Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಾಂಧಿ ಜಯಂತಿ 2020: ನೋಟುಗಳಲ್ಲಿರುವ ಗಾಂಧೀಜಿಯ ರೇಖಾಚಿತ್ರದ ಹಿಂದಿನ ರಹಸ್ಯ
ಭಾರತದ ನೋಟುಗಳು ಯಾವುದೇ ಇರಲಿ, ಎಷ್ಟೇ ಹಳೆಯದಿರಲಿ ಅಥವಾ ಹೊಸ ನೋಟುಗಳಾಗಲಿ, ಐದು ರೂಗಿಂತ ದೊಡ್ಡ ಬೆಲೆಯ ನೋಟುಗಳಲ್ಲಿ ಗಾಂಧೀಜಿಯವರ ರೇಖಾಚಿತ್ರ ಮಾತ್ರ ಇದ್ದೇ ಇರುತ್ತದೆ. ಏಕೆಂದು ಗೊತ್ತೇ? ನೋಟುಗಳನ್ನು ವಿನ್ಯಾಸಗೊಳಿಸಿ ಮುದ್ರಿಸುವ ಅಧಿಕಾರವಿರುವ ಏಕೈಕ ಸಂಸ್ಥೆಯಾದ ಆರ್ ಬಿ ಐ (The Reserve Bank of India (RBI)ಗೂ ಈ ನೋಟುಗಳನ್ನು ವಿನ್ಯಾಸಗೊಳಿಸಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಲ್ಲದೇ ಗಾಂಧೀಜಿಯವರ ಚಿತ್ರವನ್ನು ಅಳವಡಿಸಿಕೊಳ್ಳಲು ಒಂದು ಇತಿಹಾಸವೇ ಇದೆ.
2020 ಅಕ್ಟೋಬರ್ 2ರಂದು ದೇಶಾದ್ಯಂತ ಅಹಿಂಸಾ ತತ್ವ ಪ್ರತಿಪಾದಕ ಗಾಂಧೀಜಿ ಅವರ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ಭಾರತದ ನೋಟುಗಳಲ್ಲಿ ಗಾಂಧಿ ರೇಖಾಚಿತ್ರವನ್ನು ಏಕೆ ಅಳವಡಿಸಲಾಗಿದೆ, ಇದರ ಹಿನ್ನೆಲೆ ಏನು ತಿಳಿಯೋಣ ಬನ್ನಿ.
ಅಷ್ಟಕ್ಕೂ ಗಾಂಧೀಜಿಯವರ ಈ ರೇಖಾಚಿತ್ರ ಅವರ ಭಾವಚಿತ್ರಕ್ಕೆ ಅಷ್ಟೊಂದು ಕರಾರುವಕ್ಕಾಗುವಂತೆ ಹೇಗೆ ಚಿತ್ರಿಸಲಾಗಿದೆ? ಈ ಚಿತ್ರದ ಮೂಲ ಚಿತ್ರ ಯಾವುದು? ಇದುವರೆಗೆ ನಾವೆಲ್ಲಾ ಪ್ರತಿದಿನವೂ ನೋಡುತ್ತಾ ಬಂದಿದ್ದರೂ ಈ ಬಗ್ಗೆ ಗಮನಿಸದೇ ಇರುವ ಕೆಲವು ಮಾಹಿತಿಗಳನ್ನು ಈಗ ನೋಡೋಣ...

ಇದರ ಮೂಲಚಿತ್ರ..
ಇವರ ಕಪ್ಪು ಬಿಳುಪು ಭಾವಚಿತ್ರವನ್ನು 1946 ಅಲ್ಲಿ ಅನಾಮಧೇಯ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿದ್ದರು. ಈ ವರ್ಷದಲ್ಲಿ ಅಂದಿನ ಬ್ರಿಟಿಷ್ ಆಡಳಿತದ ಭಾರತೀಯ ರಾಜ್ಯದ ಕಾರ್ಯದರ್ಶಿಗಳಾದ (the Secretary of State for India) ಲಾರ್ಡ್ ಪೆಥ್ವಿಕ್-ಲಾರೆನ್ಸ್ ರನ್ನು ಗಾಂಧೀಜಿಯವರು ಕಲ್ಕತ್ತ (ಇಂದಿನ ಕೋಲ್ಕಾತಾ) ನಗರದ ವೈಸರಾಯ್ ಭವನದಲ್ಲಿ ಭೇಟಿಯಾಗಿದ್ದರು. ಈ ಭೇಟಿಯ ಸಂದರ್ಭದಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಾಯ್ತು...

ಈ ಚಿತ್ರದ ಬಗ್ಗೆ ಇನ್ನಷ್ಟು
1946ರಲ್ಲಿ ಗಾಂಧೀಜಿಯವರು ಭೇಟಿ ನೀಡಿದ್ದ ಈ ಭವನ ಈಗ ರಾಷ್ಟಪತಿ ಭವನವೆಂದು ಕರೆಯಲ್ಪಡುತ್ತದೆ. ಈ ಭವನದಲ್ಲಿ ತೆಗೆದ ಚಿತ್ರವನ್ನು ಸ್ವತಂತ್ರ ಭಾರತದ ಎಲ್ಲಾ ಪ್ರಮುಖ ನೋಟುಗಳಲ್ಲಿ ಅಳವಡಿಸಿಕೊಳ್ಳಲಾಯ್ತು.

ವಾಸ್ತವವಾಗಿ ಇದು ಕನ್ನಡಿ ಪ್ರತಿಬಿಂಬ
ನೋಟುಗಳ ಮೇಲೆ ಮುದ್ರಿಸಿದ ಬಳಿಕ ನಾವು ನೋಡುವ ಗಾಂಧೀಜಿಯವರ ಎಡಬದಿಗೆ ತಿರುಗಿದಂತೆ ಕಾಣುವ ಭಾವಚಿತ್ರ ವಾಸ್ತವವಾಗಿ ಕನ್ನಡಿ ಬಿಂಬವಾಗಿದೆ.(ಅಂದರೆ ಬಲಬದಿಗೆ ತಿರುಗಿರುವ). 1987ರಲ್ಲಿ ಹೊಸ ಐನೂರರ ನೋಟುಗಳನ್ನು ಮುದ್ರಿಸುವಾಗ ನೋಟುಗಳ ಒಳಭಾಗದಲ್ಲಿರುವ ನೀರಿನ ಮುದ್ರೆ (ಅಥವಾ ಬೆಳಕಿಗೆ ಹಿಡಿದಾಗ ಮಾತ್ರ ಕಾಣುವ ವಾಟರ್ ಮಾರ್ಕ್) ಕಾಣುವಂತೆ ಮೊದಲ ಬಾರಿ ಅಳವಡಿಸಲಾಯ್ತು.

1996ರಲ್ಲಿ ಹೊಸವಿನ್ಯಾಸಗಳಲ್ಲಿ ಗಾಂಧೀಜಿಯವರ ಚಿತ್ರ ಹೊಂದಿದ ನೋಟುಗಳು
1996ರಲ್ಲಿ ಎಲ್ಲಾ ನೋಟುಗಳ ವಿನ್ಯಾಸವನ್ನು ಬದಲಿಸಿದಾಗ ಪ್ರತಿ ನೋಟಿನಲ್ಲಿಯೂ ಗಾಂಧೀಜಿಯವರ ಈ ಚಿತ್ರವನ್ನು ಅಳವಡಿಸಿಕೊಳ್ಳಲಾಯ್ತು. ಇದಕ್ಕೂ ಮುನ್ನ ಎಲ್ಲಾ ನೋಟುಗಳಲ್ಲಿ ಅಶೋಕ ಸ್ತಂಭದ ಚಿತ್ರವನ್ನು ಪ್ರಮುಖವಾಗಿ ಕಾಣುವಂತೆ ಮುದ್ರಿಸಲಾಗುತ್ತಿತ್ತು.

1996ರಲ್ಲಿ ಹೊಸವಿನ್ಯಾಸಗಳಲ್ಲಿ ಗಾಂಧೀಜಿಯವರ ಚಿತ್ರ ಹೊಂದಿದ ನೋಟುಗಳು
ಈ ವರ್ಷ ಆರ್. ಬಿ.ಐ ಕೈಗೊಂಡ ಪ್ರಮುಖ ನಿರ್ಧಾರದಲ್ಲಿ ಗಾಂಧೀಜಿಯವರ ಚಿತ್ರದ ರೇಖಾಚಿತ್ರವನ್ನು ಐದು ರೂಪಾಯಿಂದ ಪ್ರಾರಂಭಿಸಿ ಎಲ್ಲಾ ದೊಡ್ಡ ನೋಟುಗಳಲ್ಲಿ ಅಳವಡಿಸುವುದೂ ಒಂದಾಗಿತ್ತು. ಅಂದಿನಿಂದ ಇದುವರೆಗೆ ಎಲ್ಲಾ ನೋಟುಗಳಲ್ಲಿ ಗಾಂಧೀಜಿಯವರ ಚಿತ್ರ ಕಡ್ಡಾಯವಾಗಿ ಮುದ್ರಿಸಲಾಗುತ್ತದೆ. ಹಿಂಭಾಗದಲ್ಲಿ ಐತಿಹಾಸಿಕ ಪ್ರಸಂಗವನ್ನು ಪ್ರತಿನಿಧಿಸುವ ಚಿತ್ರವನ್ನು ಆಯ್ಕೆ ಮಾಡಲಾಗುತ್ತದೆ.



Click it and Unblock the Notifications