ಮಹಿಳೆಯ ಕನಸು ಬಿದ್ದರೆ-ಕನಸಲ್ಲಿ ಅರೆರೆರೇ! ಭವಿಷ್ಯ ಅಯ್ಯಯ್ಯಯ್ಯೋ..!

By: Divya
Subscribe to Boldsky

ನಿದ್ರಿಸುವಾಗ ಕನಸು ಬೀಳುವುದು ಸಹಜ. ಆ ಕನಸುಗಳಲ್ಲಿ ನಮ್ಮ ಪಾತ್ರ ನಿಜವಾದದ್ದು ಎನ್ನುವ ರೀತಿಯಲ್ಲಿಯೇ ಗೋಚರವಾಗುತ್ತದೆ. ಒಮ್ಮೊಮ್ಮೆ ಕನಸು ಖುಷಿಯ ಅನುಭವ ನೀಡಿದರೆ, ಕೆಲವೊಮ್ಮೆ ಭಯದ ಅನುಭವ ನೀಡುವುದು. ಕನಸುಗಳ ಪವಾಡವೇ ಹಾಗೆ. ಕೆಲವು ಸಮಯದಲ್ಲಿ ಬೀಳುವ ಕನಸು ನೈಜ ಜೀವನದಲ್ಲಿ ನಿಜವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ನಮ್ಮ ಭವಿಷ್ಯದ ಮುನ್ಸೂಚನೆಯನ್ನು ಕನಸು ಹೇಳುತ್ತದೆ ಎನ್ನಲಾಗುತ್ತದೆ. ಈ ಕುರಿತು ಅನೇಕ ಸಂಶೋಧನೆ ಹಾಗೂ ಅಧ್ಯಯನಗಳನ್ನು ಕೈಗೊಂಡಿರುವುದು ಸುಳ್ಳಲ್ಲ.

ವೈದಿಕ ವಿಜ್ಞಾನದ ಪ್ರಕಾರ ಸೂರ್ಯೋದಯಕ್ಕೆ ಎರಡು ಗಂಟೆ ಮೊದಲು ಸಂಭವಿಸುವ ಕನಸುಗಳು (ಬ್ರಹ್ಮ ಮುಹೂರ್ತ) ಭವಿಷ್ಯದ ಬಗ್ಗೆ ಸೂಚನೆಯನ್ನು ನೀಡುತ್ತವೆ. ಈ ಸಮಯದಲ್ಲಿ ಬೀಳುವ ಕನಸುಗಳು ಸಹ ನೆನಪಿನಂಗಳದಲ್ಲಿ ಕಾಯ್ದಿರಿಸಿಕೊಂಡಿರಬಹುದು. ಸಾಮಾನ್ಯವಾಗಿ ವ್ಯಕ್ತಿ ಗಾಢ ನಿದ್ರೆಯಿಂದ ಹೊರಬಂದಿರುವ ಸಮಯ ಇದಾಗಿರುತ್ತದೆ. ಹಾಗಾಗಿ ಕಂಡ ಕನಸನ್ನು ನೆನಪಿಟ್ಟುಕೊಂಡು ಭವಿಷ್ಯವನ್ನು ಊಹಿಸಬಹುದು. 

ಅಚ್ಚರಿಯ ಲೋಕ: ಕನಸಿನಲ್ಲಿ ತ್ರಿಶೂಲ, ಶಿವಲಿಂಗ ಕಂಡುಬಂದರೆ...

ಕೆಲವು ತಜ್ಞರ ಪ್ರಕಾರ ಗಂಡಸರ ಕನಸಿನಲ್ಲಿ ಮಹಿಳೆಯು ಕಾಣಿಸಿಕೊಳ್ಳುವ ಪರಿಯಿಂದ ಭವಿಷ್ಯ ಹೀಗೆ ಇರುತ್ತದೆ ಎಂದು ಹೇಳಬಹುದು. ಕಂಡ ಕನಸು ನಿಜವಾದರೆ ಅದೆಷ್ಟು ಸೊಗಸಾಗಿರುತ್ತದೆ ಎನ್ನುವ ಭಾವನೆ ಎಲ್ಲರಲ್ಲೂ ಇರುತ್ತದೆ. ಕನಸಲ್ಲಿ ಬರುವ ಮಹಿಳೆ ಭವಿಷ್ಯವನ್ನು ಹೇಗೆ ಹೇಳುತ್ತಾಳೆ ಎನ್ನುವ ಕುತೂಹವಾದ ವಿವರ ಇಲ್ಲಿದೆ... 

ಕನಸಿನಲ್ಲಿ ಮಹಿಳೆ ಆಡುತ್ತಿದ್ದರೆ!

ಕನಸಿನಲ್ಲಿ ಮಹಿಳೆ ಆಡುತ್ತಿದ್ದರೆ!

ಕನಸಿನಲ್ಲಿ ಮಹಿಳೆ ಚದುರಂಗ(ಚೆಸ್) ಆಟವನ್ನು ಆಡುತ್ತಿದ್ದಂತೆ ಕಂಡರೆ, ನಿಮ್ಮ ಭವಿಷ್ಯದಲ್ಲಿ ಹೆಸರು ಮತ್ತು ಖ್ಯಾತಿಯು ಹಾಳಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.

ಕನಸಲ್ಲಿ ಬಿಳಿ ವರ್ಣದ ಮಹಿಳೆ

ಕನಸಲ್ಲಿ ಬಿಳಿ ವರ್ಣದ ಮಹಿಳೆ

ಕನಸಲ್ಲಿ ಬಿಳಿ ವರ್ಣದ ಮಹಿಳೆ ನಿಮ್ಮನ್ನು ಆಕರ್ಷಿಸಿದಂತೆ ಕಂಡರೆ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗುವುದು. ಅವಳು ವಿದಾಯ ಹೇಳಿದಂತೆ ಕಂಡರೆ, ಭವಿಷ್ಯದಲ್ಲಿ ಪಿತ್ರಾರ್ಜಿತ ಆಸ್ತಿ ಸಿಗುತ್ತದೆ ಎನ್ನುವುದನ್ನು ಹೇಳುತ್ತದೆ.

ಯಕ್ಷಿಣಿ ಬಂದಂತೆ ಕಂಡರೆ!

ಯಕ್ಷಿಣಿ ಬಂದಂತೆ ಕಂಡರೆ!

ಗಂಡಸರ ಕನಸಲ್ಲಿ ಯಕ್ಷಿಣಿ ಬಂದಂತೆ ಕಂಡರೆ, ಹೆಚ್ಚು ಕೆಲಸ ಮಾಡದೆಯೇ ಶ್ರೀಮಂತನಾಗುವನು ಎನ್ನುವುದನ್ನು ತಿಳಿಸುತ್ತದೆ.

ಕನಸಲ್ಲಿ ಮಧುಮಗಳು ಅಳುತ್ತಿದ್ದರೆ

ಕನಸಲ್ಲಿ ಮಧುಮಗಳು ಅಳುತ್ತಿದ್ದರೆ

ಕನಸಲ್ಲಿ ಮಧುಮಗಳು ಅಳುತ್ತಿದ್ದಂತೆ ಕಂಡರೆ, ಅತ್ತೆಯೊಂದಿಗೆ ವೈಮನಸ್ಸು ಉಂಟಾಗುವ ಸಂಭವ ಇರುತ್ತದೆ.

ನಿದ್ದೆಯಲ್ಲಿ ಕಾಣುವ ಕನಸಿನ ಕುರಿತು ಇಂಟರೆಸ್ಟಿಂಗ್ ಕಹಾನಿ!

ಪ್ರವಾಸ ಹೋದಂತೆ ಕಂಡರೆ...

ಪ್ರವಾಸ ಹೋದಂತೆ ಕಂಡರೆ...

ಹೆಂಡತಿ/ಮದುವೆಯಾಗಲಿರುವ ಹುಡುಗಿಯ ಜೊತೆ ಪ್ರವಾಸ ಹೋದಂತೆ ಕಂಡರೆ, ವೈವಾಹಿಕ ಜೀವನವು ಯಶಸ್ವಿಯಾಗಿರುತ್ತದೆ ಎನ್ನುವುದನ್ನು ಸೂಚಿಸುವುದು.

ಮಹಿಳೆ ಕನಸಲ್ಲಿ ನಿಮ್ಮನ್ನು ತಬ್ಬಿಕೊಂಡಂತೆ ಕಂಡರೆ

ಮಹಿಳೆ ಕನಸಲ್ಲಿ ನಿಮ್ಮನ್ನು ತಬ್ಬಿಕೊಂಡಂತೆ ಕಂಡರೆ

ಬಿಳಿ ಬಟ್ಟೆಯನ್ನು ಧರಿಸುವ ಮಹಿಳೆ ಕನಸಲ್ಲಿ ನಿಮ್ಮನ್ನು ತಬ್ಬಿಕೊಂಡಂತೆ ಕಂಡರೆ, ನೀವು ಬಹಳ ಅದೃಷ್ಟವಂತರು ಎನ್ನುವುದನ್ನು ತಿಳಿಸುತ್ತದೆ.

ಮಹಿಳೆ ನೃತ್ಯ ಮಾಡುತ್ತಿದ್ದಂತೆ ಕಂಡರೆ

ಮಹಿಳೆ ನೃತ್ಯ ಮಾಡುತ್ತಿದ್ದಂತೆ ಕಂಡರೆ

ಕನಸಲ್ಲಿ ಮಹಿಳೆ ನೃತ್ಯ ಮಾಡುತ್ತಿದ್ದಂತೆ ಕಂಡರೆ, ನಿಮ್ಮ ಸಂಬಂಧಗಳಲ್ಲಿ ಬಿರುಕು ಉಂಟಾಗುವುದು ಎನ್ನುವುದನ್ನು ತೋರಿಸುತ್ತದೆ.

ವಜ್ರದ ಒಡವೆಯನ್ನು ಉಡುಗೊರೆಯಾಗಿ ನೀಡಿರುವಂತೆ ಕಂಡರೆ

ವಜ್ರದ ಒಡವೆಯನ್ನು ಉಡುಗೊರೆಯಾಗಿ ನೀಡಿರುವಂತೆ ಕಂಡರೆ

ನಿಮ್ಮ ಸಂಗಾತಿಗೆ ನೀವು ವಜ್ರದ ಒಡವೆಯನ್ನು ಉಡುಗೊರೆಯಾಗಿ ನೀಡಿರುವಂತೆ ಕಂಡರೆ, ನಿಮ್ಮ ವೈವಾಹಿಕ ಜೀವನದಲ್ಲಿ ಶೀಘ್ರವೇ ತೊಂದರೆ ಉಂಟಾಗುವುದು ಎನ್ನುವದನ್ನು ಅರಿಯಬಹುದು.

ವಜ್ರದ ಒಡವೆಯನ್ನು ಉಡುಗೊರೆಯಾಗಿ ನೀಡಿರುವಂತೆ ಕಂಡರೆ

ವಜ್ರದ ಒಡವೆಯನ್ನು ಉಡುಗೊರೆಯಾಗಿ ನೀಡಿರುವಂತೆ ಕಂಡರೆ

ಕನಸಲ್ಲಿ ಹೆಂಡತಿಗೆ/ಪ್ರೇಯಸಿಗೆ ವಿದಾಯ ಹೇಳಿರುವಂತೆ ಕಂಡರೆ, ಶೀಘ್ರದಲ್ಲೇ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ.

ಮಹಿಳೆಯ ನಗ್ನ ಚಿತ್ರವನ್ನು ಬಿಡಿಸುತ್ತಿದ್ದಂತೆ ಕಂಡರೆ

ಮಹಿಳೆಯ ನಗ್ನ ಚಿತ್ರವನ್ನು ಬಿಡಿಸುತ್ತಿದ್ದಂತೆ ಕಂಡರೆ

ನಿಮ್ಮ ಕನಸಲ್ಲಿ ನೀವು ಮಹಿಳೆಯ ನಗ್ನ ಚಿತ್ರವನ್ನು ಬಿಡಿಸುತ್ತಿದ್ದಂತೆ ಕಂಡರೆ, ನಿಮಗೆ ಕಷ್ಟದ ಕಾಲ ಪ್ರಾರಂಭವಾಯಿತು ಎನ್ನುವುದನ್ನು ಹೇಳುತ್ತದೆ.

ನಿದ್ದೆಯಲ್ಲಿ ಕಂಡ ಕನಸು ಏಕೆ ಮರೆತು ಹೋಗುತ್ತದೆ? ಏನಿದರ ರಹಸ್ಯ?

English summary

If A Woman Makes These Gestures In Your Dream, Future Is Bright!

The world of dreams is a different yet enchanting realm. What happens in it is often reflective of what is going on in our real life. However, sometimes dream can predict our future too. According to experts, there is a whole study of dream astrology that deals with dream interpretation.
Subscribe Newsletter