಣಿ ಬಳಸಿಕೊಂಡಿರುವ ಅದ್ಭುತ ವಿಧಾನ ಎಂದು ಬರೆದುಕೊಂಡಿದ್ದಾರೆ. ಅಹ್ಮದಾಬಾದ್ ನಲ್ಲಿ ಈ ಫೋಟೊ ತೆಗೆಯಲಾಗಿದೆ ಮತ್ತು ಅಲ್ಲಿ ಈಗ ಉಷ್ಣಾಂಶವು 45 ಡಿಗ್ರಿಯಷ್ಟಿದೆ ಮತ್ತು ಕಾರನ್ನು ಉಷ್ಣತೆಯಿಂದ ತಪ್ಪಿಸಲು ಸೆಜಲ್ ಶಾ ಎಂಬವರು ಸೆಗಣಿ ಸಾರಿಸಿಕೊಂಡಿದ್ದಾರೆ. ಇದು ತುಂಬಾ ಕೂಲ್ ಆಗಿದೆ.
ಸೆಡನ್ ಕಾರ್ ಗೆ ಸಂಪೂರ್ಣವಾಗಿ ಸೆಗಣಿ ಸಾರಿಸಿರುವುದು ಈ ಫೋಟೊದಲ್ಲಿ ಕಂಡುಬಂದಿದೆ.

Most Read: ದಿನಗೂಲಿಗಾಗಿ ಗರ್ಭಾಶಾಯವನ್ನೇ ತೆಗೆಸಿಕೊಳ್ಳುತ್ತಿರುವ ಮಹಿಳೆಯರು!

car owner coats vehicle with cow dung to keep it cool

ಈ ಕಾರು ಅಹ್ಮದಾಬಾದ ನಲ್ಲಿ ಪತ್ತೆಯಾಗಿದೆ ಎಂದೂ ಫೋಟೊ ಹಂಚಿಕೊಂಡಿರುವ ವ್ಯಕ್ತಿಯು ಹೇಳಿರುವರು. ಆದರೆ ಇದರ ದಾಖಲಾತಿ ಪ್ರಕಾರವಾಗಿ ಇದು ಮಧ್ಯ ಮುಂಬಯಿಗೆ ಸೇರಿರುವ ಕಾರು ಮತ್ತು ರಮನಿಕ್ ಲಾಲ್ ಶಾ ಎಂಬವರಿಗೆ ಸೇರಿದ್ದಾಗಿದೆ.
ಈ ಪೋಸ್ಟ್ ಹಲವರಲ್ಲಿ ತುಂಬಾ ಅಚ್ಚರಿ ಉಂಟು ಮಾಡಿದೆ ಮತ್ತು ಇನ್ನು ಕೆಲವರು ಸೆಗಣಿಯ ವಾಸನೆಗೆ ಇದರೊಳಗೆ ಹೇಗೆ ಕುಳಿತುಕೊಳ್ಳುವರು ಎಂದು ಅಚ್ಚರಿ ವ್ಯಕ್ತಪಡಿಸಿರುವರು. ಎಷ್ಟು ಪದರವನ್ನು ಹಚ್ಚಿಕೊಂಡ ಬಳಿಕ ಇದು ಕಾರನ್ನು ತಂಪಾಗಿಸಿದೆ ಎಂದು ಕೆಲವರು ಪ್ರಶ್ನೆ ಮಾಡಿರುವರು.

Most Read: ದಟ್ಟ ಮಂಜಿನಲ್ಲಿ ಆರು ಕಿ.ಮೀ. ನಡೆದು ಮದುವೆ ಮಂಟಪ ತಲುಪಿದ ವರ!!

ಈ ಫೋಟೊ ವೈರಲ್ ಆದ ಬಳಿಕ ಮಧ್ಯಮ ಸಂಸ್ಥೆಯಾಗಿರುವಂತಹ ಎಎನ್ ಐಯು ಕಾರಿನ ಮಾಲಕರಾದ ಸೆಜಲ್ ಶಾ ಅವರನ್ನು ಭೇಟಿ ಮಾಡಿದೆ ಮತ್ತು ಏರ್ ಕಂಡೀಷನರ್ ಇಲ್ಲದೆ ಇದ್ದರೂ ಇದು ಕಾರನ್ನು ತುಂಬಾ ತಂಪಾಗಿ ಇಡುತ್ತದೆ ಎಂದು ಅವರು ತಿಳಿಸಿರುವರು.
ಇದು ಕಾರನ್ನು ತಂಪಾಗಿ ಇಡುವುದು ಮಾತ್ರವಲ್ಲದೆ ಮಾಲಿನ್ಯ ತಪ್ಪಿಸುವುದು. ಕಾರಿನಲ್ಲಿ ಏರ್ ಕಂಡೀಷನರ್ ಹಾಕುವ ವೇಳೆ ಕೆಲವೊಂದು ಹಾನಿಕಾರಕ ಗ್ಯಾಸ್ ಬಿಡುಗಡೆ ಆಗುವುದು ಮತ್ತು ಇದು ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಾನು ಈಗ ಹೆಚ್ಚಾಗಿ ಎಸಿ ಇಲ್ಲದೆ ಕಾರನ್ನು ಚಲಾಯಿಸುತ್ತೇನೆ ಮತ್ತು ಇದು ಕಾರನ್ನು ತಂಪಾಗಿಡುತ್ತದೆ ಎಂದು ಸೆಜಲ್ ಶಾ ತಿಳಿಸಿದ್ದಾರೆ. ಮನೆ ಮತ್ತು ಗೋಡೆಗಳ ಮೇಲೆ ಸೆಗಣಿ ಹಾಕುತ್ತಿದ್ದದನ್ನು ನೋಡಿ ನಾನು ಈ ಕ್ರಮ ತೆಗೆದುಕೊಂಡಿದ್ದೇನೆ. ಮಹಡಿ ಮೇಲೆ ಸೆಗಣಿ ಹಾಕಿದರೆ ಮನೆ ತುಂಬಾ ತಂಪಾಗಿ ಇರುತ್ತದೆ. ಇದರಿಂದಾಗಿ ಕಾರಿಗೂ ಹೀಗೆ ಮಾಡಲು ನಿರ್ಧರಿಸಿದೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಈಗಲೂ ಮನೆಯ ಗೋಡೆ ಮತ್ತು ಮಹಡಿಗೆ ಸೆಗಣಿ ಹಚ್ಚಿಡುತ್ತಾರೆ. ಇದು ಚಳಿಗಾಲದಲ್ಲಿ ಬಿಸಿಯಾಗಿಸಿದರೆ ಬೇಸಿಗೆಯಲ್ಲಿ ತಂಪಾಗಿ ಇಡುತ್ತದೆ ಎಂದು ಹೇಳಲಾಗುತ್ತದೆ. ಇದು ನೈಸರ್ಗಿಕವಾಗಿ ಕೀಟನಾಶಕವಾಗಿದೆ ಮತ್ತು ಸೊಳ್ಳೆಗಳನ್ನು ಓಡಿಸಲು ಇದನ್ನು ಬಳಸಲಾಗುತ್ತದೆ. ಸೆಣಿ ಮತ್ತು ಗೋಮೂತ್ರದ ಬಗ್ಗೆ ಹಲವಾರು ರಾಜಕೀಯ ನಾಯಕರು ಕೂಡ ಹೇಳಿಕೆಗಳನ್ನು ನೀಡಿದ್ದಾರೆ. ಗೋಮೂತ್ರದಿಂದ ಈಗಾಗಲೇ ಹಲವಾರು ರೀತಿಯ ಉತ್ಪನ್ನಗಳು ಕೂಡ ಬಂದಿದೆ. ಇದನ್ನು ಮನೆ ಸ್ವಚ್ಛ ಮಾಡಲು ಬಳಸಬಹುದು.

English summary

car owner coats vehicle with cow dung to keep it cool

As temperatures rise, people are trying various things to beat the heat. But one resident in Ahmedabad came up with a novel method to keep his car cool in the summer: he allegedly coated it completely with cow dung. Photos of the ‘cooling hack’ were shared on Facebook and they quickly went viral.
X
Desktop Bottom Promotion