For Quick Alerts
ALLOW NOTIFICATIONS  
For Daily Alerts

ಬುದ್ಧ ಪೌರ್ಣಿಮ 2023 : ಬುದ್ಧನ ಈ ಮಾತುಗಳು ಪ್ರೀತಿಯ ಸಾರ ಏನು ಅನ್ನೋದನ್ನು ಅರ್ಥ ಮಾಡಿಸುತ್ತದೆ

|

ಜೀವನದಲ್ಲಿ ಪ್ರೀತಿ ಸಾಧಿಸೋದು ಅಂದುಕೊಂಡಷ್ಟು ಸುಲಭನಾ? ಖಂಡಿತ ಇಲ್ಲ. ನಾನು ನನ್ನವರು ಎನ್ನುವ ಸ್ವಾರ್ಥ ಮನುಷ್ಯನಲ್ಲಿ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಇನ್ನೊಬ್ಬರ ಮೇಲೆ ನಮಗೆ ಪ್ರೀತಿಯ ಭಾವ ಹುಟ್ಟಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ದ್ವೇಷ, ಕಿಚ್ಚು, ಅಸೂಯೆಯೆ ಮನದಲ್ಲಿ ತುಂಬಿಕೊಂಡಿದ್ದಾಗ ಪ್ರೀತಿಯ ಸಾರ ಮನುಷ್ಯನಿಗೆ ಅರ್ಥವಾಗೋದಿಲ್ಲ. ಭಗವಾನ್‌ ಬುದ್ಧರು ಜೀವನದಲ್ಲಿ ಪ್ರೀತಿ ಸಾಧಿಸುವುದಕ್ಕೆ ಕೆಲವೊಂದು ತತ್ವಗಳನ್ನು ಹೇಳಿಕೊಟ್ಟಿದ್ದಾರೆ.

ಬುಧ ಪೂರ್ಣಿಮೆಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಆಚರಿಸಲಾಗುವುದು. ಈ ವರ್ಷ ಬುದ್ಧ ಪೂರ್ಣಿಮೆಯನ್ನು ಮೇ.5ರಂದು ಆಚರಿಸಲಾಗುವುದು. ವಿಷ್ಣುವಿನ ಹತ್ತು ಅವತಾರಗಳಲ್ಲಿ ಬುದ್ಧ ಸಹ ಒಂದು ಎಂದು ಹೇಳಲಾಗುತ್ತದೆ. ಅಂತಹ ಮಹಾನ್‌ ಸಾಧಕ ಬುದ್ಧ ಜೀವನದಲ್ಲಿ ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದ.

Buddha Quotes: Inspirational Buddha Quotes on Peace, Life, Love, Happiness, Karma in Kannada

ಬುದ್ಧನ ತತ್ವಗಳು ಯಾವುದೇ ಧರ್ಮ, ಜಾತಿಗೆ ಸೀಮಿತವಾಗದೆ ಪ್ರತಿಯೊಬ್ಬರು ಅರಿತು ಅಳವಡಿಕೊಳ್ಳಲು ಪ್ರಯತ್ನಿಸುವುದು ಅವರ ಪ್ರೇರಣಾಶಕ್ತಿಗೆ, ತತ್ವಾದರ್ಶಗಳಿಗೆ ಉದಾಹರಣೆ ಎನ್ನಬಹುದು. ಬುದ್ಧನ ತತ್ವಗಳ ಅನುಸಾರ ಮನುಷ್ಯ ಹೇಗೆ ಬದುಕಬೇಕು, ಯಾವೆಲ್ಲಾ ಗುಣಗಳನ್ನು ಮೈಗೂಡಿಕೊಳ್ಳಬೇಕು, ಜೀವನದಲ್ಲಿ ಮೋಕ್ಷ ಸಾಧಿಸಬೇಕೆಂದರೆ ಯಾವ ಮಾರ್ಗದಲ್ಲಿ ಸಾಗಬೇಕು ಎಂದು ಸವಿವರವಾಗಿ ಹೇಳಿದ್ದಾನೆ. ಬುದ್ಧಪೌರ್ಣಿಮೆಯ ಪ್ರಯುಕ್ತ ಬುದ್ಧ ಜೀವನ, ಪ್ರೀತಿ, ಸಂತೋಷ, ಕರ್ಮ ಮತ್ತು ಸಾವಿನ ಬಗ್ಗೆ ಏನು ಹೇಳಿದ್ದಾರೆ ಮುಂದೆ ನೋಡೋಣ:

ಜೀವನ
* ಒಂದು ಕ್ಷಣದ ಕೋಪ ಮತ್ತು ಒಂದು ಕ್ಷಣದಲ್ಲಿನ ತಾಳ್ಮೆಯು ನಿಮಗೆ ಸಾವಿರಾರು ಕ್ಷಣಗಳ ವಿಷಾದವನ್ನು ತಪ್ಪಿಸುತ್ತದೆ.
* ಎಂದಿಗೂ ಸದೃಢರಾಗಿರಿ ಏಕೆಂದರೆ ಸಮಸ್ಯೆಗಳು ಶಾಶ್ವತವಲ್ಲ. ಈಗ ಬಿರುಗಾಳಿ ಇರಬಹುದು,ಅದರೆ ಮಳೆ ಸತತವಾಗಿ ಸುರಿಯುವುದಿಲ್ಲ.
* ಯಾರಿಗೂ ನಿಮಗಾಗಿ ಸಮಯ ಮೀಸಲಿಡಿ ಎಂದು ಒತ್ತಾಯಿಸಬೇಡಿ. ಅವರಿಗೆ ನಿಜವಾಗಿಯೂ ಬಯಸಿದರೆ ಎಷ್ಟೇ ಕೆಲಸವಿದ್ದರೂ ನಿಮಗಾಗಿ ಸಮಯ ನೀಡುತ್ತಾರೆ.
* ಉತ್ತಮ ಸ್ನೇಹಿತರ ಹೊರತಾಗಿ ನಿಮ್ಮ ಜೀವನದಲ್ಲಿ ಏನೂ ಇಲ್ಲ ಎಂದಾದರೂ ನೀವು ಶ್ರೀಮಂತರೆ.

ಪ್ರೀತಿ
* ನಿಮ್ಮನ್ನು ದ್ವೇಷಿಸುವವರನ್ನು ಮರೆತುಬಿಡಿ, ಆದರೆ ಪ್ರತಿನಿತ್ಯ ನಿಮ್ಮನ್ನು ಪ್ರೀತಿಸುವವರನ್ನು ಎಂದಿಗೂ ಮರೆಯಬೇಡಿ.
* ಬದುಕು ತುಂಬಾ ಚಿಕ್ಕದು. ಆದ್ದರಿಂದ ನಿಮ್ಮನ್ನು ಸದಾ ಸಂತೋಷಪಡಿಸುವವರು ಹಾಗೂ ಪ್ರೀತಿಸುವವರ ಜತೆ ಸಮಯ ಕಳೆಯಿರಿ.
* ನಿಮ್ಮತನ ಹಾಗೂ ವ್ಯಕ್ತಿತ್ವವನ್ನು ಬದಲಾಯಿಸದೆ ನಿಮ್ಮನ್ನು ಮತ್ತಷ್ಟು ಉತ್ತಮ ವ್ಯಕ್ತಿಯನ್ನಾಗಿ ಮಾಡುವುದೇ ನಿಜವಾದ ಪ್ರೀತಿ.
* ನಿಜವಾದ ಪ್ರೀತಿ ಹುಟ್ಟುವುದೇ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಮೂಲಕ.

ಸಂತೋಷ
* ಶಿಸ್ತುಬದ್ಧ ಮನಸ್ಸು ಸದಾ ಸಂತೋಷವಾಗಿರುತ್ತದೆ.
* ತುಂಬಾ ಯೋಚನೆ ಮಾಡಬೇಡಿ. ನಿಮಗೆ ಯಾವುದು ಸಂತೋಷ ಎನಿಸುತ್ತದೆಯೋ ಅದನ್ನೇ ಮಾಡಿ.
* ಸತ್ಯನಿಷ್ಠವಾಗಿ ಬದುಕುವವರು ಪ್ರಪಂಚದಲ್ಲೇ ಅತೀ ಸಂತೋಷದಿಂದ ಬದುಕುವ ವ್ಯಕ್ತಿಯಾಗಿರುತ್ತಾನೆ.
* ಯಾವಾಗ ಮನಸ್ಸು ಶುದ್ಧವಾಗಿರುತ್ತದೆಯೋ ಸಂತೋಷ ಎಂಬುದು ನಿಮ್ಮ ನೆರಳಿನಂತೆ ಜತೆಗೇ ಇರುತ್ತದೆ.

ಕರ್ಮ
* ಯಾರ ಮೇಲೂ ಸೇಡು ತೀರಿಸಿಕೊಳ್ಳಬೇಡಿ, ಅವರ ಕರ್ಮವೇ ಅವರನ್ನು ನೋಡಿಕೊಳ್ಳುತ್ತದೆ.
* ಕ್ಷಮೆಗೆ ಅರ್ಹರಲ್ಲದೆ ಇದ್ದರೂ ಅವರನ್ನು ಕ್ಷಮಿಸಿ. ಕೋಪವನ್ನು ಹಿಡಿದಿಟ್ಟುಕೊಳ್ಳುವುದರಿಂದ ನಿಮಗೆ ತೊಂದರೆಯೇ ಹೊರತು ಅವರಿಗಲ್ಲ.
* ನೀವು ಮಾತನಾಡುವ ಮೊದಲು ಈ ಮೂರು ವಿಷಯಗಳ ಬಗ್ಗೆ ಗಮನವಿರಲಿ; ಇದು ನಿಜವೇ? ಇದು ಅಗತ್ಯವೇ? ಇದು ಸರಿಯಾದ ರೀತಿಯೇ?
* ಜೀವನದಲ್ಲಿ ನಿಜವಾದ ವೈಫಲ್ಯವೆಂದರೆ ನಿಮ್ಮ ಆತ್ಮೀಯರ ಬಳಿಯೇ ನೀವು ಸತ್ಯವಾಗಿ ಇಲ್ಲದಿರುವುದು.

ಸಾವು
* ಪ್ರತಿಯೊಂದು ಆರಂಭಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ.
* ಜೀವನ ಅನಿಶ್ಚಿತವಾಗಿದೆ; ಆದರೆ ಸಾವು ನಿಶ್ಚಿತ.
* ಮಾಡಬೇಕಿರುವುದನ್ನು ಉತ್ಸಾಹ, ಸಂತೋಷದಿಂದ ಇಂದೇ ಮಾಡಿಬಿಡಿ. ಯಾರಿಗೆ ಗೊತ್ತು ನಾಳೆಯೇ ಸಾವು ಬರಬಹುದು.
* ಪ್ರತಿಯೊಂದು ಕ್ಷಣವನ್ನು ಸಂಪೂರ್ಣವಾಗಿ ಜೀವಿಸಿ, ಅದು ನಿಮ್ಮ ಜೀವನ ಕೊನೆಯ ಕ್ಷಣವಾದರೂ ಸರಿಯೇ.
* ಸಾವು ಸಹ ನಾವು ಮಾಡಿರುವ ಉತ್ತಮ ಕಾರ್ಯಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ.

English summary

Buddha Quotes: Inspirational Buddha Quotes on Peace, Life, Love, Happiness, Karma in Kannada

Here we are going to tell you Buddha Quotes: Inspirational Buddha Quotes on Peace, Life, Love, Happiness, Karma in Kannada. Read more.
X
Desktop Bottom Promotion