For Quick Alerts
ALLOW NOTIFICATIONS  
For Daily Alerts

ಮೆದುಳಿನ ಯುಕ್ತಿಯನ್ನು ಹೆಚ್ಚಿಸುವ ಶಕ್ತಿ, ಇಲ್ಲಿದೆ ಸರಳ ಟ್ರಿಕ್ಸ್

By Super
|

ಈ ಜಗತ್ತಿನಲ್ಲಿ ಮನುಷ್ಯ ಯಾವುದೇ ಪ್ರಾಣಿಗಿಂತ ಹೆಚ್ಚು ಪ್ರಗತಿ ಹೊಂದಿರಲು ಕಾರಣ ಮೆದುಳನ್ನು ಬಳಸಿಕೊಳ್ಳುವ ಶಕ್ತಿ. ಹೊಸದನ್ನು ಕಲಿಯುವ, ಕಷ್ಟಗಳನ್ನು ಯುಕ್ತಿಯಿಂದ ಎದುರಿಸುವ ಬಗೆ. ಆದರೆ ಮೆದುಳಿನ ಕಾರ್ಯನಿರ್ವಹಣೆಯ ಬಗ್ಗೆ ಹೊರಗಿನಿಂದ ನೋಡಿದರೆ ವಿಚಿತ್ರವಾಗಿ ಕಾಣುತ್ತದೆ. ಮನವೆಂಬ ಮರ್ಕಟ ಎಂದು ಹಿರಿಯರು ಹೇಳಿದುದು ಇದೇ ಕಾರಣಕ್ಕೆ. ಈ ಮರ್ಕಟನನ್ನು ಅರಿಯಲು ವಿಜ್ಞಾನಿಗಳೇ ಪ್ರಯತ್ನಿಸಿ ಕೈಚೆಲ್ಲಿದ್ದಾರೆ. ಅಂದರೆ ದೇಹದ ಇತರ ಎಲ್ಲಾ ಭಾಗಗಳ ಕಣಕಣವನ್ನು ಅರಿತಿರುವ ಮೆದುಳಿಗೆ ತನ್ನ ಬಗ್ಗೆಯೇ ತಿಳಿದಿಲ್ಲ! ಈಗ ತಿಳಿದಿರುವುದಾದರೂ ಇದರ ಆಗಾಧ ಕ್ಷಮತೆಗೆ ಒಂದು ಸಾಸಿವೆ ಕಾಳಿನಷ್ಟು ಮಾತ್ರ. ಮೆದುಳಿನ ಕಾರ್ಯನಿರ್ವಹಣೆಯ ಬಗ್ಗೆ ತಿಳಿದರೆ ಕೊಂಚ ವಿಚಿತ್ರವೆನಿಸುತ್ತದೆ. ಮೆದುಳನ್ನು ಚುರುಕಾಗಿಸುವ ಪ್ರಭಾವಶಾಲಿ ತಂತ್ರಗಳು

ಏಕೆಂದರೆ ಕೆಲವು ಸುಲಭ ಪಟ್ಟುಗಳಿಂದ ಇದಕ್ಕೆ ಮೋಸ ಮಾಡಬಹುದು! ಇದನ್ನು ಚೆನ್ನಾಗಿ ಅರಿತಿರುವವರೆಂದರೆ ಜಾದೂಗಾರರು ಮತ್ತು ಪಿಕ್ ಪಾಕೆಟ್ ದಾರರು. ನಮ್ಮ ಮೆದುಳು ಎತ್ತೆತ್ತಲೋ ಗಮನಿಸುತ್ತಿರುವಾಗ ಬಸ್ ಬಂದರೆ ಥಟ್ಟನೇ ಎಲ್ಲರ ಗಮನ ಬಸ್ ಏರುವತ್ತ ಕೇಂದ್ರೀಕೃತವಾಗುತ್ತದೆ. ಆಗಲೇ, ಪಿಕ್ ಪಾಕೆಟ್ ನಡೆದುಬಿಡುತ್ತದೆ. ಇನ್ನೊಂದೆಡೆ ಜಾದೂಗಾರರು ಮೆದುಳಿನ ಊಹೆಯನ್ನೇ (ಅಂದರೆ ಇಲ್ಲದ್ದನ್ನು ಇದೆ ಎಂದು ಕಲ್ಪಿಸಿಕೊಳ್ಳುವುದು) ತಮ್ಮ ಟ್ರಿಕ್‪ಗಳಿಗಾಗಿ ಬಳಸಿಕೊಳ್ಳುತ್ತಾರೆ.

ಇನ್ನೊಂದು ಉದಾಹರಣೆಯಂತೆ ಸುತ್ತಲೂ ತಣ್ಣಗಿರುವ ವಾತಾವರಣವೇ ಇದ್ದಾಗ ನಾವು ಬಿಸಿ ಇದ್ದಂತೆ ಅಂದುಕೊಂಡರೆ ಕೊಂಚ ಹೊತ್ತಿನಲ್ಲಿಯೇ ನಮಗೆ ಬಿಸಿ ಇದ್ದಂತೆ ಅನ್ನಿಸುತ್ತದೆ. ಇನ್ನೊಂದು ವ್ಯಂಗ್ಯವೆಂದರೆ "ಈಗ ನೀಲಿ ಆನೆಯನ್ನು ಕಲ್ಪಿಸಿಕೊಳ್ಳಬೇಡಿ" ಎಂದಾಕ್ಷಣ ನಮ್ಮ ಮನ ನೀಲಿ ಆನೆಯೊಂದನ್ನು ಕಲ್ಪಿಸಿಬಿಟ್ಟಿರುತ್ತದೆ. ಅಂದರೆ ಈ ಟ್ರಿಕ್‌ನ ಸದ್ಭಳಕೆಗೂ ದುರ್ಬಳಕೆಗೂ ಉಪಯೋಗಿಸಬಹುದು. ಇದು ಉಪಯೋಗಿಸುವವನ ನಿಯತ್ತನ್ನು ಅವಲಂಬಿಸಿದೆ! ಸೋಜಿಗವೆನಿಸುವ ಮೆದುಳಿನ ಕುರಿತ ಇಂಟರೆಸ್ಟಿಂಗ್ ಸಂಗತಿ

ಯಾವುದೇ ತೊಂದರೆಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದೇ ಮೆದುಳನ್ನು ಸದ್ಬಳಕೆ ಮಾಡಿಕೊಳ್ಳುವ ಆಯುಧ. ಉದಾಹರಣೆಗೆ ದಕ್ಷಿಣ ಆಫ್ರಿಕಾದಲ್ಲಿ ಎದುರಿಸಿದ ವರ್ಣಬೇಧದಿಂದ ಕ್ರೋಧಗೊಂಡ ಗಾಂಧೀಜಿ ಈ ಕ್ರೋಧವನ್ನು ಬ್ರಿಟಿಷರನ್ನು ಓಡಿಸಲು ಬಳಸಿಕೊಂಡರು. ಇಂತಹ ಕೆಲವೊಂದು ಯುಕ್ತಿಗಳಿಂದ ನಿತ್ಯಜೀವನದ ಹಲವು ಕಷ್ಟಗಳಿಂದ ಸುಲಭವಾಗಿ ಪಾರಾಗಬಹುದು. ಬನ್ನಿ, ಕೆಳಗಿನ ಸ್ಲೈಡ್ ಶೋನಲ್ಲಿ ನೀಡಲಾಗಿರುವ ಮೆದುಳನ್ನು ಕೊಂಚ ಮೋಸಗೊಳಿಸುವ ಕೆಲವು ಯುಕ್ತಿಗಳನ್ನು ಕಲಿಯುವ ಮೂಲಕ ಜೀವನವನ್ನು ಸುಂದರ, ಸುಲಭವಾಗಿಸೋಣ...

ಸಿಟ್ಟು ಬಂತೇ ಕೈ ಬದಲಿಸಿ

ಸಿಟ್ಟು ಬಂತೇ ಕೈ ಬದಲಿಸಿ

ನಾವೆಲ್ಲರೂ ಒಂದೇ ಬಲಗೈ ಅಥವಾ ಎಡಗೈಯನ್ನು ಪ್ರಮುಖವಾಗಿ ಬಳಸುತ್ತೇವೆ. ಎಡಗೈ ಬಳಕೆ ಅಪರೂಪವಾಗಿದ್ದು ಅವರನ್ನು ಎಡಚರೆಂದು ಕರೆಯುತ್ತೇವೆ. ಆದರೆ ಸಾಮಾನ್ಯವಾಗಿ ಬಲಗೈ ಬಳಸುವಷ್ಟು ಸುಲಭವಾಗಿ ಎಡಗೈಯನ್ನು ನಾವು ಬಳಸಲಾರೆವು. ಏಕೆಂದರೆ ನಮ್ಮ ಮೆದುಳು ಮತ್ತು ಮೆದುಳುಬಳ್ಳಿ ಬಲಗೈ (ಎಡಚರಲ್ಲಿ ಎಡಗೈ) ಸ್ನಾಯುಗಳನ್ನು ತನ್ನ ಅಭ್ಯಾಸಕ್ಕೆ ತೆಗೆದುಕೊಂಡಿರುತ್ತದೆ. ಕೈ ಬದಲಿಸಿದರೆ ಆ ಕೆಲಸಕ್ಕೆ ಮೆದುಳಿನ ಹೆಚ್ಚಿನ ಗಮನ ಬೇಕಾಗುತ್ತದೆ. ಈ ಪರಿಯನ್ನು ಕ್ರೋಧ ನಿವಾರಿಸಲು ಬಳಸಬಹುದು. ಅಂದರೆ ಕ್ರೋಧಗೊಂಡ, ವ್ಯಗ್ರರಾಗಿದ್ದಾಗ ಅಥವಾ ಹುಚ್ಚು ಹಿಡಿಯುವಷ್ಟು ಪರಿಸ್ಥಿತಿ ವಿರುದ್ಧವಾಗಿದ್ದಾಗ ಆ ಬಗ್ಗೆ ಯೋಚಿಸಿದಷ್ಟೂ ಕ್ರೋಧ ಹೆಚ್ಚುತ್ತದೆ. ಬದಲಿಗೆ ಸಾವಧಾನದಿಂದ ಯೋಚಿಸಿದರೆ ಇದಕ್ಕೆ ಪರಿಹಾರ ದೊರಕುತ್ತದೆ. ಆದರೆ ಸಿಟ್ಟಿನಲ್ಲಿರುವ ಮನವನ್ನು ಸಂತೈಸಲು ಮನಸ್ಸಿನ ಗಮನವನ್ನು ಬೇರೆಡೆ ಹರಿಸುವುದು ಅಗತ್ಯ. ಸಿಟ್ಟಿನಲ್ಲಿದ್ದಾಗ ಕೈ ಬದಲಿ ಮಾಡಿದರೆ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲು ಸಾಧ್ಯವಾಗುತ್ತದೆ.

ಸಂವಾದದಲ್ಲಿ ಕೈ ಸನ್ನೆಗಳ ಬಳಕೆ

ಸಂವಾದದಲ್ಲಿ ಕೈ ಸನ್ನೆಗಳ ಬಳಕೆ

ಯಾವುದೇ ಸಂವಾದದಲ್ಲಿ ಕೈಗಳನ್ನು ಬಳಸುವುದು ಅತಿ ಅಗತ್ಯ. ಕೈಗಳನ್ನು ಆಡಿಸದೇ ಬರೆಯ ತುಟಿಗಳನ್ನು ಅಲ್ಲಾಡಿಸಿ ಮಾತನಾಡಿದರೆ ಈ ಮಾತುಗಳಿಗೆ ಹೆಚ್ಚಿನ ಹೆಚ್ಚಿನ ಬೆಲೆ ಇರುವುದಿಲ್ಲ. ಕೈಗಳ ಸಮರ್ಪಕ ಬಳಕೆಯ ಮಾತುಗಾರ ವಾಗ್ಮಿ ಎನ್ನಿಸಿಕೊಳ್ಳುತ್ತಾನೆ.

ಕ್ರಿಯಾತ್ಮಕರಾಗಬೇಕೇ, ಹುಬ್ಬೇರಿಸಿ

ಕ್ರಿಯಾತ್ಮಕರಾಗಬೇಕೇ, ಹುಬ್ಬೇರಿಸಿ

ಒಂದು ಸಂಶೋಧನೆಯ ಪ್ರಕಾರ ಸುಮ್ಮಸುಮ್ಮನೇ ಹುಬ್ಬೇರಿಸಿದರೂ ಮೆದುಳು ಕ್ರಿಯಾತ್ಮಕತೆಯತ್ತ ಜಾರುತ್ತದೆ. ಅದೇ ಒಂದೇ ಹುಬ್ಬನ್ನೇರಿಸಿದರೆ ಅನುಭೂತಿಯ ಗಮನವನ್ನು ಪ್ರಚೋದಿಸುತ್ತದೆ. ಅಂದರೆ ಈ ಚಿಕ್ಕ ಕ್ರಿಯೆಯಿಂದ ಮಾನಸಿಕವಾಗಿ ಮುಂದಿನ ಕ್ರಿಯೆಗಳಿಗಾಗಿ ಮೆದುಳನ್ನು ಸನ್ನದ್ಧಗೊಳಿಸುವುದು ಸಾಧ್ಯವಾಗುತ್ತದೆ. ಇದರಿಂದ ಮೆದುಳು ಹಿಂದೆ ಕಲಿತಿರದೇ ಇದ್ದ ವಿಷಯಗಳನ್ನು ಕಲಿಯತೊಡಗುತ್ತದೆ.

ಬರೆದು ಕಲಿತರೆ ಹೆಚ್ಚು ನೆನಪಿರುತ್ತದೆ

ಬರೆದು ಕಲಿತರೆ ಹೆಚ್ಚು ನೆನಪಿರುತ್ತದೆ

ಒಂದು ವೇಳೆ ಮರುದಿನ ಬೆಳಿಗ್ಗೆ ಯಾವುದಾದರೂ ಪರೀಕ್ಷೆ, ಸಂದರ್ಶನವಿದ್ದರೆ ರಾತ್ರಿ ಈ ಪರೀಕ್ಷೆಗಾಗಿ ಓದಿದ್ದ ವಿಷಯಗಳು ಬೆಳಗಾದಾಗ ಮರೆತೇ ಹೋಗುತ್ತದೆ. ಆದರೆ ರಾತ್ರಿ ಓದಿದ್ದನ್ನು ಮನನ ಮಾಡಿಕೊಳ್ಳಲು ಒಂದು ಸುಲಭ ಯುಕ್ತಿಯಿದೆ. ಅಂದರೆ ರಾತ್ರಿ ಓದಿದ ವಿಷಯಗಳ ಪ್ರಮುಖ ಭಾಗ ಅಥವಾ ಪದಗಳನ್ನು ಬರೆದಿಡಿ. ಬೆಳಿಗ್ಗೆ ಈ ಪದಗಳನ್ನು ನೋಡಿದಾಕ್ಷಣ ರಾತ್ರಿ ಓದಿದ್ದು ಥಟ್ಟನೇ ನೆನಪಿಗೆ ಬರುತ್ತದೆ. ಈ ಪರಿಯಲ್ಲಿ ನೆನಪು ಮಾಡಿಕೊಂಡಿದ್ದ ವಿಷಯಗಳು ಬಹಳ ವರ್ಷಗಳವರೆಗೆ ನೆನಪಿರುತ್ತದೆ.

ಗಂಭೀರ ಪರಿಸ್ಥಿತಿಯಲ್ಲಿ ಹುಸಿನಗು ಉತ್ತಮ

ಗಂಭೀರ ಪರಿಸ್ಥಿತಿಯಲ್ಲಿ ಹುಸಿನಗು ಉತ್ತಮ

ಸಾಮಾನ್ಯವಾಗಿ ಗಂಭೀರ ಪರಿಸ್ಥಿತಿಯಲ್ಲಿ ಮಾತು ಸಂವಾದಗಳು ತಾರಕಕ್ಕೇರುತ್ತವೆ. ಪರಿಣಾಮವಾಗಿ ಸಂವಾದದಲ್ಲಿರುವವರ ರಕ್ತದೊತ್ತಡ ವಿಪರೀತವಾಗಿ ಏರುತ್ತದೆ. ಇದೇ ರೀತಿ ದುಃಖದಲ್ಲಿರುವ ಸಮಯದಲ್ಲಿಯೂ ರಕ್ತದೊತ್ತಡ ಏರುವುದು ಅಥವಾ ಇಳಿಯುವುದು ಆಗುತ್ತದೆ. ಈ ಸಮಯದಲ್ಲಿ ಸುಳ್ಳು ಸುಳ್ಳೇ ನಕ್ಕುಬಿಟ್ಟರೆ ಇದರಿಂದ ಮೆದುಳು ದೇಹಕ್ಕೆ "ಎಲ್ಲವೂ ಸರಿಯಾಗಿದೆ" ಎಂಬ ಸಂಜ್ಞೆ ಕಳಿಸುವ ಮೂಲಕ ದೇಹದ ರಕ್ತದೊತ್ತಡವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

ಮಾಡಬೇಕಿಲ್ಲದ ವಿಷಯಗಳನ್ನೂ ಬರೆದಿಡಿ

ಮಾಡಬೇಕಿಲ್ಲದ ವಿಷಯಗಳನ್ನೂ ಬರೆದಿಡಿ

ಹೆಚ್ಚಿನವರು ಮುಂದಿನ ದಿನ ಅಥವಾ ಮುಂದಿನ ಜೀವನದಲ್ಲಿ ಮಾಡಬೇಕಾಗಿರುವ ವಿಷಯಗಳನ್ನು ಬರೆದಿಟ್ಟು ಆ ಪ್ರಕಾರ ನಡೆಯುತ್ತಾರೆ. ಇದು ಗುರಿಯತ್ತ ಸಾಗಲು ಮತ್ತು ಜೀವನದಲ್ಲಿ ಏನಾದರೊಂದನ್ನು ಸಾಧಿಸಲು ನೆರವಾಗುತ್ತದೆ. ಒಂದು ಸಂಶೋಧನೆಯ ಪ್ರಕಾರ ಏನು ಮಾಡಬಾರದು ಎಂಬ ವಿಷಯಗಳ ಪಟ್ಟಿಯನ್ನು ಮಾಡಿದರೂ ಹೆಚ್ಚು ಕಡಿಮೆ ಇದೇ ಪರಿ ಕಂಡುಬರುತ್ತದೆ. ಇದು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅಚ್ಚರಿಯ ವಿಷಯವೆಂದರೆ ಈ ಪಟ್ಟಿ ಮಾಡಬೇಕಾಗಿರುವ ಪಟ್ಟಿಗಿಂತ ಹೆಚ್ಚು ಪ್ರಬಲವಾಗಿದೆ.

ಏಕಕಾಲದಲ್ಲಿ ಬಹುಕಾರ್ಯಗಳನ್ನು ಮಾಡಬೇಡಿ

ಏಕಕಾಲದಲ್ಲಿ ಬಹುಕಾರ್ಯಗಳನ್ನು ಮಾಡಬೇಡಿ

ಸಾಮಾನ್ಯವಾಗಿ ನಾವೆಲ್ಲರೂ ಬಹುಕಾರ್ಯ ನಿಪುಣರು. ಉದಾಹರಣೆಗೆ ಡ್ರೈವ್ ಮಾಡುತ್ತಿರುವಾಗ ವಾಟ್ಸಾಪ್ ಓದುವುದು ಮೊದಲಾದವು. ಆದರೆ ತಜ್ಞರ ಪ್ರಕಾರ ಈ ವಿಧಾನ ಮೆದುಳಿಗೆ ಅಪಾಯಕಾರಿಯಾಗಿದೆ. ಇದು ವ್ಯತಿರಿಕ್ತವಾಗಿ ಮೆದುಳಿನ ಕ್ಷಮತೆಯನ್ನು ಕ್ಷೀಣಿಸುತ್ತದೆ. ಏಕೆಂದರೆ ನಮ್ಮ ಮೆದುಳು ಏಕಕಾಲದಲ್ಲಿ ವಿವಿಧ ಕಾರ್ಯಗಳಿಗೆ ಬಳಸಲು ನಿರ್ಮಿಸಲಾಗಿಲ್ಲ. ಅಲ್ಲದೇ ಏಕಕಾಲದಲ್ಲಿ ಬಹುಕಾರ್ಯಗಳನ್ನು ನಿರ್ವಹಿಸುವ ಮೂಲಕ ಯಾವುದೇ ಕೆಲಸವೂ ಸರಿಯಾಗಿ ಆಗುವುದಿಲ್ಲ. ಯಾವುದೇ ಒಂದು ಕೆಲಸವೂ ಸರಿಯಾಗಿ ಆಗದೇ ಇರುವ ಸಾಧ್ಯತೆ ಹೆಚ್ಚು. ಬದಲಿಗೆ ಒಂದು ಸಮಯದಲ್ಲಿ ಒಂದೇ ಕಾರ್ಯವನ್ನು ನಿರ್ವಹಿಸುವುದೇ ಸರಿಯಾದ ಪರಿ ಎಂದು ತಜ್ಞರು ತಿಳಿಸುತ್ತಾರೆ.

English summary

Amazing Brain Tricks That Will Make Your Life Simple And Smart

Brain hacking means to trick the brain to do the things that it is not trained to do so. These hacks will improve the normal functioning of our brain. Let's have a look at these kind of brain tricks that will simplify our life.
X
Desktop Bottom Promotion