For Quick Alerts
ALLOW NOTIFICATIONS  
For Daily Alerts

ಈ ಅಭ್ಯಾಸಗಳಿರುವ ಇರುವ ಜನರ ಬಳಿ ಸಂಪತ್ತು ಬರುವುದಿಲ್ಲ

|

ಹಣ ಯಾರಿಗೆ ಬೇಡ ಹೇಳಿ?, ಪ್ರತಿಯೊಬ್ಬರೂ ದುಡಿಯುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಕೆಲವರು ಎಷ್ಟೇ ಶ್ರಮ ಪಟ್ಟರೂ ಹಣ ಅವರ ಬಳಿ ನಿಲ್ಲುವುದಿಲ್ಲ, ಸಂಪತ್ತು ವೃದ್ಧಿಯಾಗುವುದಿಲ್ಲ. ಇದಕ್ಕೆ ಚಾಣಕ್ಯ ಕೆಲವೊಂದು ಕಾರಣಗಳನ್ನ ಹೇಳುತ್ತಾನೆ. ಅವನ ಪ್ರಕಾರ, ಈ ಕೆಳಗೆ ಕೊಟ್ಟಿರುವ ಅಭ್ಯಾಸ ಹೊಂದಿರುವ ಜನರ ಬಳಿ ಸಂಪತ್ತು ಎಂದಿಗೂ ಬರುವುದಿಲ್ಲ, ಅವರ ಇಡೀ ಜೀವನ ಬಡತನದಲ್ಲಿಯೇ ಕಳೆಯಬೇಕಾಗುತ್ತದೆ. ಹಾಗಾದರೆ ಬಡತನಕ್ಕೆ ಕಾರಣವಾಗುವ ಆ ಅಭ್ಯಾಸಗಳಾವುವು ಎಂಬುದನ್ನು ನೋಡ್ಕೋಂಡು ಬರೋಣ.

ಚಾಣಕ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿದೇವಿ ದೂರಹೋಗುವ ಜನರ ಅಭ್ಯಾಸಗಳನ್ನು ಈ ಕೆಳಗೆ ನೀಡಲಾಗಿದೆ:

ಬೆಳಿಗ್ಗೆ ತಡವಾಗಿ ಏಳುವುದು:

ಬೆಳಿಗ್ಗೆ ತಡವಾಗಿ ಏಳುವುದು:

ಆಚಾರ್ಯ ಚಾಣಕ್ಯನ ಪ್ರಕಾರ ಬೆಳಿಗ್ಗೆ ತಡವಾಗಿ ಎಳುವುದು ಲಕ್ಷ್ಮಿದೇವಿ ಕೋಪಗೊಳ್ಳಲು ಕಾರಣವಂತೆ. ಸೂರ್ಯೋದಯದ ನಂತರವೂ ಯಾರು ಹಾಸಿಗೆಯನ್ನು ಬಿಡುವುದಿಲ್ಲವೋ ಅವರ ಬಳಿ ಹಣ ಉಳಿಯುವುದಿಲ್ಲ, ಲಕ್ಷ್ಮಿ ಸುಳಿಯುವುದಿಲ್ಲ. ಬೆಳಿಗ್ಗೆ ತಡವಾಗಿ ಏಳುವ ಜನರು ಎಂದಿಗೂ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯುವುದಿಲ್ಲ, ಇವರು ಯಾವಾಗಲೂ ಬಡತನದಲ್ಲಿ ಬದುಕುತ್ತಾರೆ ಎಂದು ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಹೇಳುತ್ತಾನೆ. ಅದಕ್ಕೆ ನಮ್ಮ ಪೂರ್ವಜರು ಸೂರ್ಯ ಬರೋ ಮೊದಲೇ ಹಾಸಿಗೆಯಿಂದ ಏಳುತ್ತಿದ್ದದ್ದು?.

ದೈಹಿಕ ನೈರ್ಮಲ್ಯ ಕಾಪಾಡಿಕೊಳ್ಳದಿರುವುದು:

ದೈಹಿಕ ನೈರ್ಮಲ್ಯ ಕಾಪಾಡಿಕೊಳ್ಳದಿರುವುದು:

ದೈಹಿಕ ನೈರ್ಮಲ್ಯ ಇಲ್ಲದವರ ಜೊತೆ ನಾವೇ ನಿಲ್ಲುವುದಿಲ್ಲ, ಇನ್ನೂ ಆ ತಾಯಿ, ಸಂಪತ್ತಿನ ತಾಯಿ ನಿಲ್ಲುವಳೇ?. ಲಕ್ಷ್ಮಿ ಎಂದಿಗೂ ಕೊಳಕು ಬಟ್ಟೆಗಳನ್ನು ಧರಿಸುವ, ಹಲ್ಲು ಸ್ವಚ್ಛಗೊಳಿಸದ ಮತ್ತು ಸ್ವಚ್ಛವಾಗಿ ಬದುಕದ ಜನರೊಂದಿಗೆ ವಾಸಿಸುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅದಕ್ಕಾಗಿಯೇ ಹೇಳುವುದು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು.

ಹೆಚ್ಚು ತಿನ್ನುವವರು:

ಹೆಚ್ಚು ತಿನ್ನುವವರು:

ನೀತಿಶಾಸ್ತ್ರದ ಪ್ರಕಾರ, ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸುವುದರಿಂದ ಬಡತನಕ್ಕೆ ಕಾರಣವಾಗುತ್ತದೆ. ಅದೇಗೆ ಅಂತೀರಾ? ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸುವ ಜನರ ಆರೋಗ್ಯವು ಹದಗೆಡುತ್ತದೆ. ಆರೋಗ್ಯ ಹಾಳಾದಾಗ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ನಾವು ದುಡಿದ ಹಣವೆಲ್ಲವೂ ಆಹಾರ ಹಾಗೂ ಆಸ್ಪತ್ರೆಗೇ ಸುರಿದರೆ ಹಣ ಉಳಿಯುವುದಾದರೂ ಎಲ್ಲಿಂದ? ಹಾಗಂತ ಜಿಪುಣತನ ಮಾಡಿ ಎಂದರ್ಥವಲ್ಲ, ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಆಹಾರ ಸೇವನೆ ಮಾಡಿದರೆ, ನಮಗೂ ನಮ್ಮ ಆರೋಗ್ಯಕ್ಕೂ ಒಳಿತು.

ವ್ಯಂಗ್ಯವಾಗಿ ಮಾತನಾಡುವವರು:

ವ್ಯಂಗ್ಯವಾಗಿ ಮಾತನಾಡುವವರು:

ಚಾಣಕ್ಯ ನೀತಿಯಲ್ಲಿ, ಮನುಷ್ಯ ಯಾವಾಗಲೂ ಸಿಹಿಯಾಗಿ ಮಾತನಾಡಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಸಿಹಿಯಾಗಿ ಮಾತನಾಡುವ ವ್ಯಕ್ತಿಯು ಪ್ರತಿಯೊಬ್ಬರಿಂದಲೂ ಪ್ರೀತಿಸಲ್ಪಡುತ್ತಾನೆ ಮತ್ತು ಸಮಾಜದಲ್ಲಿ ಯಾವಾಗಲೂ ಗೌರವವನ್ನು ಪಡೆಯುತ್ತಾನೆ. ಕಠಿಣ ಮಾತಿನಿಂದಾಗಿ, ಜನರೊಂದಿಗಿನ ಸಂಬಂಧವು ಹದಗೆಡುತ್ತದೆ. ನಿಮ್ಮ ಕಠಿಣ ಮಾತುಗಳಿಂದ ಮತ್ತೊಬ್ಬರ ಮನಸ್ಸಿಗೆ ನೋವುಂಟಾಗುತ್ತದೆ. ಇದರ ಪಾಪ ನಿಮ್ಮ ಸಂಪತ್ತಿನ ಮೇಲೆ ಬೀಳುತ್ತದೆ ಜೊತೆಗೆ ಅಂತಹ ಮನೆಯಲ್ಲಿ, ಲಕ್ಷ್ಮಿ ಎಂದಿಗೂ ವಾಸಿಸುವುದಿಲ್ಲ.

Read more about: insync money ಹಣ
English summary

Chanakya Niti For Money and Prosperity in Kannada

Here we talking about Chanakya Niti For Money and Prosperity in Kannada, read on
X
Desktop Bottom Promotion