For Quick Alerts
ALLOW NOTIFICATIONS  
For Daily Alerts

ಗಡಿಯಾರ ನಿಂತರೆ ಅಶುಭ! ಕೂಡಲೇ ಚಲಿಸುವಂತೆ ಮಾಡಿ...

ಗಡಿಯಾರ ನಿಂತರೆ ಅಶುಭ, ತಕ್ಷಣ ಇದನ್ನು ಚಲಿಸುವಂತೆ ಮಾಡಿ ಎಂದು ಹಿರಿಯರು ಕಿರಿಯರಿಗೆ ದುಂಬಾಲು ಬೀಳುತ್ತಾರೆ. ಹೀಗೆ ದುಂಬಲು ಬೀಳಲು ಕೆಲವು ವೈಜ್ಞಾನಿಕ ಕಾರಣಗಳಿದ್ದರೆ ಕೆಲವು ನಂಬಿಕೆ ಮತ್ತು ಮಿಥ್ಯೆಗಳಾಗಿವೆ.

By Manu
|

ಸಂಪೂರ್ಣವಾಗಿ ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ಸರಿಯಾದ ಸಮಯ ಸೂಚಿಸುತ್ತದೆ ಎಂದು ಸುಭಾಷಿತವೊಂದು ತಿಳಿಸುತ್ತದೆ. ಅಂದರೆ ಈ ಭೂಮಿಯಲ್ಲಿರುವ ಯಾವುದೇ ವಸ್ತು ನಿರುಪಯುಕ್ತವಲ್ಲ. ಆದರೂ ಗಡಿಯಾರ ನಿಂತರೆ ಇದನ್ನು ಅಪಶಕುನ ಎಂದು ಭಾವಿಸುವ ಜನರಿದ್ದಾರೆ.

ಗಡಿಯಾರ ನಿಂತರೆ ಅಶುಭ, ತಕ್ಷಣ ಇದನ್ನು ಚಲಿಸುವಂತೆ ಮಾಡಿ ಎಂದು ಹಿರಿಯರು ಕಿರಿಯರಿಗೆ ದಂಬಾಲು ಬೀಳುತ್ತಾರೆ. ಹೀಗೆ ದಂಬಾಲು ಬೀಳಲು ಕೆಲವು ವೈಜ್ಞಾನಿಕ ಕಾರಣಗಳಿದ್ದರೆ ಕೆಲವು ನಂಬಿಕೆ ಮತ್ತು ಮಿಥ್ಯೆಗಳಾಗಿವೆ. ಗೋಡೆಗಡಿಯಾರವನ್ನು ತೂಗು ಹಾಕುವಾಗ ವಾಸ್ತುಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ!

ಅದರಲ್ಲೂ ವಿಶೇಷವಾಗಿ ಮನೆಯ ಪ್ರಧಾನ ಸ್ಥಳದಲ್ಲಿರುವ ಗಡಿಯಾರ ನಿಂತರೆ ಅತೀವ ಕಳವಳ ವ್ಯಕ್ತಪಡಿಸಲಾಗುತ್ತದೆ. ಬನ್ನಿ, ಈ ಪರಿಯ ಮಿಥ್ಯೆ ಅಥವಾ ನಂಬಿಕೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ಈಗ ನೋಡೋಣ...

 ನಂಬಿಕೆ #1

ನಂಬಿಕೆ #1

ಹಲವು ಅಧಿಮನಃಶಾಸ್ತ್ರಜ್ಞ ಹಾಗೂ ಇತರ ಆಸಕ್ತರ ಸಂಶೋಧನೆಯ ಪರಿಣಾಮದಿಂದ ಜಗತ್ತಿನ ಹೆಚ್ಚಿನ ಕಡೆ ನಿಂತ ಗಡಿಯಾರ ದುರಾದೃಷ್ಟ ಮತ್ತು ದುರ್ದೆಸೆಯ ಸಂಕೇತವಾಗಿದೆ.

ನಂಬಿಕೆ #2

ನಂಬಿಕೆ #2

ಇನ್ನೊಂದು ನಂಬಿಕೆಯ ಪ್ರಕಾರ ಗಡಿಯಾರವನ್ನು ತಯಾರಿಸಿದ ವ್ಯಕ್ತಿ ಈ ಗಡಿಯಾರದ ಸೂಕ್ಷ್ಮ ಭಾಗಗಳನ್ನು ಜೋಡಿಸಿ ಈ ಗಡಿಯಾರ ನಡೆಯುವಂತೆ ಮಾಡಲು ತನ್ನ ಆತ್ಮದ ಒಂದು ಭಾಗವನ್ನೂ ಉಪಯೋಗಿಸಿರುತ್ತಾನೆ. ಯಾವಾಗ ಈ ಗಡಿಯಾರ ನಿಂತು ಹೋಯಿತೋ, ಆಗ ಆ ವ್ಯಕ್ತಿಯ ಆತ್ಮವೂ ನಿಂತು ಹೋದಂತೆ ಎಂದು ಭಾವಿಸಲಾಗುತ್ತದೆ.

ನಂಬಿಕೆ #3

ನಂಬಿಕೆ #3

ಹಿಂದಿನ ದಿನಗಳಲ್ಲಿ ನಿಂತ ಗಡಿಯಾರವನ್ನು ತಕ್ಷಣ ನಡೆಯುವಂತೆ ಮಾಡದೇ ಇದ್ದರೆ ಇದರ ಪರಿಣಾಮದಿಂದ ಮನೆಯಲ್ಲಿ ಸಾವು ಸಂಭವಿಸುತ್ತದೆ ಹಾಗೂ ಮನೆಯಲ್ಲಿ ದುರಾದೃಷ್ಟ ತುಂಬಿಕೊಳ್ಳುತ್ತದೆ. ಈ ನಂಬಿಕೆಯನ್ನು ಹಲವು ಚಲನಚಿತ್ರಗಳಲ್ಲಿ ಸಾಂಕೇತಿಕವಾಗಿಯೂ ತಿಳಿಸಲಾಗುತ್ತದೆ.

ನಂಬಿಕೆ #4

ನಂಬಿಕೆ #4

ಎಷ್ಟೋ ಕಾಲದವರೆಗೆ ಹೊಡೆದುಕೊಳ್ಳದೇ ಇದ್ದ ಗಡಿಯಾರವೊಂದು ಹಠಾತ್ತಾಗಿ ಹೊಡೆದುಕೊಳ್ಳಲು ಪ್ರಾರಂಭವಾದರೆ ಮನೆಯಲ್ಲಿ ಸಾವು ಸಂಭವಿಸುವುದು ನಿಕಟವಾಗಿದೆ ಎಂಬ ಸೂಚನೆಯಾಗಿದೆ.

ನಂಬಿಕೆ #5

ನಂಬಿಕೆ #5

ಹೆಚ್ಚು ಹೊತ್ತು ನಿಂತಿರುವ ಗಡಿಯಾರ ಮನೆಗೆ ದುರಾದೃಷ್ಟ ತರುತ್ತದೆ ಎಂದು ಈಗಾಗಲೇ ಅರಿತಿದ್ದೇವೆ. ಆದ್ದರಿಂದಲೇ ಇದನ್ನು ತಕ್ಷಣ ಚಾಲನೆಗೆ ಒಳಪಡಿಸಬೇಕು ಎಂದು ಹಿರಿಯರು ಚಡಪಡಿಸುತ್ತಾರೆ. ವಾಸ್ತವವಾಗಿ ಮನೆಯ ಗಡಿಯಾರ ನಿಂತುಹೋಗಿದ್ದರೆ ಮನೆಗೆ ಬರುವ ಅತಿಥಿಗಳು ಇದನ್ನು ಗಮನಿಸಿ ಮನೆಯವರ ಬಗ್ಗೆ ಅಪಾರ್ಥ ಕಲ್ಪಿಸಿಕೊಳ್ಳಬಹುದು.

ನಂಬಿಕೆ #5

ನಂಬಿಕೆ #5

ಮನೆಯವರು ಸೋಮಾರಿಗಳೂ, ಒಂದು ಗಡಿಯಾರಕ್ಕೆ ಚಾವಿ ಕೊಡುವುದು ಅಥವಾ ಬ್ಯಾಟರಿಯನ್ನು ಬದಲಿಸಲೂ ಅಸ್ಥೆ ತೋರದವರು ಎಂಬ ಭಾವನೆ ಮೂಡಿಸಿಕೊಳ್ಳುತ್ತಾರೆ. ತಮ್ಮ ಮನೆಯ ಬಗ್ಗೆ ಈ ಭಾವನೆ ಮೂಡಬಾರದೆಂಬುದೇ ಹಿರಿಯರ ಕಳಕಳಿಯಾಗಿದೆ.

English summary

Myths & Beliefs Of A Stopped Clock!

Here, in this article, we are about to share the different myths and beliefs of people who feel it is wrong to have stopped clocks at home. Check out these following paragraphs which show the superstitious beliefs that people have of a stopped clock.
X
Desktop Bottom Promotion