Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಯಾವುದೇ ಕಾರಣಕ್ಕೂ ಈ 5 ಜನರನ್ನು ನಿದ್ದೆಯಿಂದ ಎದ್ದೇಳಿಸಲು ಹೋಗಬೇಡಿ ; ಚಾಣಕ್ಯ
ನಿದ್ದೆ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯ. ಆರೋಗ್ಯ ಚೆನ್ನಾಗಿರಲು ಕೂಡ ನಿದ್ದೆ ತುಂಬಾನೇ ಮುಖ್ಯವಾಗುತ್ತದೆ. ಗಾಢ ನಿದ್ರೆಯಲ್ಲಿರಬೇಕಾದರೆ ಯಾರಾದರೂ ತೊಂದರೆ ಮಾಡಿದರೆ ಕೆಟ್ಟ ಕೋಪ ಬರುತ್ತದೆ. ಅಷ್ಟೇ ಯಾಕೆ ಪುರಾಣಗಳಲ್ಲೂ ನಿದ್ದೆಯ ಬಗ್ಗೆ ಉಲ್ಲೇಖವಾಗಿದೆ.

ನೀವು ಯಾರನ್ನೂ ಬೇಕಾದರೂ ನಿದ್ದೆಯಿಂದ ಎಬ್ಬಿಸಿ ತೊಂದರೆ ಇಲ್ಲ ಆದ್ರೆ ಈ 5 ಜನರ ಸಹವಾಸಕ್ಕೆ ಹೋಗಲೇಬೇಡಿ ಎಂದು ಚಾಣಕ್ಯ ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯ ಹೇಳುತ್ತಿರುವ ಆ 5 ಜನ ಯಾರು? ಆ 5 ಜನರ ನಿದ್ದೆಗೆ ತೊಂದರೆ ಆದರೆ ಅಪಾಯ ಎದುರಾಗಲಿದ್ಯಾ? ಹೇಳ್ತೀವಿ.

1. ರಾಜ
ಚಾಣಕ್ಯನ ಪ್ರಕಾರ ರಾಜನನ್ನು ನಿದ್ದೆಯಿಂದ ಎಬ್ಬಿಸಲು ಹೋಗಬೇಡಿ ಯಾಕಂದ್ರೆ ಇದರಿಂದ ನೀವು ಆತನ ಕೋಪಕ್ಕೆ ಗುರಿಯಾಗಬಹುದು. ಈಗಿನ ಕಾಲದಲ್ಲಿ ರಾಜ ಇಲ್ಲದಿರೋದರಿಂದ ಮಂತ್ರಿ ಅಥವಾ ಅಧಿಕಾರಿಗಳನ್ನ ರಾಜನ ಸ್ಥಾನದಲ್ಲಿ ಪರಿಗಣಿಸಬಹುದು. ನಮಗಿಂತ ಉನ್ನತ ಸ್ಥಾನದಲ್ಲಿರುವವರನ್ನು ನಿದ್ದೆಯಿಂದ ಎಬ್ಬಿಸಿ ಅವರಿಗೆ ತೊಂದರೆ ಮಾಡೋದಕ್ಕೆ ಹೋಗಬೇಡಿ. ಇದರಿಂದ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

2. ಸಿಂಹ
ಸಿಂಹ ಕಾಡಿನ ರಾಜ ಹಾಗೂ ಇದೊಂದು ವ್ಯಾಘ್ರ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತು. ಚಾಣಕ್ಯನ ಪ್ರಕಾರ ಸಿಂಹವನ್ನು ನಿದ್ದೆಯಿಂದ ಎಬ್ಬಿಸುವುದು ಮಹಾ ಅಪಾಯ. ಇದು ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು. ಅಪ್ಪಿ ತಪ್ಪಿಯೂ ಸಿಂಹದ ತಂಟೆಗೆ ಹೋಗಲೇಬೇಡಿ. ಸಿಂಹದ ಹತ್ತಿರ ಹೋಗೋದಕ್ಕೂ ಭಯ ಪಡುತ್ತೇವೆ ಅಂತದ್ರಲ್ಲಿ ಅದನ್ನು ನಿದ್ದೆಯಿಂದ ಎಬ್ಬಿಸಲು ಹೋದರೆ ನಮ್ಮ ಕತೆ ಮುಗಿಯಿತು ಎಂದರ್ಥ.

3. ಮಾಂಸಹಾರಿ ಪ್ರಾಣಿಗಳು
ಮಾಂಸಹಾರಿ ಪ್ರಾಣಿಗಳ ತಂಟೆಗೆ ಹೋಗಬೇಡಿ ಅಂತಾರೆ ಚಾಣಕ್ಯ. ಹೊಟ್ಟೆತುಂಬಾ ತಿಂದು ಗಾಢ ನಿದ್ದೆಯಲ್ಲಿರುವ ಪ್ರಾಣಿಗಳನ್ನು ನಿದ್ದೆಯಿಂದ ಎಬ್ಬಿಸಲು ಹೋದರೆ ಸುಮ್ನೆ ಬಿಡ್ತಾವಾ? ಅಟ್ಟಾಡಿಸಿಕೊಂಡು ಬಂದು ನಮ್ಮ ಪ್ರಾಣಕ್ಕೆ ಆಪತ್ತು ತರಬಹುದು. ಅಷ್ಟೇ ಯಾಕೆ ನಾವು ನಮ್ಮ ಮನೆಯಲ್ಲೇ ಸಾಕಿದ ನಾಯಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ ಊಟ ಹಾಗೂ ನಿದ್ದೆಯ ಸಮಯದಲ್ಲಿ ಅದಕ್ಕೆ ತೊಂದರೆ ಮಾಡಿದ್ರೆ ಮಾಲೀಕ ಅನ್ನೋದನ್ನು ನೋಡದೇನೆ ಬೊಗಳೋದಕ್ಕೆ ಶುರು ಮಾಡುತ್ತದೆ.

4. ಮೂರ್ಖ
ಮೂರ್ಖನನ್ನು ನಿದ್ದೆಯಿಂದ ಎಬ್ಬಿಸಿಲು ಹೋದರೆ ತೊಂದರೆಯನ್ನು ನೀವೆ ನಿಮ್ಮ ಕೈಯಾರೆ ಆಹ್ವಾನಿಸಿದಂತೆ ಎಂದು ಚಾಣಕ್ಯ ಹೇಳಿದ್ದಾರೆ. ಮೂರ್ಖನಿಗೆ ನೀವು ಯಾವುದಾದರೂ ಒಂದು ವಿಷಯವನ್ನು ಮನ ಮುಟ್ಟುವಂತೆ ಹೇಳಿದರೆ ಅದು ವ್ಯರ್ಥವೇ ಸರಿ. ಯಾಕೆಂದರೆ ಆತ ಅರ್ಥ ಆದಂತೆ ನಟಿಸಬೇಕು ಅಷ್ಟೇ, ಅದನ್ನು ಬಿಟ್ಟು ಅವನ ತಲೆಗೆ ಏನು ಹೋಗೋದೇ ಇಲ್ಲ. ಅದೇನೋ ಗಾದೆಯಿದ್ಯಲ್ಲ ಕೋಣನ ಮುಂದೆ ಕಿನ್ನರಿ ಬಾರಿಸೋದು ಅಂತ ಹಾಗೆಯೇ ಆಗುತ್ತೆ.

5. ಮಗು
ಚಾಣಕ್ಯನ ಪ್ರಕಾರ ಮಗುವನ್ನು ನಿದ್ದೆಯಿಂದ ಎಬ್ಬಿಸುವುದು ಆಪತ್ತು. ನಿಮ್ಮ ಮನೆಯಲ್ಲಿ ಮಕ್ಕಳಿದ್ರೆ ನಿಮಗೆ ಚೆನ್ನಾಗಿ ಗೊತ್ತಿರುತ್ತೆ. ಮಕ್ಕಳು ಎಚ್ಚರವಿದ್ದಾಗ ನಮಗೆ ಯಾವ ರೀತಿ ತೊಂದರೆ ನೀಡ್ತಾರೆ ಅಂತ ಮಗು ಒಮ್ಮೆ ಮಲಗಿದ್ರೆ ಸಾಕು ಅಂತ ಎಲ್ಲರೂ ಕಾಯ್ತಿರ್ತಾರೆ. ಅಪ್ಪಿ ತಪ್ಪಿ ಏನಾದ್ರು ಮಲಗಿದ ಮಗುವನ್ನು ಎಬ್ಬಿಸಿದ್ರೆ ನಮ್ಮ ಕತೆ ಮುಗಿತು. ಸರಿಯಾಗಿ ನಿದ್ದೆ ಬಾರದೇ ಹೋದರೆ ಮಕ್ಕಳು ಸಿಕ್ಕಾಪಟ್ಟೆ ಆಳುತ್ತಾರೆ. ನಂತರ ಇಡೀ ದಿನ ಅವರನ್ನು ಸಮಾಧಾನ ಮಾಡೋದರಲ್ಲೇ ನಮ್ಮ ಸಮಯ ಕಳೆದು ಹೋಗುತ್ತದೆ.
ಜೀವನದಲ್ಲಿ ಪ್ರತಿಯೊಂದು ಹೆಜ್ಜೆ ಇಡಬೇಕಾದರೂ ಅಲ್ಲಿ ಮುಂದಾಲೋಚನೆ ಎನ್ನುವುದು ತುಂಬಾನೇ ಮುಖ್ಯವಾಗುತ್ತದೆ. ಏನೇ ಕೆಲಸ ಮಡಬೇಕಾದರೂ ಅಲ್ಲಿ ಮುಂದಾಲೋಚನೆ ಬಹಳ ಮುಖ್ಯ. ಇಲ್ಲವಾದರೆ ಆಪತ್ತು ಎದುರಾಗೋದು ಖಂಡಿತ.



Click it and Unblock the Notifications
