Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ರಾಮಕೃಷ್ಣ ಜಯಂತಿ 2022: ದಿನಾಂಕ, ಆಚರಣೆ ಮತ್ತು ಮಹತ್ವದ ಕುರಿತು ಇಲ್ಲಿದೆ ಮಾಹಿತಿ
ಮಹಾನ್ ಹಿಂದೂ ಸಂತ, ಅತೀಂದ್ರಿಯ, ಭಕ್ತರಾದ ಶ್ರೀ ರಾಮಕೃಷ್ಣರು ತಮ್ಮ ಜೀವನ ಮತ್ತು ಬೋಧನೆಗಳ ಮೂಲಕ ದೇವರು ಒಬ್ಬನೇ ಸತ್ಯ, ಅವನು ಒಬ್ಬನೇ ವಾಸ್ತವ ಮತ್ತು ಉಳಿದಂತೆ ಕೇವಲ ಭ್ರಮೆ ಎಂದು ಜನರಿಗೆ ಮನದಟ್ಟು ಮಾಡಿಕೊಟ್ಟವರು. ಅವರ ಜೀವನದುದ್ದಕ್ಕೂ ಧರ್ಮವನ್ನು ಅತ್ಯಂತ ಭಕ್ತಿಯಿಂದ ಅಭ್ಯಾಸ ಮಾಡಿದವರು. ದೇವರ ಮೇಲಿನ ಅವರ ಭಕ್ತಿ ಸಂಪೂರ್ಣ ಮತ್ತು ವಿಶಿಷ್ಟವಾಗಿತ್ತು. ಅವರ ಜನ್ಮದಿನವನ್ನು ಶ್ರೀ ರಾಮಕೃಷ್ಣ ಜಯಂತಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಶ್ರೀ ರಾಮಕೃಷ್ಣ ಜಯಂತಿ ಮಾರ್ಚ್ 4ರಂದು ಆಚರಿಸಲಾಗುತ್ತಿದೆ.

ಜನರು ಈ ದಿನವನ್ನು ಹೇಗೆ ಆಚರಿಸುತ್ತಾರೆ?:
ಭಾರತದಲ್ಲಿ ರಾಮಕೃಷ್ಣ ಮಿಷನ್ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಇನ್ನೂ ಹಲವಾರು ದೇಶಗಳಲ್ಲಿ ರಾಮಕೃಷ್ಣ ಜಯಂತಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ರಾಮಕೃಷ್ಣ ಅವರು ಕಾಳಿ ದೇವಿಯ ಕಟ್ಟಾ ಭಕ್ತರಾಗಿದ್ದರು. ಆದ್ದರಿಂದ ಜನರು ಶ್ರೀ ರಾಮಕೃಷ್ಣರಿಗೆ ಗೌರವ ಸಲ್ಲಿಸಲು ಕಾಳಿ ದೇವಿಯನ್ನು ಪೂಜಿಸುತ್ತಾರೆ. ಇದಲ್ಲದೆ, ಜನರು ಗುರು ಪೂಜೆ, ಬೃಹಸ್ಪತಿ ಶಾಂತಿ ಪೂಜೆ, ಶನಿ ಗ್ರಹಾ ಶಾಂತಿ ಪೂಜೆಯನ್ನು ಮಾಡುತ್ತಾರೆ.

ರಾಮಕೃಷ್ಣ ಜಯಂತಿಯ ಹಿಂದಿನ ಕಥೆ:
1836 ರ ಫೆಬ್ರವರಿ 18 ರಂದು ಕಾಮರ್ಪುಕೂರ್ ಎಂಬ ಸಣ್ಣ ಹಳ್ಳಿಯಲ್ಲಿ ಗದಾಧರ್ ಆಗಿ ಜನಿಸಿದ ಶ್ರೀ ರಾಮಕೃಷ್ಣ ಪರಮಹಂಸ ಅವರು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಡ ಮಗು. ಗದಾಧರ್ ಅವರನ್ನು ಗ್ರಾಮಸ್ಥರು ಪ್ರೀತಿಸುತ್ತಿದ್ದರು. ಅವನು ಯೋಗಿ ಮತ್ತು ಅತೀಂದ್ರಿಯನಾಗಿದ್ದು, ಅವರ ಜ್ಞಾನಕ್ಕೆ ಸರಿಸಾಟಿಯಿರಲಿಲ್ಲ. ಅವರು ತಮ್ಮ 17 ನೇ ವಯಸ್ಸಿನಲ್ಲಿ ಮನೆ ಬಿಟ್ಟು ತಪಸ್ವಿಗಳಾದರು. ಲೌಕಿಕ ಆನಂದವು ಅವನಿಗೆ ಇಷ್ಟವಾಗಲಿಲ್ಲ. ಅವರು ಕಾಳಿ ದೇವಿಯನ್ನು ಪೂಜಿಸಿದರು ಮತ್ತು ಅವರಮ್ಮು ವಿಷ್ಣುವಿನ ಆಧುನಿಕ ಕಾಲದ ಪುನರ್ಜನ್ಮ ಎಂದು ಕೆಲವರು ನಂಬಿದ್ದರು. ಬಂಗಾಳದಲ್ಲಿ ಹಿಂದೂ ಧರ್ಮ ಪುನರುಜ್ಜೀವನಗೊಂಡಾಗ, ಅವರು ಪ್ರಮುಖ ವ್ಯಕ್ತಿಯಾಗಿದ್ದರು. ಬಂಗಾಳವು ತೀವ್ರವಾದ ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಮಯ ಮತ್ತು ಮಾನವತಾವಾದದ ಅವನತಿ ಇದ್ದ ಸಮಯದಲ್ಲಿ ಇವರ ಕೊಡುಗೆ ಅಪಾರವಾದುದು.

ರಾಮಕೃಷ್ಣ ಜಯಂತಿಯ ಮಹತ್ವ:
ಈ ದಿನವು ಹೆಚ್ಚಿನ ಮಹತ್ವವನ್ನು ಹೊಂದಿದೆ ಮತ್ತು ಆದ್ದರಿಂದ ಇದನ್ನು ಹೆಚ್ಚು ವೈಭವದಿಂದ ಆಚರಿಸಲಾಗುತ್ತದೆ. ಭಾರತದಾದ್ಯಂತ ರಾಮಕೃಷ್ಣ ಮಠದ ಎಲ್ಲಾ ಶಾಖೆಗಳು ಈ ದಿನದಂದು ಸ್ವಾಮಿಯವರ ಜೀವನದ ಕುರಿತು ಆಧ್ಯಾತ್ಮಿಕ ಪ್ರವಚನಗಳು, ಭಾಷಣಗಳು ಮತ್ತು ಉಪನ್ಯಾಸಗಳನ್ನು ನಡೆಸುತ್ತವೆ. ಅವರ ದೊಡ್ಡ ಕೊಡುಗೆಯನ್ನು ಈ ದಿನ ಆಚರಿಸಲಾಗುತ್ತದೆ. ಉಪನ್ಯಾಸಗಳನ್ನು ಸಾಮಾನ್ಯ ಜನರಿಗೆ ಅವರ ಬೋಧನೆಗಳನ್ನು ತಲುಪುವಂತೆ ಮಾಡಲು ಪ್ರಪಂಚದಾದ್ಯಂತದ ಪ್ರಸಿದ್ಧ ಪ್ರಾಧ್ಯಾಪಕರು ನೀಡುತ್ತಾರೆ. ಧಾರ್ಮಿಕ ಪ್ರತಿರೂಪ ಮತ್ತು ರಾಮಕೃಷ್ಣ ಪರಮಹಂಸ ಅವರ ಪತ್ನಿ ಶಾರದಾ ದೇವಿಯನ್ನೂ ಈ ದಿನ ಸ್ಮರಿಸಲಾಗುತ್ತದೆ. ಯಾವುದೇ ಭೌತವಾದವನ್ನು ಮೀರಿ, ರಾಮಕೃಷ್ಣ ಸರಳ ಜೀವನವನ್ನು ನಡೆಸಿದರು. ಅವನು ತನ್ನ ಜೀವನವನ್ನು ಆಧ್ಯಾತ್ಮಿಕತೆಗೆ ಅರ್ಪಿಸಿದನು ಮತ್ತು ಆದ್ದರಿಂದ ಅವನನ್ನು ಮೆಚ್ಚಿಸಲು, ಸರಳ ಅರ್ಪಣೆಗಳು ಸಾಕು ಎಂಬುದು ನಂಬಿಕೆಯಾಗಿದೆ.



Click it and Unblock the Notifications