Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚಾಣಕ್ಯನ ಪ್ರಕಾರ ಈ ಐದು ಜಾಗಗಳಲ್ಲಿ ನೀವಿದ್ದರೆ ಉದ್ಧಾರವಾಗೋದಿಲ್ಲ..!
ಮನುಷ್ಯ ನೆಮ್ಮದಿಯಿಂದ ಬದುಕಬೇಕಾದರೆ ಊಟ, ನಿದ್ದೆ ಹಣ ಅಷ್ಟೇ ಇದ್ದರೆ ಸಾಲದು. ಅದರ ಜೊತೆಗೆ ಮತ್ತೊಂದು ಮುಖ್ಯವಾದ ಅಂಶವೆಂದರೆ ಆತ ಎಲ್ಲಿ ವಾಸಿಸುತ್ತಾನೆ ಅನ್ನುವುದು ತುಂಬಾನೇ ಮುಖ್ಯವಾಗುತ್ತದೆ.

ವಾಸ ಮಾಡುವ ಜಾಗ ಎಂತಹದ್ದೇ ಇರಲಿ. ಆದರೆ ಆತನ ಜೊತೆಗೆ ಯಾರಿದ್ದಾರೆ ಹಾಗೂ ಆತ ವಾಸಿಸುವ ಜಾಗದಲ್ಲಿ ಎಂತಹ ಮೌಲ್ಯಗಳನ್ನು ಪಡೆಯುತ್ತಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಚಾಣಕ್ಯನ ಪ್ರಕಾರ ಇಂತಹ ಸ್ಥಳದಲ್ಲಿ ಮನುಷ್ಯರು ವಾಸಿಸಲು ಯೋಗ್ಯವಲ್ಲ. ಈ ಐದು ಸ್ಥಳಗಳಲ್ಲಿ ಮನುಷ್ಯರು ವಾಸಮಾಡಿದರೆ ಉದ್ಧಾರವಾಗೋದಿಲ್ಲ ಅಂತ ಚಾಣಕ್ಯ ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯ ಹೇಳುತ್ತಿರುವ ಆ ಐದು ಜಾಗಗಳು ಯಾವುದು?
ಒರ್ವ ಮನುಷ್ಯ ಆರೋಗ್ಯಕರ ಆಹಾರವನ್ನು ಸೇವಿಸಿದಾಗ ಯಾವುದೇ ರೀತಿಯ ತೊಂದರೆ ಆಗೋದಿಲ್ಲ. ಆದರೆ ಯಾವಾಗ ಅನಾರೋಗ್ಯಕರ ಆಹಾರವನ್ನು ಸೇವಿಸುತ್ತೇವೆಯೋ ಅದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದೇ ರೀತಿ ನಾವು ಎಲ್ಲಿ ವಾಸಿಸುತ್ತೇವೆ ಅನ್ನೋದು ತುಂಬಾನೇ ಮುಖ್ಯ ವಿಚಾರ.

ಶಿಕ್ಷಣ
ಶಿಕ್ಷಣದ ಅನ್ನುವುದು ಮನುಷ್ಯನನ್ನು ಸದೃಢ ವ್ಯಕ್ತಿಯನ್ನಾಗಿ ಮಾಡುವ ಅಸ್ತ್ರ. ಆದರೆ ಕೆಲವೊಂದು ಜಾಗಗಳು ಕೇವಲ ಹೆಸರಿಗಷ್ಟೇ ಶಿಕ್ಷಣ ಸಂಸ್ಥೆಗಳಾಗಿದೆ ಹೊರತು ಅದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಮೌಲ್ಯಯುತ ಶಿಕ್ಷಣ ಯಾವ ಜಾಗದಲ್ಲಿ ದೊರೆಯುವುದಿಲ್ಲವೋ ಅಲ್ಲಿ ವಾಸವಿರುದು ವ್ಯರ್ಥ ಎಂದು ಚಾಣಕ್ಯ ಹೇಳಿದ್ದಾರೆ. ಆ ಜಾಗದಲ್ಲಿ ನೀವು ವಾಸವಾಗಿರುವಷ್ಟು ದಿನ ನಿಮಗೆ ಯಾವುದೇ ರೀತಿ ಪ್ರಯೋಜನವಿಲ್ಲ. ಆದಷ್ಟು ಬೇಗ ಅಂತ ಜಾಗದಿಂದ ಹೊರನಡೆಯಿರಿ ಎಂದು ಚಾಣಕ್ಯ ಹೇಳಿದ್ದಾರೆ.

ಗೌರವ
ಗೌರವ ಅನ್ನುವುದು ಮನುಷ್ಯನಿಗೆ ತುಂಬಾನೇ ಮುಖ್ಯವಾಗುತ್ತದೆ. ನೀವು ವಾಸವಾಗಿರೋ ಜಾಗದಲ್ಲಿ ಅಥವಾ ಕೆಲಸ ಮಾಡುವ ಜಾಗ ಎಲ್ಲೇ ಇರಲಿ. ನಿಮಗೆ ಅಲ್ಲಿ ಗೌರವ ಸಿಗುತ್ತಿಲ್ಲ ಅಂತಾದರೆ ಆ ಜಾಗದಲ್ಲಿ ಒಂದು ಕ್ಷಣವು ನಿಲ್ಲಲೇಬೇಡಿ. ನಮ್ಮಲ್ಲಿರುವ ಹಣ, ಆಸ್ತಿ, ಅಂತಸ್ತು ನೋಡಿ ಗೌರವ ಕೊಡುವ ವ್ಯಕ್ತಿಗಳು ನಮಗೆ ಬೇಕಾಗಿಲ್ಲ. ಬದಲಾಗಿ ನಮ್ಮ ವ್ಯಕ್ತಿತ್ವ ನೋಡಿ ಗೌರವ ಕೊಡುವ ವ್ಯಕ್ತಿಗಳು ನಮ್ಮ ಜೊತೆಗಿದ್ದರೆ ಸಾಕು.

ರಕ್ತಸಂಬಂಧ
ನೀವು ಒಬ್ಬ ವ್ಯಕ್ತಿಯ ಜೊತೆಗೆ ಎಷ್ಟೇ ಆತ್ಮೀಯನಾಗಿರಬಹುದು. ಅದು ನಿಮ್ಮ ಸಹೋದರ, ಸ್ನೇಹಿತ, ಆಪ್ತರು, ರಕ್ತ ಸಂಬಂಧಿಸಗಳೇ ಆಗಿರಲಿ ಅಂತವರ ಮನೆಯ ಹತ್ತಿರ ಎಂದಿಗೂ ವಾಸವಾಗಿರಬೇಡಿ. ಹತ್ತಿರವಿದ್ದಷ್ಟು ತಾತ್ಸರ ಹೆಚ್ಚುತ್ತದೆ ಅಂತಾರೆ ಚಾಣಕ್ಯ. ಹೀಗಾಗಿ ಆದಷ್ಟು ನಿಮ್ಮವರಿಂದ ಅಂತರ ಕಾಯ್ದುಕೊಳ್ಳಿ ಆಗ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ.

ಉದ್ಯೋಗ
ವರ್ಷಾನುಗಟ್ಟಲೇ ಕಷ್ಟಪಟ್ಟು ಕಲಿತು ಶಿಕ್ಷಣವನ್ನು ಪೂರ್ಣಗೊಳಿಸುತ್ತೇವೆ. ಆದರೆ ನಮ್ಮ ಊರಿನಲ್ಲಿ ಅಥವಾ ನಾವು ವಾಸವಿರುವ ಹಳ್ಳಿಯಲ್ಲಿ ನಾವು ಕಲಿತ ಶಿಕ್ಷಣಕ್ಕೆ ಸರಿಯಾದ ಕೆಲಸ ಸಿಗದೇ ಹೋದರೆ ಆ ಜಾಗದಲ್ಲಿ ಖಂಡಿತ ಇರಬೇಡಿ ಅಂತಾರೆ ಚಾಣಕ್ಯ. ನಿಮ್ಮ ಶಿಕ್ಷಣಕ್ಕೆ ತಕ್ಕ ಕೆಲಸವನ್ನು ಅರಸಿ ಪಟ್ಟಣಕ್ಕೆ ಬನ್ನಿ. ಇಲ್ಲಿ ಉತ್ತಮ ಉದ್ಯೋಗವನ್ನು ಪಡೆದು ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಿ. ಉದ್ಯೋಗ ಅನ್ನುವುದು ಮನುಷ್ಯನ ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ.

ಗುಣಮಟ್ಟ
ಜೀವನದ ಪ್ರತಿಯೊಂದು ಹಂತದಲ್ಲೂ ಗುಣಮಟ್ಟ ಅನ್ನುವುದು ತುಂಬಾನೇ ಮುಖ್ಯವಾಗುತ್ತದೆ. ನಾವು ಯಾವುದಾದರೂ ಒಂದು ಸಣ್ಣ ವಸ್ತುಗಳನ್ನು ಖರೀದಿಸಬೇಕಾದರೂ ಗುಣಮಟ್ಟವನ್ನು ಪರಿಶೀಲಿಸುತ್ತೇವೆ. ಅದೇ ರೀತಿ ಜೀವನದ ಪ್ರತಿಯೊಂದು ಹಂತದಲ್ಲೂ ಗುಣಮಟ್ಟ ತುಂಬಾನೇ ಮುಖ್ಯ. ಅದು ಶಿಕ್ಷಣ ಅಥವಾ ಉದ್ಯೋಗ ಹೀಗೆ ಯಾವುದೇ ವಿಚಾರ ಬಂದರೂ ಗುಣಮಟ್ಟದಲ್ಲಿ ಕಂಪ್ರಮೈಸ್ ಆಗಲೇಬೇಡಿ. ಒಂದು ವೇಳೆ ಆ ಜಾಗದಲ್ಲಿ ನೀವು ಅಂದುಕೊಂಡ ಗುಣಮಟ್ಟದ ಶಿಕ್ಷಣ ಅಥವಾ ಉದ್ಯೋಗ ದೊರೆಯುತ್ತಿಲ್ಲ ಅಂತಾದರೆ ಅಲ್ಲಿ ನಿಲ್ಲಲೇಬೇಡಿ. ತಕ್ಷಣ ಅಲ್ಲಿಂದ ಹೊರನಡೆಯಿರಿ ಅಂತಾರೆ ಚಾಣಕ್ಯ.
ಚಾಣಕ್ಯನ ಪ್ರಕಾರ ಈ ಐದು ವಿಚಾರಗಳು ಎಲ್ಲಿ ಇರುವುದಿಲ್ಲವೋ ಆ ಜಾಗದಲ್ಲಿ ನೀವು ಇದ್ದೂ ಕೂಡ ಪ್ರಯೋಜವಿಲ್ಲ ಅಂತಾರೆ. ನಿಮ್ಮ ಒಂದು ನಿರ್ಧಾರದ ಮೇಲೆ ನಿಮ್ಮ ಜೀವನ ನಿಂತಿದೆ. ಏನೇ ಕೆಲಸ ಮಾಡಬೇಕಾದರೆ ಒಂದು ಕ್ಷಣ ಆಲೋಚಿಸಿ ಹೆಜ್ಜೆ ಇಡಿ. ಆ ಒಂದು ನಿರ್ಧಾರ ಮುಂದೊಂದು ದಿನ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡಬಹುದು.



Click it and Unblock the Notifications
