For Quick Alerts
ALLOW NOTIFICATIONS  
For Daily Alerts

ಮೋದಿ ಬಗ್ಗೆ ನಿಮಗೆ ಗೊತ್ತಿಲ್ಲದ ಸ್ವಾರಸ್ಯಕರ ಸಂಗತಿಗಳು

|

ಸಾಕಷ್ಟು ಆಕರ್ಷಣೆಗಳ ಕೇಂದ್ರಬಿಂದು, ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗಿಂದು 69ನೇ ಜನ್ಮದಿನದ ಸಂಭ್ರಮ. ಭಾರತದಕ್ಕಷ್ಟೇ ಸೀಮಿತವಾದ ಮೋದಿ ಇಡೀ ವಿಶ್ವದಲ್ಲೆ ಟ್ರೆಂಡ್ ಸೆಟ್ಟರ್ ಆಗಿ ಖ್ಯಾತಿ ಪಡೆದಿದ್ದಾರೆ. ತನ್ನ ಮಾತಿನ ಕೌಶಲ್ಯದಿಂದಲೇ, ಅತ್ಯುತ್ತಮ ಭಾಷಣದಿಂದ ಜನರಿಗೆ ಇನ್ನಷ್ಟು ಹತ್ತಿರವಾಗುವ ಮೋದಿಗೆ ವಿಶ್ವಾದ್ಯಂತ ಯುವಕರೇ ಹೆಚ್ಚು ಅಭಿಮಾನಿಗಳು.

ಮೋದಿ ರಾಜಕೀಯವಾಗಿ ಎಷ್ಟು ಬಹಿರ್ಮುಖಿಯೋ ವೈಯಕ್ತಿಕವಾಗಿ ಅಷ್ಟೇ ಖಾಸಗಿತನವನ್ನು ಕಾಪಾಡಿಕೊಳ್ಳುವ ಜಾಣ್ಮೆಯನ್ನು ಹೊಂದಿದ್ದಾರೆ, ಅಲ್ಲದೆ ಅದನ್ನು ಅವರು ಇಷ್ಟಪಡುತ್ತಾರೆ. ರಾಜಕೀಯ ಎಂದ ಮೇಲೆ ಪರ-ವಿರೋಧ ಇದ್ದೇ ಇರುತ್ತದೆ. ಆದರೆ ಪ್ರಧಾನಿ ಮೋದಿಯ ವಿಶೇಷತೆ ಎಂದರೆ ಇವರನ್ನು ಇಷ್ಟಪಡದವರೂ ಕೂಡ ಇವರ ಬಗ್ಗೆ ಬಹಿರಂಗವಾಗುವ ಕುತೂಕಹಲಕಾರಿ ಸಂಗತಿಗಳು, ವೈಯಕ್ತಿಕ ಜೀವನದ ಬಗ್ಗೆ ತಿಳಿಯಲು ಆಸಕ್ತಿ ತೋರುತ್ತಾರೆ.

ಮೋದಿಯ ಬಗ್ಗೆ ಎಲ್ಲರಿಗೂ ಆಸಕ್ತಿ ಇದ್ದೇ ಇರುತ್ತದೆ, ರಾಜಕೀಯ ಇಷ್ಟೆಲ್ಲಾ ಸಾಧನೆ ಮಾಡಿರುವ ಮೋದಿ ಮನೆಯಲ್ಲಿ ಹೇಗಿರುತ್ತಾರೆ, ಇವರ ವೈಯಕ್ತಿಕ ಆಸಕ್ತಿಗಳೇನು, ಬಾಲ್ಯ ಹೇಗಿತ್ತು, ಇವರಲ್ಲಿರುವ ದೌರ್ಬಲ್ಯಗಳೇನು ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಡುತ್ತದೆ. ನಿಮಗೂ ಸಹ ಮೋದಿ ಬಗ್ಗೆ ಇವರೆಗೂ ಗೊತ್ತಿರದ ಸಂಗತಿಗಳನ್ನು ತಿಳಿಯುವ ಕುತೂಹಲ ಇದೆಯೇ. ಬನ್ನಿ ನೋಡೋಣ.

1. ಸನ್ಯಾಸಿಯಾಗಬೇಕೆಂದಿದ್ದ ಮೋದಿ

1. ಸನ್ಯಾಸಿಯಾಗಬೇಕೆಂದಿದ್ದ ಮೋದಿ

ತಾರುಣ್ಯದಲ್ಲಿರುವಾಗಲೇ ಮೋದಿ ಸನ್ಯಾಸಿಗಳ ಜೀವನಶೈಲಿ ಕಂಡು ಸಾಕಷ್ಟು ಪ್ರೇರಣೆಗೊಂಡಿದ್ದರು. ಅವರು ಒಬ್ಬಂಟಿಯಾಗಿದೇ ಅಪರಿಚಿತ ಸ್ಥಳಗಳಿಗೆ ಪ್ರವಾಸಗಳಿಗೆ ಹೋಗುತ್ತಿದ್ದರು. ಅಧ್ಯಾತ್ಮ ಸಾಧನೆಗೆಂದು ಹಿಮಾಲಯಕ್ಕೂ ಹೋಗಿದ್ದರು, ಹಲವು ಕಾಲ ಹಿಮಾಲಯದ ಸನ್ಯಾಸಿಗಳ ಜತೆ ಸಮಯವನ್ನೂ ಕಳೆದಿದ್ದಾರೆ. ಆದರೆ ಸನ್ಯಾಸತ್ವ ದೀಕ್ಷೆ ಪಡೆಯಲೆಂದು ರಾಮಕೃಷ್ಣ ಮಿಷನ್ ನ ಅಧ್ಯಕ್ಷ ಸ್ವಾಮಿ ಮಾಧಾವನಂದ ಮಹಾರಾಜ್ ಅವರನ್ನು ಭೇಟಿ ಮಾಡಿದ ಮೋದಿಗೆ ಅವರು ಸನ್ಯಾಸತ್ವ ನೀಡಲು ನಿರಾಕರಿಸಿದ್ದರು. ಹಿಂದಿರುಗಿ ವಿದ್ಯಾಭ್ಯಾಸ ಮುಂದುವರೆಸು ಎಂದು ತಿಳಿಹೇಳಿದ್ದರು.

2. ಎರಡೂ ಕೈಗಳನ್ನು ಸಮರ್ಥವಾಗಿ ಬಳಸಬಲ್ಲರು

2. ಎರಡೂ ಕೈಗಳನ್ನು ಸಮರ್ಥವಾಗಿ ಬಳಸಬಲ್ಲರು

ಮೋದಿ ಮತ್ತೊಂದು ವಿಶೇಷತೆ ಎಂದರೆ ಎರಡೂ ಕೈಗಳನ್ನು ಸಮರ್ಥವಾಗಿ ಬಳಸುತ್ತಾರೆ. ಎರಡಗೈನಲ್ಲಿ ಚಮಚ ಬಳಸಿ ತಿನ್ನುತ್ತಾರೆ, ಬಲಗೈ ನಲ್ಲಿ ಬರೆಯುತ್ತಾರೆ. ಕಾರಣ ಮೋದಿ ಹುಟ್ಟಿನಿಂದ ಬರೆಯಲು ಸೇರಿಂದತೆ ಎಡಗೈ ಅನ್ನು ಹೆಚ್ಚು ಬಳಸುತ್ತಿದ್ದರು. ಆದರೆ ಬಲಗೈ ಬಳಸಬೇಕು ಎಂಬ ಹಠದಿಂದ ಅಭ್ಯಸಿಸಿ, ಈಗ ಎರಡೂ ಕೈಗಳನ್ನು ಸಮರ್ಥವಾಗಿ ಬಳಸಬಲ್ಲರು. ಇದನ್ನು ನಿಭಾಯಿಸುವುದು ಕಷ್ಟವಾದರೂ ಶ್ರಮದಿಂದ ಸಾಧಿಸಿದ್ದಾರೆ.

3. ಬಾಲ್ಯದಲ್ಲೆ ಮೊಸಳೆ ಸಾಕಿದ್ದ ಮೋದಿ

3. ಬಾಲ್ಯದಲ್ಲೆ ಮೊಸಳೆ ಸಾಕಿದ್ದ ಮೋದಿ

ಶಾಲಾ ಹಂತದಲ್ಲೆ ಸಾಕಷ್ಟು ಬುದ್ದಿವಂತನಾಗಿದ್ದ ಮೋದಿ ಬಹಳ ದೈರ್ಯವಂತನಾಗಿದ್ದ. ಶಾಲೆಯ ನಂತರ ಕ್ಯಾಂಟೀನ್ ನಲ್ಲಿ ಕೆಲಸ ಮುಗಿಸಿ ಮನೆಯ ಸಮೀಪದಲ್ಲೇ ಇದ್ದ ಶರ್ಮಿಷ್ಠ ಕೊಳದಲ್ಲಿ ಈಜಿದ ಮೇಲೆ ಮನೆ ಸೇರುತ್ತಿದ್ದರು. ಒಂದು ದಿನದ ಮೊಸಳೆಯಿಂದ ಕಚ್ಚಿಕೊಂಡು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಇಷ್ಟೇ ಅಲ್ಲದೆ ನಂತರ ಮರಿ ಮೊಸಳೆಯನ್ನು ಮನೆಗೆ ತಂದು ಸಾಕಲು ಸಹ ಯತ್ನಿಸಿದ್ದರಂತೆ.

4. ಉಡುಪು ಅಭಿಮಾನಿ & ಇಸ್ತ್ರಿ ಇಲ್ಲದ ಬಟ್ಟೆ ತೊಡಲ್ಲ

4. ಉಡುಪು ಅಭಿಮಾನಿ & ಇಸ್ತ್ರಿ ಇಲ್ಲದ ಬಟ್ಟೆ ತೊಡಲ್ಲ

ಇತ್ತೀಚೆಗೆ ಮೋದಿಯ ಬಣ್ಣ-ಬಣ್ಣದ, ವಿಭಿನ್ನ ವಿನ್ಯಾಸದ ಧಿರಿಸಿನ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಾವು ಕೇಳಿರುತ್ತೇವೆ. ಮೋದಿ ನಿಜವಾಗಿಯೂ ಉಡುಪುಗಳ ಅಭಿಮಾನಿ. ಅತ್ಯುತ್ತಮವಾದ, ನಯವಾದ ಬಟ್ಟೆಗಳನ್ನು ತೊಡಲು ಮೋದಿ ಇಷ್ಟಪಡುತ್ತಾರೆ. ಇಷ್ಟೇ ಅಲ್ಲ ಅವರು ಇಸ್ತ್ರೀ ಇಲ್ಲದೆ ಯಾವುದೇ ಬಟ್ಟೆಯನ್ನೂ ತೊಟ್ಟಿದ್ದೇ ಇಲ್ಲ. ಇವರಿಗೆ ಬಟ್ಟೆಗಳು ಇಂದಿಗೂ ವಿಶೇಷವಾಗಿ ಅಹಮದಾಬಾದಿನ "ಜೇಡ್ ಬ್ಲೂ'' ಬಟ್ಟೆ ಅಂಗಡಿಯಿಂದಲೇ ಬರುತ್ತದೆ.

5. ಅಮೆರಿಕಾದಲ್ಲಿ ವಿದ್ಯಾಭ್ಯಾಸ

5. ಅಮೆರಿಕಾದಲ್ಲಿ ವಿದ್ಯಾಭ್ಯಾಸ

ಪ್ರಧಾನಿ ಮೋದಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಹೌದು, ಬಡತನದಲ್ಲೇ ಹುಟ್ಟಿ ಬೆಳೆದ ಮೋದಿ, ವಿದ್ಯೆಯ ಮೌಲ್ಯ ಅರಿತು ನಂತರ ಅಮೆರಿಕಾದಲ್ಲಿ ಮೂರು ತಿಂಗಳ ಇಮೇಜ್ ಮ್ಯಾನೇಜ್ ಮೆಂಟ್ ಮತ್ತು ಪಬ್ಲಿಕ್ ರಿಲೇಷನ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.

6. ಏಕಾಂಗಿತನ ಇಷ್ಟಪಡುತ್ತಾರೆ

6. ಏಕಾಂಗಿತನ ಇಷ್ಟಪಡುತ್ತಾರೆ

ಮೋದಿ ಏಕಾಂಗಿತನವನ್ನು ಹೆಚ್ಚು ಇಷ್ಟಪಡುತ್ತಾರೆ. ನಿಮಗೆ ಗೊತ್ತೆ ಅಹಮದಾಬಾದಿನಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಮೋದಿ ವಾಸಿಸುತ್ತಿದ್ದುದು ಒಬ್ಬಂಟಿಯಾಗಿಯೇ. ಮೋದಿ ಅವರ ತಾಯಿ ಸಹ ಇತರ ಮಕ್ಕಳೊಂದಿಗೆ ನೆಲೆಸಿದ್ದಾರೆಯೇ ಹೊರತು ಮೋದಿ ಜತೆ ನೆಲೆಸಿಲ್ಲ. ಇನ್ನು ಬಾಲ್ಯದಲ್ಲೆ ವಿವಾಹವಾಗಿದ್ದ ಪತ್ನಿ ಯಶೋದಾ ಬೆನ್ ಅವರಿಂದ ದೂರವಾಗಿರುವ ಮೋದಿಗೆ ಹೇಳಿಕೊಳ್ಳುವಂಥ ಅಷ್ಟೇನೂ ಆತ್ಮೀಯ ಸ್ನೇಹಿತರಿಲ್ಲ. ಇವರಿಗೆ ಬಿಡುವಿನ ಸಮಯ ಸಿಗುವುದೇ ಕಡಿಮೆ, ಆದರೆ ಸಮಯ ಸಿಕ್ಕಾಗ ಪುಸ್ತಕಗಳನ್ನು ಓದುವುದು, ಏಕಾಂಗಿಯಾಗಿ ಸಮಯವನ್ನು ಕಳೆಯುವುದಕ್ಕೆ ಇಷ್ಟ ಪಡುತ್ತಾರೆ.

7. ಸರ್ಕಾರದ ಸವಲತ್ತನ್ನು ಕುಟುಂಬದೊಂದಿಗೆ ಹಂಚಿಕೊಳ್ಳದ ಮೋದಿ

7. ಸರ್ಕಾರದ ಸವಲತ್ತನ್ನು ಕುಟುಂಬದೊಂದಿಗೆ ಹಂಚಿಕೊಳ್ಳದ ಮೋದಿ

ಒಬ್ಬ ಪ್ರಧಾನಿಗೆ ದೇಶದಲ್ಲಿ ಸರ್ಕಾರದ ವತಿಯಿಂದ ಅಂದುಕೊಂಡ ಸವಲತ್ತುಗಳು ಸಿಗುತ್ತದೆ. ಆದರೆ ಮೋದಿ ಸರ್ಕಾರದಿಂದ ಲಭಿಸಿದ ಯಾವುದೇ ಸವಲತ್ತನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವುದಿಲ್ಲ. ಅವರು ಮುಖ್ಯಮಂತ್ರಿ ಆದಾಗಿನಿಂದ ಪ್ರಧಾನಿ ಆದ ನಂತರವೂ ತಾಯಿ ಸೇರಿದಂತೆ ಯಾರೊಂದಿಗೂ ಅವರು ಸರ್ಕಾರದಿಂದ ಮನೆ, ಸೌಕರ್ಯಗಳನ್ನು ಹಂಚಿಕೊಂಡಿಲ್ಲ. ದುಡ್ಡಿನ ವಿಚಾರದ ಸಹ ಮೋದಿ ಜಿಪುಣರು. ಇದು ವೈಯಕ್ತಿಕವಾಗಿ ಮಾತ್ರವಲ್ಲ, ಸರ್ಕಾರದ ವ್ಯವಹಾರಗಳಲ್ಲೂ ಪ್ರತಿಬಿಂಬಿಸುತ್ತದೆ. ಯಾವುದಾದರೂ ಸಚಿವಾಲಯಕ್ಕೆ ಹಣ ಬಿಡುಗಡೆ ಮಾಡುವಾಗ 'ಅಷ್ಟು ಏಕೆ ಬೇಕು? ಇಷ್ಟು ತಗೊಳ್ಳಿ ಸಾಕು' ಎಂಬ ಚೌಕಾಸಿ ನಡೆಸಿಯೇ ವ್ಯವಹಾರ ಮಾಡುತ್ತಾರೆ.

8. ಅತಿ ಹೆಚ್ಚು ಅಭಿಮಾನಿ ಹೊಂದಿರುವ ರಾಜಕಾರಣಿ

8. ಅತಿ ಹೆಚ್ಚು ಅಭಿಮಾನಿ ಹೊಂದಿರುವ ರಾಜಕಾರಣಿ

ಅಮೆರಿಕ ಮಾಜಿ ಅಧ್ಯಕ್ಷ ಓಬಾಮ ನಂತರ ಅತಿ ಹೆಚ್ಚು ಟ್ವಿಟ್ಟರ್ ಅಭಿಮಾನಿಗಳನ್ನು ಹೊಂದಿರುವ ನಾಯಕ ಪ್ರಧಾನಿ ಮೋದಿ. ಮೋದಿಗೆ ಬರೋಬ್ಬರಿ 12 ಮಿಲಿಯನ್ ಮಂದಿ ಟ್ವಿಟ್ಟರ್ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಹೊಂದುತ್ತಲೇ ಇದ್ದಾರೆ.

9. ರಜೆ ಪಡೆಯದ ರಾಜಕಾರಣಿ

9. ರಜೆ ಪಡೆಯದ ರಾಜಕಾರಣಿ

ರಾಜಕೀಯ ಜೀವನದಲ್ಲಿ ರಜೆ ಪಡೆಯದ ಏಕೈಕ ರಾಜಕಾರಣಿ ಮೋದಿ. ಮೋದಿ 13 ವರ್ಷ ಗುಜರಾತಿನ ಮುಖ್ಯ ಆಗಿದ್ದ ಸಂದರ್ಭದಲ್ಲಿ ಒಂದೇ ಒಂದು ದಿನವೂ ರಜೆ ಪಡೆದಿಲ್ಲ. ಈಗ ಎರಡನೇ ಬಾರಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಮೋದಿ ಸರ್ಕಾರದ ನಿಗದಿತ ಅವಧಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡುತ್ತಾರೆ. ರಾತ್ರಿ ಮಲಗುವ ವೇಳೆ ಪ್ರಯಾಣಕ್ಕೆ ಆದ್ಯತೆ ನೀಡುವ ಮೂಲಕ ಸಮಯವನ್ನು ಉಳಿಸುತ್ತಾರೆ. ಇಂದಿಗೂ ಸಮಯದ ಮೌಲ್ಯವನ್ನು ತಿಳಿದು ಹಾಗೆಯೇ ತನ್ನ ಸೇವೆ ಮುಂದುವರೆಸಿದ್ದಾರೆ.

10. ಕಟ್ಟುನಿಟ್ಟಿನ ನವರಾತ್ರಿ ಉಪವಾಸ ಆಚರಣೆ

10. ಕಟ್ಟುನಿಟ್ಟಿನ ನವರಾತ್ರಿ ಉಪವಾಸ ಆಚರಣೆ

ಮೋದಿ ಅವರು ನವರಾತ್ರಿಯ ಉಪವಾಸ ವ್ರತವನ್ನು ತಪ್ಪದೇ ಆಚರಿಸುತ್ತಾರೆ. ಅಂಬಾಭವಾನಿಯ ಪರಮಭಕ್ತರಾದ ಅವರು ಒಂಭತ್ತು ದಿನಗಳ ಕಾಲ ಸಂಜೆಯ ವರೆಗೂ ಉಪವಾಸ ಆಚರಿಸಿ ಸಂಜೆಗೆ ಒಂದು ಹಣ್ಣನ್ನು ಮಾತ್ರ ತಿನ್ನುವ ಮೂಲಕ ಉಪವಾಸ ಮುರಿಯುತ್ತಾರೆ. ತಾನು ಎಷ್ಟೇ ಬ್ಯುಸಿ ಇದ್ದರೂ ಮೋದಿ ಈ ವ್ರತಾಚರಣೆಯನ್ನು ಎಂದೂ ತಪ್ಪಿಸಿಲ್ಲ.

11. ಅತ್ಯುತ್ತಮ ಪಿಆರ್

11. ಅತ್ಯುತ್ತಮ ಪಿಆರ್

ಮೋದಿ ಇದ್ದಕ್ಕಿದ್ದಂತೆ ಅದೃಷ್ಟದಿಂದ ಪ್ರಧಾನಿ ಆದವರಲ್ಲ, ಇದರ ಹಿಂದೆ ಅವರ ಶ್ರಮ, ಜಾಣ್ಮೆ ಇದೆ. ಇವರ ಸಾಧನೆಗೆ ವೈಯಕ್ತಿಕವಾಗಿ ಮೋದಿ ಬಹಳ ಕ್ರಿಯೇಟಿವ್ ಆಗಿರುವುದೇ ಕಾರಣ. ಅತ್ಯುತ್ತಮ ವಾಗ್ಮಿ ಆಗಿರುವ ಇವರು ಯೋಜನೆಗಳಿಗೆ ನೀಡುವ ಹೆಸರು, ತಮ್ಮ ಹೆಸರಿನಲ್ಲಿನ ಬಿಡುಗಡೆ ಮಾಡುವ ಹೊಸ ಬ್ರ್ಯಾಂಡ್ ‌ಗಳನ್ನು ಹೆಚ್ಚಾಗಿ ಇವರೇ ರೂಪಿಸಿರುತ್ತಾರೆ. ದೇಶದ ಅತ್ಯುತ್ತಮ ಜಾಹೀರಾತು ಬರಹಗಾರರ ಸಾಲಿನಲ್ಲಿ ಮೋದಿ ಸಹ ನಿಲ್ಲಬಲ್ಲರು. ಒಂದು ಚಿಂತನೆ ಅಥವಾ ಉತ್ಪನ್ನವನ್ನು ಹೇಗೆ ಜನಪ್ರಿಯಗೊಳಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು.

12. ಮೋದಿ ಕವಿಯೂ ಹೌದು

12. ಮೋದಿ ಕವಿಯೂ ಹೌದು

ಮೋದಿ ಬಾಲ್ಯದಿಂದಲೇ ಕತೆ, ಕವನಗಳನ್ನು ಬರೆಯುತ್ತಿದ್ದರು, ಇದನ್ನೂ ಈಗಲೂ ಮುಂದುವರೆಸಿದ್ದಾರೆ. ಅವರ ಭಾಷಣ ಕೇಳಿದ್ದರೆ ಅವರ ಕಾವ್ಯ ಕೌಶಲ್ಯದ ಬಗ್ಗೆ ಹಲವರಿಗೆ ತಿಳಿದಿರುತ್ತದೆ. ಇವರ ಕವಿತೆಗಳ ಕೆಲವು ಪುಸ್ತಕಗಳು ಸಹ ಇದೆ. ಕಾಲೇಜಿನ ದಿನಗಳಲ್ಲೇ ಒಂದು ನಾಟಕ ರಚಿಸಿ, ಅದನ್ನು ಆಡಿಸಿ, ತಾವು ಓದಿದ್ದ ಶಾಲೆಗೆ ಕಾಂಪೌಂಡ್ ಕಟ್ಟಿಸಲು ಹಣ ಸಂಗ್ರಹಿಸಿದ್ದರಂತೆ.

13. ಇಂಗ್ಲಿಷ್ ಅಷ್ಟಕ್ಕಷ್ಟೆ

13. ಇಂಗ್ಲಿಷ್ ಅಷ್ಟಕ್ಕಷ್ಟೆ

ಮೋದಿ ಅತ್ಯುತ್ತಮ ಮಾತುಗಾರ, ಇವರು ಮಾತನಾಡಲು ನಿಂತರೆ ಎರಡು ಮೂರು ತಾಸಾದರೂ ಜನ ಸದ್ದಿಲ್ಲದೆ ಕೇಳುತ್ತಾರೆ. ಹಿಂದಿನ ಇನ್ಯಾವ ಪ್ರಧಾನಿಗಿಂತಲೂ ಮೋದಿ ಬಹುತೇಕ ಎಲ್ಲಾ ದೇಶಗಳನ್ನು ಸಹ ಭೇಟಿ ಮಾಡಿ ಬಂದಿದ್ದಾರೆ. ಆದರೆ, ಅವರ ಇಂಗ್ಲಿಷ್ ಭಾಷೆ ಮಾತ್ರ ಅಷ್ಟಕ್ಕಷ್ಟೇ. ವ್ಯವಹಾರಕ್ಕೆ ಅಗತ್ಯವಾದಷ್ಟು ಮಾತ್ರ ಮಾತನಾಡುತ್ತಾರೆ, ಉಳಿದೆಡೆ ಹಿಂದಿಯಲ್ಲೇ ವ್ಯವಹಾರ.

English summary

Happy Birthday Narendra Modi: Interesting Facts About Him

No one needs an introduction to the name ‘Narendra Modi.’ From being a humble Chai-wala to being the Prime Minister of India, Mr. Modi’s life story is as enticing as any Hollywood movie. Though, I bet you haven’t read all the chapters of his life story and there is so much that you don’t know about him.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more