Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಪಾಪ, ಹುಟ್ಟುವಾಗಲೇ ಈತನ ಅರ್ಧ ದೇಹ ಸ್ವಾಧೀನದಲ್ಲಿರಲಿಲ್ಲ!
ದೈಹಿಕ ವಿಕಲಾಂಗತೆಯಿಂದ ಹುಟ್ಟುವುದು ದೊಡ್ಡ ಶಾಪವೆಂದು ಕೆಲವರಿಗೆ ಅನಿಸಿರಬಹುದು. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸುವಂತಹ ಹಲವಾರು ಮಂದಿ ದೊಡ್ಡ ಸಾಧನೆ ಮಾಡಿದ್ದಾರೆ. ಇಂತವರು ಬೇರೆ ಜನರಿಗೂ ಸ್ಪೂರ್ತಿಯಾಗಿರುತ್ತಾರೆ. ಸಣ್ಣ ಸಣ್ಣ ಕಾರಣಗಳನ್ನು ನೀಡಿ ಜೀವನದಿಂದ ಬೇಸತ್ತಿರುವವರಿಗ ಇವರು ಖಂಡಿತವಾಗಿಯೂ ದೊಡ್ಡ ಮಟ್ಟದ ಸ್ಪೂರ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂತಹ ಒಬ್ಬ ವ್ಯಕ್ತಿಯೇ ರೌಡಿ ಬರ್ಟನ್ ಎನ್ನುವವರು. ಇವರಿಗೆ ಹುಟ್ಟುವಾಗಲೇ ಬೆನ್ನುಮೂಳೆಯ ಕೆಳಭಾಗದ ಸಮಸ್ಯೆಯು ಕಾಣಿಸಿಕೊಂಡಿತು. ಇದು ತುಂಬಾ ಅಪರೂಪದ ಸಮಸ್ಯೆಯಾಗಿದ್ದು, 25 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ಕಾಣಿಸುವುದು. ರೌಡಿ ಬರ್ಟನ್ ಅವರು ಸ್ಫೂರ್ತಿಯ ಕಥೆಯನ್ನು ನೀವು ಓದಿ....

ಅವರಿಗೆ ಹುಟ್ಟುವಾಗಲೇ ಈ ಸಮಸ್ಯೆ ಕಾಡಿತು
ರೌಡಿ ಬರ್ಟನ್ ಅವರಿಗೆ ಹುಟ್ಟುವಾಗಲೇ ಬೆನ್ನಮೂಳೆಯ ಕೆಳಭಾಗದ ಅಪರೂಪದ ಸಮಸ್ಯೆಯು ಕಾಡಿತು. ಇವರ ಸಮಸ್ಯೆಯನ್ನು ವೈದ್ಯಕೀಯವಾಗಿ `ಸ್ಯಾಕ್ರಾಲ್ ಏಜೆನಿಸಿಸ್' ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ ಇಂತಹ ಪರಿಸ್ಥಿತಿಯು 25 ಮಕ್ಕಳಲ್ಲಿ ಒಬ್ಬರಿಗೆ ಬರುವುದು.

ಮೂರರ ಹರೆಯದಲ್ಲಿ ಕಾಲುಗಳು ಕುಬ್ಜವಾದವು
ಮೂರನೇ ಹರೆಯಕ್ಕೆ ಕಾಲಿಟ್ಟಾಗ ರೌಡಿ ಬರ್ಟನ್ ಕಾಲುಗಳು ಕುಬ್ಜವಾದವು. ಆದರೂ ಅವರು ಬೇರೆ ವ್ಯಕ್ತಿಗಳಂತೆ ಸಾಮಾನ್ಯ ಜೀವನ ಸಾಗಿಸುತ್ತಿರುವರು. ಧನಾತ್ಮಕವಾಗಿ ಇರುವುದು ಹೇಗೆ ಮತ್ತು ದೇಹದಲ್ಲಿ ವೈಕಲ್ಯತೆ ಇದ್ದರೂ ಅದನ್ನು ಮೀರಿ ನಗುವುದು ಹೇಗೆ ಎನ್ನುವುದಕ್ಕೆ ಬೇರೆಯವರಿಗೆ ಸ್ಪೂರ್ತಿಯಾಗಿದ್ದಾರೆ.

ಸಹಪಾಠಿಗಳು ತಮಾಷೆ ಮಾಡುತ್ತಲಿದ್ದರು..
ಎರಡು ಕಾಲುಗಳು ಕುಬ್ಜವಾಗಿದ್ದ ಕಾರಣದಿಂದಾಗಿ ರೌಡಿ ಬರ್ಟನ್ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ, ಪ್ರೌಢಶಾಲೆಗೆ ತೆರಳಿದ ವೇಳೆ ಸಹಪಾಠಿಗಳು ಅವರನ್ನು ತುಂಬಾ ಹೀಯಾಳಿಸಲು ಆರಂಭಿಸಿದರು. ಜನರು ಪ್ರೌಢರಾಗುತ್ತಿದ್ದಂತೆ ಹೀಯಾಳಿಸುವುದನ್ನು ಬಿಟ್ಟರು ಮತ್ತು ಈ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಂಡರು ಎಂದು ಬರ್ಟನ್ ಹೇಳುತ್ತಾರೆ.

ಸ್ವಾವಲಂಬಿ ವ್ಯಕ್ತಿಯಾಗಿರಲು ಬಯಸಿದರು
ಅವರು ಒತ್ತಾಯದಿಂದಾಗಿ ಕೊಲೊಸ್ಟೊಮಿ ಬ್ಯಾಗ್ ನ್ನು ಬಳಸುತ್ತಿದ್ದರೂ ಇದು ಅವರ ಸ್ಪೂರ್ತಿಗೆ ಯಾವತ್ತೂ ತಡೆಯಾಗಿಲ್ಲ ಮತ್ತು ಅವರು ಸ್ವಾವಲಂಬಿ ವ್ಯಕ್ತಿಯಾಗಿರಲು ಬಯಸಿದರು. ಅವರು ಎದುರಿಸಿರುವಂತಹ ಎಲ್ಲಾ ಸವಾಲುಗಳ ಹೊರತಾಗಿಯೂ ಅವರು ಭವಿಷ್ಯದ ಬಗ್ಗೆ ತುಂಬಾ ಧನಾತ್ಮಕ ಭಾವನೆ ಹೊಂದಿರುವರು. ಅವರು ತನ್ನ ಸ್ನೇಹಿತರೊಂದಿಗೆ ಹೊರಾಂಗಣ ಆಟಗಳನ್ನು ಆಡುವರು. ಅವರು ಟೇಬಲ್ ಟೆನಿಸ್, ಸ್ಕೇಟ್ ಬೋರ್ಡ್ ಮತ್ತು ಇತರ ಕೆಲವು ಆಟಗಳನ್ನು ಆಡುವರು.

ಆತ್ಮವಿಶ್ವಾಸಕ್ಕೆ ಆಘಾತವುಂಟು ಮಾಡಿತು
ಬರ್ಟನ್ ಪರಿಸ್ಥಿತಿಯಿಂದಾಗಿ ಅವರು ಕೊಲೊಸ್ಟೊಮಿ ಬಳಸುವುದು ಅನಿವಾರ್ಯವಾಗಿರುವ ಕಾರಣದಿಂದಾಗಿ ಇದು ಅವರ ಆತ್ಮವಿಶ್ವಾಸಕ್ಕೆ ಆಘಾತ ನಿಡಿತು. ಆದರೆ ಸಂಗಾತಿ ಜತೆಗೆ ಅನ್ಯೋನ್ಯತೆಯಿಂದ ಸಮಯ ಕಳೆಯುವ ವೇಳೆ ಕೊಲೊಸ್ಟೊಮಿ ಬ್ಯಾಗ್ ತನಗೆ ಅಡ್ಡಿಯಾಗಬಾರದು ಎಂದು ಅವರು ಹೇಳುತ್ತಾರೆ.

ಅವರು ಮಕ್ಕಳನ್ನು ಪಡೆಯಬಹುದು
ಬರ್ಟನ್ ಹೇಳುವ ಪ್ರಕಾರ ತನ್ನ ದೈಹಿಕ ಪರಿಸ್ಥಿತಿಯ ಹೊರತಾಗಿಯೂ ಅವರು ಮಕ್ಕಳನ್ನು ಪಡೆಯಬಹುದಂತೆ.

ಅವರ ಕನಸು
ಬರ್ಟನ್ ಒಬ್ಬ ಗಗನಯಾತ್ರಿಯಾಗಬೇಕೆಂದು ಕನಸು ಕಂಡವರು. ಆದರೆ ಅವರ ದೈಹಿಕ ಸಮಸ್ಯೆಯು ಈ ಕನಸನ್ನು ನನಸಾಗಲು ಬಿಡದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಾಯುವುದಕ್ಕಿಂತ ಮೊದಲು ತನ್ನ ಕನಸನ್ನು ನನಸಾಗಿಸುವಂತಹ ವಿಶ್ವಾಸವಿದೆ ಎಂದು ಅವರು ಹೇಳುತ್ತಾರೆ. ಈ ವ್ಯಕ್ತಿಯ ಸ್ಪೂರ್ತಿಯ ಬಗ್ಗೆ ನಿಮ್ಮ ಅನಿಸಿಕೆಯೇನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ಬರೆಯಿರಿ.



Click it and Unblock the Notifications
