For Quick Alerts
ALLOW NOTIFICATIONS  
For Daily Alerts

ಮಕ್ಕಳ ದಿನಾಚರಣೆ ವಿಶೇಷ : ನೆಹರೂ ಬಗ್ಗೆ ಈವರೆಗೂ ನಿಮಗೆ ಗೊತ್ತಿಲ್ಲದ ವಿಷಯಗಳಿವು!

|

ಜವಹರಲಾಲ್ ನೆಹರೂ ಅವರು ಸ್ವತಂತ್ರ ಭಾರತದ ಮೊದಲನೆಯ ಪ್ರಧಾನಿಯಾಗಿದ್ದವರು ಎಂಬ ಸಂಗತಿಯು ಎಲ್ಲರಿಗೂ ಗೊತ್ತಿರುವಂತಹದ್ದೇ. ಪ್ರಧಾನಿಯಾಗಿ ತನ್ನ ಎಡೆಬಿಡದ ಕಾರ್ಯದೊತ್ತಡಗಳ ನಡುವೆಯೂ ಮಕ್ಕಳ ಕುರಿತಂತೆ ನೆಹರೂ ಅವರಿಗೆ ಮೊದಲಿನಿಂದಲೂ ವಿಶೇಷ ಮಮತೆ, ಪ್ರೀತಿ, ಸೆಳೆತ. ಮಕ್ಕಳ ಕುರಿತಾಗಿ ಅವರಿಗೆ ಇದ್ದ ಅಪಾರ ಅಕ್ಕರೆಯ ಕಾರಣದಿಂದಾಗಿಯೇ ಅವರ ಜನ್ಮದಿನವಾದ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ದೇಶಾದ್ಯಂತ ಪ್ರತೀ ವರ್ಷ ಆಚರಿಸಲಾಗುತ್ತದೆ. ನೆಹರೂ ಅವರಿಗೆ ಸಂಬಂಧಿಸಿದಂತೆ ಹಾಗೂ ಮಕ್ಕಳ ದಿನಾಚರಣೆಗೆ ಸಂಬಂಧಿಸಿದಂತೆ ಮೇಲಿನ ಇವಿಷ್ಟೂ ಸಂಗತಿಗಳು ಎಲ್ಲರಿಗೂ ತಿಳಿದಿರುವಂತಹವುಗಳೇ ಆಗಿವೆ. ಆದರೆ, ನೆಹರೂ ಅವರ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಓದಿ ತಿಳಿದುಕೊಳ್ಳಿರಿ:

ನೆಹರೂ ಬಗ್ಗೆ ಈವರೆಗೂ ನಿಮಗೆ ಗೊತ್ತಿಲ್ಲದ ವಿಷಯಗಳು

1. ಜವಾಹರ್‌ ಲಾಲ್ ನೆಹರೂ ಅವರ ಅಜ್ಜನು ದೆಹಲಿಯ ಕಟ್ಟಕಡೆಯ ಕೋತ್ವಾಲರಾಗಿದ್ದರೆಂಬ ಸಂಗತಿಯು ತಿಳಿದಿರುವುದು ಕೇವಲ ಕೆಲವೇ ಕೆಲವು ಮಂದಿಗೆ ಮಾತ್ರ. ಇಸವಿ 1857 ರ ಯುದ್ಧಕ್ಕೂ ಮೊದಲೇ ನೆಹರೂ ಅವರ ಅಜ್ಜ ಗಂಗಾಧುರ್ ಪಂಡಿತ್ ಅವರು ಕೋತ್ವಾಲರಾಗಿ ಸೇರ್ಪಡೆಗೊಂಡಿದ್ದರು ಹಾಗೂ ಬಳಿಕ ಅವರು ತನ್ನ ಕಡೆಗಾಲದಲ್ಲಿ, ಇಸವಿ 1861ರಲ್ಲಿ ಕುಟುಂಬ ಸಮೇತರಾಗಿ ಆಗ್ರಾಕ್ಕೆ ಸ್ಥಳಾಂತರಗೊಂಡರು.

2. ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೈಲುವಾಸದ ದಿನಗಳಲ್ಲಿ ಹವ್ಯಾಸಿ ಬರಹಗಾರರಾಗಿದ್ದರೆಂಬುದು ನಮಗೆ ತಿಳಿದಿರುವ ವಿಚಾರ. ನೆಹರೂ ಅವರು ಕೂಡಾ ಇಸವಿ 1935ರಲ್ಲಿ ತಾನು ಜೈಲುವಾಸದಲ್ಲಿದ್ದಾಗಲೇ ತನ್ನ ಆತ್ಮಚರಿತ್ರೆಯನ್ನು ಬರೆದರು. ಅವರಿಂದ ಬರೆಯಲ್ಪಟ್ಟ ಅವರ ಪುಸ್ತಕದ ಹೆಸರು "ಸ್ವಾತಂತ್ರ್ಯದ ಕಡೆಗೆ" ಎಂದಾಗಿದ್ದು, ಈ ಪುಸ್ತಕವು ಇಸವಿ 1936ರಲ್ಲಿ ಯು.ಎಸ್.ಎ (ಅಮೆರಿಕಾ)ದಲ್ಲಿ ಪ್ರಕಟಗೊಂಡಿತು.

3. ಈಗಿನ ರಾಜಕಾರಣಿಗಳ ಮೆಚ್ಚಿನ ಉಡುಪು ಹಾಗೂ ಅವರ ವೃತ್ತಿಯನ್ನು ಬಿಂಬಿಸುವ ಜಾಕೆಟ್ ಅಥವಾ ಕೋಟ್ ಅನ್ನು ಮೊದಲು ಕಂಡುಹಿಡಿದವರು ಸ್ವಯಂ ನೆಹರೂ ಅವರೇ. ಸ್ವಾತಂತ್ರ್ಯಪೂರ್ವದಲ್ಲಿ, ಬಹುತೇಕ ರಾಜಕಾರಣಿಗಳು ಕೇವಲ ಶ್ವೇತವಸ್ತ್ರಗಳನ್ನಷ್ಟೇ ಧರಿಸುತ್ತಿದ್ದರು. ಈ ಸಂಪ್ರದಾಯಕ್ಕೆ ಮಂಗಳ ಹಾಡಿದ್ದು ನೆಹರೂ ಅವರು. ನೆಹರೂ ಅವರು ತನ್ನ ಜಾಕೆಟ್ ನಲ್ಲಿ ಯಾವಾಗಲೂ ಗುಲಾಬಿ ಮೊಗ್ಗೊಂದನ್ನು ಇಟ್ಟುಕೊಳ್ಳುತ್ತಿದ್ದುದನ್ನು ಅವರ ಭಾವಚಿತ್ರಗಳಲ್ಲಿ ಕಾಣಬಹುದಾಗಿದೆ.

4. ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಅವರು ದೇಶದ ಪ್ರಥಮ ಪ್ರಧಾನಿಯಾಗಿದ್ದರು ಎಂಬ ವಿಚಾರ ಎಲ್ಲರಿಗೂ ಗೊತ್ತಿರುವಂತಹದ್ದೇ. ಗಾಂಧೀಜಿಯಂತೆ ನೆಹರೂ ಕೂಡಾ ಬಹು ಜನಪ್ರಿಯರಾಗಿದ್ದರು ಮತ್ತು 1950-1955ರ ಅವಧಿಯಲ್ಲಿ ಶಾಂತಿಗಾಗಿ 11 ಬಾರಿ ನೊಬೆಲ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು. ಆದರೆ, ನೊಬೆಲ್ ನಿಂದ ಅವರಿಗೆ ಒಂದೇ ಒಂದು ಪ್ರಶಸ್ತಿಯೂ ಸಂದಿಲ್ಲ.

5. ನೆಹರೂ ಮಹಾನ್ ಧೂಮಪಾನ ಪ್ರಿಯರಾಗಿದ್ದರು. ನೆಹರೂ ಅವರು ಧೂಮಪಾನ ಭಂಗಿಯಲ್ಲಿರುವ ಅನೇಕ ಭಾವಚಿತ್ರಗಳು ನಮಗೆ ಕಾಣಸಿಗುತ್ತವೆ. 555 ಬ್ರ್ಯಾಂಡ್ ನ ಸಿಗರೇಟು ನೆಹರೂ ಅವರಿಗೆ ಬಲು ಅಪ್ಯಾಯಮಾನವಾದದ್ದಾಗಿದ್ದಿತು. ಒಮ್ಮೆ ನೆಹರೂ ಭೋಪಾಲ್ ಗೆ ಭೇಟಿ ಇತ್ತಾಗ, ತನ್ನೊಂದಿಗೆ ಸಿಗರೇಟುಗಳನ್ನು ಒಯ್ಯಲು ಮರೆತಿದ್ದರು ಹಾಗೂ ಭೋಪಾಲ್ ಮಾರುಕಟ್ಟೆಯಲ್ಲೆಲ್ಲೂ ಅವರ ಸಿಗರೇಟಿನ ನೆಚ್ಚಿನ ಬ್ರ್ಯಾಂಡ್ ಸಿಗಲಿಲ್ಲ. ತನ್ನ ಸಿಗರೇಟಿನ ಅಚ್ಚುಮೆಚ್ಚಿನ ಬ್ರ್ಯಾಂಡ್ ಅನ್ನು ತರಿಸಿಕೊಳ್ಳುವುದಕ್ಕಾಗಿ ನೆಹರೂ ಅವರು ಭೋಪಾಲ್ ನಿಂದ ಇಂಧೋರ್ ಗೆ ವಿಮಾನವೊಂದನ್ನು ಕಳುಹಿಸಿದ್ದರು. ವಿಮಾನ ನಿಲ್ದಾಣಕ್ಕೆ ಕೆಲವು ಸಿಗರೇಟು ಪ್ಯಾಕ್ ಗಳನ್ನು ಕಳುಹಿಸಿದ ಬಳಿಕ ಆ ವಿಮಾನವು ಹಿಂದಿರುಗಿತ್ತು.

6. ಭಾರತದ ಕುರಿತಂತೆ ನೆಹರೂ ಅವರು ಆಳವಾದ ಜ್ಞಾನವುಳ್ಳವರಾಗಿದ್ದು, ಆ ಸಂಗತಿಯನ್ನು ಅವರ ಕೃತಿ "ಭಾರತದ ಸಂಶೋಧನೆ (ಡಿಸ್ಕವರಿ ಆಫ್‌ ಇಂಡಿಯಾ)" ಯ ಮೂಲಕ ಕಂಡುಕೊಳ್ಳಬಹುದು. ಪಂಡಿತ ಪರಂಪರೆಯ ಸಂಸ್ಕಾರವುಳ್ಳ ಕಾಶ್ಮೀರೀ ಪಂಡಿತ ಕುಟುಂಬಕ್ಕೆ ನೆಹರೂ ಸೇರಿದವರಾಗಿದ್ದರು. ಅವರ ಕೃತಿಯಾಧಾರಿತ "ಭಾರತ್ ಏಕ್ ಖೋಜ್" ಎಂಬ ಪ್ರದರ್ಶನವು ನಿರ್ಮಾಣಗೊಂಡಿತ್ತು. ಈ ಪ್ರದರ್ಶನವು/ಚಿತ್ರೀಕರಣವು ಇತಿಹಾಸಪೂರ್ವದ ಅವಧಿಯಿಂದ ಮೊದಲ್ಗೊಂಡು ಭಾರತವು ಸ್ವತಂತ್ರಗೊಳ್ಳುವವರೆಗಿನ ಅವಧಿಯ ಸಂಪೂರ್ಣ ಭಾರತೀಯ ಇತಿಹಾಸವನ್ನು ಒಳಗೊಂಡಿದೆ.

7. ಮೇ 27, 1964 ರಂದು ನೆಹರೂ ಅವರು ತೀವ್ರ ಹೃದಯಾಘಾತದಿಂದ ಮೃತರಾದರು. ಅವರ ಶವಸಂಸ್ಕಾರ ವೀಕ್ಷಣೆಗೆಂದು 1.5 ಮಿಲಿಯನ್ ಮಂದಿ ಜೊತೆಗೂಡಿದ್ದರು. ಗಾಂಧೀಜಿ ಅವರ ಶವಸಂಸ್ಕಾರದ ಬಳಿಕ ಎರಡನೆಯ ಬಾರಿಗೆ ಅತೀ ದೊಡ್ಡ ಸಂಖ್ಯೆಯಲ್ಲಿ ಜನಜಂಗುಳಿ ಜಮಾಯಿಸಿದ್ದು ನೆಹರೂ ಶವಸಂಸ್ಕಾರದ ಅವಧಿಯಲ್ಲಿಯೇ.

English summary

Unknown Facts About Jawaharlal Nehru

JawaharLal Nehru was born on 14th November 1889 which is celebrated as Children day because his love for children. He is not Only our First Prime Minister but also a Good Leader. On Chacha Nehru's birthday we are focusing Top 10 Unknown facts of Jawaharlal Nehru.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X