For Quick Alerts
ALLOW NOTIFICATIONS  
For Daily Alerts

ಯಶಸ್ಸಿನ ಹಿಂದಿದೆ ಹಲವು ತೊಡಕುಗಳು

By Poornima heggade
|

ಒಬ್ಬ ಮಹಿಳೆಯ ಜನವೆಂದರೆ ಅದು ಶಕ್ತಿಯ ಜನನ ! ಮಹಿಳೆಯಲ್ಲಿನ ಸಾಮರ್ಥ್ಯ ಕೇವಲ ದೈಹಿಕ ಶಕ್ತಿಯಾಗಬೇಕೆಂದೆಲ್ಲ. ನಿಜವಾದ ಮಾನಸಿಕ ಶಕ್ತಿ ಹೊಂದಿರುವ ಆಕೆ ಶಕ್ತಿವಂತಳೆ. ಮಹಿಳೆಯ ನಿಜವಾದ ಶಕ್ತಿ ಆಕೆಯ ಆತ್ಮದಲ್ಲಿಯೇ ಆಳವಾಗಿ ನೆಲೆಸಿದೆ .

ಸುಮಾರು ಐದು ದಶಕಗಳ ನಂತರ ಮಹಿಳೆ ಪ್ರತಿ ಕ್ಷೇತ್ರದಲ್ಲಿಯೂ ಒಳಹೊಕ್ಕು ಹೂಂಕರಿಸಲು ಪ್ರಾರಂಭಿಸಿದ್ದಾರೆ. ಹಲವಾರು ಮಹಿಳೆಯರು ವ್ಯಾಪಾರ, ವಿಜ್ಞಾನ, ತಂತ್ರಜ್ಞಾನ, ಬೋಧನೆ, ಸಂಚರಣೆ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ ಮಹಿಳೆಯರ ಪ್ರಗತಿಯಯನ್ನು ಮೊದಲು ಎಲ್ಲರೂ ಒಪ್ಪುತ್ತಿರಲಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ದುಡಿಯುವ ಅವಳಿಗೆ ಈ ಸಾಮರ್ಥ್ಯ ಸಾಧ್ಯವಾಗಿದ್ದಾದರೂ ಹೇಗೆ? ಇದು ಚಕಿತಗೊಳ್ಳುವಂತಹ ವಿಷಯವೇ ಸರಿ. ಆದರೆ ಅವಳು ಇಷ್ಟು ದೊಡ್ಡ ಮಟ್ಟಕ್ಕೆ, ಎತ್ತರಕ್ಕೆ ಬೆಳೆಯುವ ಶಕ್ತಿಯನ್ನು ಹೊಂದಿರುವುದಂತೂ ನಿಜ.

ಯಶಸ್ಸು ಪ್ರತಿಯೊಬ್ಬರ ಅಪೇಕ್ಷೆ. ಈ ವಿಷಯದಲ್ಲಿ ಮಹಿಳೆಯೂ ಹೊರತಾಗಿಲ್ಲ. ಆದರೆ, ಯಶಸ್ಸು ಸುಲಭವಾಗಿ ಬರುವಂತದ್ದಲ್ಲ. ಇದಕ್ಕೆ ನಿರಂತರ ಪ್ರಯತ್ನ ಮತ್ತು ನಿರ್ಣಯದ ಅಗತ್ಯವಿದೆ. ಯಶಸ್ಸು ಹಲವು ಪ್ರಯೋಜನಗಳನ್ನು ಜೀವನದಲ್ಲಿ ಒದಗಿಸುತ್ತದೆ. ಯಶಸ್ಸನ್ನು ಹೊಂದಲು ಮಹಿಳೆ ಪಡುವ ಕಷ್ಟಗಳು, ಸಮಸ್ಯೆಗಳೂ ಬಹಳ. ನಿಜವಾಗಿಯೂ ಯಶಸ್ವಿ ಮಹಿಳೆಯರು ಎದುರಿಸುವ ಕೆಲವು ಕಷ್ಟಗಳನ್ನು ನೀವು ತಿಳಿದುಕೊಳ್ಳಲೇಬೇಕು!

Hardships of being a successful woman

ಯಶಸ್ಸು ಗುಲಾಬಿದಳಗಳ ಹಾಸಿಗೆಯಲ್ಲ

ಮಹಿಳೆಯರು ಸಾಮಾನ್ಯವಾಗಿ, ಯಾವುದೇ ಸಂದರ್ಭದಲ್ಲಿಯೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಇದರಿಂದಾಗಿ ಅವರು ಸಹಜವಾಗಿ ತೊಂದರೆಗೆ ಒಳಗಾಗಬಹುದು. ಆದರೆ ಆಕೆ ಯಶಸ್ಸಿನ ಹಾದಿಯಲ್ಲಿ ಸಾಗಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾಳೆ. ಯಶಸ್ವಿ ಮಹಿಳೆಯರು ತನ್ನ ಯಶಸ್ಸುನ್ನು ಸಾಧಿಸಲು ಕಷ್ಟಗಳನ್ನು ಎದುರಿಸಿ ಯೋಗ್ಯವಾದ ಕಾರ್ಯವನ್ನು ಮಾಡುತ್ತಾರೆ. ಈ ಸಮಯದಲ್ಲಿ ತನಗಾದ ತೊಂದರೆಗಳನ್ನೇಲ್ಲಾ ಕ್ಷಮಿಸುತ್ತಾಳೆ .

ಬಹುಕಾರ್ಯಕ

ಮಹಿಳೆಯರು ಪ್ರಾಕೃತಿಕವಾಗಿಯೇ ಬಹು ಕಾರ್ಯವನ್ನು ಮಾಡುವ ಗುಣ ಹೊಂದಿರುವವರು! ಯಶಸ್ವಿ ಮಹಿಳೆಯರು ಎದುರಿಸುವ ಕಷ್ಟಗಳು ಬಹುಕಾರ್ಯಗಳು ಸುಲಭವೇನೂ ಅಲ್ಲ. ಇದಕ್ಕೆ ಬಹಳಷ್ಟು ಪ್ರಯತ್ನ ಮತ್ತು ಏಕಾಗ್ರತೆಯ ಅಗತ್ಯವಿದೆ. ಯಶಸ್ವಿಯಾಗುವುದು ಮಾತ್ರವಲ್ಲ ಆದರೆ ಯಶಸ್ಸನ್ನು ಸುಸ್ಥಿರವಾಗಿಟ್ಟುಕೊಳ್ಳಲು ಪಡುವ ಕಷ್ಟಗಳು ಅನಾನುಕೂಲಗಳನ್ನುಂಟುಮಾಡುಬಹುದು.

ತ್ಯಾಗ

ಯಶಸ್ವಿ ಮಹಿಳೆಯರ ಕಷ್ಟಗಳನ್ನು ಮಾಪನ ಮಾಡಲು ಸಾಧ್ಯವಿಲ್ಲ ಮತ್ತು ಅವರ ತ್ಯಾಗ ಕೂಡ ಅವರ ಯಶಸ್ಸಿಗೆ ಸದೃಶವಾಗಿದೆ. ಪ್ರತಿ ಮಹಿಳೆ ತನ್ನ ಕುಟುಂಬವನ್ನು ಪ್ರೀತಿಸುತ್ತಾಳೆ. ಕೆಲವೊಮ್ಮೆ ಆಕೆ ಯಶಸ್ಸನ್ನು ಗಳಿಸುವ ಪ್ರಯತ್ನವನ್ನು ತಮ್ಮ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾಳೆ! ಕೆಲವೊಮ್ಮೆ ತನ್ನ ಜೀವನದ ಕನಸುಗಳನ್ನೇ ಪ್ರೀತಿಯ ಕುಟುಂಬಕ್ಕಾಗಿ ಬಿಟ್ಟುಕೊಡುತ್ತಾಳೆ.

ನನಗೆ ದಣಿವಾಗಿದೆ

ಸುಸ್ತು ದೇಹ ಮತ್ತು ಮನಸ್ಸುಗಳಿಗೆ ಹೊಂದುಕೊಂಡಿದೆ. ಇದು ಪ್ರತಿ ಮನುಷ್ಯನಿಗೆ ಸಂಭವಿಸುತ್ತದೆ. ಆದರೆ, ಮಹಿಳೆ ಅದರಲ್ಲೂ ಯಶಸ್ಸನ್ನು ಸಾಧಿಸಲು ಹೊರಟ ಮಹಿಳೆ ತನ್ನ ಸುಸ್ತನ್ನು ಮರೆತು ಕೆಲಸಮಾಡಬೇಕಾದದ್ದು ಸಾಧನೆಗೆ ಮುಖ್ಯ ಅಡಿಪಾಯ! ಅವರ ಒತ್ತಡ, ಕೆಲಸದ ಒತ್ತಡ ಮತ್ತು ಕೆಲಸ ಸಂಬಂಧಿಸಿದ ಇತರ ಸಂಗತಿಗಳಲ್ಲಿ ಆಗುವ ದಣಿವಿನಿಂದ ಆಕೆ ವಿರಾಮವನ್ನು ತೆಗೆದುಕೊಳ್ಳಬೇಕೆಂದು ಅರ್ಥವಲ್ಲ. ತನ್ನ ಕೆಲಸ ಅಥವಾ ತನ್ನ ಮನೆಗೆಲಸದ ವಿಷಯದಲ್ಲಿ ವಿಶ್ರಾಂತಿಯನ್ನು ಪಡೆದರೆ ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗಬಹುದು. ಯಶಸ್ವಿ ಮಹಿಳೆಯರು ಪಡುವ ಕಷ್ಟಗಳನ್ನು ಅಳೆಯುವ ಒಂದು ಸಾಧನ ಇದ್ದರೆ, ಅದು ಬೆರಗುಗೊಳಿಸುವಂತಹ ಅಂಕಿ ಅಂಸಗಳನ್ನು ತೋರಿಸಬಹುದೇನೋ!

ಯಶಸ್ವಿನ ಹಾದಿಯಲ್ಲಿ ಸಾಧನೆ ಮಾಡಲು ಹೊರಟ ಮಹಿಳೆ ಹಲವು ಅಪಾಯಗಳನ್ನು ಎದುರಿಸಬೇಕಾದರೂ ಸಹ ತನ್ನ ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಘನತೆಯ ಉತ್ತುಂಗಕ್ಕೇರಲು ಆಸಕ್ತಿಯಿಂದ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ. ಪ್ರತಿ ಮಹಿಳೆ ವಿಶೇಷ ಮತ್ತು ಆಕರ್ಷಕ ರೀತಿಯಲ್ಲಿ ತಮ್ಮ ದಾರಿಯಲ್ಲಿ ಸಾಗುತ್ತಾರೆ ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಎರಡೂ ಪಾತ್ರಗಳನ್ನು ಅಚ್ಚುಕಟ್ಟಾಗಿ ವಹಿಸುತ್ತಾರೆ. ಮೆಚ್ಚುಗೆ ಗಳಿಸುವ ಮತ್ತು ಕಾಳಜಿವಹಿಸಬಲ್ಲ ಮಹಾನ್ ಶಕ್ತಿ. ನಿಮಗೆ ನೀವು ಮಹಿಳೆ ಎಂದು ಹೆಮ್ಮೆಯಿದೆಯೇ ?

English summary

Hardships of being a successful woman

A woman is born with strength!! Strength in a woman’s language is not necessarily the physical strength; it is in real the mental strength she carries. The real strength of a woman lies deep in her soul.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more