Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅರ್ಧ ಹಂದಿ, ಅರ್ಧ ಮನುಷ್ಯನ ಮರಿಗೆ ಜನ್ಮ ನೀಡಿದ ಆಡು!
ಸೃಷ್ಟಿಯ ವಿಚಿತ್ರವನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ಕಲ್ಪನೆಗಿಂತಲೂ ಅತೀತವಾಗಿರುವಂತಹದ್ದು ಕೆಲವೊಂದು ಸಲ ಘಟಿಸುವುದು. ಇದರಲ್ಲಿ ಪ್ರಮುಖವಾಗಿ ಮನುಷ್ಯ ಹಾಗೂ ಪ್ರಾಣಿಗಳು ಜನ್ಮ ನೀಡುವ ವೇಳೆ ಕೆಲವೊಂದು ವಿಚಿತ್ರ ಸೃಷ್ಟಿಗಳಿಗೆ ಜನ್ಮ ನೀಡುವುದು ಇದೆ. ಸಣ್ಣ ಕೊಂಬು ಇರುವಂತಹ ಮಗು, ಮೂರು ತಲೆ, ಎರಡು ತಲೆ ಮಗು, ಎರಡಕ್ಕಿಂತ ಹೆಚ್ಚಿನ ಕೈಗಳು, ಕಾಲುಗಳು ಹೀಗೆ ಹಲವಾರು.
ಮನುಷ್ಯ ಮಾತ್ರವಲ್ಲದೆ ಕೆಲವೊಂದು ಸಲ ಪ್ರಾಣಿಗಳು ಕೂಡ ಈ ರೀತಿಯಾಗಿ ಜನ್ಮ ನೀಡುವುದಿದೆ. ಇಲ್ಲಿ ರೈತನೊಬ್ಬನ ಆಡೊಂದು ವಿಚಿತ್ರ ಸೃಷ್ಟಿಗೆ ಜನ್ಮ ನೀಡಿದೆ. ಆಡು ಜನ್ಮ ನೀಡಿರುವಂತಹ ಕರು ಅರ್ಧ ಹಂದಿ ಹಾಗೂ ಅರ್ಧ ಮಾನವನಂತಿದೆ. ಈ ರೀತಿ ಆಡು ಜನ್ಮ ನೀಡಿರುವುದರಿಂದ ತನಗೆ ತುಂಬಾ ಕೆಟ್ಟದಾಗಲಿದೆ ಎಂದು ರೈತ ನಂಬಿದ್ದಾನೆ. ಈ ವಿಚಿತ್ರ ಜನ್ಮದ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ...

ಫಿಲಿಫೈನ್ಸ್ ನಲ್ಲಿ ನಡೆದಿರುವ ಘಟನೆ
ಫಿಲಿಫೈನ್ಸ್ ನ ಸುಲ್ತಾನ ಕುದಾರತ್ ಎನ್ನುವ ಜಾಗದಲ್ಲಿ ನಡೆದಿದೆ. ಗದ್ದೆಯಲ್ಲಿ ಆಡು ತುಂಬಾ ವಿಚಿತ್ರವಾಗಿರುವ ಸೃಷ್ಟಿಗೆ ಜನ್ಮ ನೀಡಿದೆ. ಈ ಆಡಿನ ಮರಿ ಅರ್ಧ ಹಂದಿ ಮತ್ತು ಅರ್ಧ ಮನುಷ್ಯನಂತಿದೆ.

ಪಶುವೈದ್ಯರು ಸಿಸೇರಿಯನ್ ಮಾಡಿದರು
ರೈತ ಜೋಸೆಫಿನೆ ರೆಫಿಕ್ಯು ಎನ್ನುವಾತ ಆಡಿನ ಹೆರಿಗೆಗೆ ಪಶುವೈದ್ಯರನ್ನು ಕರೆದಿದ್ದ. ಅವರು ಸಿಸೇರಿಯನ್ ಮೂಲಕ ಕರುವನ್ನು ಹೊರಗೆ ತೆಗೆದಿದ್ದರು. ಒಂದು ಆರೋಗ್ಯವಂತ ಕರುವನ್ನು ತೆಗೆದರು. ಇನ್ನೊಂದು ಕರು ಅರ್ಧ ಹಂದಿ ಹಾಗೂ ಅರ್ಧ ಮನುಷ್ಯನಂತೆ ಇತ್ತು.

ಅರ್ಧ ಮನುಷ್ಯ ಹಾಗೂ ಅರ್ಧ ಹಂದಿಯಂತೆ…
ಈ ಎಳೆ ಆಡಿನ ಮರಿಯು ಅರ್ಧ ಹಂದಿ ಮತ್ತು ಅರ್ಧ ಮನುಷ್ಯನಂತೆ ಕಂಡುಬರುತ್ತಿತ್ತು. ಇದು ತುಂಬಾ ಕಾಂತಿಯುತ ಮತ್ತು ತೆಳು ಚರ್ಮದೊಂದಿಗೆ ಹೊಕ್ಕಳು ಮತ್ತು ಹಂದಿಯ ಪಾದದಂತೆ ಇತ್ತು. ಆದರೆ ಇದು ಬೇರೆ ಎಲ್ಲಾ ಮರಿಗಳಿಗಿಂತ ದೊಡ್ಡದಾಗಿತ್ತು. ದುರಾದೃಷ್ಟವೆಂದರೆ ಈ ವಿಚಿತ್ರ ಮರಿಯೊಂದಿಗೆ, ಆಡಿನ ಮರಿ ಮತ್ತು ತಾಯಿ ಸಾವನ್ನಪ್ಪಿತು. ಈ ವಿಚಿತ್ರ ಸೃಷ್ಟಿ ಬಳಿಕ ಗ್ರಾಮಸ್ಥರು ದಿಗಿಲುಗೊಂಡಿದ್ದಾರೆ. ಇದರಿಂದಾಗಿ ಆಡಿನ ಯಜಮಾನ ಮತ್ತು ಸಂಪೂರ್ಣ ಗ್ರಾಮಕ್ಕೆ ಅಶುಭವಾಗಲಿದೆ ಎಂದು ಅವರು ನಂಬಿದ್ದಾರೆ.

ಅಧ್ಯಯನಗಳ ಪ್ರಕಾರ…
ಇದು ಅನುವಂಶೀಯ ರೂಪಾಂತರಕ್ಕೆ ಒಳ್ಳೆಯ ಉದಾಹರಣೆ ಎಂದು ಸಂಶೋಧನೆಗಳು ಹೇಳಿವೆ. ಗರ್ಭಿಣಿ ಆಡು ರಿಫ್ಟ್ ವ್ಯಾಲಿ ಫೀವರ್ ಎನ್ನುವ ವಿಚಿತ್ರ ರೋಗಕ್ಕೆ ಗುರಿಯಾಗಿತ್ತು ಎಂದು ಅವರು ನಂಬಿದ್ದಾರೆ. ಇದು ಸೊಳ್ಳೆಗಳಿಂದ ಬರುವ ರೋಗವಾಗಿದ್ದು, ಇದು ಆಡಿನ ಮರಿಯ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ.



Click it and Unblock the Notifications
