For Quick Alerts
ALLOW NOTIFICATIONS  
For Daily Alerts

ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?

By Arshad
|

ದೇವರ ಬಗ್ಗೆ ನಂಬಿಕೆ ಇರುವಂತೆಯೇ ಜಗತ್ತಿನ ಎಲ್ಲಾ ದೇಶಗಳಲ್ಲಿ ಭೂತಪ್ರೇತಗಳ ಬಗ್ಗೆಯೂ ನಂಬಿಕೆಗಳಿವೆ. ಮ್ಯಾಕ್ಬೆತ್ ನಂತಹ ಸಾಮಾಜಿಕ ಗ್ರಂಥದಿಂದ ಹಿಡಿದು ಬೈಬಲ್ ನಂತಹ ಧರ್ಮಗ್ರಂಥಗಳವರೆಗೆ ಈ ಭೂತಗಳ ಬಗ್ಗೆ ವರ್ಣನೆ ಕಂಡುಬರುತ್ತದೆ. ಒಳ್ಳೆಯದು ದೇವರು ಎಂದೂ ಕೆಟ್ಟದ್ದು ಭೂತ ಎಂದೂ ನಾವೆಲ್ಲಾ ಒಪ್ಪಿಕೊಂಡುಬಿಟ್ಟಿದ್ದೇವೆ. ಇದಕ್ಕೆ ಅಪವಾದವೆಂಬಂತೆ ಕೆಲವು ಭೂತಗಳು ಒಳ್ಳೆಯವೂ ಆಗಿರುತ್ತವೆ ಎಂದು ಹಲವರು ನಂಬುತ್ತಾರೆ. ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ದೆವ್ವದ ಕಾಟವಿದೆಯಂತೆ!

ಕ್ಯಾಸ್ಪರ್ ಎಂಬ ಪುಟ್ಟ ಭೂತ ಇಂತಹದ್ದೇ ಒಂದು ಒಳ್ಳೆಯ ಭೂತವಾಗಿದ್ದು ಹಲವು ದಂತಕಥೆಗಳ ಮೂಲಕ ಮಕ್ಕಳನ್ನು ರಂಜಿಸುತ್ತಿದೆ. ಆದರೆ ವಿಶ್ವದ ಹೆಚ್ಚಿನ ಜನತೆ ದೇವರನ್ನು ನಂಬುವಷ್ಟು ಭೂತವನ್ನು ನಂಬುವುದಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಶೇಖಡಾ ನಲವತ್ತೈದರಷ್ಟು ಜನರು ಮಾತ್ರ ಭೂತಗಳ ಇರುವಿಕೆಯನ್ನು ನಂಬುತ್ತಾರೆ.

ಆದರೆ ಸುಮಾರು ಶೇಖಡಾ ಹತ್ತರಷ್ಟು ಜನರಿಗೆ ಮಾತ್ರ ಭೂತಗಳ ಇರುವಿಕೆಯ ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷ ಅನುಭವಗಳಾಗಿವೆ. ವಾಸ್ತವವನ್ನು ಕೆದಕಿದರೆ ನಿಸರ್ಗದ ಯಾವುದೋ ಚಿಕ್ಕಪುಟ್ಟ ವಿದ್ಯಮಾನವೇ ಸನ್ನಿವೇಶ ಮತ್ತು ಈ ಬಗ್ಗೆ ಹಿಂದೆಂದೋ ಕೇಳಲ್ಪಟ್ಟಿದ್ದ ವಿಷಯಕ್ಕೆ ಸಂಬಂಧಿಸಿ ಭಯಭೀತರಾಗಿ ಭೂತದ ಕಲ್ಪನೆಯನ್ನು ಸೃಷ್ಟಿಸಿದ್ದೇ ಹೆಚ್ಚು...

ಭೂತಗಳು ರಾತ್ರಿಯಲ್ಲಿಯೇ ಚಟುವಟಿಕೆಯಿಂದಿರುತ್ತವೆ

ಭೂತಗಳು ರಾತ್ರಿಯಲ್ಲಿಯೇ ಚಟುವಟಿಕೆಯಿಂದಿರುತ್ತವೆ

ಯಾವುದೇ ಭೂತವಿರುವ ಸ್ಥಳದಲ್ಲಿ ಭೂತ ಯಾವಾಗ ಕಂಡುಬರುತ್ತದೆ ಎಂಬ ಪ್ರಶ್ನೆಗೆ ರಾತ್ರಿಯಲ್ಲಿ ಎಂಬ ಸಮಾನ ಉತ್ತರ ದೊರಕುತ್ತದೆ.ವಾಸ್ತವವಾಗಿ ದಿನದಲ್ಲಿ ವಿವಿಧ ಚಟುವಟಿಕೆಗಳ ಕಾರಣ ಆಗುತ್ತಿರುವ ಸದ್ದು, ದಿನದಲ್ಲಿ ಪ್ರಖರವಾಗಿದ್ದ ಸೂರ್ಯನ ಬೆಳಕು ರಾತ್ರಿ ಇಲ್ಲವಾಗಿದ್ದು ಚಂದ್ರನ ಅಥವಾ ಇತರ ಬೆಳಕು ಮಂದವಾಗಿದ್ದು ಮೂಡುವ ನೆರಳು ಮತ್ತು ನಿಃಶಬ್ದ ಆ ಸ್ಥಳವನ್ನು ಕೊಂಚ ಭಯಭೀತವಾಗಿಸುತ್ತವೆ. ಕೆಲವು ಹುಳಹುಪ್ಪಟೆ ಕಪ್ಪೆಗಳು ಸಹಾ ರಾತ್ರಿಯಲ್ಲಿಯೇ ಕೂಗುತ್ತಿರುತ್ತವೆ. ಈ ಸನ್ನಿವೇಶಗಳೇ ಭೂತವನ್ನು ಕಲ್ಪಿಸಿಕೊಳ್ಳಲು ಕಾರಣವಾಗುತ್ತವೆ.

ಭೂತ ಒಂದು ಆಕಾರದಲ್ಲಿರದೇ ಬೇರೆ ಬೇರೆ ರೂಪದಲ್ಲಿಯೂ ಪ್ರಕಟಗೊಳ್ಳಬಹುದು

ಭೂತ ಒಂದು ಆಕಾರದಲ್ಲಿರದೇ ಬೇರೆ ಬೇರೆ ರೂಪದಲ್ಲಿಯೂ ಪ್ರಕಟಗೊಳ್ಳಬಹುದು

ಭೂತದ ಆಕಾರ ಹೀಗೇ ಇರುತ್ತದೆ ಎಂದು ಖಚಿತವಾಗಿ ಯಾರೂ ಹೇಳಲಾರರು. ಏಕೆಂದರೆ ಸ್ಪಷ್ಟ ಆಕೃತಿಯನ್ನು ಕಂಡವರು ಒಬ್ಬರೂ ಇಲ್ಲ. ಭೂತವನ್ನು ನೋಡಿದ್ದೇವೆ ಎಂದು ಖಡಾಖಂಡಿತವಾಗಿ ಹೇಳುವವರು ಸಹಾ ಅಸ್ಪಷ್ಟ ಮನ್ಯುಷ್ಯಾಕೃತಿಯನ್ನೇ ನೋಡಿರುತ್ತಾರೆ. ಇನ್ನುಳಿದಂತೆ ಥಟ್ಟನೇ ಎರಗುವ ಬೆಳಕು, ದಟ್ಟವಾದ ನೆರಳು, ಇಬ್ಬನಿಯಂತಿರುವ ಮನುಷ್ಯಾಕೃತಿ, ಮಸುಕು ಮಸುಕಾದ ಆಕೃತಿಗಳೇ ಭೂತದ ಕಲ್ಪನೆಗೆ ರೆಕ್ಕೆ ಮೂಡಿಸುತ್ತವೆ.

ಮಕ್ಕಳೇ ಹೆಚ್ಚಾಗಿ ಭೂತವನ್ನು ನೋಡುತ್ತಾರೆ

ಮಕ್ಕಳೇ ಹೆಚ್ಚಾಗಿ ಭೂತವನ್ನು ನೋಡುತ್ತಾರೆ

ಮಕ್ಕಳಲ್ಲಿ ಕಲ್ಪನೆ ಮಾಡಿಕೊಳ್ಳುವ ಶಕ್ತಿ ಅತಿ ಹೆಚ್ಚಾಗಿರುತ್ತವೆ. ಈ ಶಕ್ತಿಯನ್ನೇ ಮಕ್ಕಳ ಶಿಕ್ಷಣಕ್ಕೂ ಉಪಯೋಗಿಸುತ್ತಾರೆ. ಮಕ್ಕಳ ಪಠ್ಯ ಪುಸ್ತಕದಲ್ಲಿ ಧಾರಾಳವಾಗಿ ಪ್ರಾಣಿಗಳ ಚಿತ್ರಗಳನ್ನು ಮೂಡಿಸಿ ಕಥೆ ಹೇಳುವ ಮೂಲಕ ಆ ಪ್ರಾಣಿ ಕಾಡಿನಲ್ಲಿದ್ದು ಕಥೆಯಲ್ಲಿ ಬರುವ ಪಾತ್ರವನ್ನು ಕಲ್ಪಿಸುವಂತೆ ಮಾಡಲಾಗುತ್ತದೆ.

ಮಕ್ಕಳೇ ಹೆಚ್ಚಾಗಿ ಭೂತವನ್ನು ನೋಡುತ್ತಾರೆ

ಮಕ್ಕಳೇ ಹೆಚ್ಚಾಗಿ ಭೂತವನ್ನು ನೋಡುತ್ತಾರೆ

ಮಕ್ಕಳು ಕಥೆಯ ಮೂಲಕ ಹಲವು ವಿಷಯಗಳನ್ನು ಕಲಿಯುತ್ತಾರೆ. ಉದಾಹರಣೆಗೆ ನರಿ ಮತ್ತು ದ್ರಾಕ್ಷಿ ಕಥೆಯ ಮೂಲಕ ದ್ರಾಕ್ಷಿಯ ಹಸಿರು ಬಣ್ಣ, ನರಿಯ ನೆಗೆತ ಮೊದಲಾದವುಗಳು ಮಗುವಿನ ಕಲ್ಪನೆಗೆ ಎಟುಕುತ್ತವೆ.

ಮೇಣದ ಬತ್ತಿಯ ಜ್ವಾಲೆ ಜೋರಾಗಿ ಉರಿದರೆ

ಮೇಣದ ಬತ್ತಿಯ ಜ್ವಾಲೆ ಜೋರಾಗಿ ಉರಿದರೆ

ಹೆಚ್ಚಿನ ಪಾಶ್ಚಾತ್ಯ ದೇಶಗಳಲ್ಲಿ ಇಂದಿಗೂ ಮೇಣದ ಬತ್ತಿಯ ಜ್ವಾಲೆ ಇದ್ದಕ್ಕಿದ್ದಂತೆ ಉರಿದರೆ ಅಥವಾ ಉರಿಯುತ್ತಿದ್ದುದು ಥಟ್ಟನೇ ನಂದಿದರೆ ಅಲ್ಲಿ ಭೂತದ ಆಗಮನವಾಗಿದೆ ಎಂಬ ಸಂಕೇತ ಎಂದು ಜನರು ನಂಬುತ್ತಾರೆ.

ಕೆಲವು ಭೂತಗಳು ಕುಟುಂಬವನ್ನು ರಕ್ಷಿಸುವ ಹೊಣೆಯನ್ನೂ ಹೊತ್ತಿರುತ್ತವೆ!

ಕೆಲವು ಭೂತಗಳು ಕುಟುಂಬವನ್ನು ರಕ್ಷಿಸುವ ಹೊಣೆಯನ್ನೂ ಹೊತ್ತಿರುತ್ತವೆ!

ಎಷ್ಟೋ ಕಡೆ ಕೆಲವು ಮನೆಗಳಲ್ಲಿ ಭೂತದ ರಕ್ಷಣೆ ಇರುವ ಬಗ್ಗೆ ಮಾಹಿತಿ ಸಿಗುತ್ತದೆ. ಕೊಂಚ ವಿಷಯ ಕೆದಕಿದರೆ ಆ ಮನೆಯಿಂದ ಉಪಕಾರ ಪಡೆದುಕೊಂಡಿದ್ದವರು ಗತಿಸಿದ ಬಳಿಕ ಭೂತವಾಗಿ ಆ ಮನೆಯಲ್ಲಿಯೇ ವಾಸವಾಗಿದ್ದು ಮನೆಯವರಿಗೆ ಏನೂ ತೊಂದರೆ ಕೊಡದೇ, ಬದಲಿಗೆ ಸಾಧ್ಯವಾದ ಉಪಕಾರವನ್ನೇ ಮಾಡುತ್ತಾ ಕಾಲ ಕಳೆಯುತ್ತಿರುತ್ತವೆ.

ಐನ್ ಸ್ಟೀನ್ ಕೂಡ ಭೂತವನ್ನು ಒಂದು ಶಕ್ತಿ ಎಂದೇ ಪ್ರತಿಪಾದಿಸಿದ್ದ

ಐನ್ ಸ್ಟೀನ್ ಕೂಡ ಭೂತವನ್ನು ಒಂದು ಶಕ್ತಿ ಎಂದೇ ಪ್ರತಿಪಾದಿಸಿದ್ದ

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ಆಲ್ಬರ್ಟ್ ಐನ್ ಸ್ಟೀನ್ ಸಹಾ ಭೂತದ ಬಗ್ಗೆ ಕುತೂಹಲ ಹೊಂದಿದ್ದರು. ಅವರ ವಾದದ ಪ್ರಕಾರ ಶಕ್ತಿಯನ್ನು ನಿರ್ಮಿಸಲು ಸಾಧ್ಯವಿಲ್ಲ. ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಬಹುದು ಅಷ್ಟೇ (ಉದಾಹರಣೆಗೆ ವಿದ್ಯುತ್ ಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸುವುದು). ಅಂತೆಯೇ ಮನುಷ್ಯನ ದೇಹದಲ್ಲಿರುವ ಶಕ್ತಿ ಮರಣಾ ನಂತರ ಎಲ್ಲಿ ಹೋಗುತ್ತದೆ? ಇದು ಭೂತವಾಗಿರಬಹುದಲ್ಲ? ಇದೇ ಐನ್ ಸ್ಟೈನ್‌ರ ವಾದ.

ಪುರಾತನ ಈಜಿಪ್ಟ್ ನಲ್ಲಿಯೂ ಭೂತದ ನಂಬಿಕೆಯಿತ್ತು

ಪುರಾತನ ಈಜಿಪ್ಟ್ ನಲ್ಲಿಯೂ ಭೂತದ ನಂಬಿಕೆಯಿತ್ತು

ಆಲ್ಬರ್ಟ್ ಐನ್ ಸ್ಟೈನ್ ಬಿಡಿ, ಪುರಾತನ ಈಜಿಪ್ಟಿನ ನಾಗರೀಕತೆಯನ್ನು ಪರಿಶೀಲಿಸಿದರೂ ಭೂತಗಳ ಬಗ್ಗೆ ವರ್ಣನೆ ಮತ್ತು ಮರಣಾನಂತರದ ಜೀವನದ ಬಗ್ಗೆ ಹಲವು ವಿವರಗಳನ್ನು ಪಡೆಯಬಹುದು. ಅವರ ನಂಬಿಕೆಯ ಪ್ರಕಾರ ಮನುಷ್ಯರು ಸಾಯುವುದಿಲ್ಲ, ಸಾವು ಎಂದರೆ ಒಂದು ರೂಪದಿಂದ ಇನ್ನೊಂದು ರೂಪವನ್ನು ಪಡೆಯುವುದು ಮಾತ್ರ. ಈ ಹೊಸ ರೂಪ ಭೂತವೂ ಆಗಿರಬಹುದು.

ಅಮೇರಿಕಾದ ಶ್ವೇತಭವನವನ್ನೂ ಬಿಡದ ಭೂತ

ಅಮೇರಿಕಾದ ಶ್ವೇತಭವನವನ್ನೂ ಬಿಡದ ಭೂತ

ಜನಸಾಮಾನ್ಯರ ಮನೆ ಬಿಡಿ, ಅಮೇರಿಕಾದ ಅಧ್ಯಕ್ಷರ ನಿವಾಸಸ್ಥಾನವಾದ ವೈಟ್ ಹೌಸ್ ಅಥವಾ ಶ್ವೇತಭವನದಲ್ಲಿಯೂ ಭೂತದ ಕಾಟವನ್ನು ಗಮನಿಸಲಾಗಿದೆ. ಇದುವರೆಗೆ ಹಲವು ಚಿಕ್ಕಪುಟ್ಟ ಪ್ರಕರಣಗಳು ದಾಖಲಾಗಿವೆ. ಆದರೆ ಅಬಿಗೇಲ್ ಆಡಮ್ಸ್ ಎಂಬ ಪರಿಚಾರಿಕೆ ಬಟ್ಟೆ ಒಣಗಿಸಲೆಂದು ಪೂರ್ವ ಭಾಗದ ಕೋಣೆಯತ್ತ ತೆರಳಿದಾಗ ಹಲವು ಬಾರಿ ಭೂತದ ಇರುವಿಕೆಯನ್ನು ಕಂಡು ವರದಿ ಮಾಡಿದ್ದಳು.

ಭೂತಕ್ಕೆ ಹೆದರಿ ಅಧ್ಯಕ್ಷರ ಮಾತನ್ನೇ ತಿರಸ್ಕರಿಸಿದ ಕಾರ್ಮಿಕರು

ಭೂತಕ್ಕೆ ಹೆದರಿ ಅಧ್ಯಕ್ಷರ ಮಾತನ್ನೇ ತಿರಸ್ಕರಿಸಿದ ಕಾರ್ಮಿಕರು

1913 ರಿಂದ 1921ರವರೆಗೆ ಅಮೇರಿಕಾದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ರವರ ಕಾಲಾವಧಿಯಲ್ಲಿ ಅವರ ಪತ್ನಿ ಶ್ವೇತಭವನದ ಹೊರಗಿದ್ದ ಗುಲಾಬಿ ತೋಟವೊಂದನ್ನು ಕೆದಕಿ 1849ರಲ್ಲಿ ಕಾಲವಾಗಿದ್ದ ಅಂದಿನ ಅಧ್ಯಕ್ಷರ ಪತ್ನಿ ಡಾಲಿ ಮ್ಯಾಡಿಸನ್ ರವರ ಸಮಾಧಿಯನ್ನು ನಿವಾರಿಸಲು ಕೆಲವು ಕಾರ್ಮಿಕರನ್ನು ಕಳಿಸಿದರು. ಆ ಸಮಾಧಿಯನ್ನು ಅಗೆದದ್ದೇ ತಡ, ಹಲವು ಭೂತಚೇಷ್ಟೆಗಳು ಪ್ರಾರಂಭವಾದವು. ಸಮಾಧಿಯಿಂದ ಡಾಲಿಯವರ ಭೂತ ಹೊರಬಂದಿದೆ ಎಂದು ನಂಬಿದ ಕಾರ್ಮಿಕರು ಹಾರೆ ಗುದ್ದಲಿಗಳನ್ನು ಎಸೆದು ಪರಾರಿಯಾದರು. ಸ್ವತಃ ಅಧ್ಯಕ್ಷರ ಮನವಿಗೂ ಯಾರೂ ಕಿವಿಗೊಡಲಿಲ್ಲ. ಮುಂದಿನ ಇನ್ನೂರು ವರ್ಷಗಳವರೆಗೆ ಆ ತೋಟದಲ್ಲಿ ನಿರಂತರವಾಗಿ ಹೂವು ಬಿಡುತ್ತಿತ್ತು.

ಸಾವಿನ ಬಳಿಕವೂ ಶ್ವೇತಭವನದಲ್ಲಿಯೇ ಉಳಿದುಕೊಂಡ ಅಧ್ಯಕ್ಷ ಅಬ್ರಹಾಂ ಲಿಂಕನ್

ಸಾವಿನ ಬಳಿಕವೂ ಶ್ವೇತಭವನದಲ್ಲಿಯೇ ಉಳಿದುಕೊಂಡ ಅಧ್ಯಕ್ಷ ಅಬ್ರಹಾಂ ಲಿಂಕನ್

1815ರಲ್ಲಿ ಕೊಲೆಯಾದ ಅಧ್ಯಕ್ಷ ಅಬ್ರಹಾಂ ಲಿಂಕನ್ ರವರ ಭೂತವನ್ನು ಶ್ವೇತಭವನದಲ್ಲಿ ನಂತರದ ಸುಮಾರು ಎಪ್ಪತ್ತು ವರ್ಷಗಳವರೆಗೆ ವಿವಿಧ ಜನರು ಅಸ್ಪಷ್ಟವಾಗಿ ಗಮನಿಸಿದ್ದಾರೆ. ನಂತರದ ಅಧ್ಯಕ್ಷರು ಮತ್ತು ಅವರ ಪತ್ನಿಯರು, ವಿವಿಧ ಪರಿಚಾರಿಕೆಯರು ಲಿಂಕನ್ ರ ಭೂತದ ಇರುವಿಕೆಯನ್ನು ಗ್ರಹಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಪ್ರಥಮ ಮಹಾಯುದ್ದದ ಬಳಿಕ ಅತಂತ್ರ ಸ್ಥಿತಿಯಲ್ಲಿದ್ದ ಅಮೇರಿಕಾವನ್ನು ಮತ್ತೆ ಸರಿಪಡಿಸಲು ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಹೆಣಗಾಡುತ್ತಿದ್ದರು. ಈ ಸಮಯದಲ್ಲಿ ಆಗಮಿಸಿದ ನೆದರ್ಲ್ಯಾಂಡಿನ ರಾಣಿ ವಿಲ್ಹೆಲ್ಮಿನಾರವರು ಲಿಂಕನ್‌ರ ಭೂತವನ್ನು ಸ್ಪಷ್ಟವಾಗಿ ನೋಡಿದ್ದಾಗಿ ಹೇಳಿಕೊಂಡಿದ್ದಾರೆ.

ಮಾಯವಾದ ಭೂತ

ಮಾಯವಾದ ಭೂತ

ಒಂದು ದಿನ ಅವರ ಮಲಗುವ ಕೋಣೆಯ ಬಾಗಿಲನ್ನು ಯಾರೋ ಬಡಿದಂತಾಗಿ ಬಾಗಿಲು ತೆರೆದು ನೋಡಿದಾಗ ಜಗಲಿಯಲ್ಲಿ ಲಿಂಕನ್ನರು ತಮ್ಮ ಎಂದಿನ ವೇಷಭೂಷಣದಲ್ಲಿ ನಿಂತಿದ್ದುದು ಕಂಡುಬಂದಿತ್ತು. ಆಗ ತಲೆಸುತ್ತು ಬಂದು ನೆಲಕ್ಕೆ ಬಿದ್ದ ರಾಣಿಗೆ ಶೈತ್ಯೋಪಚಾರ ಮಾಡಿದ ಬಳಿಕ ನೋಡಿದರೆ ಭೂತ ಮಾಯವಾಗಿತ್ತು.

Read more about: ನಗರ ಜೀವನ urban life
English summary

Fun Facts Around Ghosts And Sprits

From MacBeth to the Bible, ghosts have been popular subjects of storytellers since people first started telling stories. The idea that the departed remain with us, in spirit at least, comforts us somewhat, and provides a convenient explanation for many of life’s weirder occurrences.Here are some fun stories and beliefs around ghosts and spirits.
X
Desktop Bottom Promotion