For Quick Alerts
ALLOW NOTIFICATIONS  
For Daily Alerts

ಈ ಐದು ರಾಶಿಚಕ್ರದವರು ಉಳಿದವರಿಗಿಂತ ಹೆಚ್ಚು ಸ್ವಾರ್ಥಿಗಳು

|

ಸ್ವಾರ್ಥ ಎನ್ನುವುದು ಮನುಷ್ಯನ ಸಾಮಾನ್ಯ ಗುಣ. ತನ್ನಲ್ಲಿರುವ ಸ್ವಾರ್ಥ ಗುಣದಿಂದಲೇ ಏನೆಲ್ಲಾ ಕ್ರೂರ ಕೆಲಸವನ್ನಾದರೂ ಮಾಡಬಲ್ಲನು. ತನ್ನ ಅನುಕೂಲಕ್ಕಾಗಿ ಇತರರಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಸಹ ಲೆಕ್ಕಿಸದೆ ಹೋಗಬಲ್ಲನು. ಅಲ್ಲದೆ ತಾನು ಏನನ್ನೂ ತಪ್ಪಾಗಿ ಮಾಡುವುದಿಲ್ಲ ಎನ್ನುವ ಭಾವನೆಯನ್ನು ಹೊಂದಿರುತ್ತಾನೆ. ಸ್ವಾರ್ಥದ ಗುಣವು ವ್ಯಕ್ತಿಯ ಹುಟ್ಟಿನಿಂದಲೇ ಕಾಣಬಹುದು. ಚಿಕ್ಕ ವಯಸ್ಸಿನಿಂದಲೇ ಅಡಕವಾಗಿರುವ ಸ್ವಾರ್ಥ ಗುಣಗಳು ಬೆಳವಣಿಗೆ ಹೊಂದಿದಂತೆ ಅದರ ನಿಯಂತ್ರಣ ಹಾಗೂ ಸಮಾಜಕ್ಕೆ ಅನುಕೂಲಕರವಾದ ವರ್ತನೆಯನ್ನು ತೋರುತ್ತಾನೆ. ಆದರೂ ಆಂತರ್ಯದಲ್ಲಿ ಸಾಕಷ್ಟು ವಿಚಾರಗಳಿಗೆ ಸ್ವಾರ್ಥ ಭಾವನೆಯನ್ನು ಹೊಂದಿರುತ್ತಾನೆ ಎನ್ನಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯ ಸ್ವಾರ್ಥಿಯಾಗಿರುತ್ತಾನೆ ಎನ್ನುವುದು ಎಷ್ಟು ನಿಜ. ಹಾಗೆಯೇ ಕೆಲವರಲ್ಲಿ ಸ್ವಾರ್ಥ ಗುಣವು ಕಡಿಮೆ ಹಾಗೂ ಇನ್ನೂ ಕೆಲವರಲ್ಲಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದಕ್ಕೆ ಕಾರಣ ಅವರನ್ನು ಆಳುವ ಗ್ರಹಗಳು ಎಂದು ಸಹ ಹೇಳುತ್ತದೆ. ಹಾಗಾಗಿ ಕೆಲವು ರಾಶಿಚಕ್ರದ ವ್ಯಕ್ತಿಗಳು ಮಾತ್ರ ಇತರರಿಗಿಂತ ಅಧಿಕ ಪ್ರಮಾಣದ ಸ್ವಾರ್ಥಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅಧಿಕ ಸ್ವಾರ್ಥ ಗುಣವನ್ನು ಹೊಂದಿರುವ ರಾಶಿಚಕ್ರಗಳ ಪಟ್ಟಿಯಲ್ಲಿ ನೀವು ಅಥವಾ ನಿಮ್ಮವರು ಇದ್ದಾರೆಯೇ ಎನ್ನುವುದನ್ನು ಪರಿಶೀಲಿಸಲು ಮುಂದಿರುವ ವಿವರಣೆಯನ್ನು ಓದಿ.

1.ಮೇಷ

1.ಮೇಷ

ಈ ರಾಶಿಯ ವ್ಯಕ್ತಿಗಳು ತಾವು ಏನು ಬಯಸುತ್ತಾರೋ ಅದನ್ನು ಪಡೆದುಕೊಳ್ಳಲು ಎಂತಹ ಸಾಹಸಗಳನ್ನು ಮಾಡಬಲ್ಲರು. ತಮ್ಮ ಗುರಿ ಅಥವಾ ಆಸೆಯನ್ನು ಈಡೇರಿಸಿಕೊಳ್ಳುವ ಗುಣ ಹೊಂದಿರುವುದು ಒಳ್ಳೆಯದೇ. ಆದರೆ ಅದು ಅತಿರೇಕ ಅಥವಾ ಪಡೆದುಕೊಳ್ಳುವುದೇ ಮೊದಲ ಆದ್ಯತೆಯಾಗಿ ಉಳಿಯಬಾರದು ಆಗ ಅದು ಸ್ವಾರ್ಥಗುಣವಾಗಿ ತಿರುಗುವುದು. ಮೇಷ ರಾಶಿಯವರು ಸಾಮಾನ್ಯವಾಗಿ ತಾವೇ ಮೊದಲು ಬರಬೇಕು ಎನ್ನುವ ಮನೋಭಾವ ಹೊಂದಿರುತ್ತಾರೆ. ಅದು ಅವರಿಗೆ ಋಣಾತ್ಮಕ ಗುಣವಾಗಿ ಪರಿವರ್ತನೆ ಆಗಬಹುದು.

2.ವೃಷಭ

2.ವೃಷಭ

ಈ ರಾಶಿಯವರು ಸ್ಥಿರ ಹಾಗೂ ವಿಶ್ವಾಸಾರ್ಹತೆಯನ್ನು ಪ್ರತಿನಿಧಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಭದ್ರತೆಗಾಗಿ ಕೆಲವು ದುರಾಸೆಯ ಗುಣವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಇವರ ಅತೀವ ಸೂಕ್ಷ್ಮತೆ ಹಾಗೂ ವಿಪರೀತ ಭಾವನಾತ್ಮಕ ನಿರ್ಣಯಗಳು ಅತಿಯಾದ ಸ್ವಾಮ್ಯಸೂಚಕರನ್ನಾಗಿ ಮಾಡುವುದು. ಇವರು ತಾವು ಪ್ರೀತಿಸಿದ ವ್ಯಕ್ತಿ ಅಥವಾ ವಸ್ತುಗಳಿಗಾಗಿ ಸಾಕಷ್ಟು ಹೋರಾಟ ಮಾಡುತ್ತಾರೆ. ಹಾಗೊಮ್ಮೆ ದೊರೆಯುವುದಿಲ್ಲ ಎಂದಾದರೆ ಬಹಳ ಸ್ವಾರ್ಥ ವರ್ತನೆಯನ್ನು ತೋರುವರು.

3.ಮಿಥುನ

3.ಮಿಥುನ

ಇವರು ತಾವು ಅರ್ಥಮಾಡಿಕೊಳ್ಳುವ ಮುಂಚೆಯೇ ಕೆಲಸ ನಿರ್ವಹಿಸಬೇಕು ಎನ್ನುವಂತಹ ಆತುರವನ್ನು ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ ಸ್ವಾರ್ಥ ಗುಣವನ್ನು ಹೊಂದಿದ್ದಾರೆ ಎನ್ನುವುದನ್ನು ಹೊರ ಪ್ರಪಂಚಕ್ಕೆ ತೋರಿಸಿಕೊಳ್ಳದೆ ಇರಬಹುದು. ಆದರೆ ತನಗೆ ಎನ್ನುವ ಗುಣವು ಆಂತರ್ಯದಲ್ಲಿ ಆಳವಾಗಿ ಹೊಂದಿರುತ್ತಾರೆ. ಎಲ್ಲಾ ವಿಚಾರದಲ್ಲೂ ತಾವೇ ಸರಿ ಎನ್ನುವ ಮನೋಭಾವದೊಂದಿಗೆ ಜೀವಿಸುತ್ತಾರೆ. ಇತರರ ಆರಾಮದಾಯಕ ಸ್ಥಿತಿಗಿಂತ ತಮ್ಮ ಆರಾಮದಾಯಕ ಅನುಕೂಲವನ್ನು ಮೊದಲು ಬಯಸುವವರು ಇವರು.

4.ಸಿಂಹ

4.ಸಿಂಹ

ಈ ರಾಶಿಯವರು ತಾವು ಏನನ್ನು ಪಡೆಯಲು ಬಯಸುತ್ತಾರೋ ಅದನ್ನು ಪಡೆದುಕೊಳ್ಳದೆ ಹೋಗರು. ಇವರು ಅತೀಯಾದ ಸ್ವಾರ್ಥಿಗಳು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲರ ಮಧ್ಯದಲ್ಲಿ ತಾವೇ ಆಕರ್ಷಕ ವ್ಯಕ್ತಿಗಳಾಗಿ ಬದುಕಲು ಬಯಸುವ ಇವರು ಎಲ್ಲಾ ಸಂಗತಿಗಳ ಮೇಲೂ ತಮ್ಮದೇ ಅಧಿಕಾರ ಇರಬೇಕೆಂದು ಬಯಸುವವರು. ತಮ್ಮ ಆಸೆಗೆ ಅಡ್ಡಿಯಾಗುವ ಸಂಗತಿಗಳನ್ನು ಬಹುಬೇಗ ನಿವಾರಿಸಿಕೊಂಡು ಅದನ್ನು ಪಡೆದುಕೊಳ್ಳುವುದರಲ್ಲಿ ಮುಂದೆ ಇರುವರು.

5.ಕನ್ಯಾ

5.ಕನ್ಯಾ

ಹೆಣ್ಣಿನ ಚಿಹ್ನೆಯನ್ನು ಹೊಂದಿರುವ ಈ ರಾಶಿಚಕ್ರದವರು ಸ್ವಯಂ ಸುಧಾರಣೆ ಹಾಗೂ ಯಾವುದೇ ನ್ಯೂನತೆ ಇಲ್ಲದವರಂತೆ ಬದುಕಲು ಬಯಸುವರು. ಪ್ರತಿಯೊಂದು ಕೆಲಸದಲ್ಲು ವಿಶ್ಲೇಷಣೆ ಹಾಗೂ ಟೀಕೆಗಳನ್ನು ಮಾಡುವುದರಲ್ಲಿ ಮುಂದೆ ನಿಲ್ಲುತ್ತಾರೆ. ಇತರರಿಗೆ ಸಹಾಯ ಮಾಡಲು ಮುಂದೆ ನಿಲ್ಲುವ ಇವರು ತಮ್ಮ ಸ್ವ ಸಮಸ್ಯೆಗಳು ಅಥವಾ ಸ್ವ ಕೆಲಸವು ಎದುರಾದರೆ ಅದಕ್ಕೆ ಮೊದಲ ಆದ್ಯತೆ ನೀಡುವರು. ಜೊತೆಗೆ ತಮ್ಮ ಅನುಕೂಲಕ್ಕೆ ಮಾಡಿಕೊಳ್ಳಬೇಕಾದ ಎಲ್ಲಾ ಕೆಲಸವನ್ನು ಮಾಡುವುದರಲ್ಲಿಯೇ ತಲ್ಲೀನರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಬೇರೆಯವರ ಅಗತ್ಯತೆಗಳನ್ನು ಪರಿಗಣಿಸುವುವುದಿಲ್ಲ.

English summary

These 5 Zodiac Signs Are Way More Selfish!

Let's face it. We all have selfish tendencies, and that's okay! It's all in the mix of the oh-so-complex makeup of our human selves. However, some of us tend to use this characteristic a little more frequently than the rest of us.If you're a person who hears how selfish you are all the time but honestly does not understand why, hopefully, this article can help you out a little bit.
Story first published: Sunday, September 9, 2018, 9:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more