For Quick Alerts
ALLOW NOTIFICATIONS  
For Daily Alerts

794 ವರ್ಷಗಳ ಬಳಿಕ ಡಿ.21ಕ್ಕೆ ಶನಿ-ಗುರು ಗ್ರಹಗಳ ಸಂಗಮ: ಸಮಯ ಹಾಗೂ ವೀಕ್ಷಿಸುವುದು ಹೇಗೆ?

|

ಡಿಸೆಂಬರ್ 21ರಂದು ಅಂದರೆ ಇಂದು ಸಾಯಂಕಾಲ ಪಶ್ಚಿಮಾಕಾಶದಲ್ಲಿ ಅತ್ಯಪರೂಪದ ಖಗೋಳ ವಿದ್ಯಮಾನ ಘಟಿಸಲಿದೆ. ಅಂದರೆ ಸೌರವ್ಯೂಹದ ದೈತ್ಯ ಗ್ರಹಗಳಾದ ಗುರು ಮತ್ತು ಶನಿ ಅತ್ಯಂತ ಸಮೀಪಿಸಿ ಪರಸ್ಪರ ಸಂಗಮಿಸುವಂತೆ ಗೋಚರಿಸುವುದನ್ನು ಕಾಣಬಹುದಾಗಿದೆ. ಈ ಸಂಗಮ 794 ವರ್ಷಗಳ ಬಳಿಕ ಸಂಭವಿಸುತ್ತಿರುವುದು ಇದರ ಮತ್ತೊಂದು ವಿಶೇಷವಾಗಿದೆ.

ಇಂದು ಶನಿ ಮತ್ತು ಗುರು ಮಕರ ರಾಶಿಗೆ ಬರಲಿದ್ದು ಎರಡು ಗ್ರಹಗಳ ಸಂಗಮವಾಗಲಿದೆ. ಈ ಸಂಗಮವು ಕ್ರಿಸ್ಮಸ್ ಸ್ಟಾರ್ ರೀತಿ ಕಂಗೊಳಿಸಲಿದ್ದು ಇದನ್ನು ಖಗೋಳ ವಿಜ್ಞಾನಿಗಳು ಸ್ಟಾರ್ ಆಫ್ ಬೆತ್ಲೆಹೇಮ್ ಎಂದು ವರ್ಣಿಸಿದ್ದಾರೆ.

ಗುರು-ಶನಿ ಗ್ರಹಗಳ ಮಹಾ ಸಂಗಮ

ಗುರು-ಶನಿ ಗ್ರಹಗಳ ಮಹಾ ಸಂಗಮ

ಸೌರಮಂಡಲದ ಎರಡು ದೈತ್ಯ ಗ್ರಹಗಳಾದ ಗುರು ಮತ್ತು ಶನಿ ಗ್ರಹಗಳು ಒಂದಕ್ಕೊಂದು ಸಮೀಸುತ್ತಿದೆ. ಈ ಎರಡು ಗ್ರಹಗಳು ಅತೋ ಸಮೀಪದಲ್ಲಿ ಕಾಣಿಸಿಕೊಳ್ಳಲಿವೆ, ಈ ಎರಡು ಗ್ರಹಗಳು ಒಂದಾದಂತೆ ಕಾಣುತ್ತದೆ.

ತುಂಬಾ ಅಪರೂಪದ ಈ ಘಟನೆಯ ಮತ್ತೊಂದು ವಿಶೇಷ ಎಂದರೆ ದಕ್ಷಿಣಾಯನ ಅಂತ್ಯದ ದಿನವಾಗಿದ್ದು ಉತ್ತರಾಯಣ ಪ್ರಾರಂಭವಾಗಲಿದೆ. ಉತ್ತರಾಯಣ ಡಿಸೆಂಬರ್ 22ಕ್ಕೇ ಆದರೂ ಜನವರಿ 14ರಂದು ನಡೆಯುವ ಮಕರ ಸಂಕ್ರಾಂತಿಯಂದೇ ಇದರ ಆಚರಣೆ ನಡೆಯುತ್ತದೆ.

ಸೂರ್ಯನ ಸುತ್ತ ಶನಿ-ಗುರು ಗ್ರಹಗಳ ಚಲನೆ

ಸೂರ್ಯನ ಸುತ್ತ ಶನಿ-ಗುರು ಗ್ರಹಗಳ ಚಲನೆ

ಗುರು ಗ್ರಹವು ಸೂರ್ಯನ ಸುತ್ತಲು 12 ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಶನಿ ಗ್ರಹ ಸೂರ್ಯನ ಸುತ್ತ ಸುತ್ತಲು 30 ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಗುರುವಿನ ಒಂದು ವರ್ಷ ನಮ್ಮ 12 ವರ್ಷಕ್ಕೆ, ಶನಿಯ ಒಂದು ವರ್ಷ 30 ವರ್ಷಕ್ಕೆ ಸಮ.

 ಭಾರತದಲ್ಲಿ ಯಾವಾಗ ಕಾಣುತ್ತದೆ?

ಭಾರತದಲ್ಲಿ ಯಾವಾಗ ಕಾಣುತ್ತದೆ?

ಸೂರ್ಯನ ದಿಕ್ಕಿನ ಕಡೆಗೇ ಈ ಗ್ರಹಗಳು ಬರುವುದರಿಂದ ರಾತ್ರಿಯ ವೇಳೆ ಈ ಗ್ರಹಗಳು ಗೋಚರಿಸುವುದಿಲ್ಲ. ಸೂರ್ಯೋದಯದ ಬಳಿಕ ಇವುಗಳ ಉದಯವಾಗಲಿದ್ದು ಪಶ್ಚಿಮದಲ್ಲಿ ಸೂರ್ಯ ಮುಳಗಿದ ಬಳಿಕ ಒಂದೆರಡು ತಾಸುಗಳವರೆಗೆ ಈ ಗ್ರಹಗಳು ಗೋಚರಿಸುತ್ತದೆ.

ಸಂಜೆ 6.30ರ ಸಮಯಕ್ಕೆ ನೈರುತ್ಯದಲ್ಲಿ 30ರಿಂದ 35 ಡಿಗ್ರಿಯಷ್ಟು ಎತ್ತರಕ್ಕೆ ಕಣ್ಣಾಡಿಸಿದರೆ ಈ ಜೋಡಿ ಗ್ರಹಗಳ ದರ್ಶನವಾಗುತ್ತದೆ.

ಈ ಗ್ರಹಗಳನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದೇ?

ಈ ಗ್ರಹಗಳನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದೇ?

ಈ ಗ್ರಹಗಳನ್ನು ನೀವು ಬರೀಗಣ್ಣಿನಿಂದ ವೀಕ್ಷಿಸಬಹುದು. ಆದರೆ ದೂರದರ್ಶಕದಲ್ಲಿ ವೀಕ್ಷಿಸಿದರೆ ಇನ್ನು ಸ್ಪಷ್ಟವಾಗಿ ಕಾಣಿಸಬಹುದು.

ನಾವೆಲ್ಲಾ ಈ ಅಪರೂಪದ ಸಂಗಮವನ್ನು ಇಂದು ನೋಡದಿದ್ದರೆ ಬಹುಶಃ ನಮಗೆ ಈ ದೃಶ್ಯ ನೋಡಲು ಸಾಧ್ಯವಾಗುತ್ತೋ ಏನೋ... ಏಕೆಂದರೆ ಇನ್ನು ಈ ದೃಶ್ಯ ನೋಡಬೇಕೆಂದರೆ 2080ರವರೆಗೆ ಕಾಯಬೇಕು... ಈಗ 20 ವರ್ಷ ಕಳೆದವರು ಶತಾಯುಷಿಗಳಾದರೆ ಮಾತ್ರ ನೋಡಬಹುದು.

ಆದ್ದರಿಂದ ಈ ಅವಕಾಶ ಮಿಸ್ ಮಾಡಬೇಡಿ.

English summary

Jupiter-Saturn Conjunction On December 21: How And When To Watch In India

Jupiter-Saturn conjunction on December 21: How and when to watch in India, have a look.
X
Desktop Bottom Promotion