For Quick Alerts
ALLOW NOTIFICATIONS  
For Daily Alerts

ಈ 5 ರಾಶಿಯ ವ್ಯಕ್ತಿಗಳು, ಅನಾವಶ್ಯಕ ವಿಚಾರಗಳಿಗೆ ತುಂಬಾ ಚಿಂತಿಸುತ್ತಾರಂತೆ!

By Deepu
|

ಕೆಲವರು ಯಾವುದೇ ವಿಚಾರವಾದರೆ ಬೇಗನೆ ನಿರ್ಧಾರ ತೆಗೆದುಕೊಳ್ಳುವರು. ಇನ್ನು ಕೆಲವರು ಸಣ್ಣ ವಿಷಯಗಳಿಗೂ ತುಂಬಾ ದೀರ್ಘವಾಗಿ ಆಲೋಚನೆ ಮಾಡುವುದು. ಇದು ಅವರಿಗೆ ರಾಶಿಚಕ್ರಗಳಿಂದ ಬಂದಿರುವಂತಹ ಗುಣಗಳು. ಇಲ್ಲಿ ನಾವು ಕೆಲವು ಇಂತಹ ರಾಶಿಚಕ್ರಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ರಾಶಿಚಕ್ರಗಳ ಜನರು ಬೇರೆಯವರಿಗೆ ಏನೂ ಕಾಣಿಸದಿರುವ ವಿಚಾರಗಳ ಬಗ್ಗೆ ಕೂಡ ತುಂಬಾ ದೀರ್ಘ ಆಲೋಚನೆ ಮಾಡುವರು. ಇಂತಹ ತತ್ವಶಾಸ್ತ್ರದ ರಾಶಿಗಳು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ...

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ವೃಶ್ಚಿಕ ರಾಶಿಯವರ ಮೆದುಳಿನ ಒಳಹೊಕ್ಕು ನೋಡಿದರೆ ಆಗ ನಿಮಗೆ ವಿಜ್ಞಾನ ಮತ್ತು ಗಣಿತದ ಸಮಸ್ಯೆಗಳನ್ನು ಪರಿಹರಿಸಿರುವುದು ಮತ್ತು ಅದಕ್ಕೆ ಉತ್ತರ ಕಂಡು ಕೊಂಡಿರುವುದುನ್ನು ಕಾಣಬಹುದು. ವೃಶ್ಚಿಕ ರಾಶಿಯವರು ತುಂಬಾ ದೀರ್ಘವಾಗಿ ಚಿಂತಿಸುವವರು. ಬೇರೆಯವರಿಗೆ ಇದು ತುಂಬಾ ಆಯಾಸವೆನಿಸಿದರೆ ವೃಶ್ಚಿಕ ರಾಶಿಯವರು ಮಾತ್ರ ಅದರ ಬಗ್ಗೆ ಚಿಂತಿಸುವರು ಮತ್ತು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಕ್ಕೆ ಇವರು ಪ್ರಸಿದ್ಧಿ ಪಡೆದಿರುವರು. ಬೇರೆಯವರಿಗೆ ಕಾಣಿಸದೆ ಇರುವಂತಹ ವಿಷಯಗಳು ಇವರಿಗೆ ಕಂಡುಬರಬಹುದು. ಇವರಿಗೆ ಅದು ರಾಶಿಚಕ್ರದಿಂದ ಸಿಕ್ಕಿರುವಂತಹ ತತ್ವಶಾಸ್ತ್ರದ ಉಡುಗೊರೆ. ಇನ್ನು ವೃಶ್ಚಿಕ ರಾಶಿಯವರ ಜೂನ್ ತಿಂಗಳ ಭವಿಷ್ಯ ಅನುಕೂಲಕರವಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮ್ಮ ಮಾರ್ಗದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗಬಹುದು. ಆದರೆ ಅವು ಬಹಳ ಸುಲಭವಾಗಿ ನಿವಾರಣೆಯಾಗುತ್ತವೆ. ಈ ತಿಂಗಳ ಧನಾತ್ಮಕ ಫಲಿತಾಂಶ ಎಂದರೆ ನಿಮ್ಮ ಸಾಂದ್ರತೆಯು ಗಮನಾರ್ಹವಾಗಿ ಸುಧಾರಣೆಗೊಳ್ಳುತ್ತವೆ. ನಿಮ್ಮ ಭವಿಷ್ಯ ಹಾಗೂ ಪರಿಸ್ಥಿತಿಯ ಅಡಿಯಲ್ಲಿ ನೀವು ಎಷ್ಟು ವಿಶಾಲವಾದ ಮನಃಸ್ಥಿತಿಯನ್ನು ಹೊಂದಿರುತ್ತೀರಿ ಎನ್ನುವುದರ ಮೇಲೆ ನಿಮ್ಮ ಸಂತೋಷದ ಜೀವನ ನಿರ್ಣಯವಾಗುವುದು. ನೀವು ವಿಷಯಗಳನ್ನು ಹೇಗೆ ಸ್ವೀಕರಿಸುತ್ತೀರಿ? ಹಾಗೂ ಅದರ ನಿರ್ವಹಣೆಗೆ ನಿಮ್ಮ ಮನಃಸ್ಥಿತಿ ಹೇಗಿರುತ್ತದೆ ಎನ್ನುವುದರ ಆಧಾರದ ಮೇಲೆ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಬರುವ ಕಠಿಣ ಸಂದರ್ಭಗಳು ಸಲೀಸಾಗಿ ನಿರ್ವಹಣೆ ಹೊಂದುವವು. ನಿಮ್ಮ ಸಂವಹನ ಮಾರ್ಗವು ಸಹ ಉತ್ತಮವಾಗಿರುತ್ತದೆ.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ವೃಶ್ಚಿಕ ರಾಶಿಯವರು ತುಂಬಾ ದೀರ್ಘವಾಗಿ ಚಿಂತಿಸುವಂತಹ ರಾಶಿಯಲ್ಲಿ ಮೊದಲನೇಯವರು. ಆದರೆ ಕುಂಭ ರಾಶಿಯವರು ಕೂಡ ಇವರಿಗಿಂತ ಕಡಿಮೆಯೇನಿಲ್ಲ. ಇವರು ತುಂಬಾ ಸ್ಪೂರ್ತಿಯ ವ್ಯಕ್ತಿಗಳೆನ್ನುವ ಕಾರಣಕ್ಕಾಗಿ ಮಾತ್ರವಲ್ಲದೆ ಇವರು ಬೇರೆಯವರು ಭೀತಿಪಡುವಂತಹ ವಿಚಾರಗಳ ಬಗ್ಗೆ ಕೂಡ ಯೋಚಿಸುವರು. ಏನಾದರೂ ನೈಜವಾಗಿರುವುದನ್ನು ಮಾಡಲು ಇವರು ಕೆಲವೊಮ್ಮೆ ಅವಾಸ್ತವವಾದಿಯಾಗಿರುವರು. ಇನ್ನು ಅತ್ಯುತ್ತಮ ಆತ್ಮವಿಶ್ವಾಸ ಹಾಗೂ ಮೃದು ಸ್ವಭಾವದ ವ್ಯಕ್ತಿಗಳು ಎಂದರೆ ಕುಂಭ ರಾಶಿಯವರು. ನೈಸರ್ಗಿಕವಾಗಿಯೇ ಇವರು ಸೌಮ್ಯ ಸ್ವಭಾವ ಹಾಗೂ ಜಗಳದಿಂದ ದೂರ ಇರಲು ಬಯಸುವ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ 12 ರಾಶಿ ಚಕ್ರದ ಚಿಹ್ನೆಗಳಲ್ಲಿ ಕುಂಭರಾಶಿಯ ಚಿಹ್ನೆಯು 11ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಚಿಹ್ನೆಯ ವ್ಯಕ್ತಿಗಳು ಸಾಮಾಜಿಕ ಸಮಸ್ಯೆಗಳಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಜೊತೆಗೆ ಸಾಮಾಜಿಕ ಸಮಸ್ಯೆಗಳ ಕಾರಣ, ನಿರ್ಮೂಲನೆ ಹಾಗೂ ಪರಿಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಸ್ವತಂತ್ರರಾಗಿರಲು ಬಯಸುವ ಇವರು ಯಾವುದೇ ನಿರ್ಬಂಧ ಹಾಗೂ ಕಟ್ಟುಪಾಡುಗಳನ್ನು ಹೇರುವುದನ್ನು ದ್ವೇಷಿಸುತ್ತಾರೆ. ಅತ್ಯುತ್ತಮ ಕನಸುಗಾರರು ಎನಿಸಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಕರ್ಕಾಟಕ: ಜೂನ್ 21- ಜುಲೈ 22

ಕರ್ಕಾಟಕ: ಜೂನ್ 21- ಜುಲೈ 22

ಕರ್ಕಾಟಕ ರಾಶಿಯವರನ್ನು ತುಂಬಾ ಸೂಕ್ಷ್ಮ ಹಾಗೂ ದೀರ್ಘವಾಗಿ ಚಿಂತಿಸುವವರು ಎಂದು ಪರಿಗಣಿಸಲಾಗುತ್ತದೆ. ಆದರೆ ಅವರ ಪ್ರತಿಯೊಂದು ದೀರ್ಘ ಆಲೋಚನೆಗಳು ಭಾವನೆ ಹಾಗೂ ಭಾವೋದ್ರೀಕತೆಯಲ್ಲಿ ಅದ್ದಿ ಹೋಗುವುದು. ಇತರ ತತ್ವಶಾಸ್ತ್ರ ರಾಶಿಗಳಂತೆ ಇವರು ತುಂಬಾ ದೀರ್ಘವಾಗಿ ಆಲೋಚಿಸದಿದ್ದರೂ ಇವರು ತತ್ವಶಾಸ್ತ್ರಿಯಾಗಿರುವರು. ಆದರೆ ಇವರು ಬುದ್ಧಿಗಿಂತ ಹೆಚ್ಚು ಹೃದಯದಿಂದ ತತ್ವಶಾಸ್ತ್ರಿಯಾಗಿರುವರು.

ಮಿಥುನ: ಮೇ 21-ಜೂನ್ 20

ಮಿಥುನ: ಮೇ 21-ಜೂನ್ 20

ಮಿಥುನ ರಾಶಿಯವರು ತುಂಬಾ ಬಾಹ್ಯವಾಗಿರುವಂತಹವರು. ಆದರೆ ಅವರ ಇನ್ನೊಂದು ಮುಖವು ಇದಕ್ಕೆ ತದ್ವಿರುದ್ಧವಾಗಿರುವುದು. ಇವರು ತುಂಬಾ ಕ್ರಿಯಾತ್ಮಕ ಮತ್ತು ಸಾಹಸಪ್ರವೃತ್ತಿಯವರಾಗಿರುವರು. ಇವರು ಯಾವುದೇ ಪರಿಸ್ಥಿತಿಗೂ ತಲುಪಿ ಜೀವನದ ಕೆಲವೊಂದು ರಹಸ್ಯಗಳನ್ನು ಬಿಡಿಸಬಹುದು. ಇವರು ಮೊದಲ ಸಲ ಇದರಲ್ಲಿ

ವಿಫಲರಾದರೂ 2, 3 ಸಲ ಅಥವಾ ಅದಕ್ಕಿಂತ ಹೆಚ್ಚು ಸಲ ಇದನ್ನು ಪ್ರಯತ್ನಿಸುವರು. ಇದಕ್ಕೆ ಒಂದು ಪರಿಹಾರ ಸಿಗುವ ತನಕ ಅವರು ನಿದ್ರಿಸುವುದಿಲ್ಲ. ಇನ್ನು ಜೂನ್ ತಿಂಗಳಲ್ಲಿ ಮಿಥುನ ರಾಶಿಯವರು ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಅನುಭವಿಸಬೇಕಾಗುವುದು. ತಿಂಗಳ ಹೆಚ್ಚಿನ ಸಮಯ ಕೌಟುಂಬಿಕ ವಿಚಾರಗಳು ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸುತ್ತವೆ. ವಿವಿಧ ಗ್ರಹಗಳ ಸಂಚಾರ ಹಾಗೂ ಬದಲಾವಣೆಗಳು ವೃತ್ತಿ ಜೀವನವನ್ನು ತಳ್ಳಲು ಸಹಾಯ ಮಾಡುವುದು. ಅಲ್ಲದೆ ವೃತ್ತಿ ಜೀವನದಲ್ಲಿ ಸಾಕಷ್ಟು ವಿಶೇಷ ಬದಲಾವಣೆಯನ್ನು ಕಾಣುವಿರಿ. ಸಾಕಷ್ಟು ಪ್ರತಿಕೂಲವಾದ ಹಾಗೂ ಕ್ಲಿಷ್ಟಕರವಾದ ಸಂದರ್ಭಗಳನ್ನು ಎದುರಿಸಬೇಕಾಗುವುದು. ನಿಮ್ಮ ಸ್ನೇಹ ಮತ್ತು ಸ್ವಾಭಾವಿಕ ಗುಣಗಳಿಂದ ಸಮಸ್ಯೆಗಳನ್ನು ನಿಭಾಯಿಸುವಿರಿ. ಸಾಮಾಜಿಕ ಜೀವನದಲ್ಲಿ ನಿಮ್ಮ ಮಟ್ಟವು ಉತ್ತಮ ಸ್ಥಾನದಲ್ಲಿ ಇರುವುದು. ಪ್ರಭಾವಶಾಲಿ ಜನರ ಪರಿಚಯವಾಗುವ ಸಾಧ್ಯತೆಗಳಿರುತ್ತವೆ. ಸಾಕಷ್ಟು ಒತ್ತಡದ ಜೀವನವನ್ನು ಅನುಭವಿಸಬೇಕಾದ್ದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ತುಲಾ ರಾಶಿಯವರು ತುಂಬಾ ಕುಶಲ ಹಾಗೂ ಆಕರ್ಷಕವಾಗಿರುವರು. ಇದರಿಂದಾಗಿ ಇವರು ತುಂಬಾ ದೀರ್ಘವಾಗಿ ಚಿಂತಿಸುತ್ತಾರೆಂದಲ್ಲ. ಒಬ್ಬ ವ್ಯಕ್ತಿಯನ್ನು ಕುಶಲತೆಯಿಂದ ತಿರುಗಿಸಲು ಮನುಷ್ಯನ ಸ್ವಭಾವದ ಬಗ್ಗೆ ಹೆಚ್ಚಿಗೆ ತಿಳಿದುಕೊಂಡಿರ ಬೇಕಾಗುತ್ತದೆ. ಇದಕ್ಕಾಗಿ ತತ್ವಶಾಸ್ತ್ರದ ವ್ಯಕ್ತಿಯಾಗಿರ ಬೇಕಾಗುತ್ತದೆ. ಇನ್ನು ಜೂನ್ ತಿಂಗಳಲ್ಲಿ ತುಲಾ ರಾಶಿಯವರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಪ್ರಸಿದ್ಧಿಯನ್ನು ಪಡೆದುಕೊಳ್ಳುವರು. ಈ ವರ್ಷಪೂರ್ತಿ ನೀವು ಧನಾತ್ಮಕ ಪರಿಸ್ಥಿತಿಯನ್ನೇ ಹೆಚ್ಚಾಗಿ ಅನುಭವಿಸಲಿದ್ದೀರಿ. ಜೀವನದ ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಆಂತರಿಕವಾಗಿ ತೊಳಲಾಟಕ್ಕೆ ಒಳಗಾಗುವಿರಿ. ಅಂತಹ ಘರ್ಷಣೆಗಳ ಮೂಲ ಕಾರಣವನ್ನು ಅರ್ಥೈಸಿಕೊಂಡು, ಅವುಗಳ ಸುಧಾರಣೆಗೆ ಮುಂದಾಗಬೇಕು. ನಿಮ್ಮ ಜೀವನದಲ್ಲಿ ನೀವು ಯಾವ ದಿಕ್ಕಿಗೆ ಸಾಗಬೇಕು ಎನ್ನುವುದನ್ನು ನಿರ್ಧರಿಸಲು ಇದೊಂದು ಉತ್ತಮವಾದ ಸಮಯ. ನಿಮ್ಮ ಮೃದು ಸ್ವಭಾವವನ್ನು ಅರಿತು ಇತರ ವ್ಯಕ್ತಿಗಳು ಅದರ ಸದುಪಯೋಗ ಪಡಿಸಿಕೊಳ್ಳಲು ಬಿಡದಿರಿ. ನಿಮ್ಮ ಪರಿಪೂರ್ಣ ಸಮತೋಲನ ಸಾಮಥ್ರ್ಯ ಅಥವಾ ಕೌಶಲ್ಯದಿಂದ ವೃತ್ತಿ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ಆಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸ ಬೇಕಾಗುವುದಿಲ್ಲ. ನಿಮ್ಮ ಅಧೀನದಲ್ಲಿರುವ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗುವಿರಿ.

English summary

Most Philosophical Zodiac Who Think Deeply About Everything

There are certain zodiac signs which are best known for their warm nature. There are those individuals who might find themselves thinking deeply about even the smallest of things around. Here are the six most philosophical zodiac signs according to astrology. These particular individuals are known to see things where others see nothing, and that's a philosophical gift that they are blessed with.Check out the list as we reveal you about the most philosophical zodiac signs, the individuals of which are known to think about every single thing deeply.
X
Desktop Bottom Promotion