For Quick Alerts
ALLOW NOTIFICATIONS  
For Daily Alerts

ಈ ಸಮಾಜ ಪುರುಷನಿಗೆ ಹಾಕಿರುವ ಮಾನದಂಡಗಳೇನು ಗೊತ್ತಾ?

|

ಪುರುಷರು ಈ ಸಮಾಜದ ಅವಿಭಾಜ್ಯ ಅಂಗ. ಜಗತ್ತಿನಲ್ಲಿರುವ ಅಲ್ ಮೋಸ್ಟ್ ಎಲ್ಲ ಪುರುಷರು ಮನೆಯ ಜವಾಬ್ಧಾರಿ ತೆಗೆದುಕೊಂಡು ಮನೆಯನ್ನು ಮುನ್ನಡೆಸುವ ಕೆಲಸ ಮಾಡುತ್ತಾರೆ. ತಾಯಿ, ಪತ್ನಿ, ಮಕ್ಕಳ ಏಳಿಗೆಗಾಗಿ ಹಗಲಿರುಳು ದುಡಿಯುತ್ತಾರೆ. ಆದರೂ ಈ ಸಮಾಜ ಪುರುಷರು ಸಣ್ಣದಿರುವಾಗಿನಿಂದಲೇ ಹಲವಾರು ಮಾನದಂಡಗಳನ್ನು ವಿಧಿಸಿದೆ. ಇವು ನಿಜಕ್ಕೂ ಅಪಾಯಕಾರಿಯಾಗಿದೆ.

ಹೌದು, ಪುರುಷರು ಸಣ್ಣದಾಗಿನಿಂದ ಕೆಲವೊಂದು ನಿಬಂಧನೆಗಳನ್ನು ಅವರ ಮೇಲೆ ಹೇರಲಾಗಿದೆ. ಪುರುಷ ಎಂದರೆ ಹೀಗೇ ಇರಬೇಕು, ಹೀಗೆ ಮಾಡಬೇಕು ಎನ್ನುವುದನ್ನು ಹೇರಲಾಗಿದೆ. ಹೀಗಾಗಿ ಅವರು ದೊಡ್ಡವರಾದ ಮೇಲೂ ಇದು ಸತ್ಯ ಎನ್ನುವಂತೆ ಅವರು ಅದನ್ನು ಪಾಲಿಸುತ್ತಾರೆ. ಆದರೆ ಪ್ರಬುದ್ಧರಾದ ಮೇಲೆ ಎಲ್ಲೋ ಇದು ಸರಿ ಇಲ್ಲ ಎಂದು ಅನಿಸುವುದುಂಟು. ಹಾಗಾದರೆ ಯಾವುದು ಆ ನಾಲ್ಕು ಭಯಾನಕ ವಿಚಾರ ಪುರುಷರ ಮೇಲೆ ಸಮಾಜ ಹೇರಿದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಹಣ ಗಳಿಸು!

ಹಣ ಗಳಿಸು!

ಚಿಕ್ಕ ವಯಸ್ಸಿನಿಂದಲೂ, ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಪುರುಷರ ಮೇಲೆ ಹೇರಲಾಗುತ್ತದೆ. ಇದು ಸಮಾಜವೇ ಮಾಡಿದ ಮಾನದಂಡವಾಗಿದೆ. ಹೌದು, ಪುರುಷನೇ ಸಂಪೂರ್ಣ ಜವಾಬ್ಧಾರಿ, ಪುರುಷನಿಲ್ಲದೆ ಕುಟುಂಬ ನಡೆಯಲ್ಲ. ಪುರುಷ ಮನೆ ಹಾಗೂ ಕುಟುಂಬಕ್ಕಾಗಿ ಹಣ ಗಳಿಸಬೇಕು. ಹೀಗೆಲ್ಲ ವಿಚಾರಗಳು ಸಮಾಜ ಸೃಷ್ಟಿಸಿದೆ. ಇದರಿಂದಾಗಿ ಪುರುಷ ದೊಡ್ಡವನಾಗಿ ಬೆಳೆಯುತ್ತಿದ್ದಂತೆ. ಹಲವು ಯೋಚನೆಗಳು ಅವನ ತಲೆಯಲ್ಲಿ ಮೂಡಲು ಆರಂಭವಾಗುತ್ತದೆ. ಜವಾಬ್ಧಾರಿ ಹೆಚ್ಚುತ್ತದೆ ಇದರಿಂದ ಆತ ತನ್ನ ಸುತ್ತಲಿನ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಾನೆ. ಜಗತ್ತಿನ ಜೊತೆ ಬೆರೆಯುವ ಅಮೂಲ್ಯ ಸಮಯ ಮತ್ತು ಅವಕಾಶವನ್ನು ಆತ ಕಳೆದುಕೊಳ್ಳುತ್ತಾನೆ.

ಯಾವತ್ತೂ ಸೋಲಬೇಡ!

ಯಾವತ್ತೂ ಸೋಲಬೇಡ!

ಯಾವತ್ತೂ ಸೋಲಬೇಡ. ಇದು ಕೂಡ ಸಮಾಜ ಪುರುಷರಿಗೆ ಹೇಳುವ ದೊಡ್ಡ ಅಪಾಯಕಾರಿ ಮಾನದಂಡವಾಗಿದೆ. ಹೌದು, ಸೋಲೆ ಗೆಲುವಿನ ಸೋಪಾನ ಎಂಬಂತೆ ಇರಬೇಕು. ಅದರಲ್ಲೂ ಭಾರತದ ಪೋಷಕರು ಗಂಡು ಮಕ್ಕಳಿಗೆ ಯಾವತ್ತೂ ಸೋಲಬಾರದು ಎಂದು ಷರತ್ತು ವಿಧಿಸಿರುತ್ತಾರೆ. ಇದು ಪುರುಷರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಎಲ್ಲದರೂ ಸೋತರೆ ಅದು ಜೀವನವಿಡಿ ಕೊರಗುವಂತೆ ಮಾಡುತ್ತದೆ. ಕೆಲವೊಂದು ಬಾರಿ ನೀವು ಅತೃಪ್ತರಾಗಿ ಹೋಗುತ್ತೀರಿ. ನಿಮ್ಮ ಬಗ್ಗೆ ನಿಮಗೆ ಅಸಹ್ಯ ಮೂಡಬಹುದು. ನಿಮಗೆ ಸಂತೋಷ ಪಡಲು ಆಗುವುದಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಅಸಹಾಯಕತೆ ನಿನ್ನ ಗುಣವಲ್ಲ

ಅಸಹಾಯಕತೆ ನಿನ್ನ ಗುಣವಲ್ಲ

ನಮ್ಮ ಭವಿಷ್ಯವು ನಮ್ಮ ಬಾಲ್ಯದಿಂದ ರೂಪುಗೊಂಡಿರುತ್ತದೆ. ನಮ್ಮ ಭವಿಷ್ಯದ ಎಲ್ಲಾ ಚಟುವಟಿಕೆಗಳಿಗೆ ನಮ್ಮ ಬಾಲ್ಯವೇ ಕಾರಣವಾಗಿರುತ್ತದೆ. ಅದಕ್ಕೆ ಉದಾಹರಣೆಯೊಂದಿಗೆ ವಿವರಿಸುತ್ತೇನೆ ಬನ್ನಿ. ನೀವು ಯಾವತ್ತಾದರೂ ಅಸಹಾಯಕತೆಯನ್ನು ಅನುಭವಿಸಲು ಮತ್ತು ಸಹಾಯವನ್ನು ಕೇಳಲು ಮುಂದಾಗಿದ್ದೀರಾ..? ಇಲ್ಲ ಅನಿಸುತ್ತೆ. ಅದಕ್ಕೆ ಕಾರಣ ಸಮಾಜ. ಹೌದು, ಅಸಹಾಯಕತೆ ಅನುಭವಿಸುವ, ಸಹಾಯ ಕೇಳುವ ಪುರುಷರ ಬಗ್ಗೆ ಹಾಗೂ ಇಂತಹ ನಡವಳಿಕೆ ಬಗ್ಗೆ ಸಮಾಜವು ಅಪಹಾಸ್ಯ ಮಾಡುತ್ತದೆ. ಹೀಗಾಗಿ ಪುರುಷರು ಇಂತಹ ಕೆಲಸ ಮಾಡಲು ಹೋಗುವುದಿಲ್ಲ. ಇದು ಅವರ ಮನದಲ್ಲಿ ಗಾಢವಾಗಿ ಉಳಿಯುವುದರಿಂದ ಭವಿಷ್ಯದಲ್ಲಿ ಪುರುಷರು ಅಸಹಾಯಕಾರದರು ಅದನ್ನು ತೋರ್ಪಡಿಸುವುದಿಲ್ಲ. ಇದರಿಂದ ಮನದಲ್ಲೇ ಅವರು ಕುಗ್ಗಿ ಹೋಗುತ್ತಾರೆ. ಇನ್ನು ಸಹಾತ ಕೂಡ ಕೇಳಲು ಹೋಗುವುದಿಲ್ಲ. ಇದರಿಂದ ಸಮಸ್ಯೆಗೆ ಒಳಪಡುತ್ತಾರೆ.

ಭಯಕ್ಕಾಗಿ ಬಾಡಿಬಿಲ್ಡಿಂಗ್ ಮಾಡುತ್ತಾರೆ!

ಭಯಕ್ಕಾಗಿ ಬಾಡಿಬಿಲ್ಡಿಂಗ್ ಮಾಡುತ್ತಾರೆ!

ಸದ್ಯ ಸಮಾಜದಲ್ಲಿ ಒಂದು ಮಾತು ಇದೆ. ಪುರುಷರು ಭಯಕ್ಕಾಗಿ ಬಾಡಿ ಬಿಲ್ಡಿಂಗ್ ಮಾಡುತ್ತಾರೆ ಎನ್ನುವುದು. ಅದರೆ ಇದು ನಿಜಕ್ಕೂ ಸರಿಯಾದ ಮಾನದಂಡ ಅಲ್ಲ. ಯಾಕೆಂದರೆ ಪುರುಷರು ಜಿಮ್ ಗೆ ಹೋಗುವುದು ಅವರ ಆರೋಗ್ಯ, ಸೌಂದರ್ಯ ವೃದ್ದಿಗಾಗಿ. ಕೆಲವೊಂದು ಬಾರಿ ಏನಾಗುತ್ತದೆ ಅಂದರೆ ಈ ರೀತಿಯ ಸಮಾಜದ ವರ್ತನೆಯಿಂದ ಬಲಶಾಲಿಯಾಗಲು ಪುರುಷರು ಭಯಪಡುತ್ತಾರೆ. ಆಳವಾದ ಅಭದ್ರತೆ ಅವರಿಗೆ ಮೂಡುತ್ತದೆ. ಹೀಗಾಗಿ ಈ ರೀತಿಯ ನಾಲ್ಕು ವಿಚಾರಗಳನ್ನು ಸಮಾಜ ಪುರುಷರಿಂದ ದೂರ ಇಡಬೇಕು.

ಇದಲ್ಲದೇ ಪುರುಷರು ನಿತ್ಯವು ಕೆಲಸ ಮಾಡುತ್ತ ಯಾಂತ್ರಿಕರಾಗುತ್ತಿದ್ದಾರೆ. ಅದಕ್ಕೂ ಸಮಾಜವೇ ಕಾರಣ. ಸಣ್ಣ ವಯಸ್ಸಿನಲ್ಲಿ ಪುರುಷರಿಗೆ ಕೆಲಸದ ಬಗ್ಗೆ ತಲೆಗೆ ತುಂಬಿರಲಾಗುತ್ತೆ. ಇದು ಕೂಡ ಬೆಳೆಯುತ್ತ ಕೆಲಸವೇ ನಮ್ಮ ಮುಖ್ಯ ಕರ್ತವ್ಯ ಎಂದು ಅಂದುಕೊಂಡಿರುತ್ತಾರೆ. ಹೀಗೆ ಹಲವಾರು ವಿಚಾರಗಳು ಪುರುಷರನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.

English summary

Ways Society Created Dangerous Standards For Men in Kannada

Here we are discussing about Ways Society Created Dangerous Standards For Men in Kannada . Read more.
Story first published: Sunday, November 27, 2022, 18:00 [IST]
X
Desktop Bottom Promotion